Pandora Papers ಕಮಲ್ ನಾಥ್ ಪುತ್ರ ಬಕುಲ್ ನಾಥ್, ಅಗಸ್ಟಾ ಒಪ್ಪಂದದ ಪ್ರಮುಖ ಆರೋಪಿಗೆ ಸಾಗರೋತ್ತರ ವ್ಯವಹಾರದಲ್ಲಿ ನಂಟು

ಪಂಡೋರಾ ಪೇಪರ್ಸ್ : ಪ್ರಸ್ತುತ ಜಾಮೀನಿನ ಮೇಲೆ ಇರುವ ರಾಜೀವ್ ಸಕ್ಸೇನಾ ಅವರ ವಿಚಾರಣಾ ವರದಿಯಲ್ಲಿ ಬಕುಲ್ ನಾಥ್ ಹೆಸರು ಕಂಡುಬಂದಿದೆ. ದೆಹಲಿ ಮೂಲದ ವಕೀಲ ಗೌತಮ್ ಖೈತನ್ ಜೊತೆ ಶಾಮೀಲಾಗಿರುವ ಆರೋಪದಲ್ಲಿ ಸಕ್ಸೇನಾ ಅಗಸ್ಟಾ ವೆಸ್ಟ್ ಲ್ಯಾಂಡ್ ನಿಂದ ಇಂಟರ್ ಸ್ಟೆಲ್ಲಾರ್ ಟೆಕ್ನಾಲಜೀಸ್ ಖಾತೆಯಲ್ಲಿ 12.40 ಮಿಲಿಯನ್ ಯೂರೋ ಪಡೆದಿದ್ದಾರೆ

Pandora Papers ಕಮಲ್ ನಾಥ್ ಪುತ್ರ ಬಕುಲ್ ನಾಥ್, ಅಗಸ್ಟಾ ಒಪ್ಪಂದದ ಪ್ರಮುಖ ಆರೋಪಿಗೆ ಸಾಗರೋತ್ತರ ವ್ಯವಹಾರದಲ್ಲಿ ನಂಟು
ಪಂಡೋರಾ ಪೇಪರ್ಸ್

ಪಂಡೊರಾ ಪೇಪರ್ಸ್‌ನಲ್ಲಿ (Pandora Papers) ವಿವಾದಾತ್ಮಕ ಅಗಸ್ಟಾವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಒಪ್ಪಂದ (AgustaWestland helicopter deal)ಪ್ರಕರಣದಲ್ಲಿರುವ ಪ್ರಮುಖ ವ್ಯಕ್ತಿಗಳ ಹೆಸರು ಇದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್‌ ನಡೆಸಿದ ದಾಖಲೆಗಳ ತನಿಖೆಯಿಂದ ತಿಳಿದುಬಂದಿದೆ. ಕಾಂಗ್ರೆಸ್​​ನ  ಹಿರಿಯ ನೇತಾರ ಹಾಗೂ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರ ಎನ್‌ಆರ್‌ಐ ಪುತ್ರ ಬಕುಲ್ ನಾಥ್​​ರಿಂದ, ಪ್ರಕರಣದ ಆರೋಪಿ ರಾಜೀವ್ ಸಕ್ಸೇನಾವರೆಗೆ ಈ ದಾಖಲೆಗಳು ಭ್ರಷ್ಟಾಚಾರ ಹಗರಣದಲ್ಲಿ ಸಿಬಿಐ ಮತ್ತು ಇಡಿ ಹಲವಾರು ಆರೋಪಪಟ್ಟಿಗಳನ್ನು ಸಲ್ಲಿಸಿರುವುದಕ್ಕೆ ಹೊಸ ಪುರಾವೆಗಳನ್ನು ಒದಗಿಸುತ್ತವೆ.

ಬಕುಲ್ ನಾಥ್: ಪ್ರಸ್ತುತ ಜಾಮೀನಿನ ಮೇಲೆ ಇರುವ ರಾಜೀವ್ ಸಕ್ಸೇನಾ ಅವರ ವಿಚಾರಣಾ ವರದಿಯಲ್ಲಿ ಬಕುಲ್ ನಾಥ್ ಹೆಸರು ಕಂಡುಬಂದಿದೆ. ದೆಹಲಿ ಮೂಲದ ವಕೀಲ ಗೌತಮ್ ಖೈತನ್ ಜೊತೆ ಶಾಮೀಲಾಗಿರುವ ಆರೋಪದಲ್ಲಿ ಸಕ್ಸೇನಾ ಅಗಸ್ಟಾ ವೆಸ್ಟ್ ಲ್ಯಾಂಡ್ ನಿಂದ ಇಂಟರ್ ಸ್ಟೆಲ್ಲಾರ್ ಟೆಕ್ನಾಲಜೀಸ್ ಖಾತೆಯಲ್ಲಿ 12.40 ಮಿಲಿಯನ್ ಯೂರೋ ಪಡೆದಿದ್ದಾರೆ ಎಂದು  ದಾಖಲೆಗಳು ತೋರಿಸುತ್ತವೆ. ಇದನ್ನು ಇತರ ಮಧ್ಯವರ್ತಿಗಳು ಮತ್ತು ಸಾರ್ವಜನಿಕ ಸೇವಕರಿಗೆ ಪಾವತಿಸಲು ಮತ್ತಷ್ಟು ಹಣದ ಅವ್ಯವಾಹರ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. 2000 ರ ಹೊತ್ತಿಗೆ ಸಕ್ಸೇನಾ ಇಂಟರ್ ಸ್ಟೆಲ್ಲಾರ್ ಟೆಕ್ನಾಲಜೀಸ್ ನ ಶೇ 99.9 ಷೇರುಗಳನ್ನು ತೆಗೆದುಕೊಂಡರು ಎಂದು ಇಂಡಿಯನ್ ಎಕ್ಸ್​​ಪ್ರೆಸ್ ವರದಿ ಮಾಡಿದೆ.

ಅವರ ವಿಚಾರಣೆಯ ಸಮಯದಲ್ಲಿ (ನವೆಂಬರ್ 2020 ರಲ್ಲಿ ದಿ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿತ್ತು) “ನಾವು (ಅವರು ಮತ್ತು ಸಹ-ಆರೋಪಿ ಸುಶಾಂತ್ ಮೋಹನ್ ಗುಪ್ತಾ) ಕಮಲ್ ನಾಥ್ ಅವರ ಪುತ್ರ ಬಕುಲ್ ನಾಥ್‌ಗಾಗಿ ಜಾನ್ ಡೊಚೆರ್ಟಿಯಿಂದ ನಿರ್ವಹಿಸಲ್ಪಡುವ ಪ್ರಿಸ್ಟೈನ್ ರಿವರ್ ಇನ್ವೆಸ್ಟ್‌ಮೆಂಟ್‌ಗಳ ಮೂಲಕ ಬ್ರಿಡ್ಜ್ ಫಂಡಿಂಗ್ ಪಡೆದೆವು. ಹೀಗಾಗಿ ಇಂಟರ್ ಸ್ಟೆಲ್ಲಾರ್ ಟೆಕ್ನಾಲಜೀಸ್​​ನಿಂದ ಪರೋಕ್ಷವಾಗಿ ಹಣವನ್ನು ಪ್ರಿಸ್ಟೈನ್ ರಿವರ್ ಇನ್ವೆಸ್ಟ್ ಮೆಂಟ್ ಸಾಲವನ್ನು ಮರುಪಾವತಿಸಲು ಬಳಸಲಾಯಿತು ಎಂದು ಸಕ್ಸೇನಾ ಹೇಳಿದ್ದಾರೆ.
ಟ್ರಿಡೆಂಡ್ ಟ್ರಸ್ಟ್ ಫೆಬ್ರವರಿ 2018 ರಲ್ಲಿ ಸ್ಥಾಪಿಸಿದ ಸಾಗರೋತ್ತರ ಕಂಪನಿಯ ಮೂಲಕ ಸ್ವಿಸ್ ರಾಷ್ಟ್ರೀಯ ಡೊಚೆರ್ಟಿಯು ಬಕುಲ್ ನಾಥ್ ಜೊತೆ ಸಂಪರ್ಕ ಹೊಂದಿದ್ದಾರೆ ಎಂದು ಪಂಡೋರಾ ಪೇಪರ್ಸ್ ದಾಖಲೆಗಳು ತೋರಿಸುತ್ತವೆ.

ಈ ಬ್ರಿಟಿಷ್ ವರ್ಜಿನ್ ಐಲ್ಯಾಂಡ್ಸ್ ಕಂಪನಿಯು ಸ್ಪೆಕ್ಟರ್ ಕನ್ಸಲ್ಟೆನ್ಸಿ ಸರ್ವಿಸಸ್ ಲಿಮಿಟೆಡ್ ಆಗಿದೆ ಮತ್ತು ಡೊಚೆರ್ಟಿಯನ್ನು ಅದರ ಮೊದಲ ನಿರ್ದೇಶಕರಾಗಿ ಮತ್ತು ಬಕುಲ್ ನಾಥ್ ಅವರನ್ನು ದುಬೈ ವಿಳಾಸದೊಂದಿಗೆ ಬೆನಿಫಿಷಿಯಲ್ ಓನರ್ ಆಗಿ ಹೆಸರಿಸಲಾಗಿದೆ.

ಮತ್ತೊಂದು ಬಿವಿಐ (British Virgin Islands -BVI)) ಕಂಪನಿಯಾಗಿರುವ ಸೆಲ್‌ಬ್ರೂಕ್ ಲಿಮಿಟೆಡ್ ಅನ್ನು ಸ್ಪೆಕ್ಟರ್ ಕನ್ಸಲ್ಟೆನ್ಸಿ ಸೇವೆಗಳ ಷೇರುದಾರರಾಗಿ ಪಟ್ಟಿಮಾಡಲಾಗಿದೆ. ರಿಯಲ್ ಎಸ್ಟೇಟ್ ಒಡೆತನ ಈ ಕಂಪನಿಯ “ಉದ್ದೇಶ” ಎಂದು ಪಟ್ಟಿ ಮಾಡಲಾಗಿದೆ ಮತ್ತು ಮೊದಲ ಮೂರು ವರ್ಷಗಳಲ್ಲಿ ಅದರ ಸ್ವತ್ತುಗಳನ್ನು  10 ಮಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.
ಇಂಡಿಯನ್ ಎಕ್ಸ್​​ಪ್ರೆಸ್​​ನ ಪ್ರಶ್ನೆಗಳಿಗೆ ಬಕುಲ್ ನಾಥ್ ಪ್ರತಿಕ್ರಿಯಿಸಲಿಲ್ಲ.

ರಾಜೀವ್ ಸಕ್ಸೇನಾ: ಅಗಸ್ಟಾ ವೆಸ್ಟ್‌ಲ್ಯಾಂಡ್ ಪ್ರಕರಣದ ಆರೋಪಿ ಸಕ್ಸೇನಾ 2014 ರಲ್ಲಿ ವೈಯಕ್ತಿಕ ಆಸ್ತಿಗಳಿಗಾಗಿ ಟ್ರಸ್ಟ್ ಅನ್ನು ಸ್ಥಾಪಿಸಿದ್ದು, ಬಿವಿಐನಲ್ಲಿ ತನ್ನ ಮೂಲ ಕಂಪನಿಯಾದ ತನಯ್ ಹೋಲ್ಡಿಂಗ್ಸ್ ಲಿಮಿಟೆಡ್, 14 ಇತರ ಕಂಪನಿಗಳು ಅಥವಾ ಸ್ವತ್ತುಗಳ ಷೇರುಗಳು ಅಥವಾ ಮಾಲೀಕತ್ವಕ್ಕೆ ಸಂಬಂಧಿಸಿದೆ ಎಂದು ದಾಖಲೆಗಳು ತೋರಿಸುತ್ತವೆ. ಇವುಗಳಲ್ಲಿ ಪಾಮ್ ಜುಮೇರಾದಲ್ಲಿನ ಅವರ ವಿಲ್ಲಾ, ಲಂಡನ್‌ನಲ್ಲಿ ಒಂದು ಫ್ಲಾಟ್, ಎರಡು ಆಸ್ತಿ ಕಂಪನಿಗಳು ಮತ್ತು ಎರಡು ಕಚೇರಿಗಳು ಸೇರಿವೆ. ತನಯ್ ಟ್ರಸ್ಟ್ ಬೆಲೀಜ್‌ನಲ್ಲಿ ತನಯ್ ಹೋಲ್ಡಿಂಗ್ಸ್ ಲಿಮಿಟೆಡ್ ಎಂಬ ಕಂಪನಿಯನ್ನು ಹೊಂದಿದೆ. ಇದು ಯುಬಿಎಸ್ ಬ್ಯಾಂಕ್ ಮತ್ತು ಕ್ರೆಡಿಟ್ ಸ್ಯೂಸ್ಸೆ ಸೇರಿದಂತೆ ಜ್ಯೂರಿಚ್‌ನ ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ನಿಯಂತ್ರಿಸುತ್ತದೆ.

ಅಲ್ಲದೆ 2014 ರಲ್ಲಿ, ಸಕ್ಸೇನಾ ಅವರ ವ್ಯಾಪಾರ ಟ್ರಸ್ಟ್ ಮ್ಯಾಟ್ರಿಕ್ಸ್ ಯುಎಇ ಟ್ರಸ್ಟ್ ಅನ್ನು ಸಾಗರೋತ್ತರ ಉದ್ಯಮವಾಗಿ ಸ್ಥಾಪಿಸಲಾಯಿತು ಮತ್ತು ಅದರ “ಆಧಾರವಾಗಿರುವ” ಬಿವಿಐ ಕಂಪನಿಯು ಮ್ಯಾಟ್ರಿಕ್ಸ್ ಇಂಟರ್​​ ನ್ಯಾಷನಲ್ ಲಿಮಿಟೆಡ್ ಆಗಿತ್ತು. ರಾಜೀವ್ ಸಕ್ಸೇನಾ ಅವರ ಹಲವಾರು ಪ್ರಮುಖ ಕಂಪನಿಗಳ ಷೇರುಗಳು (ಕೆಲವು ಅಗಸ್ಟಾ ವೆಸ್ಟ್‌ಲ್ಯಾಂಡ್ ಕಿಕ್‌ಬ್ಯಾಕ್‌ಗಳಿಗೆ ಸಂಬಂಧಿಸಿವೆ) ಟ್ರಸ್ಟ್‌ಗೆ ಸಂಬಂಧ ಹೊಂದಿವೆ.

2014 ರ ಆರಂಭದಲ್ಲಿಅಗಸ್ಟಾ ವೆಸ್ಟ್‌ಲ್ಯಾಂಡ್ ಒಪ್ಪಂದವನ್ನು ಭಾರತ ಸರ್ಕಾರ ರದ್ದುಗೊಳಿಸಿತು. 2017 ರಲ್ಲಿ ಶಿವಾನಿ ಸಕ್ಸೇನಾ ಅವರನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಬಂಧಿಸುವುದರೊಂದಿಗೆ ಒಪ್ಪಂದಲ್ಲಿ ಸಕ್ಸೇನಾ ಅವರ ನಂಟು ಮೊದಲ ಬಾರಿ ಬೆಳಕಿಗೆ ಬಂತು.

ಬಂಧನಕ್ಕೆ ತಿಂಗಳುಗಳ ಮೊದಲು ಗೌಪ್ಯ ಇಮೇಲ್‌ಗಳಲ್ಲಿ, ರಾಜೀವ್ ಸಕ್ಸೇನಾ ಅವರು ಟ್ರೈಡೆಂಟ್ ಟ್ರಸ್ಟ್‌ಗೆ ಸೂಚನೆ ನೀಡಿದ್ದರು.ಆಮೇಲೆ ತುರ್ತಾಗಿ ತನಯ್ ಟ್ರಸ್ಟ್ ಮತ್ತು ಮ್ಯಾಟ್ರಿಕ್ಸ್ ಯುಎಇ ಟ್ರಸ್ಟ್ ಮತ್ತು ಅವುಗಳ ಸಂಪರ್ಕಿತ ಬಿವಿಐ ಕಂಪನಿಗಳನ್ನು ದಿವಾಳಿ ಮಾಡಿ, ಷೇರುಗಳನ್ನು ತಮ್ಮ ಸೆಟ್ಲರ್  ರಾಜೀವ್ ಸಕ್ಸೇನಾಗೆ ವರ್ಗಾಯಿಸಿದ್ದರು.

ಕಕ್ಷಿದಾರರು  ಈಗ ಟ್ರಸ್ಟ್‌ಗಳು ಮತ್ತು ಆಧಾರವಾಗಿರುವ ಕಂಪನಿಗಳನ್ನು ತೆಗೆದುಹಾಕಬೇಕೆಂದು ಬಯಸುತ್ತಾರೆ. ಟ್ರಸ್ಟ್‌ಗಳನ್ನು ಈ ರೀತಿ ಕೊನೆಗೊಳಿಸಲಾಗುವುದಿಲ್ಲ ಎಂದು ನಾವು ಅವರಿಗೆ ಸಲಹೆ ನೀಡಿದ್ದೇವೆ. ಆದರೆ ಅವರು ಮಾಡಬಹುದು ಎಂದು ಒತ್ತಾಯಿಸುತ್ತಾರೆ ಎಂದು 2016 ಮೇ ತಿಂಗಳಲ್ಲಿ ಕಳುಹಿಸಿದ ಇಮೇಲ್​​ನಲ್ಲಿ ಹೇಳಲಾಗಿದೆ. ಇದೇ ರೀತಿಯ ಸೂಚನೆಗಳನ್ನು ರಾಜೀವ್ ಸಕ್ಸೇನಾ ಮೌಂಟ್‌ವುಡ್ ಲಿಮಿಟೆಡ್ ಅನ್ನು ವಿಸರ್ಜಿಸಲು ನೀಡಲಾಯಿತು. ಇದು 2014 ರಲ್ಲಿ ಟ್ರೈಡೆಂಟ್ ಟ್ರಸ್ಟ್ ಮೂಲಕ ಸಂಯೋಜಿಸಲ್ಪಟ್ಟ ಇನ್ನೊಂದು ಬಿವಿಐ ಕಂಪನಿ ಆಗಿದೆ.
ದಿ ಇಂಡಿಯನ್ ಎಕ್ಸ್‌ಪ್ರೆಸ್‌ನ ಪ್ರಶ್ನೆಗಳಿಗೆ ರಾಜೀವ್ ಸಕ್ಸೇನಾ ಪ್ರತಿಕ್ರಿಯಿಸಲಿಲ್ಲ.

ಗೌತಮ್ ಖೈತನ್: ದೆಹಲಿ ಮೂಲದ ವಕೀಲರು ಅಗಸ್ಟಾ ವೆಸ್ಟ್‌ಲ್ಯಾಂಡ್ ಡೀಲ್‌ಗಾಗಿ ಜಾರಿಗೆ ತಂದಿರುವ ಸಂಕೀರ್ಣ ಮನಿ ಲಾಂಡರಿಂಗ್ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅವರನ್ನು ಡಿಸೆಂಬರ್ 2016 ರಲ್ಲಿ ಭಾರತೀಯ ವಾಯುಪಡೆಯ ಮಾಜಿ ಮುಖ್ಯಸ್ಥ ಎಸ್‌ಪಿ ತ್ಯಾಗಿ ಅವರೊಂದಿಗೆ ಬಂಧಿಸಲಾಯಿತು. ಅವರು ಈಗ ಜಾಮೀನು ಪಡೆದು ಹೊರಗಿದ್ದಾರೆ.

ತೈಲಕ್ಕಾಗಿ ಆಹಾರ ಇರಾಕ್ ಹಗರಣದ (oil-for food Iraq scandal) ವೋಲ್ಕರ್ ವರದಿಯಲ್ಲಿ ಹೆಸರಿಸಲಾದ ಲಂಡನ್ ಮೂಲದ ರೆಸ್ಟೋರೆಂಟ್ ಮಾಲೀಕ ಆದಿತ್ಯ ಖನ್ನಾ ಮತ್ತು ನವದೆಹಲಿಯ ಹಯಾತ್ ಹೋಟೆಲ್, ಕಾಠ್ಮಂಡುವಿನಲ್ಲಿ ಯಾಕ್ ಮತ್ತು ಯೇತಿ ಹೋಟೆಲ್ ಮಾಲೀಕ ರಾಧೆ ಶ್ಯಾಮ್ ಸರಾಫ್ ಅವರಿಗೆ ಗೌತಮ್ ಖೈತನ್ ಸಾಗರೋತ್ತರ ಟ್ರಸ್ಟ್‌ಗಳಲ್ಲಿ ಪ್ರೊಟೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದಾರೆ ಎಂದು ದಾಖಲೆಗಳು ತೋರಿಸುತ್ತವೆ. ಅವರು ಸರಾಫ್‌ಗಾಗಿ ಸ್ಥಾಪಿಸಿದ ಟ್ರಸ್ಟ್ ಅನ್ನು ವರುನಿಶ ಟ್ರಸ್ಟ್ ಎಂದು ಕರೆಯಲಾಗುತ್ತದೆ.

ಆದಿತ್ಯ ಖನ್ನಾ ವಿಷಯದಲ್ಲಿ, ಗೌತಮ್ ಖನ್ನಾ ಅವರು ಬಿವಿಐಯಲ್ಲಿ ಟ್ರೈಡೆಂಟ್ ಟ್ರಸ್ಟ್ ಸಂಯೋಜಿಸಿರುವ ಗ್ಲೇಸಿಯರ್ ಟ್ರಸ್ಟ್‌ನ “ವೃತ್ತಿಪರ ಮಧ್ಯವರ್ತಿಯಾಗಿ” ಕಾಣಿಸಿಕೊಳ್ಳುತ್ತಾರೆ. ಕಂಪನಿಯು ಲಂಡನ್‌ನಲ್ಲಿ ಟಾಮರಿನ್ ಆಂಡ್ ಇಮ್ಲಿ ಎಂಬ ರೆಸ್ಟೋರೆಂಟ್‌ಗಳನ್ನು ಹೊಂದಿದೆ.

ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಗೌತಮ್ ಖೈತನ್ “ನೀವು ಹೇಳಿದ ನನ್ನ ಇಬ್ಬರು ಗ್ರಾಹಕರು ದಶಕಗಳಿಂದ ಅನಿವಾಸಿ ಭಾರತೀಯರು. ನಾನು ಅವರಿಗೆ ವೃತ್ತಿಪರ ಮಧ್ಯವರ್ತಿಯಾಗಿದ್ದೆ ಮತ್ತು ಕಂಪನಿಗಳು ಸಕ್ರಿಯವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಅವರು ಮಾತ್ರ ಹೇಳಬಹುದು ಎಂದಿದ್ದಾರೆ.

ನಾನು 1983 ರಿಂದ ಎನ್ಆರ್​​ಐ ಆಗಿದ್ದೇನೆ. 2012 ರಲ್ಲಿ ಗ್ಲೇಸಿಯರ್ ಟ್ರಸ್ಟ್ ಸ್ಥಾಪಿಸಲು ನನಗೆ ಸಹಾಯ ಮಾಡಲು ನಾನು ಟ್ರೈಡೆಂಟ್‌ನ ಸೇವೆಗಳನ್ನು ಬಳಸಿದ್ದೇನೆ. ನನ್ನ ಮೃತ ತಂದೆಯ ಒಡೆತನದ ಕಂಪನಿಯಾದ ಫ್ರಿಟ್ಟನ್ ಬಿವಿಐನಲ್ಲಿ ಷೇರುಗಳನ್ನು ಹೊಂದಲು ಟ್ರಸ್ಟ್ ಅನ್ನು ಸ್ಥಾಪಿಸಲಾಯಿತು. ನಾನು ಅವರಿಂದ ಪಡೆದ ಅವರ ಯುಕೆ ಆಹಾರ ವ್ಯವಹಾರದಲ್ಲಿ ಷೇರುಗಳನ್ನು ಹೊಂದಿದ್ದೇನೆ. ಆ ಸಮಯದಲ್ಲಿ ರೆಸ್ಟೋರೆಂಟ್‌ಗಳ ಮೌಲ್ಯಕ್ಕೆ ಸಂಬಂಧಿಸಿದ ಟ್ರಸ್ಟ್‌ನ ನಿವ್ವಳ ಮೌಲ್ಯವು  3.5 ಮಿಲಿಯನ್ ಡಾಲರ್ ಆಗಿರಬಹುದು, ಇಲ್ಲದಿದ್ದರೆ ಅದಕ್ಕಿಂತ ಹೆಚ್ಚು. 2013 ರಲ್ಲಿ ಮುಚ್ಚಿದ ಈ ಕಂಪನಿಯನ್ನು ನಾನು ಎಂದಿಗೂ ಬಳಸಲಿಲ್ಲ. ಆ ಸಮಯದಲ್ಲಿ ಅವರ ಅಸ್ತಿತ್ವವನ್ನು ಯುಕೆ ತೆರಿಗೆ ಪ್ರಾಧಿಕಾರ /ಎಚ್‌ಎಂಆರ್‌ಸಿಗೆ ಬಹಿರಂಗಪಡಿಸಲಾಯಿತು, ಮತ್ತು ಭಾರತೀಯ ಅಧಿಕಾರಿಗಳಿಗೂ ಇದರ ಬಗ್ಗೆ ತಿಳಿದಿದೆ ಎಂದು ಆದಿತ್ಯ ಖನ್ನಾ ಹೇಳಿದ್ದಾರೆ.

ನಾನು ಐದು ದಶಕಗಳಿಗೂ ಹೆಚ್ಚು ಕಾಲ ಅನಿವಾಸಿ ಭಾರತೀಯನಾಗಿದ್ದೇನೆ. ನನ್ನ ಸಂಪತ್ತನ್ನು ಯೋಜಿಸುವುದು ವೈಯಕ್ತಿಕ ಮತ್ತು ಖಾಸಗಿ ವಿಷಯ ಎಂಬ ನಿಮ್ಮ ತಿಳುವಳಿಕೆಯನ್ನು ನಾನು ಪ್ರಶಂಸಿಸುತ್ತೇನೆ ಎಂದು ರಾಧೆ ಶ್ಯಾಮ್ ಸರಾಫ್ ಹೇಳಿದ್ದಾರೆ.

ದೇವ್ ಮೋಹನ್/ಸುಶಾಂತ್ ಗುಪ್ತಾ: ಭಾರತದಲ್ಲಿ ರಕ್ಷಣಾ ವ್ಯವಹಾರದಲ್ಲಿ ಭಾಗಿಯಾಗಿರುವ ಕುಟುಂಬಗಳಲ್ಲಿ ಗುಪ್ತಾ ಇದ್ದಾರೆ. ಅಗಸ್ಟಾ ವೆಸ್ಟ್‌ಲ್ಯಾಂಡ್ ಒಪ್ಪಂದದಲ್ಲಿ ದೇವ್ ಮೋಹನ್ ಗುಪ್ತಾ ಅವರ ಮಗ ಸುಶಾಂತ್ ಮೋಹನ್ ಗುಪ್ತಾ ಒಬ್ಬ ಆರೋಪಿ. ಅವರ ಕಂಪನಿಯಾದ ಡೆಫ್ಸಿಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಅನ್ನು ಅಗಸ್ಟಾ ವೆಸ್ಟ್‌ಲ್ಯಾಂಡ್ ಮತ್ತು ರಫೇಲ್ ಒಪ್ಪಂದಗಳಲ್ಲಿ ಹೆಸರಿಸಲಾಗಿದೆ.
ಪಂಡೋರಾ ಪೇಪರ್ಸ್ ದಾಖಲೆಗಳು 2005 ರಲ್ಲಿ ದೇವ್ ಮೋಹನ್ ಗುಪ್ತಾ ಅವರು ಲಾಂಗ್ ಟ್ರಸ್ಟ್ ಅನ್ನು ತೆರಿಗೆ ಸ್ವರ್ಗ ಬೆಲೀಜ್​​ನಲ್ಲಿ ಸ್ಥಾಪಿಸಿದರು. ದಾಖಲೆಗಳಲ್ಲಿ ದೇವ್ ಮೋಹನ್ ಗುಪ್ತಾ ಅವರನ್ನು ಸೆಟ್ಲರ್ ಮತ್ತು ಅವರ ಪತ್ನಿ ಶುಭ್ರಾ ಗುಪ್ತಾ ಮತ್ತು ಮಗ ಸುಶಾಂತ್ ಮೋಹನ್ ಗುಪ್ತಾ ಮೊದಲ ಮತ್ತು ಎರಡನೇ ಫಲಾನುಭವಿಗಳೆಂದು ಹೆಸರಿಸಲಾಗಿದೆ. ಸ್ವತ್ತುಗಳ ಮೌಲ್ಯದ ಬಗ್ಗೆ ಯಾವುದೇ ನಿರ್ದಿಷ್ಟ ಮಾಹಿತಿ ಇಲ್ಲ. 2011 ರಲ್ಲಿ ದೇವ್ ಮೋಹನ್ ಗುಪ್ತಾ ಲಾಂಜೇ ಟ್ರಸ್ಟ್‌ಗಾಗಿ ರದ್ದತಿ ಪತ್ರಕ್ಕೆ ಸಹಿ ಹಾಕಿದ್ದರು.

ನನ್ನ ಕಕ್ಷಿದಾರರಿಗೆ ಈ ವಿಷಯದ ಬಗ್ಗೆ ಯಾವುದೇ ಪ್ರತಿಕ್ರಿಯೆ ಇಲ್ಲ ಎಂದು ದೇವ್ ಮೋಹನ್ ಗುಪ್ತಾ ಅವರ ವಕೀಲ ನಿರ್ವಿಕರ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: Pandora Papers ಪಂಡೋರಾ ಪೇಪರ್ಸ್: ಬಿವಿಐ ಸಂಸ್ಥೆಗಳ ಜಾಲದೊಂದಿಗೆ ದಿವಾಳಿಯಾದ ಕೋಟ್ಯಾಧಿಪತಿ ಬಿಆರ್ ಶೆಟ್ಟಿ

ಇದನ್ನೂ ಓದಿ: Pandora Papers ಗಣ್ಯ ವ್ಯಕ್ತಿಗಳ ಹಣಕಾಸು ವ್ಯವಹಾರದ ರಹಸ್ಯ ದಾಖಲೆ ಸೋರಿಕೆ; ಏನಿದು ಪಂಡೋರಾ ಪೇಪರ್ಸ್?

 

Read Full Article

Click on your DTH Provider to Add TV9 Kannada