ನೂತನ RAW ಮುಖ್ಯಸ್ಥರಾಗಿ ಐಪಿಎಸ್ ಅಧಿಕಾರಿ ಪರಾಗ್ ಜೈನ್ ನೇಮಕ
ಆಪರೇಷನ್ ಸಿಂಧೂರ್‌ನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಐಪಿಎಸ್ ಅಧಿಕಾರಿ ಪರಾಗ್ ಜೈನ್ ಅವರನ್ನು ಸಂಶೋಧನಾ ಮತ್ತು ವಿಶ್ಲೇಷಣಾ ವಿಭಾಗದ (ಆರ್&ಎಡಬ್ಲ್ಯೂ) ನೂತನ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಇದೀಗ ಅಧಿಕಾರದಲ್ಲಿರುವ ರವಿ ಸಿನ್ಹಾ ಅವರ ಸ್ಥಾನವನ್ನು ಪರಾಗ್ ಜೈನ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅವರು ಜುಲೈ 1ರಂದು ಅಧಿಕೃತವಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ನವದೆಹಲಿ, ಜೂನ್ 28: ಪಂಜಾಬ್ ಕೇಡರ್‌ನ 1989ರ ಬ್ಯಾಚ್ ಐಪಿಎಸ್ ಅಧಿಕಾರಿ ಪರಾಗ್ ಜೈನ್ (Parag Jain) ಅವರನ್ನು 2 ವರ್ಷಗಳ ಅವಧಿಗೆ ಸಂಶೋಧನಾ ಮತ್ತು ವಿಶ್ಲೇಷಣಾ ವಿಭಾಗದ (RAW) ಹೊಸ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಜೂನ್ 30ರಂದು ಅಧಿಕಾರಾವಧಿ ಕೊನೆಗೊಳ್ಳುವ ಆರ್&ಎಡಬ್ಲ್ಯೂ ಕಾರ್ಯದರ್ಶಿ ರವಿ ಸಿನ್ಹಾ ಅವರ ಸ್ಥಾನಕ್ಕೆ ಪರಾಗ್ ಜೈನ್ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಜುಲೈ 1ರಂದು ಪರಾಗ್ ಜೈನ್ ಔಪಚಾರಿಕವಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಪಾಕಿಸ್ತಾನಿ ಸಶಸ್ತ್ರ ಪಡೆಗಳ ಕುರಿತು ನಿರ್ಣಾಯಕ ಗುಪ್ತಚರ ಮಾಹಿತಿಯನ್ನು ಸಂಗ್ರಹಿಸುವ ಮೂಲಕ ‘ಆಪರೇಷನ್ ಸಿಂಧೂರ್’ನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಾಯುಯಾನ ಸಂಶೋಧನಾ ಕೇಂದ್ರದ (ಎಆರ್‌ಸಿ) ಮುಖ್ಯಸ್ಥರಾಗಿ ಪರಾಗ್ ಜೈನ್ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ. ಪಾಕಿಸ್ತಾನ-ಭಾರತದ ನಡುವಿನ ಸಂಘರ್ಷದ ವೇಳೆ ಪ್ರಮುಖ ಕಾರ್ಯತಂತ್ರಗಳಿಗೆ ಅವರು ಕೊಡುಗೆ ನೀಡಿದ್ದಾರೆ.
ಇದನ್ನೂ ಓದಿ: ನಷ್ಟ ಎಷ್ಟಾಯ್ತು ಎಂಬುದಕ್ಕಿಂತ ಫಲಿತಾಂಶ ಮುಖ್ಯ; ಆಪರೇಷನ್ ಸಿಂಧೂರ್ ಕುರಿತು ಸಿಡಿಎಸ್ ಅನಿಲ್ ಚೌಹಾಣ್
Centre has appointed Parag Jain, 1989‑batch IPS officer of Punjab cadre, as new Research & Analysis Wing (RAW) chief. He will succeed Ravi Sinha, whose current term concludes on June 30. Jain is set to assume office on July 1, 2025, for a fixed two‑year tenure. pic.twitter.com/hc9PuDJoKj
— ANI (@ANI) June 28, 2025
ಅನುಭವಿ ಅಧಿಕಾರಿಯಾಗಿರುವ ಪರಾಗ್ ಜೈನ್ ಈ ಹಿಂದೆ ಚಂಡೀಗಢದ ಎಸ್‌ಎಸ್‌ಪಿಯಾಗಿ ಸೇವೆ ಸಲ್ಲಿಸಿದ್ದಾರೆ. ಕೆನಡಾ ಮತ್ತು ಶ್ರೀಲಂಕಾದಲ್ಲಿ ರಾಜತಾಂತ್ರಿಕ ಪಾತ್ರಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಅವರು ಭಯೋತ್ಪಾದನಾ ನಿಗ್ರಹ ನಿಯೋಜನೆಗಳನ್ನು ಸಹ ನಿರ್ವಹಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:09 pm, Sat, 28 June 25




