ವಿಜಯವಾಡ: ಆಂಧ್ರಪ್ರದೇಶದ ಉಪಮುಖ್ಯಮಂತ್ರಿಯಾಗಿ (Andhra Pradesh Deputy CM) ನಟ-ರಾಜಕಾರಣಿ ಪವನ್ ಕಲ್ಯಾಣ್ ಇಂದು (ಬುಧವಾರ) ವಿಜಯವಾಡದಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ. ವೇದಘೋಷಗಳೊಂದಿಗೆ ನಡೆದ ಸಮಾರಂಭದಲ್ಲಿ ಪವನ್ ಕಲ್ಯಾಣ್ (Pawan Kalyan) ಅಧಿಕಾರ ಸ್ವೀಕರಿಸಿದರು. ಪಿಠಾಪುರಂ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿರುವ ಪವನ್ ಕಲ್ಯಾಣ್ ಜನಸೇನಾ ಪಕ್ಷದ ಮುಖಂಡರು ಮತ್ತು ಹಿತೈಷಿಗಳ ಶುಭಾಶಯಗಳ ನಡುವೆ ಮೊದಲ ಬಾರಿಗೆ ಪವನ್ ಕಲ್ಯಾಣ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರು ಇಂದು ಹಿರಿಯ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಲಿದ್ದಾರೆ.
ಇಂದು ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಪವನ್ ಕಲ್ಯಾಣ್‌ಗೆ ಹಲವಾರು ಜನಸೇನಾ ಮುಖಂಡರು ಮತ್ತು ಇತರರು ಅಭಿನಂದನೆ ಸಲ್ಲಿಸಿದರು. ಪವನ್ ಕಲ್ಯಾಣ್ ಅವರು ದಕ್ಷಿಣ ರಾಜ್ಯದ ಪೀಠಾಪುರಂ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ ಮತ್ತು ಮೊದಲ ಬಾರಿಗೆ ಸಚಿವರಾಗಿದ್ದಾರೆ.
VIDEO | Andhra Pradesh Deputy CM Pawan Kalyan assumes the charge at Camp Office. pic.twitter.com/sMp1K2Rcmk
— Press Trust of India (@PTI_News) June 19, 2024
ಇದನ್ನೂ ಓದಿ: ಸಿನಿಮಾದಲ್ಲಿ ಮಾಸ್ ಆಗಿರೋ ಪವನ್ ಕಲ್ಯಾಣ್ ರಿಯಲ್ ಲೈಫ್ನಲ್ಲಿ ಹೇಗೆ? ಇಲ್ಲಿದೆ ನೋಡಿ ಉತ್ತರ
ಈ ವಾರದ ಆರಂಭದಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಸಂಪುಟದಲ್ಲಿ ಪವನ್ ಕಲ್ಯಾಣ್ ಅವರಿಗೆ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ, ಗ್ರಾಮೀಣ ನೀರು ಸರಬರಾಜು, ಪರಿಸರ ಮತ್ತು ಅರಣ್ಯ, ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಗಳ ಜವಾಬ್ದಾರಿಗಳನ್ನು ವಹಿಸಲಾಗಿದೆ.
#WATCH | Jana Sena Party chief Pawan Kalyan assumes charge as the Deputy Chief Minister of Andhra Pradesh, in Vijayawada. pic.twitter.com/b1UKqvMabn
— ANI (@ANI) June 19, 2024
ಇತ್ತೀಚೆಗೆ ಮುಕ್ತಾಯಗೊಂಡ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷದ ತಮ್ಮ ಪ್ರತಿಸ್ಪರ್ಧಿ ವಂಗ ಗೀತಾ ಅವರ ವಿರುದ್ಧ ಪವನ್ ಕಲ್ಯಾಣ್ 70,000ಕ್ಕೂ ಹೆಚ್ಚು ಮತಗಳ ಅಂತರದಿಂದ ಜಯ ಗಳಿಸಿದ್ದರು.
glad to see @mnadendla babai looking so pleased
He dealt with nearly as much negativity as @PawanKalyan & managed to overcome it all pic.twitter.com/ERmDh396ZU
— Supreme PawanKalyan FC™ (@SupremePSPK) June 19, 2024
ಇದನ್ನೂ ಓದಿ: ಪವನ್ ಕಲ್ಯಾಣ್ ಆಸ್ತಿ ಎಷ್ಟು? ಇರುವ ಸಾಲವೆಷ್ಟು?
ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳೆರಡರಲ್ಲೂ ಗಮನಾರ್ಹವಾದ ಶೇ. 100ರಷ್ಟು ಯಶಸ್ಸಿನ ಪ್ರಮಾಣವನ್ನು ಸಾಧಿಸಿದ ನಂತರ ಜನಸೇನಾ ಪಕ್ಷವು ಟಿಡಿಪಿ ಮತ್ತು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು, ಎಲ್ಲಾ 21 ವಿಧಾನಸಭಾ ಸ್ಥಾನಗಳಲ್ಲಿ ಮತ್ತು ಸ್ಪರ್ಧಿಸಿದ 2 ಲೋಕಸಭೆ ಸ್ಥಾನಗಳಲ್ಲಿ ವಿಜಯಶಾಲಿಯಾಗಿದೆ. ಈ ಮೂರು ಪಕ್ಷಗಳನ್ನು ಒಳಗೊಂಡಿರುವ ಎನ್‌ಡಿಎ ಒಕ್ಕೂಟವು ಒಟ್ಟು 175 ಸ್ಥಾನಗಳಲ್ಲಿ 164 ಸ್ಥಾನಗಳನ್ನು ಗಳಿಸಿತು, ಟಿಡಿಪಿ 135 ಸ್ಥಾನಗಳನ್ನು ಮತ್ತು ಬಿಜೆಪಿ 8 ಸ್ಥಾನಗಳನ್ನು ಗಳಿಸಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:58 pm, Wed, 19 June 24