ಹಾಗಾದ್ರೆ ಕೊರೊನಾಗೆ ಯಾವ ಟೆಸ್ಟ್ ಬೇಡವಾ? ಏನಿದು ಸಾಮಾಜಿಕ ಜಾಲತಾಣದ ಸುಳ್​ ಸುದ್ದಿ ಹಕೀಕತ್ತು?

ಕಳೆದ ಎರಡು ದಿನದಿಂದ ವಿಶ್ವ ಆರೋಗ್ಯ ಸಂಸ್ಥೆಯ ತಂತ್ರಜ್ಞರನ್ನು ಉಲ್ಲೇಖಿಸಿ ಕೊರೊನಾ ವಿಚಾರಕ್ಕೆ ಸಂಬಂಧಿಸಿದಂತೆ ಯಾವ ಟೆಸ್ಟ್ ಗಳೂ ಬೇಡ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂಬುದು ಇದೀಗ ಸಾಬೀತಾಗಿದೆ. ಸುಳ್ಳು ಸುದ್ದಿ ಹೇಗೆ ಹರಡಿತು? ವಿಶ್ವ ಆರೋಗ್ಯ ಸಂಸ್ಥೆಯ (WHO) ತಾಂತ್ರಿಕ ವಿಭಾಗದ ಡಾ. ಮಾರಿಯಾ ವಾನ್ ಕೆರ್ಖೊವಾ ಅವರು ಒಂದು ವಿಡಿಯೋದಲ್ಲಿ ಮಾತನಾಡಿದ್ದನ್ನು ತಿರುಚಿ ಈ ಸುದ್ದಿ ಹಬ್ಬಿಸಲಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಸುದ್ದಿಯ ಪ್ರಕಾರ, ಕೊರೋನಾಕ್ಕೆ ಇಲ್ಲೀವರೆಗೆ ವಿಶ್ವ ಆರೋಗ್ಯ […]

ಹಾಗಾದ್ರೆ ಕೊರೊನಾಗೆ ಯಾವ ಟೆಸ್ಟ್  ಬೇಡವಾ? ಏನಿದು ಸಾಮಾಜಿಕ ಜಾಲತಾಣದ ಸುಳ್​ ಸುದ್ದಿ ಹಕೀಕತ್ತು?
ಸಾಂದರ್ಭಿಕ ಚಿತ್ರ
ಸಾಧು ಶ್ರೀನಾಥ್​

Updated on: Oct 23, 2020 | 1:45 PM

ಕಳೆದ ಎರಡು ದಿನದಿಂದ ವಿಶ್ವ ಆರೋಗ್ಯ ಸಂಸ್ಥೆಯ ತಂತ್ರಜ್ಞರನ್ನು ಉಲ್ಲೇಖಿಸಿ ಕೊರೊನಾ ವಿಚಾರಕ್ಕೆ ಸಂಬಂಧಿಸಿದಂತೆ ಯಾವ ಟೆಸ್ಟ್ ಗಳೂ ಬೇಡ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂಬುದು ಇದೀಗ ಸಾಬೀತಾಗಿದೆ.

ಸುಳ್ಳು ಸುದ್ದಿ ಹೇಗೆ ಹರಡಿತು?
ವಿಶ್ವ ಆರೋಗ್ಯ ಸಂಸ್ಥೆಯ (WHO) ತಾಂತ್ರಿಕ ವಿಭಾಗದ ಡಾ. ಮಾರಿಯಾ ವಾನ್ ಕೆರ್ಖೊವಾ ಅವರು ಒಂದು ವಿಡಿಯೋದಲ್ಲಿ ಮಾತನಾಡಿದ್ದನ್ನು ತಿರುಚಿ ಈ ಸುದ್ದಿ ಹಬ್ಬಿಸಲಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಸುದ್ದಿಯ ಪ್ರಕಾರ, ಕೊರೋನಾಕ್ಕೆ ಇಲ್ಲೀವರೆಗೆ ವಿಶ್ವ ಆರೋಗ್ಯ ಸಂಸ್ಥೆ (WHO) ಸೂಚಿಸಿದ ಚಿಕಿತ್ಸಾ ವಿಧಾನವೇ ಬೇಡ. ಸೋಂಕಿತರನ್ನು ಬೇರೆ ಇಡುವುದಾಗಲೀ, ಬೇರೆ ಬೇರೆ ಪರೀಕ್ಷೆ ಮಾಡುವುದಾಗಲಿ ಬೇಡ ಎಂಬ ವಿಡಿಯೋ ಹರಿದಾಡುತ್ತಿತ್ತು. ಈಗ ಅಂತರಾಷ್ಟ್ರೀಯ ಸುದ್ದಿ ಸಂಸ್ಥೆ ರಾಯಿಟರ್ಸ್​ ಮತ್ತು ಇನ್ನಿತರೆ ಸಂಸ್ಥೆಗಳು ಸುದ್ದಿ ಮೂಲ ಹುಡುಕಿ ಇದು ಸುಳ್ಳು ಎಂದು ಸಾರಿವೆ.

ಡಾ. ಮಾರಿಯಾ ಹೇಳಿದ್ದೇನು?
ನಮ್ಮ ಬಳಿ ಇರುವ ದತ್ತಾಂಶದ (data) ಪ್ರಕಾರ, ರೋಗದ ಲಕ್ಷಣ ಇಲ್ಲದ (asymptomatic) ಕೊರೊನಾ ರೋಗಿಗಳು ರೋಗವನ್ನು ಹರಡುತ್ತಾರೆ ಎಂಬದು ಪ್ರಾಯಶಃ ಅಸಾಧ್ಯ ಎಂದು ಅವರು ಹೇಳಿದ್ದಾರೆ. ಆ ವಿಡಿಯೋ ಇಟ್ಟುಕೊಂಡು ಒಂದು ಮಾಹಿತಿಯನ್ನ ತಯಾರು ಮಾಡುತ್ತಾರೆ. ಆ ಪ್ರಕಾರ, ವಿ.ಸಂ. ಉಲ್ಟಾ ಹೊಡೀತು (WHO makes U-turn) ಎಂಬ ಸಂದೇಶ ಸಾಮಾಜಿಕ ಜಾಲತಾಣದ ಸಂದೇಶ ಹರಿದಾಡಿತು. ಆದರೆ, ವಿ.ಸಂ. (WHO) ವೆಬ್ ಸೈಟ್ ನಲ್ಲಿ ಇದುವರೆಗೂ ಈ ಕುರಿತು ಯಾವ ಮಾಹಿತಿಯೂ ಇಲ್ಲ. ಅಂದರೆ, ಈ ಮೊದಲೇ ಹೇಳಿದಂತೆ, ಉಸಿರು ಮತ್ತು ಎಂಜಲು ಮುಂತಾದವುಗಳ ಮೂಲಕ ಈ ವೈರಸ್ ಇನ್ನೊಬ್ಬರಿಗೆ ಹೇಗೆ ಹರಡುತ್ತೆ ಎಂಬ ಅಂಶವಾಗಲೀ ಹಾಗೂ ಕೊರೊನಾ ಚಿಕಿತ್ಸಾ ವಿಧಾನ ಪದ್ಧತಿಯಲ್ಲಿ ಯಾವ ಬದಲಾವಣೆಯೂ ಆಗಿಲ್ಲ. ಇದನ್ನು ಜನ ಗಮನಿಸಬೇಕು ಮತ್ತು ಸುಳ್ಳು ಸುದ್ದಿಗೆ ಕಿವಿಗೊಡಬಾರದು.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us