Petrol Diesel Price | ಸ್ಥಿರತೆ ಕಾಪಾಡಿಕೊಂಡ ಇಂಧನ ದರ.. ಕರ್ನಾಟಕ ಬಜೆಟ್ನಲ್ಲೂ ತೆರಿಗೆ ಇಳಿಕೆಯಾಗಿಲ್ಲ!
Petrol Diesel Rate: ಕಳೆದ ತಿಂಗಳಿನಲ್ಲಿ ದರ ಬದಲಾವಣೆಗೊಂಡ ನಂತರ ಪೆಟ್ರೋಲ್, ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಒಂದು ವಾರದಿಂದ ತೈಲ ಕಂಪನಿಗಳು ದರ ಬದಲಾವಣೆ ಮಾಡದಿರುವುದು ಜನರಿಗೆ ಕೊಂಚ ನೆಮ್ಮದಿಯ ಸಂಗತಿ.
ಬೆಂಗಳೂರು: ದೇಶದಲ್ಲಿ ಒಂದು ವಾರದಿಂದ ಇಂಧನ ದರ ಬದಲಾವಣೆ ಕಂಡಿಲ್ಲ. ಫೆಬ್ರವರಿ ತಿಂಗಳ ಕೊನೆಯ ಶನಿವಾರ ದರ ಬದಲಾವಣೆಯ ನಂತರ ಇಂಧನ ದರದಲ್ಲಿ ಬದಲಾವಣೆ ಕಂಡು ಬಂದಿಲ್ಲ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 94.22 ರೂಪಾಯಿ ಇದೆ. ಕರ್ನಾಟಕ ಬಜೆಟ್ 2021ರಲ್ಲಿ ಹುಸಿ ಮಾಡಿದ ಅತಿ ದೊಡ್ಡ ನಿರೀಕ್ಷೆ ಏನೆಂದರೆ ಪೆಟ್ರೋಲ್- ಡೀಸೆಲ್ ಮೇಲಿನ ತೆರಿಗೆಯನ್ನು ಇಳಿಕೆ ಮಾಡಿಲ್ಲ.
ಜನಸಾಮಾನ್ಯರಿಗೆ ಪೆಟ್ರೋಲ್- ಡೀಸೆಲ್ ಮೇಲಿನ ತೆರಿಗೆಯನ್ನು ಇಳಿಕೆ ಬಗ್ಗೆ ನಿರೀಕ್ಷೆ ಇತ್ತು. ಕರ್ನಾಟಕ ಮಾರಾಟ ತೆರಿಗೆ ಸೇರಿದಂತೆ ಯಾವುದೇ ತೆರಿಗೆಯನ್ನು ಹೆಚ್ಚಿಸದಿರಲು ತೀರ್ಮಾನ ಮಾಡಲಾಗಿದೆ ಎಂದು ಹೇಳಲಾಗಿದೆಯೇ ವಿನಾ ಇಳಿಕೆ ಕೂಡ ಮಾಡಿಲ್ಲ ಎಂಬುದು ಸದ್ಯಕ್ಕೆ ಉಲ್ಲೇಖ ಮಾಡಬೇಕಾದ ಸಂಗತಿಯಾಗಿದೆ.
ಮೆಟ್ರೋ ನಗರಗಳಾದ ದೆಹಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 91.17 ರೂಪಾಯಿಗೆ ಗ್ರಾಹಕರು ಕೊಳ್ಳುತ್ತಿದ್ದಾರೆ. ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 97.57 ರೂಪಾಯಿ ಆಗಿದೆ. ಕೋಲ್ಕತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 91.35 ರೂಪಾಯಿ, ಚೆನೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 93.11 ರೂಪಾಯಿಗೆ ಮಾರಾಟವಾಗುತ್ತಿದೆ.
ಡೀಸೆಲ್ ದರ ದೆಹಲಿಯಲ್ಲಿ ಪ್ರತಿ ಲೀಟರ್ 81.47 ರೂಪಾಯಿ ತಲುಪಿದೆ. ಮುಂಬೈನಲ್ಲಿ ಪ್ರತಿ ಲೀಟರ್ ಡೀಸೆಲ್ ಬೆಲೆ 88.60 ರೂಪಾಯಿಗೆ ಮಾರಾಟವಾಗುತ್ತಿದೆ. ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ಡೀಸೆಲ್ ಬೆಲೆ 84.35 ರೂಪಾಯಿ ಹಾಗೂ ಚೆನ್ನೈನಲ್ಲಿ ಪ್ರತಿ ಲೀಟರ್ ಡೀಸೆಲ್ 86.455 ರೂಪಾಯಿ ತಲುಪಿದೆ.
ದೇಶದ ವಿವಿಧ ನಗರದಲ್ಲಿ ಡೀಸೆಲ್ ದರ ಶ್ರೀ ಗಂಗಾನಗರ್ನಲ್ಲಿ ಪ್ರತಿ ಲೀಟರ್ ಡೀಸೆಲ್ ದರ 93.77 ರೂಪಾಯಿ, ಅನುಪ್ಪುರದಲ್ಲಿ 91.97 ರೂಪಾಯಿಗೆ ಮಾರಾಟವಾಗುತ್ತಿದೆ. ಹೈದರಾಬಾದ್ನಲ್ಲಿ ಪ್ರತಿ ಲೀಟರ್ ದರ 88.86 ರೂಪಾಯಿ, ಪಾಟ್ನಾ 86.73 ರೂಪಾಯಿ, ಜೈಪುರದಲ್ಲಿ ಪ್ರತಿ ಲೀಟರ್ ಡೀಸೆಲ್ ದರ 89.98 ರೂಪಾಯಿ, ಲಕ್ನೋದಲ್ಲಿ 81.53 ರೂಪಾಯಿ ಹಾಗೂ ತಿರುವನಂತಪುರಂನಲ್ಲಿ ಪ್ರತಿ ಲೀಟರ್ ಡೀಸೆಲ್ ದರ 87.53 ರೂಪಾಯಿಗೆ ಮಾರಾಟವಾಗುತ್ತಿದೆ.
ದೇಶದ ವಿವಿಧ ನಗರಗಳಲ್ಲಿ ಪೆಟ್ರೋಲ್ ದರ ಶ್ರೀಗಂಗನಗರದಲ್ಲಿ ಪೆಟ್ರೋಲ್ ದರ ಶತಕ ಬಾರಿಸಿದ್ದು ಪ್ರತಿ ಲೀಟರಿಗೆ 101.84 ರೂಪಾಯಿ ಆಗಿದೆ. ಅನುಪ್ಪುರದಲ್ಲಿ ಪ್ರತಿ ಲೀಟರಿಗೆ 101.59 ರೂಪಾಯಿ ಇದೆ. ಹೈದರಾಬಾದ್ನಲ್ಲಿ ದರ ಪ್ರತಿ ಲೀಟರಿಗೆ 94.79 ರೂಪಾಯಿ ಆಗಿದೆ. ಪಾಟ್ನಾದಲ್ಲಿ 93.48 ರೂಪಾಯಿ, ಜೈಪುರದಲ್ಲಿ 97.72 ರೂಪಾಯಿ ಲಕ್ನೋದಲ್ಲಿ 89.31 ರೂಪಾಯಿ ಹಾಗೂ ತಿರುವನಂತಪುರಂನಲ್ಲಿ 93.05 ರೂಪಾಯಿಗೆ ಮಾರಾಟವಾಗುತ್ತಿದೆ.
ಇಂಧನ ದರವನ್ನು ಜಿಎಸ್ಟಿ(ಸರಕು ಮತ್ತು ಸೇವಾ ತೆರಿಗೆ) ವ್ಯಾಪ್ತಿಯಲ್ಲಿ ತಂದರೆ ದರ ಇಳಿಕೆ ಕಾಣುತ್ತದೆ. ಪ್ರತಿ ಲೀಟರಿಗೆ 100 ರೂಪಾಯಿ ತಲುಪಿದ ಪೆಟ್ರೋಲ್ ದರ 75 ರೂಪಾಯಿಗೆ ಇಳಿಯುತ್ತದೆ. ಹಾಗೂ ಡೀಸೆಲ್ ದರ 68 ರೂಪಾಯಿಗೆ ಇಳಿಯುತ್ತದೆ. ಆದರೆ, ಇದನ್ನು ಸರ್ಕಾರ ಈ ಕುರಿತಂತೆ ನಿರ್ಧಾರ ಕೈಗೊಳ್ಳುವ ಕುರಿತಾಗಿ ಮುಂದಾಗುತ್ತಿಲ್ಲ. ಏಕೆಂದರೆ ಜಿಎಸ್ಟಿ ವ್ಯಾಪ್ತಿಗೆ ಇಂಧನ ದರವನ್ನು ತಂದರೆ, ಸರ್ಕಾರಗಳಿಗೆ ಆದಾಯದಲ್ಲಿ ಇಳಿಕೆ ಕಾಣುತ್ತವೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದರು.
ಇದನ್ನೂ ಓದಿ: ಕರ್ನಾಟಕ ಬಜೆಟ್ 2021: ಪೆಟ್ರೋಲ್ ದರದಲ್ಲಿ ಯಾವ ಇಳಿಕೆಯೂ ಆಗಲಿಲ್ಲ; ಇಂದು ರಾಜ್ಯದಲ್ಲಿ ರೂ. 96ರ ಗಡಿಯಲ್ಲಿ ಪೆಟ್ರೋಲ್ ಬೆಲೆ
ಇದನ್ನೂ ಓದಿ: Petrol Diesel Price | ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ದರ ಪ್ರತಿ ಲೀಟರಿಗೆ 94.22 ರೂಪಾಯಿ
Published On - 9:14 am, Tue, 9 March 21