AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಯ್‌ವಾಲಾಗಿಂತ ಚೆನ್ನಾಗಿ ಟೀ ಬಗ್ಗೆ ಯಾರಿಗೆ ಗೊತ್ತಿರುತ್ತೆ?; ಅಸ್ಸಾಂ ಚಹಾ ಪರಂಪರೆಯನ್ನು ಶ್ಲಾಘಿಸಿದ ಪ್ರಧಾನಿ ಮೋದಿ

ಚಾಯ್‌ವಾಲಾ ಆಗಿದ್ದ ತಮ್ಮ ದಿನಗಳನ್ನು ನೆನಪಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಚಹಾ ಮಾರಾಟಗಾರನಾಗಿ ತಮ್ಮ ಹಿಂದಿನ ಕಾಲವನ್ನು ಮೆಲುಕು ಹಾಕಿದ್ದಾರೆ. 2023ರಲ್ಲಿ ಅಸ್ಸಾಂಗೆ ನೀಡಿದ ತಮ್ಮ ಭೇಟಿಯನ್ನು ಮೋದಿ ನೆನಪಿಸಿಕೊಂಡರು. ಆ ಭೇಟಿಯಲ್ಲಿ 11,000 ನೃತ್ಯಗಾರರು ಅತಿದೊಡ್ಡ ಬಿಹು ಪ್ರದರ್ಶನ ನಡೆಸಿ ಗಿನ್ನೆಸ್ ವಿಶ್ವ ದಾಖಲೆಯನ್ನು ನಿರ್ಮಿಸಿದ್ದರು ಎಂದಿದ್ದಾರೆ. ಇಂದು ಸಂಜೆ 8,500 ಯುವಕರಿಂದ ನೃತ್ಯ ಪ್ರದರ್ಶನ ನಡೆದಿದ್ದು, ಪ್ರಧಾನಿ ಮೋದಿ, ವಿದೇಶಾಂಗ ಸಚಿವ ಜೈಶಂಕರ್ ಮತ್ತು 60 ವಿದೇಶಿ ರಾಯಭಾರಿಗಳು ಇದಕ್ಕೆ ಸಾಕ್ಷಿಯಾಗಿದ್ದಾರೆ.

ಚಾಯ್‌ವಾಲಾಗಿಂತ ಚೆನ್ನಾಗಿ ಟೀ ಬಗ್ಗೆ ಯಾರಿಗೆ ಗೊತ್ತಿರುತ್ತೆ?; ಅಸ್ಸಾಂ ಚಹಾ ಪರಂಪರೆಯನ್ನು ಶ್ಲಾಘಿಸಿದ ಪ್ರಧಾನಿ ಮೋದಿ
Pm Modi In Guwahati
ಸುಷ್ಮಾ ಚಕ್ರೆ
|

Updated on: Feb 24, 2025 | 9:02 PM

Share

ಗುವಾಹಟಿ: ಅಸ್ಸಾಂನ ಜುಮೋಯಿರ್ ಬಿನಂದಿನಿ ಕಾರ್ಯಕ್ರಮದಲ್ಲಿ ಕಿಕ್ಕಿರಿದ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಅಸ್ಸಾಂನ ಚಹಾ ಉದ್ಯಮ ಮತ್ತು ಚಹಾ ಮಾರಾಟಗಾರನಾಗಿ ತಮ್ಮ ಆರಂಭಿಕ ವರ್ಷಗಳ ದಿನಗಳನ್ನು ನೆನಪಿಸಿಕೊಂಡರು. ಗುವಾಹಟಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಅಸ್ಸಾಂನ ಜನರನ್ನು ಉದ್ದೇಶಿಸಿ 8,000 ನೃತ್ಯಗಾರರು ಜುಮೋಯಿರ್ ಬಿನಂದಿನಿ ಜಾನಪದ ನೃತ್ಯವನ್ನು ಪ್ರದರ್ಶಿಸಿದರು. ಇದು ಅಸ್ಸಾಂನ ಚಹಾ ಬುಡಕಟ್ಟು ಜನಾಂಗಕ್ಕೆ ಸಂಬಂಧಿಸಿದ ಆಚರಣೆಯಾಗಿದೆ. ಅಸ್ಸಾಂ ರಾಜ್ಯದ 200 ವರ್ಷಗಳಷ್ಟು ಹಳೆಯದಾದ ಚಹ ಉದ್ಯಮವನ್ನು ಉಲ್ಲೇಖಿಸಿ ಮಾತನಾಡಿದ ಪ್ರಧಾನಿ ಮೋದಿ ” ಚಹಾ ಮಾರಾಟಗಾರನಿಗಿಂತ ಟೀ ಪರಿಮಳ ಮತ್ತು ಬಣ್ಣವನ್ನು ಯಾರು ಚೆನ್ನಾಗಿ ತಿಳಿದುಕೊಳ್ಳಲು ಸಾಧ್ಯ?” ಎಂದು ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ.

ಅಸ್ಸಾಂನ ಚಹಾ ಪರಂಪರೆಯನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ಚಹಾ ಮಾರಾಟಗಾರನಾಗಿ ತಮ್ಮ ಹಿಂದಿನ ಕಾಲವನ್ನು ನೆನಪಿಸಿಕೊಂಡಿದ್ದಾರೆ. ಐತಿಹಾಸಿಕ ಜುಮೋಯಿರ್ ಬಿನಂದಿನಿ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ‘ಚಾಯ್‌ವಾಲಾಗಿಂತ ಚಹಾವನ್ನು ಯಾರು ಚೆನ್ನಾಗಿ ತಿಳಿಯಲು ಸಾಧ್ಯ?’ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಭಾರತೀಯ ಕಾನೂನಿಂದ ಪಾರಾಗಲು ವಿದೇಶಿ ಪೌರತ್ವ ಪಡೆದ ಲಲಿತ್ ಮೋದಿ; ಭಾರತಕ್ಕೆ ಕರೆತರುವುದೀಗ ಇನ್ನಷ್ಟು ಕಷ್ಟ!

ಇಂದು ಸಂಜೆ 8,500 ಯುವಕರಿಂದ ನೃತ್ಯ ಪ್ರದರ್ಶನ ನಡೆದಿದ್ದು, ಪ್ರಧಾನಿ ಮೋದಿ, ವಿದೇಶಾಂಗ ಸಚಿವ ಜೈಶಂಕರ್ ಮತ್ತು 60 ವಿದೇಶಿ ರಾಯಭಾರಿಗಳು ಇದಕ್ಕೆ ಸಾಕ್ಷಿಯಾಗಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಡೋಲು ಬಾರಿಸುವ ಮೂಲಕ ಐತಿಹಾಸಿಕ ಜುಮೋಯಿರ್ ಬಿನಂದಿನಿ ಜಾನಪದ ನೃತ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗುವಾಹಟಿಯ ಸರುಸಜೈ ಕ್ರೀಡಾಂಗಣದಲ್ಲಿ ನಡೆದ ಐತಿಹಾಸಿಕ ‘ಜುಮೋಯಿರ್ ಬಿನಂದಿನಿ 2025’ ಕಾರ್ಯಕ್ರಮದಲ್ಲಿ ಭಾಗವಹಿಸಲು ಗುವಾಹಟಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭವ್ಯ ಸ್ವಾಗತ ದೊರೆಯಿತು. ಈ ಕ್ರೀಡಾಂಗಣದಲ್ಲಿ ಪ್ರಧಾನಮಂತ್ರಿ ಮೋದಿ ಚಹಾ ಬುಡಕಟ್ಟು ಸಮುದಾಯದ ಸುಮಾರು 9,000 ಕಲಾವಿದರ ದಾಖಲೆಯ ಜುಮೋಯಿರ್ ನೃತ್ಯ ಪ್ರದರ್ಶನವನ್ನು ವೀಕ್ಷಿಸಿದರು. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಪ್ರಧಾನಿ ಮೋದಿಗೆ ಸಾಂಪ್ರದಾಯಿಕ ಉಡುಗೊರೆಗಳನ್ನು ಪ್ರದಾನ ಮಾಡಿದರು. ಇದು ಅಸ್ಸಾಂನ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂಕೇತಿಸುತ್ತದೆ.

ಅಸ್ಸಾಂನ ಚಹಾ ತೋಟ ಸಂಸ್ಕೃತಿಯೊಂದಿಗಿನ ತಮ್ಮ ಆಳವಾದ ಸಂಪರ್ಕವನ್ನು ವ್ಯಕ್ತಪಡಿಸಿದರು, “ಈ ಅದ್ಭುತ ತಯಾರಿಕೆಯು ಚಹಾ ತೋಟಗಳ ಪರಿಮಳ ಮತ್ತು ಸೌಂದರ್ಯವನ್ನು ಹೊಂದಿದೆ. ಚಹಾದ ಪರಿಮಳ ಮತ್ತು ಬಣ್ಣವನ್ನು ಚಾಯ್‌ವಾಲಾಗಿಂತ ಚೆನ್ನಾಗಿ ಯಾರು ತಿಳಿಯಲು ಸಾಧ್ಯ? ಎಂದು ಹೇಳಿದರು. ನೀವು ಚಹಾ ತೋಟಗಳ ಸಂಸ್ಕೃತಿಯೊಂದಿಗೆ ವಿಶೇಷ ಸಂಬಂಧ ಹೊಂದಿರುವಂತೆ, ನನಗೂ ಸಹ ಚಹಾ ತೋಟಗಳೊಂದಿಗೆ ವಿಶೇಷ ಸಂಬಂಧವಿದೆ ಎಂದಿದ್ದಾರೆ.

ಇದನ್ನೂ ಓದಿ: ಗುವಾಹಟಿಯಲ್ಲಿ ಡೋಲು ಬಾರಿಸಿ ಜುಮೋಯಿರ್ ಬಿನಂದಿನಿ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಚಾಲನೆ

ಅಸ್ಸಾಮಿ ಭಾಷೆಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡುವ ಐತಿಹಾಸಿಕ ನಿರ್ಧಾರವನ್ನು ಘೋಷಿಸುವ ಮೂಲಕ, ಅಸ್ಸಾಮಿಯ ಸಾಂಸ್ಕೃತಿಕ ಮತ್ತು ಭಾಷಾ ಗುರುತನ್ನು ಕಾಪಾಡುವ ತಮ್ಮ ಸರ್ಕಾರದ ಸಮರ್ಪಣೆಯನ್ನು ಪ್ರಧಾನಿ ಎತ್ತಿ ತೋರಿಸಿದರು.ಇದು ಜನರ ಬಹುಕಾಲದ ಬೇಡಿಕೆಯನ್ನು ಈಡೇರಿಸುವ ಕ್ರಮವಾಗಿದೆ ಎಂದಿದ್ದಾರೆ.

ತಮ್ಮ ಭಾಷಣದ ನಂತರ, ಪ್ರಧಾನಿ ಮೋದಿ ಅವರು ಗುವಾಹಟಿಯ ಸರುಸಜೈ ಕ್ರೀಡಾ ಸಂಕೀರ್ಣದಲ್ಲಿ ಚಹಾ ಬುಡಕಟ್ಟು ಸಮುದಾಯದ ಸುಮಾರು 9,000 ಕಲಾವಿದರಿಂದ ಅದ್ಭುತ ನೃತ್ಯ ಪ್ರದರ್ಶನವಾದ ಜುಮೋಯಿರ್ ಬಿನಾಂದಿನಿಯನ್ನು ವೀಕ್ಷಿಸಿದರು. ನಂತರ ಅವರು ಸರುಸಜೈ ಕ್ರೀಡಾಂಗಣದಲ್ಲಿ ನಡೆದ ಭವ್ಯವಾದ ಜುಮೋಯಿರ್ ಬಿನಾಂದಿನಿ 2025 ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ