AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

PM Jan Dhan Yojana: ಪ್ರಧಾನಮಂತ್ರಿ ಜನ-ಧನ ಯೋಜನೆಗೆ 7 ವರ್ಷ ಪೂರ್ಣ; ಕೃತಜ್ಞತೆ ಸಲ್ಲಿಸಿದ ಪ್ರಧಾನಿ ಮೋದಿ

ನಮ್ಮ ದೇಶದಲ್ಲಿ ಅದೆಷ್ಟೋ ಹಿಂದುಳಿದ ಜನರಿಗೆ ಬ್ಯಾಂಕಿಂಗ್​ ವ್ಯವಸ್ಥೆಯ ಪರಿಚಯವೇ ಇರಲಿಲ್ಲ. ಈ ಪಿಎಂ ಜನ-ಧನ ಯೋಜನೆ ಮೂಲಕ ಅವರಲ್ಲೂ, ಬ್ಯಾಂಕಿಂಗ್​/ ಉಳಿತಾಯ, ಠೇವಣಿ, ಸಾಲ, ವಿಮೆ, ಪೆನ್ಶನ್​ ಬಗ್ಗೆ ಪ್ರ್ಯಾಕ್ಟಿಕಲ್​ ಆಗಿ ಅರಿವು ಮೂಡಿಸಲಾಗಿದೆ.

PM Jan Dhan Yojana: ಪ್ರಧಾನಮಂತ್ರಿ ಜನ-ಧನ ಯೋಜನೆಗೆ 7 ವರ್ಷ ಪೂರ್ಣ; ಕೃತಜ್ಞತೆ ಸಲ್ಲಿಸಿದ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ
TV9 Web
| Edited By: |

Updated on: Aug 28, 2021 | 1:25 PM

Share

ಪ್ರಧಾನಮಂತ್ರಿ ಜನ ​ಧನ​ ಯೋಜನೆ (PMJDY)ಗೆ ಏಳುವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿ, ಯೋಜನೆ ಪ್ರಾರಂಭಿಸಿ, ಯಶಸ್ವಿಗೊಳಿಸಲು ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. ಜನ-ಧನ ಯೋಜನೆಯಿಂದಾಗಿ ಭಾರತದ ಅನೇಕ ಜನರು ಉತ್ತಮ ಜೀವನ ನಡೆಸಲು ಸಾಧ್ಯವಾಗಿದೆ ಎಂದೂ ಹೇಳಿದ್ದಾರೆ.

ಎರಡು ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಭಾರತದ ಅಭಿವೃದ್ಧಿ ಪಥವನ್ನು ಪರಿವರ್ತಿಸಿದ ಪಿಎಂ ಜನ -ಧನ ಯೋಜನೆ ಶುರುವಾಗಿ ಏಳುವರ್ಷವಾಯಿತು. ಇದು ದೇಶದ ಅಸಂಖ್ಯಾತ ಜನರ ಆರ್ಥಿಕ ಸಬಲೀಕರಣಕ್ಕೆ ಕಾರಣವಾಗಿದೆ ಮತ್ತು ಪಾರದರ್ಶಕತೆಯಿಂದ ಕೂಡಿದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ. ಹಾಗೇ, ಇನ್ನೊಂದು ಟ್ವೀಟ್​ನಲ್ಲಿ ಯೋಜನೆ ಅನುಷ್ಠಾನ, ಯಶಸ್ವಿಗೆ ಸಹಾಯ ಮಾಡಿದವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಏನಿದು ಜನ-ಧನ ಯೋಜನೆ? ಪ್ರಧಾನಮಂತ್ರಿ ಜನ-ಧನ ಯೋಜನೆ ಜನರಿಗೆ ಆರ್ಥಿಕ ಸಬಲತೆಯನ್ನು ಸೃಷ್ಟಿಸಿಕೊಟ್ಟ ಯೋಜನೆ. ಅಂದರೆ ನಮ್ಮ ದೇಶದಲ್ಲಿ ಅದೆಷ್ಟೋ ಹಿಂದುಳಿದ ಜನರಿಗೆ ಬ್ಯಾಂಕಿಂಗ್​ ವ್ಯವಸ್ಥೆಯ ಪರಿಚಯವೇ ಇರಲಿಲ್ಲ. ಈ ಪಿಎಂ ಜನ-ಧನ ಯೋಜನೆ ಮೂಲಕ ಅವರಲ್ಲೂ, ಬ್ಯಾಂಕಿಂಗ್​/ ಉಳಿತಾಯ, ಠೇವಣಿ, ಸಾಲ, ವಿಮೆ, ಪೆನ್ಶನ್​ ಬಗ್ಗೆ ಪ್ರ್ಯಾಕ್ಟಿಕಲ್​ ಆಗಿ ಅರಿವು ಮೂಡಿಸಲಾಗಿದೆ. ಪಿಎಂ ಯೋಜನೆಯಡಿ ಬ್ಯಾಂಕ್​​ನಲ್ಲಿ ಶೂನ್ಯ ಬ್ಯಾಲೆನ್ಸ್​​ನಲ್ಲಿ ಖಾತೆ ತೆರೆಯಬಹುದಾಗಿದೆ. ಈ ಖಾತೆದಾರರು ಅಪಘಾತವಾದ ಸಂದರ್ಭದಲ್ಲಿ 1 ಲಕ್ಷ ರೂ.ದೊಂದಿಗೆ 30 ಸಾವಿರ ರೂ. ಸಾಮಾನ್ಯ ವಿಮೆ ಸೌಲಭ್ಯ ಪಡೆಯುತ್ತಾರೆ. ಪಿಎಂ ಜನ-ಧನ ಯೋಜನೆ ಶುರುವಾದಾಗಿನಿಂದ ಇಲ್ಲಿಯವರೆಗೆ 43.04 ಕೋಟಿ ಮಂದಿ ಬ್ಯಾಂಕ್​ ಖಾತೆ ತೆರೆದು, ಬ್ಯಾಂಕಿಂಗ್​ ವಹಿವಾಟು ಶುರುಮಾಡಿದ್ದಾರೆ.

ಇದನ್ನೂ ಓದಿ:ಅಫ್ಘನ್​ನಿಂದ ಪಾರಾಗಿ ಬೆಲ್ಜಿಯಂನ ವಿಮಾನ ನಿಲ್ದಾಣದಲ್ಲಿ ಇಳಿದಾಗ ಪುಟ್ಟ ಬಾಲಕಿಯ ಸಂಭ್ರಮ ನೋಡಿ  

ಬಾಲ ಆರೋಪಿ ಸೇರಿ ಐವರ ಬಂಧನವಾಗಿದೆ; ಡಿಜಿ ಐಜಿಪಿ ಪ್ರವೀಣ್​ ಸೂದ್ ನೀಡಿದ ಕಾರ್ಯಾಚರಣೆಯ ಸಂಪೂರ್ಣ ವಿವರ ಇಲ್ಲಿದೆ

Follow Us
ವಿನಯ್ ಕುಲಕರ್ಣಿಗೆ ಜಾಮೀನು: ಅಚ್ಚರಿ ಮೂಡಿಸಿದ ಯೋಗೇಶ್ ಗೌಡ ಪತ್ನಿ ನಿರ್ಧಾರ
ವಿನಯ್ ಕುಲಕರ್ಣಿಗೆ ಜಾಮೀನು: ಅಚ್ಚರಿ ಮೂಡಿಸಿದ ಯೋಗೇಶ್ ಗೌಡ ಪತ್ನಿ ನಿರ್ಧಾರ
ಜೈಲಿನಲ್ಲಿ ದರ್ಶನ್ ಜೊತೆ 1 ಗಂಟೆಗೂ ಹೆಚ್ಚು ಕಾಲ ವಿಜಯಲಕ್ಷ್ಮಿ ಸಮಾಲೋಚನೆ
ಜೈಲಿನಲ್ಲಿ ದರ್ಶನ್ ಜೊತೆ 1 ಗಂಟೆಗೂ ಹೆಚ್ಚು ಕಾಲ ವಿಜಯಲಕ್ಷ್ಮಿ ಸಮಾಲೋಚನೆ
ಪೊಲೀಸ್ ನೇಮಕಾತಿ ಪರೀಕ್ಷೆ: ಸುಳ್ಳು ಪೋಸ್ಟ್ ಹಾಕಿದ್ರೆ ಕೇಸ್ ಬುಕ್; ಕೆಇಎ ಎಚ
ಪೊಲೀಸ್ ನೇಮಕಾತಿ ಪರೀಕ್ಷೆ: ಸುಳ್ಳು ಪೋಸ್ಟ್ ಹಾಕಿದ್ರೆ ಕೇಸ್ ಬುಕ್; ಕೆಇಎ ಎಚ
ಊರ್ವಶಿ ಚಿತ್ರಮಂದಿರದಿಂದ ‘ಜನ ನಾಯಗನ್’ ಎತ್ತಂಗಡಿ: ವಿಡಿಯೋ ನೋಡಿ
ಊರ್ವಶಿ ಚಿತ್ರಮಂದಿರದಿಂದ ‘ಜನ ನಾಯಗನ್’ ಎತ್ತಂಗಡಿ: ವಿಡಿಯೋ ನೋಡಿ
ರೈತ ದಂಪತಿ ಸಾವು: ಕುಟುಂಬಕ್ಕೆ ಹೆಚ್.ಡಿ. ಕುಮಾರಸ್ವಾಮಿ ಸಾಂತ್ವನ
ರೈತ ದಂಪತಿ ಸಾವು: ಕುಟುಂಬಕ್ಕೆ ಹೆಚ್.ಡಿ. ಕುಮಾರಸ್ವಾಮಿ ಸಾಂತ್ವನ
ಹಿಂಗಾರು ಮಳೆ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಹವಾಮಾನ ಇಲಾಖೆ ನಿರ್ದೇಶಕ
ಹಿಂಗಾರು ಮಳೆ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಹವಾಮಾನ ಇಲಾಖೆ ನಿರ್ದೇಶಕ
ಆ.13ರಂದು ಕರ್ನಾಟಕ ಬಂದ್​​ ಬಗ್ಗೆ ಹೋಟೆಲ್ ಮಾಲೀಕರ ಸಂಘ ಹೇಳಿದ್ದೇನು?
ಆ.13ರಂದು ಕರ್ನಾಟಕ ಬಂದ್​​ ಬಗ್ಗೆ ಹೋಟೆಲ್ ಮಾಲೀಕರ ಸಂಘ ಹೇಳಿದ್ದೇನು?
ತಮಿಳುನಾಡು ಸಿಎಂ ಬೆಂಗಳೂರಿಗೆ ಬರುವುದು ಬೇಡ ಎಂದ ಡಿಕೆಶಿ, ಕಾರಣ?
ತಮಿಳುನಾಡು ಸಿಎಂ ಬೆಂಗಳೂರಿಗೆ ಬರುವುದು ಬೇಡ ಎಂದ ಡಿಕೆಶಿ, ಕಾರಣ?
ಕಾವೇರಿ ನೀರು ವಿವಾದ: ಡಿಕೆಶಿ ಸರ್ಕಾರಕ್ಕೆ ಕುಮಾರಸ್ವಾಮಿ ಕೊಟ್ಟ ಸಲಹೆ ಏನು?
ಕಾವೇರಿ ನೀರು ವಿವಾದ: ಡಿಕೆಶಿ ಸರ್ಕಾರಕ್ಕೆ ಕುಮಾರಸ್ವಾಮಿ ಕೊಟ್ಟ ಸಲಹೆ ಏನು?
ಗೋಮಾತೆಗೆ ಅದ್ಧೂರಿ ಸೀಮಂತ ಮಾಡಿ ಹೋಳಿಗೆ ಊಟ ಹಾಕಿಸಿದ ರೈತ!
ಗೋಮಾತೆಗೆ ಅದ್ಧೂರಿ ಸೀಮಂತ ಮಾಡಿ ಹೋಳಿಗೆ ಊಟ ಹಾಕಿಸಿದ ರೈತ!