AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಧ್ಯಪ್ರದೇಶದಲ್ಲಿ ನಾಳೆ ರಾಣಿ ಕಮಲಾಪತಿ ರೈಲು ನಿಲ್ದಾಣ ಉದ್ಘಾಟಿಸಿಲಿದ್ದಾರೆ ಪ್ರಧಾನಿ ಮೋದಿ

ಮರುಅಭಿವೃದ್ಧಿಪಡಿಸಿದ ರೈಲು ನಿಲ್ದಾಣಕ್ಕೆ ಗೊಂಡ ರಾಣಿ ಕಮಾಲಪತಿ ಹೆಸರು ನೀಡಲಾಗಿದೆ. ಆಧುನಿಕ ವಿಮಾನ ನಿಲ್ದಾಣದಂತಹ ಸೌಕರ್ಯಗಳೊಂದಿಗೆ ರಾಣಿ ಕಮಲಾಪತಿ ರೈಲು ನಿಲ್ದಾಣವನ್ನು ಮೂರು ವರ್ಷಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಅಡಿಯಲ್ಲಿ ₹ 450 ಕೋಟಿ ವೆಚ್ಚದಲ್ಲಿ ಮರುಅಭಿವೃದ್ಧಿಗೊಳಿಸಲಾಯಿತು.

ಮಧ್ಯಪ್ರದೇಶದಲ್ಲಿ ನಾಳೆ ರಾಣಿ ಕಮಲಾಪತಿ ರೈಲು ನಿಲ್ದಾಣ ಉದ್ಘಾಟಿಸಿಲಿದ್ದಾರೆ ಪ್ರಧಾನಿ ಮೋದಿ
ನರೇಂದ್ರ ಮೋದಿ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Nov 14, 2021 | 8:16 PM

Share

ದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಸೋಮವಾರ ಮಧ್ಯಪ್ರದೇಶಕ್ಕೆ (Madhya Pradesh) ಭೇಟಿ ನೀಡಲಿದ್ದು, ರಾಣಿ ಕಮಲಾಪತಿ ರೈಲು ನಿಲ್ದಾಣವನ್ನು(Rani Kamlapati Railway Station) ಉದ್ಘಾಟಿಸಲಿದ್ದಾರೆ. ಈ ಹಿಂದೆ ಈ ರೈಲು ನಿಲ್ದಾಣದ ಹೆಸರು ಹಬೀಬ್‌ಗಂಜ್ ರೈಲು ನಿಲ್ದಾಣ(Habibganj railway station) ಎಂದಾಗಿತ್ತು. ಮರುಅಭಿವೃದ್ಧಿಪಡಿಸಿದ ರೈಲು ನಿಲ್ದಾಣಕ್ಕೆ ಗೊಂಡ ರಾಣಿ ಕಮಾಲಪತಿ ಹೆಸರು ನೀಡಲಾಗಿದೆ. ಆಧುನಿಕ ವಿಮಾನ ನಿಲ್ದಾಣದಂತಹ ಸೌಕರ್ಯಗಳೊಂದಿಗೆ ರಾಣಿ ಕಮಲಾಪತಿ ರೈಲು ನಿಲ್ದಾಣವನ್ನು ಮೂರು ವರ್ಷಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಅಡಿಯಲ್ಲಿ ₹ 450 ಕೋಟಿ ವೆಚ್ಚದಲ್ಲಿ ಮರುಅಭಿವೃದ್ಧಿಗೊಳಿಸಲಾಯಿತು. ಇದನ್ನು ಭಾರತೀಯ ರೈಲ್ವೆ ಮಧ್ಯಪ್ರದೇಶದ ಮೊದಲ ವಿಶ್ವ ದರ್ಜೆಯ ರೈಲು ನಿಲ್ದಾಣ ಎಂದು ಹೇಳಿದೆ. ರಾಣಿ ಕಮಲಾಪತಿ ರೈಲು ನಿಲ್ದಾಣವನ್ನು ಹಸಿರು ಕಟ್ಟಡವಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಅಂಗವಿಕಲರಿಗೆ ಸುಲಭವಾಗಿ ಬಳಸುವಂತೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಉಜ್ಜಯಿನಿ ಮತ್ತು ಇಂದೋರ್ ನಡುವೆ ಎರಡು ಹೊಸ ಮೆಮು (MEMU) ರೈಲುಗಳಿಗೆ ಪ್ರಧಾನಮಂತ್ರಿ ಚಾಲನೆ ನೀಡಲಿದ್ದಾರೆ. ಗೇಜ್ ಪರಿವರ್ತನೆ ಮತ್ತು ವಿದ್ಯುದೀಕರಣಗೊಂಡ ಉಜ್ಜಯಿನಿ-ಫತೇಹಾಬಾದ್ ಚಂದ್ರಾವತಿಗಂಜ್ ಬ್ರಾಡ್ ಗೇಜ್ ವಿಭಾಗ ಸೇರಿದಂತೆ ಮಧ್ಯಪ್ರದೇಶದಲ್ಲಿ ರೈಲ್ವೆಯ ಬಹು ಉಪಕ್ರಮಗಳನ್ನು ಅವರು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ರೈಲ್ವೆ ನಿಲ್ದಾಣವನ್ನು ಸಮಗ್ರ ಬಹು-ಮಾದರಿ ಸಾರಿಗೆಯ ಕೇಂದ್ರವಾಗಿಯೂ ಅಭಿವೃದ್ಧಿಪಡಿಸಲಾಗಿದೆ. ಉದ್ಘಾಟನೆಗೆ ಕೆಲವು ದಿನಗಳ ಮೊದಲು ಮಧ್ಯಪ್ರದೇಶ ಸರ್ಕಾರವು ಹಬೀಬ್‌ಗಂಜ್ ರೈಲು ನಿಲ್ದಾಣವನ್ನು ಬುಡಕಟ್ಟು ರಾಣಿಯ ಹೆಸರನ್ನು ಮರುನಾಮಕರಣ ಮಾಡುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರವನ್ನು ಕಳುಹಿಸಿತು. ರೈಲ್ವೆ ನಿಲ್ದಾಣದ ಮರುನಾಮಕರಣವು ರಾಣಿ ಕಮಲಾಪತಿ ಅವರ ಪರಂಪರೆ ಮತ್ತು ಶೌರ್ಯವನ್ನು ಗೌರವಿಸುತ್ತದೆ ಎಂದು ಪತ್ರದಲ್ಲಿ ಸರ್ಕಾರ ವಾದಿಸಿದೆ.

ಅದರ ಮರುನಾಮಕರಣದ ಹೆಸರನ್ನು ಪ್ರಕಟಿಸಿದ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ರಾಣಿ ಕಮಲಾಪತಿ ಗೊಂಡ ಸಮುದಾಯದ ಹೆಮ್ಮೆ ಮತ್ತು ಭೋಪಾಲ್‌ನ ಕೊನೆಯ ಹಿಂದೂ ರಾಣಿ ಎಂದು ಹೇಳಿದ್ದಾರೆ.

“ಆಕೆಯ ರಾಜ್ಯವನ್ನು ಆಫ್ಘನ್ ಕಮಾಂಡರ್ ದೋಸ್ತ್ ಮೊಹಮ್ಮದ್ ಪಿತೂರಿ ಮಾಡಿ ವಂಚನೆಯಿಂದ ಆಕ್ರಮಿಸಿಕೊಂಡನು. ಗೆಲುವು ಸಾಧ್ಯವಿಲ್ಲ ಎಂದು ಕಂಡ ಆಕೆ ತನ್ನ ಗೌರವವನ್ನು ಉಳಿಸಿಕೊಳ್ಳಲು ‘ಜಲ್ ಜೌಹರ್’ (ಆತ್ಮಹತ್ಯೆ) ಮಾಡಿದಳು,” ಎಂದು ಅವರು ಹೇಳಿದರು. ರಾಣಿ ಕಮಲಾಪತಿಯನ್ನು “ಹಿಂದೂ ರಾಣಿ” ಎಂದು ಉಲ್ಲೇಖಿಸಿದ್ದಕ್ಕಾಗಿ ಆದಿವಾಸಿಗಳು ಅಸಮಾಧಾನಗೊಂಡಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಇದನ್ನೂ ಓದಿ: ಹವಾಮಾನ ಬದಲಾವಣೆ ಬಗ್ಗೆ ಸಂದೇಶ ನೀಡಲು ಸಮುದ್ರದ ನೀರಿನಲ್ಲಿ ನಿಂತು ಭಾಷಣ ಮಾಡಿದ ತುವಾಲು ದೇಶದ ಸಚಿವ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!