AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

S-400: ಭಾರತಕ್ಕೆ ಎಸ್-400 ಕ್ಷಿಪಣಿ ನಿರೋಧಕ ವ್ಯವಸ್ಥೆ ಪೂರೈಕೆ ಆರಂಭಿಸಿದ ರಷ್ಯಾ: ಎಸ್​-400 ವೈಶಿಷ್ಟ್ಯ, ಕಾರ್ಯನಿರ್ವಹಣೆಯ ವಿವರ ಇಲ್ಲಿದೆ

ಶತ್ರುದೇಶಗಳಿಂದ ಬರುವ ಯುದ್ಧವಿಮಾನಗಳು ಮತ್ತು ಕ್ರೂಸ್​ ಕ್ಷಿಪಣಿಗಳನ್ನು ಮುಂಚಿತವಾಗಿಯೇ ಗುರುತಿಸಿ ಹೊಡೆದುರುಳಿಸಲು ಈ ಕ್ಷಿಪಣಿ ನಿರೋಧಕ ವ್ಯವಸ್ಥೆಯು ನೆರವಾಗಲಿದೆ

S-400: ಭಾರತಕ್ಕೆ ಎಸ್-400 ಕ್ಷಿಪಣಿ ನಿರೋಧಕ ವ್ಯವಸ್ಥೆ ಪೂರೈಕೆ ಆರಂಭಿಸಿದ ರಷ್ಯಾ: ಎಸ್​-400 ವೈಶಿಷ್ಟ್ಯ, ಕಾರ್ಯನಿರ್ವಹಣೆಯ ವಿವರ ಇಲ್ಲಿದೆ
ರಷ್ಯಾ ನಿರ್ಮಿತ ಎಸ್​-400 ವಾಯು ರಕ್ಷಣಾ ವ್ಯವಸ್ಥೆ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Nov 14, 2021 | 6:59 PM

Share

ದೆಹಲಿ: ಭೂಮಿಯಿಂದ ಆಗಸಕ್ಕೆ ಚಿಮ್ಮುವ ಎಸ್​-400 ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಈ ಮೊದಲಿನ ಒಪ್ಪಂದದಂತೆಯೇ ಭಾರತಕ್ಕೆ ರಷ್ಯಾ ಪೂರೈಸುತ್ತಿದೆ. ಮೊದಲ ಹಂತದ ಉಪಕರಣಗಳು ಭಾರತ ತಲುಪಿವೆ ಎಂದು ಮಿಲಿಟರಿ ಟೆಕ್ನಿಕಲ್ ಕೊಆಪರೇಷನ್ ಸಂಸ್ಥೆಯ ನಿರ್ದೇಶಕ ಡ್ಮಿತ್ರಿ ಶುಗೇವ್ ದುಬೈ ಏರ್​ಶೋನಲ್ಲಿ ಹೇಳಿದ್ದಾರೆ. ಶತ್ರುದೇಶಗಳಿಂದ ಬರುವ ಯುದ್ಧವಿಮಾನಗಳು ಮತ್ತು ಕ್ರೂಸ್​ ಕ್ಷಿಪಣಿಗಳನ್ನು ಮುಂಚಿತವಾಗಿಯೇ ಗುರುತಿಸಿ ಹೊಡೆದುರುಳಿಸಲು ಈ ಕ್ಷಿಪಣಿ ನಿರೋಧಕ ವ್ಯವಸ್ಥೆಯು ನೆರವಾಗಲಿದೆ. ಲಡಾಖ್ ವಲಯದಲ್ಲಿ ಚೀನಾದೊಂದಿಗೆ ಸಂಘರ್ಷ ಪರಿಸ್ಥಿತಿ ನೆಲೆಗೊಂಡಿರುವ ಅವಧಿಯಲ್ಲಿಯೇ ಭಾರತೀಯ ವಾಯುಪಡೆಯು ಮೊದಲ ಎಸ್​-400 ವ್ಯವಸ್ಥೆಯನ್ನು ಅಳವಡಿಸಲು ಮುಂದಾಗಿದೆ.

ಚೀನಾ ಈಗಾಗಲೇ ಎಸ್​-400 ತುಕಡಿಗಳನ್ನು ಲಡಾಖ್ ಸುತ್ತುವರಿಯುವ ಟಿಬೆಟ್ ಮತ್ತು ಅರುಣಾಚಲ ಪ್ರದೇಶದಲ್ಲಿ ನೆಲೆಗೊಳಿಸಿದೆ. ರಷ್ಯಾದಿಂದ ಖರೀದಿಸಿರುವ ವಾಯುದಾಳಿ ನಿರೋಧಕ ವ್ಯವಸ್ಥೆಯು ಈಗಾಗಲೇ ಭಾರತ ತಲುಪಿದೆ. ಈ ಘಟಕಗಳನ್ನು ಮೊದಲು ಪಶ್ಚಿಮ ವಲಯದಲ್ಲಿ ಸ್ಥಾಪಿಸಲು ರಕ್ಷಣಾ ಇಲಾಖೆ ಉದ್ದೇಶಿಸಿದೆ. ಚೀನಾ ಮತ್ತು ಪಾಕಿಸ್ತಾನದಿಂದ ಇರುವ ಬೆದರಿಕೆಯನ್ನು ಏಕಕಾಲಕ್ಕೆ ಎದುರಿಸಲು ಸಾಧ್ಯವಿರುವ ಆಯಕಟ್ಟಿನ ಪ್ರದೇಶದಲ್ಲಿ ಈ ಘಟಕಗಳನ್ನು ನೆಲೆಗೊಳಿಸಲು ಭಾರತ ಸರ್ಕಾರ ಉದ್ದೇಶಿಸಿದೆ ಎಂದು ಮೂಲಗಳನ್ನು ಉದ್ದೇಶಿಸಿ ಎಎನ್​ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಎಸ್-400 ವಾಯುದಾಳಿ ನಿರೋಧಕ ಖರೀದಿಗಾಗಿ ಭಾರತ ಸರ್ಕಾರವು ಸುಮಾರು ₹ 35,000 ಕೋಟಿ ಮೊತ್ತದ ಒಪ್ಪಂದವನ್ನು ರಷ್ಯಾದೊಂದಿಗೆ ಮಾಡಿಕೊಂಡಿದೆ. ಐದು ಎಸ್​-400 ತುಕಡಿಗಳನ್ನು ರೂಪಿಸಿ, ನೆಲೆಗೊಳಿಸಲು ಭಾರತ ಯೋಜನೆ ರೂಪಿಸಿದೆ.

ವಾಯು ಮತ್ತು ಸಮುದ್ರ ಮಾರ್ಗಗಳಿಂದ ಎಸ್​-400 ಘಟಕಗಳನ್ನು ಭಾರತಕ್ಕೆ ತರಲಾಗಿದೆ. ಈ ವರ್ಷದ ಅಂತ್ಯದಲ್ಲಿ ಮೊದಲ ಘಟಕವನ್ನು ಪೂರ್ಣ ಪ್ರಮಾಣದಲ್ಲಿ ಭಾರತಕ್ಕೆ ರಷ್ಯಾ ತಲುಪಿಸಲಿದೆ. ಶತ್ರುದೇಶದಿಂದ ಹಾರಿಬರುವ ವಿಮಾನಗಳು ಮತ್ತು ಕ್ರೂಸ್ ಕ್ಷಿಪಣಿಗಳನ್ನು 400 ಕಿಮೀ ದೂರದಲ್ಲಿ ಗುರುತಿಸಿ, ಪ್ರತಿರೋಧ ಕ್ರಮ ಜರುಗಿಸಲು ಎಸ್​-400 ಘಟಕಗಳು ನೆರವಾಗಲಿವೆ. ಒಂದು ವೇಳೆ ಸಂಘರ್ಷ ಪರಿಸ್ಥಿತಿ ಏರ್ಪಟ್ಟರೆ ಸಮರಭೂಮಿಯಲ್ಲಿ ಎಸ್​-400 ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆಯನ್ನು ತಳ್ಳಿಹಾಕಲು ಆಗದು.

ಎಸ್-400 ಕ್ಷಿಪಣಿ ನಿರೋಧಕ ವ್ಯವಸಸ್ಥೆಯಲ್ಲಿ ನಾಲ್ಕು ವಿಧದ ಕ್ಷಿಪಣಿಗಳಿರುತ್ತವೆ. ಶತ್ರುದೇಶಗಳ ವಿಮಾನಗಳು, ಖಂಡಾಂತರ ಕ್ಷಿಪಣಿಗಳು, ವೈಮಾನಿಕ ದಾಳಿ ಮುನ್ಸೂಚನೆ ನೀಡುವ ವಿಮಾನಗಳನ್ನು ಇವು ಹೊಡೆದುರುಳಿಸಬಲ್ಲವು. ದೂರಗಾಗಿ ಕ್ಷಿಪಣಿಗಳನ್ನು 400ರಿಂದ 250 ಕಿಮೀ, ಮಧ್ಯಮ ಹಂತದ ಕ್ಷಿಪಣಿಗಳನ್ನು 120 ಕಿಮೀ ಮತ್ತು ಕಡಿಮೆ ಅಂತರದ ಕ್ಷಿಪಣಿಗಳನ್ನು 40 ಕಿಮೀ ದೂರದಲ್ಲಿ ಹೊಡೆದುರುಳಿಸಬಲ್ಲದು. ಎಸ್​-400 ಬಳಕೆಗಾಗಿ ರಷ್ಯಾದಲ್ಲಿ ಭಾರತೀಯ ವಾಯುಪಡೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಮೊದಲ ತುಕಡಿಯನ್ನು ನಿಯೋಜಿಸಿದ ನಂತರ ಪೂರ್ವದ ಗಡಿಗಳಲ್ಲಿ ಹೆಚ್ಚುವರಿ ತರಬೇತಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ಎಎನ್​ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಅಕ್ಟೋಬರ್ 2018ರಲ್ಲಿ ಭಾರತವು ಎಸ್​-400 ಕ್ಷಿಪಣಿ ವ್ಯವಸ್ಥೆಯ ಸ್ಥಾಪನೆಗೆ ₹ 5.43 ಶತಕೋಟಿ ಡಾಲರ್​ ಮೊತ್ತದ ಒಪ್ಪಂದ ಮಾಡಿಕೊಂಡಿತ್ತು. ಒಪ್ಪಂದವಾದ ಐದು ವರ್ಷಗಳ ಒಳಗೆ ಘಟಕಗಳ ಪೂರೈಕೆ ಆಗುತ್ತದೆ ಎಂದು ರಷ್ಯಾ ತಿಳಿಸಿದೆ.

ಇದನ್ನೂ ಓದಿ: Agni-V: 5000 ಕಿಮೀ ದೂರ ಕ್ರಮಿಸಬಲ್ಲ ಅಗ್ನಿ-5 ಖಂಡಾಂತರ ಕ್ಷಿಪಣಿ ಪರೀಕ್ಷೆ ಯಶಸ್ವಿ ಇದನ್ನೂ ಓದಿ: ಸದ್ದಿಲ್ಲದೆ ಹೈಪರ್​ಸಾನಿಕ್ ಕ್ಷಿಪಣಿ ಪ್ರಯೋಗ ನಡೆಸಿದ ಚೀನಾ: ಅಮೆರಿಕಕ್ಕೆ ಭದ್ರತೆಯ ಆತಂಕ, ಭಾರತದಿಂದ ಎಚ್ಚರಿಕೆಯ ಪ್ರತಿಕ್ರಿಯೆ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ