ಗಾಯಕ ಕೆಕೆ ಕೊನೆಯ ಕಾರ್ಯಕ್ರಮದ ಫೇಸ್‌ಬುಕ್ ಲೈವ್‌ನಲ್ಲಿ ಮಮತಾ ಬ್ಯಾನರ್ಜಿಯನ್ನು ನಿಂದಿಸಿದ್ದ ವಿಡಿಯೋ ಬ್ಲಾಗರ್; ಪ್ರಕರಣ ದಾಖಲು
Singer KK Death | Mamata Banerjee: ಗಾಯಕ ಕೆಕೆ ಹಾಡಿದ ಕೊನೆಯ ಕಾರ್ಯಕ್ರಮದ ಲೈವ್‌ನಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ನಿಂದಿಸಿದ ಆರೋಪದ ಮೇಲೆ ವಿಡಿಯೋ ಬ್ಲಾಗರ್ ಓರ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಖ್ಯಾತ ಗಾಯಕ ಕೆಕೆ (Singer KK) ಎಂದೇ ಜನಪ್ರಿಯರಾಗಿದ್ದ ಕೃಷ್ಣಕುಮಾರ್ ಕುನ್ನತ್ ಇತ್ತೀಚೆಗೆ ಕೋಲ್ಕತ್ತಾದಲ್ಲಿ ನಡೆದ ಸಂಗೀತ ಕಾರ್ಯಕ್ರಮದ ನಂತರ ನಿಧನರಾಗಿದ್ದರು. ಆ ಕಾರ್ಯಕ್ರಮದ ಲೈವ್‌ನಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರನ್ನು ನಿಂದಿಸಿದ ಆರೋಪದ ಮೇಲೆ ವಿಡಿಯೋ ಬ್ಲಾಗರ್ ಓರ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.ಮಮತಾ ಬ್ಯಾನರ್ಜಿ ಅವರನ್ನು ಫೇಸ್‌ಬುಕ್ ಲೈವ್‌ನಲ್ಲಿ ನಿಂದಿಸಿದ ಆರೋಪದ ಮೇಲೆ ರೊದ್ದೂರ್ ರಾಯ್ ವಿರುದ್ಧ ಶನಿವಾರ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ತೃಣಮೂಲ ವಕ್ತಾರ ರಿಜು ದತ್ತಾ ಅವರು ಚಿತ್ಪುರ್ ಪೊಲೀಸ್ ಠಾಣೆಯಲ್ಲಿ ವಿಡಿಯೋ ಬ್ಲಾಗರ್ ಹಾಕಿದ್ದ ಕಾಮೆಂಟ್ ವಿರುದ್ಧ ದೂರು ದಾಖಲಿಸಿದ್ದರು. ನಂತರ ಐಪಿಸಿಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆಯ ಭಾಗವಾಗಿ ರೊದ್ದೂರ್ ರಾಯ್ಗೆ ಸಮನ್ಸ್ ನೀಡಲಾಗಿದೆ.
ವಿಡಿಯೋ ಬ್ಲಾಗರ್ ಆಗಿರುವ ರೊದ್ದೂರ್ ರಾಯ್ ಈ ಹಿಂದೆಯೂ ತಮ್ಮ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಟಿಎಂಸಿ ನಾಯಕರ ವಿರುದ್ಧ ಸ್ಫೋಟಕ ಹೇಳಿಕೆಗಳನ್ನು ನೀಡಿ ವಿವಾದ ಸೃಷ್ಟಿಸುತ್ತಿದ್ದರು. ಕೆಕೆ ಅವರ ಕೊನೆಯ ಕಾರ್ಯಕ್ರಮದ ಫೇಸ್‌ಬುಕ್ ಲೈವ್‌ನಲ್ಲಿ ಅವರು ಆಕ್ಷೇಪಾರ್ಹ ಕಾಮೆಂಟ್ಗಳನ್ನು ಮಾಡಿದ್ದರು ಎಂದು ಆರೋಪಿಸಲಾಗಿದೆ. ಕೆಕೆ ಅವರ ನಿಧನಕ್ಕೆ ಮಮತಾ ನೇತೃತ್ವದ ಸರ್ಕಾರವನ್ನು ದೂಷಿಸಿ ಅವರು ಕಾಮೆಂಟ್ ಹಾಕಿದ್ದರು. ಅಲ್ಲದೇ ಮಮತಾ ಬ್ಯಾನರ್ಜಿ ವಿರುದ್ಧವೂ ಆರೋಪಿಸಿದ್ದರು.
ಇದನ್ನೂ ಓದಿ: KK Death: ಸಾವಿಗಿಂತ ಕೆಲವೇ ನಿಮಿಷಗಳ ಮುನ್ನ ವೇದಿಕೆ ತೊರೆದಿದ್ದ ಗಾಯಕ ಕೆಕೆ; ಇಲ್ಲಿದೆ ವೈರಲ್ ವಿಡಿಯೋ
ಕೆಕೆ ಅವರು ತಮ್ಮ ಕೊನೆಯ ಕಾರ್ಯಕ್ರಮದಲ್ಲಿ ಕಿಕ್ಕಿರಿದು ತುಂಬಿದ್ದ ಸಭೆಯಲ್ಲಿ ಕಾರ್ಯಕ್ರಮ ನೀಡಿದ್ದರು. ಅಲ್ಲಿ ಅವರು ಧಗೆಗೆ ತತ್ತರಿಸಿ ಈ ಬಗ್ಗೆ ಆಯೋಜಕರಲ್ಲಿ ದೂರಿದ್ದರು ಎಂದು ವರದಿಯಾಗಿತ್ತು. ಪೊಲೀಸರು ತಮ್ಮ ಹೇಳಿಕೆಯಲ್ಲಿ ಕಾರ್ಯಕ್ರಮದಲ್ಲಿ ಜನರಿಗೆ ಸ್ಥಳಾವಕಾಶದ ಕೊರತೆಯಿರಲಿಲ್ಲ. ಹಾಗೆಯೇ ಕೆಕೆ ಅವರನ್ನು ಜನರು ಮುತ್ತದಂತೆ ವ್ಯವಸ್ಥೆ ಮಾಡಲಾಗಿತ್ತು ಎಂದು ಸ್ಪಷ್ಟನೆ ನೀಡಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:01 pm, Sun, 5 June 22