ಮನೀಷ್ ಸಿಸೋಡಿಯಾ, ಸತ್ಯೇಂದರ್ ಜೈನ್ ವಿರುದ್ಧ ತನಿಖೆಗೆ ರಾಷ್ಟ್ರಪತಿ ಅನುಮತಿ
ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಮತ್ತು ಸತ್ಯೇಂದರ್ ಜೈನ್ ವಿರುದ್ಧ ಔಪಚಾರಿಕ ತನಿಖೆ ಆರಂಭಿಸಲು ದೆಹಲಿಯ ಭ್ರಷ್ಟಾಚಾರ ನಿಗ್ರಹ ದಳಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅನುಮತಿ ನೀಡಿದ್ದಾರೆ. ಮನೀಶ್ ಸಿಸೋಡಿಯಾ ಮತ್ತು ಸಚಿವ ಸತ್ಯೇಂದರ್ ಜೈನ್ ವಿರುದ್ಧ ತನಿಖೆಗೆ ಗೃಹ ಸಚಿವಾಲಯವೂ ಅನುಮೋದನೆ ನೀಡಿದೆ. ಭ್ರಷ್ಟಾಚಾರ ಪ್ರಕರಣದಲ್ಲಿ ಇಬ್ಬರ ವಿರುದ್ಧದ ತನಿಖೆಗೆ ಅನುಮೋದನೆ ನೀಡಲಾಗಿದೆ ಎಂದು ಗೃಹ ಸಚಿವಾಲಯ ಇಂದು ಲೆಫ್ಟಿನೆಂಟ್ ಗವರ್ನರ್ ಸಚಿವಾಲಯಕ್ಕೆ ತಿಳಿಸಿದೆ.

ನವದೆಹಲಿ, (ಮಾರ್ಚ್ 13): ದೆಹಲಿ ಸರ್ಕಾರದಿಂದ ಶಾಲಾ ಕೊಠಡಿಗಳು ಅಥವಾ ಕಟ್ಟಡಗಳ ನಿರ್ಮಾಣದಲ್ಲಿ ನಡೆದ ಅಕ್ರಮಗಳಿಗೆ ಸಂಬಂಧಿಸಿದಂತೆ ಮನೀಷ್ ಸಿಸೋಡಿಯಾ ಮತ್ತು ಸತ್ಯೇಂದರ್ ಜೈನ್ ವಿರುದ್ಧ ಔಪಚಾರಿಕ ತನಿಖೆ ಆರಂಭಿಸಲು ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಅನುಮತಿ ನೀಡಿದ್ದಾರೆ. 1,300 ಕೋಟಿ ರೂ.ಗಳ ತರಗತಿ ಹಗರಣದಲ್ಲಿ ಇಬ್ಬರು ಎಎಪಿ ನಾಯಕರ ವಿರುದ್ಧ ಎಫ್‌ಐಆರ್ ದಾಖಲಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅನುಮೋದನೆ ನೀಡಿದ್ದಾರೆ.
ಡಿಸೆಂಬರ್ 2018ರಲ್ಲಿ ಸಿಬಿಐ ಆರೋಪಪಟ್ಟಿ ಸಲ್ಲಿಸಿದ್ದು, ಅಕ್ರಮ ಆಸ್ತಿ 1.47 ಕೋಟಿ ರೂ.ಗಳಷ್ಟಿದೆ. ಇದು 2015-17ರಲ್ಲಿ ಸತ್ಯೇಂದ್ರ ಜೈನ್ ಅವರ ಆದಾಯದ ಮೂಲಗಳಿಗಿಂತ ಸುಮಾರು ಶೇ. 217 ರಷ್ಟು ಹೆಚ್ಚಾಗಿದೆ ಎಂದು ಹೇಳಿದೆ.”2015-16ರ ಅವಧಿಯಲ್ಲಿ ಸತ್ಯೇಂದರ್ ಜೈನ್ ಸಾರ್ವಜನಿಕ ಸೇವಕರಾಗಿದ್ದರು ಮತ್ತು 4 ಕಂಪನಿಗಳು ಅವರ ಒಡೆತನ ಮತ್ತು ನಿಯಂತ್ರಣದಲ್ಲಿದ್ದವು. ಶೆಲ್ (ನಕಲಿ) ಕಂಪನಿಗಳಿಂದ 4.81 ಕೋಟಿ ರೂ.ಗಳಷ್ಟು ಹಣ ಸ್ವೀಕರಿಸಿ ಕೋಲ್ಕತ್ತಾ ಮೂಲದ ಪ್ರವೇಶ ನಿರ್ವಾಹಕರಿಗೆ ಹವಾಲಾ ಮಾರ್ಗದ ಮೂಲಕ ಹಣವನ್ನು ವರ್ಗಾಯಿಸಲಾಗಿದೆ” ಎಂದು ಇಡಿ ಈ ಹಿಂದೆ ತನ್ನ ತನಿಖೆಯಲ್ಲಿ ಕಂಡುಬಂದಿದೆ ಎಂದು ಹೇಳಿತ್ತು.
President approves registration of FIR against AAP leaders Manish Sisodia, Satyendar Jain in alleged Rs 1,300 crore scam in construction of classroom in Delhi govt schools. pic.twitter.com/0lclC8nev5
— Press Trust of India (@PTI_News) March 13, 2025
ಇದನ್ನೂ ಓದಿ: ಕೇಜ್ರಿವಾಲ್, ಸಿಸೋಡಿಯಾ ಸೇರಿ ದೆಹಲಿ ಚುನಾವಣೆಯಲ್ಲಿ ಈ ಪ್ರಮುಖ ಆಪ್ ನಾಯಕರಿಗೆ ಭಾರೀ ಮುಖಭಂಗ
ಹಾಗೇ, ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಮಾಜಿ ಸಚಿವ ಸತ್ಯೇಂದರ್ ಜೈನ್ ವಿರುದ್ಧ ಭ್ರಷ್ಟಾಚಾರ ಪ್ರಕರಣದಲ್ಲಿ ತನಿಖೆಗೆ ಗೃಹ ಸಚಿವಾಲಯ ಕೂಡ ಅನುಮೋದನೆ ನೀಡಿದೆ. ಇಂದು ದೆಹಲಿ ಲೆಫ್ಟಿನೆಂಟ್ ಗವರ್ನರ್ ಸೆಕ್ರೆಟರಿಯೇಟ್‌ಗೆ ಮಾಹಿತಿ ನೀಡಿದ್ದು, ಇಬ್ಬರು ಮಾಜಿ ಸಚಿವರ ವಿರುದ್ಧ ಕ್ರಮ ಕೈಗೊಳ್ಳಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದೆ. ಮನೀಷ್ ಸಿಸೋಡಿಯಾ ಶಿಕ್ಷಣ ಸಚಿವರಾಗಿದ್ದರು, ಸತ್ಯೇಂದ್ರ ಜೈನ್ ದೆಹಲಿಯ ಲೋಕೋಪಯೋಗಿ ಸಚಿವರಾಗಿದ್ದರು.
ಜುಲೈ 2018ರಲ್ಲಿ ಕೇಂದ್ರವು ಭ್ರಷ್ಟಾಚಾರ ನಿಗ್ರಹ ಕಾಯ್ದೆಯಲ್ಲಿ ಸೆಕ್ಷನ್ 17 ಎ ಅನ್ನು ತಿದ್ದುಪಡಿಯ ಮೂಲಕ ಸೇರಿಸಿತು. ಇದು ಪೊಲೀಸ್, ಸಿಬಿಐ ಅಥವಾ ಭ್ರಷ್ಟಾಚಾರ ಅಪರಾಧಗಳನ್ನು ನಿಭಾಯಿಸುವ ಯಾವುದೇ ಇತರ ಸಂಸ್ಥೆಯು ಯಾವುದೇ ಭ್ರಷ್ಟಾಚಾರ-ಸಂಬಂಧಿತ ಅಪರಾಧಗಳ ಬಗ್ಗೆ ಯಾವುದೇ “ವಿಚಾರಣೆ” ಅಥವಾ “ತನಿಖೆ” ನಡೆಸಲು ಪೂರ್ವಾನುಮತಿ ಪಡೆಯುವುದು ಕಡ್ಡಾಯಗೊಳಿಸಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ