PM Narendra Modi: ಇಂದು ಸಂಜೆ 5 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ

PM Modi Address the Nation Today: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಜೆ 5 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದು ಕೊವಿಡ್ ಪರಿಸ್ಥಿತಿ ಕುರಿತು ಚರ್ಚಿಸುವ ನಿರೀಕ್ಷೆ ಇದೆ.

PM Narendra Modi: ಇಂದು ಸಂಜೆ 5 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ
ನರೇಂದ್ರ ಮೋದಿ
Follow us
TV9 Web
| Updated By: Digi Tech Desk

Updated on:Jun 07, 2021 | 2:30 PM

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಜೆ 5 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದು ಕೊವಿಡ್ ಪರಿಸ್ಥಿತಿ ಕುರಿತು ಚರ್ಚಿಸುವ ನಿರೀಕ್ಷೆ ಇದೆ. ಈ ಬಗ್ಗೆ ಪ್ರಧಾನ ಮಂತ್ರಿಗಳ ಕಚೇರಿ (ಪಿಎಂಒ) ಪ್ರಕಟಣೆಯನ್ನು ಟ್ವೀಟ್ ಮಾಡಿದೆ. ಭಾರತದಲ್ಲಿ ಸೋಮವಾರ 1,00,636 ಹೊಸ ಕೊವಿಡ್ -19 ಪ್ರಕರಣಗಳು ಮತ್ತು 2,427 ಸಾವು ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ. ಒಟ್ಟು ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ ಈಗ 2,89,09,975 ಕ್ಕೆ ತಲುಪಿದ್ದು ಸಾವಿನ ಸಂಖ್ಯೆ 3,49,186 ಕ್ಕೆ ಏರಿದೆ. ದೇಶದಲ್ಲಿ 14,01,609 ಸಕ್ರಿಯ ಪ್ರಕರಣಗಳಿದ್ದು, 2,71,59,180 ಜನರು ಈ ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ. ಈವರೆಗೆ ಒಟ್ಟು 23,27,86,482 ಜನರಿಗೆ ಲಸಿಕೆ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಏತನ್ಮಧ್ಯೆ, ವೇಗವಾಗಿ ಸುಧಾರಿಸುತ್ತಿರುವ ಕೊರೊನಾವೈರಸ್ ಪರಿಸ್ಥಿತಿಯ ಮಧ್ಯೆ, 7 ದಿನಗಳ ಸಾವಿನ ಸಂಖ್ಯೆ ಆರು ವಾರಗಳಲ್ಲಿ ಮೊದಲ ಬಾರಿಗೆ 3,000 ಕ್ಕಿಂತ ಕಡಿಮೆಯಾಗಿದೆ. ಮೇ 21 ರಂದು ಸುಮಾರು 4,200 ರ ಗರಿಷ್ಠ ಮಟ್ಟವನ್ನು ತಲುಪಿದ ನಂತರ ಸರಾಸರಿ ಸಾವಿನ ಸಂಖ್ಯೆ ಸ್ಥಿರ ಕುಸಿತವನ್ನು ತೋರಿಸುತ್ತಿದೆ. ಶನಿವಾರ ಈ ಸರಾಸರಿ 2,970 ಕ್ಕೆ ಇಳಿದಿದೆ. ಹೊಸ ಪ್ರಕರಣಗಳು ಮತ್ತು ಸಾವು ಪ್ರಕರಣಗಳ ನಡುವೆ ಸಾಮಾನ್ಯವಾಗಿ ಎರಡು-ಮೂರು ವಾರಗಳ ಅಂತರವಿದೆ. ದೈನಂದಿನ ಪ್ರಕರಣಗಳ ಸಂಖ್ಯೆ ಮೇ 6 ರಂದು 4.14 ಲಕ್ಷಕ್ಕೆ ಏರಿತು ನಂತರ ಸಂಖ್ಯೆಗಳು ಸ್ಥಿರವಾಗಿ ಕಡಿಮೆಯಾಗುತ್ತಿವೆ. ದೆಹಲಿಯಲ್ಲಿ ಲಾಕ್‌ಡೌನ್ ನಿರ್ಬಂಧಗಳನ್ನು ಮತ್ತಷ್ಟು ಸಡಿಲಗೊಳಿಸಲಾಗಿದೆ. ಇಂದಿನಿಂದ ದೆಹಲಿಯಲ್ಲಿ ಮಾರುಕಟ್ಟೆಗಳು ಬೆಸ-ಸಮ ಸಂಖ್ಯೆ ಆಧಾರದಲ್ಲಿ ತೆರೆದುಕೊಳ್ಳುತ್ತವೆ. ಖಾಸಗಿ ಕಚೇರಿಗಳು ಸಹ ಮತ್ತೆ ತೆರೆಯುತ್ತಿವೆ ಮತ್ತು ದೆಹಲಿ ಮೆಟ್ರೋ ಶೇಕಡಾ 50 ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯಾಚರಣೆಯನ್ನು ಪುನರಾರಂಭಿಸಲಿದೆ. ಬಸ್ ಸೇವೆಗಳು ಮುಂಬೈನಲ್ಲಿ ಪುನರಾರಂಭಗೊಳ್ಳಲು ಸಜ್ಜಾಗಿದೆ.

ಕಳೆದ 24 ಗಂಟೆಗಳಲ್ಲಿ 1,390,916  ಕೊವಿಡ್  ಲಸಿಕೆ ಡೋಸ್ ನೀಡಲಾಗಿದೆ ಎಂದು ಅಂಕಿ ಅಂಶ ತೋರಿಸಿದೆ. ಇದುವರೆಗೆ 232,786,482 ಒಟ್ಟು ಡೋಸ್ ಲಸಿಕೆ ನೀಡಲಾಗಿದೆ.  ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಜೂನ್ 6 ರಂದು 1,587,589 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಜೂನ್ 5 ರಂದು 2,036,311 ಕ್ಕೆ ಹೋಲಿಸಿದರೆ, ಒಟ್ಟು 336,334,111 ಮಾದರಿಗಳನ್ನು ಇಲ್ಲಿಯವರೆಗೆ ಪರೀಕ್ಷಿಸಲಾಗಿದೆ ಎಂದು ಐಸಿಎಂಆರ್ ಅಂಕಿಅಂಶಗಳು ತಿಳಿಸಿವೆ.

ಇದನ್ನೂ ಓದಿ: ‘ಮೋದಿ ಮುಖ ನೋಡ್ಕೊಂಡು ವೋಟ್​ ಹಾಕಿದ್ವಿ, ನಮಗೆ ಬೆಲೆ ಇಲ್ವಾ’; ಸಿಎಂ ವಿರುದ್ಧ ಗುರುಪ್ರಸಾದ್​ ಗರಂ

ಇದನ್ನೂ ಓದಿ: ಸಿಎಂ ಯೋಗಿ ಹುಟ್ಟುಹಬ್ಬಕ್ಕೆ ವಿಶ್​​ ಮಾಡದ ಪ್ರಧಾನಿ ಮೋದಿ; ಅನುಮಾನಗಳಿಗೆ ಮತ್ತಷ್ಟು ಪುಷ್ಟಿ..ಸ್ಪಷ್ಟನೆ ನೀಡಿದ ಕೇಂದ್ರ ಸರ್ಕಾರ

Published On - 1:48 pm, Mon, 7 June 21