Semicon India 2022: ಬೆಂಗಳೂರಿನಲ್ಲಿ ಇಂದಿನಿಂದ ‘ಸೆಮಿಕಾನ್ ಇಂಡಿಯಾ 2022’ ಸಮ್ಮೇಳನ; ಪ್ರಧಾನಿ ಮೋದಿ ಉದ್ಘಾಟನೆ
PM Narendra Modi: ದೇಶವನ್ನು ಸೆಮಿಕಂಡಕ್ಟರ್ ಕೇಂದ್ರವಾಗಿಸಲು ಮತ್ತು ಚಿಪ್ ವಿನ್ಯಾಸ ಹಾಗೂ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ದೇಶದ ಆಕಾಂಕ್ಷೆಗೆ ಪೂರಕವಾಗಿ ಕಾರ್ಯನಿರ್ವಹಿಸಲು ಸೆಮಿಕಾನ್ ಇಂಡಿಯಾ 2022 ಸಂಕಿರಣವನ್ನು ನಡೆಸಲಾಗುತ್ತಿದೆ. ಇದನ್ನು ಪ್ರಧಾನಿ ಮೋದಿ ಇಂದು (ಶುಕ್ರವಾರ) ಉದ್ಘಾಟಿಸಲಿದ್ದಾರೆ.
ಬೆಂಗಳೂರು: ಇಂದು ಅಂದರೆ ಶುಕ್ರವಾರ (ಏ.29) ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸೆಮಿಕಾನ್ ಇಂಡಿಯಾ 2022 (Semicon India 2022) ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ. ಬೆಂಗಳೂರಿನಲ್ಲಿ ಮೂರು ದಿನಗಳ ಕಾಲ ಸಮ್ಮೇಳನ ನಡೆಯಲಿದೆ. ದೇಶವನ್ನು ಸೆಮಿಕಂಡಕ್ಟರ್ ಕೇಂದ್ರವಾಗಿಸಲು ಮತ್ತು ಚಿಪ್ ವಿನ್ಯಾಸ ಹಾಗೂ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ದೇಶದ ಆಕಾಂಕ್ಷೆಗೆ ಪೂರಕವಾಗಿ ಕಾರ್ಯನಿರ್ವಹಿಸಲು ಈ ಸಂಕಿರಣವನ್ನು ನಡೆಸಲಾಗುತ್ತಿದೆ. ಇದು ಉದ್ಯಮ ಸಂಘಗಳು, ಸಂಶೋಧನಾ ಸಂಸ್ಥೆಗಳು ಮತ್ತು ಅಕಾಡೆಮಿಗಳ ಪ್ರಖ್ಯಾತ ತಜ್ಞರನ್ನು ಒಳಗೊಂಡಿದ್ದು, ಅವರು ಸೆಮಿಕಂಡಕ್ಟರ್ ಕೇಂದ್ರವಾಗಿಸಲು ಅನುಕೂಲಕರ ವಾತಾವರಣ ಬೆಳೆಸುವಲ್ಲಿ ಸರ್ಕಾರದ ಪಾತ್ರ ಮತ್ತು ಪ್ರಯತ್ನಗಳನ್ನು ಚರ್ಚಿಸಲಿದ್ದಾರೆ.
ಈ ಪ್ರಮುಖ ವಿಚಾರ ಸಂಕಿರಣವು ‘ಇಂಡಿಯಾ ಸೆಮಿಕಂಡಕ್ಟರ್ ಮಿಷನ್’ ಅನ್ನು ಕಾರ್ಯರೂಪಕ್ಕೆ ತರುವಲ್ಲಿ ಮೊದಲ ಹೆಜ್ಜೆಯಾಗಿದೆ. ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ದೇಶದ ಪ್ರಸ್ತುತ ಸಾಮರ್ಥ್ಯ, ತಾಂತ್ರಿಕ ಪ್ರವೃತ್ತಿಗಳು, ಮಾರುಕಟ್ಟೆ ನಿರೀಕ್ಷೆಗಳು ಮೊದಲಾದವುಗಳನ್ನು ಇದರಲ್ಲಿ ಚರ್ಚಿಸಲಾಗುತ್ತದೆ. ಇದು ಸ್ಟಾರ್ಟ್ ಅಪ್ ಐಡಿಯಾಗಳು ಮತ್ತು ಶೈಕ್ಷಣಿಕ ಸಂಸ್ಥೆಗಳು ಮಾಡುವ ಪ್ರಮುಖ ಯೋಜನೆಗಳನ್ನು ಸಹ ಒಳಗೊಂಡಿರುತ್ತದೆ.
ಪ್ರಧಾನಿ ಮೋದಿ ಟ್ವೀಟ್:
At around 11 AM tomorrow, 29th April, will be sharing my remarks at SemiconIndia 2022, which brings together various different stakeholders including StartUps from the world of semiconductors. This is a sector in which India is making rapid strides.
— Narendra Modi (@narendramodi) April 28, 2022
ಸೆಮಿಕಾನ್ ಇಂಡಿಯಾ ಸಮ್ಮೇಳನ – 2022 ರ ಸಂಚಾಲನಾ ಸಮಿತಿಯು ಸ್ಟಾರ್ಟ್‌ಅಪ್‌ಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಜಾಗತಿಕ ಉದ್ಯಮ ನಾಯಕರನ್ನು ಒಳಗೊಂಡಿದೆ, ಇದು ಭಾರತದ ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪಾದನಾ ಮಹತ್ವಾಕಾಂಕ್ಷೆಗಳನ್ನು ಶಕ್ತಿಯುತಗೊಳಿಸಲು ಸರ್ಕಾರದ ಸಹಯೋಗದ ವಿಧಾನವನ್ನು ಪ್ರದರ್ಶಿಸುತ್ತದೆ.
ಈ ಜಾಗತಿಕ ಸೆಮಿಕಂಡಕ್ಟರ್ ಸಮ್ಮೇಳನವು ಸ್ಟಾರ್ಟ್‌ಅಪ್‌ಗಳು, ಶೈಕ್ಷಣಿಕ ಸಂಸ್ಥೆಗಳು ಕೈಗೊಂಡ ಪ್ರಮುಖ ಯೋಜನೆಗಳು, ಸರ್ಕಾರವು ಕೈಗೊಂಡಿರುವ ಮೈಕ್ರೊಪ್ರೊಸೆಸರ್ ಕಾರ್ಯಕ್ರಮಗಳು ಹಾಗೂ ಈ ವಲಯದಲ್ಲಿ ಉದ್ಯಮ ಮತ್ತು ಸರ್ಕಾರದಿಂದ ನಡೆಯುತ್ತಿರುವ ಸಂಶೋಧನೆ ಮತ್ತು ಅಭಿವೃದ್ಧಿಯ ಬೌದ್ಧಿಕ ಶಕ್ತಿಯನ್ನು ಪ್ರದರ್ಶಿಸಲಿದೆ.
ಸಮ್ಮೇಳನದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಡಾ.ಅಶ್ವತ್ಥ್ ನಾರಾಯಣ್, ಮುರುಗೇಶ್ ನಿರಾಣಿ, ಕೇಂದ್ರ ಸಚಿವ ಅಶ್ವಿನ್ ವೈಷ್ಣವ್ ಸೇರಿದಂತೆ ಇಂಡೋ-ಯುಸ್ ವೆಂಚರ್ ಪಾರ್ಟನರ್ ಸ್ಥಾಪಕ – ವಿನೋದ್ ಧಾಮ್; ಮೈಕ್ರಾನ್ ಟೆಕ್ನಾಲಜಿಯ ಅಧ್ಯಕ್ಷ ಮತ್ತು ಸಿಇಒ ಸಂಜಯ್ ಮೆಹ್ರೋತ್ರಾ, ಇಂಟೆಲ್ ಫೌಂಡ್ರಿ ಸರ್ವೀಸಸ್ ಅಧ್ಯಕ್ಷ ರಣಧೀರ್ ಠಾಕೂರ್ ಮತ್ತು ಇಂಟೆಲ್ ಇಂಡಿಯಾ ರಾಷ್ಟ್ರ ಮುಖ್ಯಸ್ಥೆ ನಿವೃತಿ ರೈ ಅವರಂತಹ ಪ್ರಮುಖ ಉದ್ಯಮ, ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳ ಜಾಗತಿಕ ತಜ್ಞರು ಭಾಗವಹಿಸಲಿದ್ದಾರೆ.
ಇದನ್ನೂ ಓದಿ: ಇಡೀ ಈಶಾನ್ಯ ರಾಜ್ಯಗಳಿಂದ ಎಎಫ್‌ಎಸ್‌ಪಿಎ ತೆಗೆದು ಹಾಕಲು ಕೇಂದ್ರ ಪ್ರಯತ್ನಿಸುತ್ತಿದೆ: ನರೇಂದ್ರ ಮೋದಿ
Autism Spectrum Disorder: ಆಟಿಸಂ ಸಮಸ್ಯೆಯಿದೆ ಎಂದು ಹೇಳಿಕೊಂಡಿದ್ದ ಎಲಾನ್ ಮಸ್ಕ್; ಏನಿದು? ಪರಿಹಾರ ಹೇಗೆ?
Published On - 8:06 am, Fri, 29 April 22