ರಾಹುಲ್ ಗಾಂಧಿ ಪಾಕಿಸ್ತಾನದಲ್ಲಿ ಸ್ಪರ್ಧಿಸುವುದು ಒಳ್ಳೆಯದು: ಪ್ರಿಯಾಂಕಾ ಗಾಂಧಿ ಮಾಜಿ ಆಪ್ತ ಆಚಾರ್ಯ ಪ್ರಮೋದ್ ಕೃಷ್ಣಂ ವ್ಯಂಗ್ಯ
ರಾಹುಲ್ ಗಾಂಧಿಯವರದ್ದು ಪಲಾಯನವಾದ ಎಂದು ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಮಾಜಿ ಆಪ್ತ ಆಚಾರ್ಯ ಪ್ರಮೋದ್ ಕೃಷ್ಣಂ ಟೀಕಿಸಿದ್ದು, ಪಾಕಿಸ್ತಾನದಲ್ಲಿ ಅವರ ಜನಪ್ರಿಯತೆ ಮತ್ತು ಬೇಡಿಕೆ ಹೆಚ್ಚುತ್ತಿರುವ ಕಾರಣ ರಾಹುಲ್ ಗಾಂಧಿ ರಾಯ್‌ಬರೇಲಿ ಬದಲಿಗೆ ರಾವಲ್ಪಿಂಡಿಯಿಂದ ಸ್ಪರ್ಧಿಸುವುದು ಒಳ್ಳೆಯದು ಎಂಬುದಾಗಿ ಭಾವಿಸುತ್ತೇನೆ ಎಂದು ವ್ಯಂಗ್ಯವಾಡಿದ್ದಾರೆ.
ನವದೆಹಲಿ, ಮೇ 4: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಉತ್ತರ ಪ್ರದೇಶದ ರಾಯ್ಬರೇಲಿಯಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಬಗ್ಗೆ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಮಾಜಿ ಆಪ್ತ ಆಚಾರ್ಯ ಪ್ರಮೋದ್ ಕೃಷ್ಣಂ (Acharya Pramod Krishnam) ವ್ಯಂಗ್ಯವಾಡಿದ್ದಾರೆ. ರಾಹುಲ್ ಗಾಂಧಿ ರಾಯ್ಬರೇಲಿಯಿಂದ ಚುನಾವಣೆಗೆ ಸ್ಪರ್ಧಿಸುವ ಬದಲು ಪಾಕಿಸ್ತಾನದ (Pakistan) ರಾಹುಲ್ ರಾವಲ್ಪಿಂಡಿಯಿಂದ ಸ್ಪರ್ಧಿಸಬಹುದು. ಹೇಗೂ ಅಲ್ಲಿ ಅವರ ಜನಪ್ರಿಯತೆ ಹೆಚ್ಚುತ್ತಿದೆ ಎಂದು ಲೇವಡಿ ಮಾಡಿದ್ದಾರೆ.
ರಾಹುಲ್ ಗಾಂಧಿಯವರದ್ದು ಪಲಾಯನವಾದ ಎಂದೂ ಅವರು ಟೀಕಿಸಿದ್ದಾರೆ. ರಾಹುಲ್ ಗಾಂಧಿ ಕುರಿತು ಕುಹಕವಾಡಿ ಆಚಾರ್ಯ ಪ್ರಮೋದ್ ಕೃಷ್ಣಂ ನೀಡಿರುವ ಹೇಳಿಕೆಯನ್ನು ಎ ಎನ್ಐ ಸುದ್ದಿ ಸಂಸ್ಥೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
ಎಎನ್ಐ ಎಕ್ಸ್ ಸಂದೇಶ
#WATCH | Delhi: Former aide of Congress leader Priyanka Gandhi Vadra, Acharya Pramod Krishnam says, “The way Rahul Gandhi has left Amethi, Congress party workers’ morale is down. Priyanka Gandhi not contesting the election, this is now taking the shape of a volcano in the hearts… pic.twitter.com/ynbNsTYkqG
— ANI (@ANI) May 4, 2024
‘ರಾಹುಲ್ ಗಾಂಧಿ ಅಮೇಠಿ ತೊರೆದಿರುವ ರೀತಿ ಕಾಂಗ್ರೆಸ್ ಕಾರ್ಯಕರ್ತರ ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡಿದೆ. ಪ್ರಿಯಾಂಕಾ ಗಾಂಧಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ, ಇದು ಈಗ ಅವರ ಬೆಂಬಲಿಗರ ಹೃದಯದಲ್ಲಿ ಜ್ವಾಲಾಮುಖಿಯ ಆಕಾರವನ್ನು ಪಡೆಯುತ್ತಿದೆ. ಅದು ಜೂನ್ 4 ರ ನಂತರ ಸ್ಫೋಟಗೊಳ್ಳಲಿದೆ. ಕಾಂಗ್ರೆಸ್ ಮತ್ತೆ ಎರಡು ಬಣಗಳಾಗಿ ವಿಭಜನೆಯಾಗಲಿದೆ. ಒಂದು ರಾಹುಲ್ ಗಾಂಧಿ ಬಣ ಮತ್ತು ಇನ್ನೊಂದು ಪ್ರಿಯಾಂಕಾ ಗಾಂಧಿ ಬಣ ಆಗಲಿದೆ. ಪಾಕಿಸ್ತಾನದಲ್ಲಿ ಅವರ ಜನಪ್ರಿಯತೆ ಮತ್ತು ಬೇಡಿಕೆ ಹೆಚ್ಚುತ್ತಿರುವ ಕಾರಣ ರಾಹುಲ್ ಗಾಂಧಿ ರಾಯ್‌ಬರೇಲಿ ಬದಲಿಗೆ ರಾವಲ್ಪಿಂಡಿಯಿಂದ ಸ್ಪರ್ಧಿಸುವುದು ಒಳ್ಳೆಯದು ಎಂಬುದಾಗಿ ಭಾವಿಸುತ್ತೇನೆ’ ಎಂದು ಆಚಾರ್ಯ ಪ್ರಮೋದ ಕೃಷ್ಣಂ ಹೇಳಿದ್ದಾರೆ.
ಇದನ್ನೂ ಓದಿ: ನಿಮ್ಮ ಒಂದು ಮತ 2014ರಲ್ಲಿ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆದಿತ್ತು; ಚುನಾವಣಾ ಪ್ರಚಾರದಲ್ಲಿ ಮೋದಿ
ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸುವ ಮೂಲಕ ಆಚಾರ್ಯ ಪ್ರಮೋದ್ ಕೃಷ್ಣಂ ಸುದ್ದಿಯಾಗಿದ್ದರು. ಪಕ್ಷ ವಿರೋಧಿ ಹೇಳಿಕೆಗಳು ಹಾಗೂ ಚಟುವಟಿಕೆಗಳ ಕಾರಣ ನಂತರ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು. ನನ್ನನ್ನು ಉಚ್ಚಾಟನೆ ಮಾಡುವ ಮೂಲಕ ಕಾಂಗ್ರೆಸ್ ಒಳ್ಳೆ ಕೆಲಸ ಮಾಡಿದೆ. ಸಾಯುವವರೆಗೂ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ನಿಲ್ಲುತ್ತೇನೆ ಎಂದು ನಂತರ ಅವರು ಹೇಳಿಕೆ ನೀಡಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ