ಪೋರ್ಷೆ ಕಾರು ಅಪಘಾತ: ವೇದಾಂತ್​ ಕುಡಿದ ಮತ್ತಿನಲ್ಲಿ ಕಾರು ಓಡಿಸುತ್ತಿದ್ದುದನ್ನು ಒಪ್ಪಿಕೊಂಡ ಸ್ನೇಹಿತ

ಪುಣೆಯಲ್ಲಿ ಸಂಭವಿಸಿದ ಪೋರ್ಷೆ ಕಾರು ಅಪಘಾತಕ್ಕೆ ಸಂಬಂಧಿಸಿದಂತೆ ವೇದಾಂತ್​ ಅಗರ್ವಾಲ್​ ಸ್ನೇಹಿತ ಕೆಲವು ಮಾಹಿತಿಗಳನ್ನು ನೀಡಿದ್ದಾರೆ. ಅಂದು ವೇದಾಂತ್​ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸುತ್ತಿದ್ದುದು ಹೌದು ಎಂದು ಒಪ್ಪಿಕೊಂಡಿದ್ದಾರೆ.

ಪೋರ್ಷೆ ಕಾರು ಅಪಘಾತ: ವೇದಾಂತ್​ ಕುಡಿದ ಮತ್ತಿನಲ್ಲಿ ಕಾರು ಓಡಿಸುತ್ತಿದ್ದುದನ್ನು ಒಪ್ಪಿಕೊಂಡ ಸ್ನೇಹಿತ
ಕಾರು ಅಪಘಾತ

Updated on: May 29, 2024 | 11:44 AM

ವೇದಾಂತ್ ಅಗರ್ವಾಲ್(Vedant Agarwal)​ ಕುಡಿದ ಮತ್ತಿನಲ್ಲಿ ಕಾರು ಓಡಿಸುತ್ತಿದ್ದ ಎನ್ನುವ ವಿಚಾರವನ್ನು ಆತನ ಸ್ನೇಹಿತ ಒಪ್ಪಿಕೊಂಡಿದ್ದಾರೆ. ಮೇ 19ರಂದು ಪುಣೆಯಲ್ಲಿ ಪೋರ್ಷೆ ಕಾರು ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಟೆಕ್ಕಿಗಳು ಸಾವನ್ನಪ್ಪಿದ್ದರು.

ಪುಣೆಯ ಅಪರಾಧ ವಿಭಾಗದ ಕಚೇರಿಯಲ್ಲಿ ಸುಮಾರು ಆರು ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ಆರೋಪಿ ಅಪ್ರಾಪ್ತ ಸ್ನೇಹಿತನ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಮೂಲಗಳು ಇಂಡಿಯಾ ಟುಡೇ ಟಿವಿಗೆ ತಿಳಿಸಿವೆ.

ಘಟನೆ ಏನು?
17 ವರ್ಷದ ಬಾಲಕ ವೇದಾಂತ್​ ಅಗರ್ವಾಲ್​ ಎಂಬಾತ ತನ್ನ ಐಷಾರಾಮಿ ಪೋರ್ಷೆ ಕಾರು ಅಪಘಾತ ಮಾಡಿ ಇಬ್ಬರ ಜೀವ ತೆಗೆದಿದ್ದ. ಇದಾಗ ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದರು, ಆದರೆ ಬಾಲಾಪರಾಧಿ ನ್ಯಾಯಾಲಯ ಆತನಿಗೆ ಷರತ್ತುಬದ್ಧ ಜಾಮೀನು ನೀಡಿ ಬಿಡುಗಡೆ ಮಾಡಿತ್ತು. ಕೂಡಲೇ ಆತನ ತಂದೆ ವಿಶಾಲ್​ ಅಗರ್ವಾಲ್​ರನ್ನು ಬಂಧಿಸಲಾಗಿತ್ತು.

ಮತ್ತಷ್ಟು ಓದಿ: ಪೋರ್ಷೆ ಕಾರು ಅಪಘಾತ: ಆರೋಪಿಯ ರಕ್ತದ ಮಾದರಿ ಬದಲಿಸಲು 3 ಲಕ್ಷ ರೂ. ನೀಡಲಾಗಿತ್ತು

ಆದರೆ ಸಾಕಷ್ಟು ಕಡೆಗಳಿಂದ ಇದಕ್ಕೆ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಬಾಲಕನನ್ನು ಮತ್ತೆ ಬಂಧಿಸಲಾಗಿದೆ.
ಇದಾದ ಬಳಿಕ ವಿಶಾಲ್​ ಅಗರ್ವಾಲ್​ ತಮ್ಮ ಕಾರಿಗೆ ಬೇರೆ ಚಾಲಕನಿದ್ದಾನೆ ನನ್ನ ಮಗ ಕಾರು ಓಡಿಸುತ್ತಿರಲಿಲ್ಲ ಎಂದು ಹೇಳಿದ್ದರು.

ಆದರೆ ಕಾರು ಚಾಲಕ ಇಲ್ಲಾ ತಮ್ಮ ಮಗನೇ ಕಾರು ಓಡಿಸುತ್ತಾನೆ ನೀನು ಪ್ಯಾಸೆಂಜರ್​ ಸೀಟ್​ನಲ್ಲಿ ಕುಳಿತುಕೊಳ್ಳುವಂತೆ ಹೇಳಿದ್ದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರ ಮಧ್ಯೆ ವೇದಾಂತ್ ರಕ್ತದ ಮಾದರಿಯನ್ನು ಬದಲಿಸಲು ವೈದ್ಯರಿಗೆ 3 ಲಕ್ಷ ರೂ ಕೊಡಲಾಗಿತ್ತು ಎನ್ನುವ ಆರೋಪವೂ ಕೇಳಿಬಂದಿದೆ. ಹಾಗೆಯೇ ಅಪ್ರಾಪ್ತರಿಗೆ ಮದ್ಯ ನೀಡಿದ ಆರೋಪದ ಮೇಲೆ ಬಾರ್​ನ್ನು ಮುಚ್ಚಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us