AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ಎಂಎಲ್​ಸಿ ಸಂಬಂಧಿ ಸತೀಶ್​ ಕೊಲೆ, ಪತ್ನಿಯೇ ಮಾಸ್ಟರ್​ಮೈಂಡ್

ಸತೀಶ್ ವಾಘ್ ಅವರ ಕೊಲೆ ಪ್ರಕರಣದಲ್ಲಿ ಆಘಾತಕಾರಿ ವಿಚಾರವನ್ನು ಪೊಲೀಸರು ಬಹಿರಂಗಗೊಳಿಸಿದ್ದಾರೆ. ಈ ಕೊಲೆಗೆ ಅವರ ಪತ್ನಿಯೇ 5 ಲಕ್ಷ ರೂ. ಸುಪಾರಿ ಕೊಟ್ಟಿದ್ದರು, ಆಕೆಯ ಕೊಲೆಯ ಹಿಂದಿನ ಮಾಸ್ಟರ್​ಮೈಂಡ್ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಇದೀಗ ಪೊಲೀಸರು ಆಕೆಯನ್ನು ಕೂಡ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಬಿಜೆಪಿ ಎಂಎಲ್​ಸಿ ಸಂಬಂಧಿ ಸತೀಶ್​ ಕೊಲೆ, ಪತ್ನಿಯೇ ಮಾಸ್ಟರ್​ಮೈಂಡ್
ಬಂಧನ
ನಯನಾ ರಾಜೀವ್
|

Updated on: Dec 26, 2024 | 9:10 AM

Share

ಬಿಜೆಪಿ ಎಂಎಲ್​ಸಿ ಯೋಗೀಶ್​ ತಿಲೇಕರ್ ಸಂಬಂಧಿ ಸತೀಶ್​ ವಾಘ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿರುವುದರ ಹಿಂದೆ ಪತ್ನಿಯದ್ದೇ ಕೈವಾಡವಿದೆ ಎಂಬುದು ತಿಳಿದುಬಂದಿದೆ. ಸತೀಶ್​ ವಾಘ್ ಹತ್ಯೆಗೆ ಸಂಬಂಧಿಸಿದಂತೆ ಪುಣೆ ಪೊಲೀಸ್ ಕ್ರೈಂ ಬ್ರ್ಯಾಂಚ್ ಮತ್ತೊಬ್ಬ ಶಂಕಿತನನ್ನು ಬಂಧಿಸಿದೆ. ತನಿಖೆಯಲ್ಲಿ ಆಘಾತಕಾರಿ ಅಂಶ ಬಹಿರಂಗಗೊಂಡಿದ್ದು, ಈ ಕೊಲೆ ಹಿಂದಿನ ಮಾಸ್ಟರ್​ಮೈಂಡ್ ಸತೀಶ್​ ಅವರ ಪತ್ನಿಯೇ ಎಂಬುದು ತಿಳಿದುಬಂದಿದೆ.

‘ಪುಣೆ ಪೊಲೀಸ್​ ಆಯುಕ್ತ ಅಮಿತೇಶ್ ಕುಮಾರ್ ಪ್ರಕಾರ, ಮೊದಲ ಆರೋಪಿ ಅತಿಶ್ ಜಾಧವ್, ವಾಘ್ ಪತ್ನಿ ಕೊಲೆಗೆ ಸುಪಾರಿಯಾಗಿ 5 ಲಕ್ಷ ರೂ. ನೀಡಿದ್ದರು ಎಂದು ಹೇಳಿದ್ದು, ಬುಧವಾರ ಆಕೆಯನ್ನು ಬಂಧಿಸಲಾಗಿದೆ.

ಕೊಲೆ ಮಾಡಲು ವಾಘ್ ಪತ್ನಿಯಿಂದ 5 ಲಕ್ಷ ರೂಪಾಯಿ ಪಡೆದಿದ್ದನ್ನು ಜಾಧವ್ ಒಪ್ಪಿಕೊಂಡಿದ್ದಾನೆ. ಅಪಹರಣ ಮತ್ತು ಹತ್ಯೆಯ ಹಿಂದೆ ಆಕೆಯ ಪಾತ್ರವನ್ನು ತನಿಖೆಯಿಂದ ಸಾಬೀತುಪಡಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಡಿಸೆಂಬರ್ 9 ರಂದು ಬೆಳಗ್ಗೆ 5.30 ರ ಸುಮಾರಿಗೆ ಪುಣೆಯ ಯವತ್ ಪ್ರದೇಶದಲ್ಲಿ ಬೆಳಗಿನ ವಾಕ್ ಮಾಡುವಾಗ ವಾಘ್ ಅವರನ್ನು ಅಪಹರಿಸಲಾಗಿತ್ತು.

ಮತ್ತಷ್ಟು ಓದಿ: ದೆಹಲಿ ಉದ್ಯಮಿ ಹತ್ಯೆ: ಯಾರನ್ನೋ ಕೊಲ್ಲಲು ಬಂದವರು ಮತ್ಯಾರನ್ನೋ ಕೊಂದ್ರು

ಘಟನೆಯನ್ನು ಸಿಸಿಟಿವಿ ದೃಶ್ಯಾವಳಿಗಳು ಸೆರೆಹಿಡಿಯಲಾಗಿದ್ದು, 48 ಗಂಟೆಗಳಲ್ಲಿ ಮೊದಲ ಶಂಕಿತನನ್ನು ಪೊಲೀಸರು ಬಂಧಿಸಲು ಕಾರಣರಾದರು. ವಾಘ್ ಅವರ ದೇಹವು ಪುಣೆ ಬಳಿಯ ಶಿಂಧೇವನೆ ಘಾಟ್‌ನಲ್ಲಿ ಸುಮಾರು 70 ಬಾರಿ ಇರಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಧುಲೆಯಿಂದ ಪವನ್ ಶರ್ಮಾ, ಫರ್ಸುಂಗಿಯಿಂದ ನವನಾಥ್ ಗುರಾಲ್ ಮತ್ತು ಧಾರಾಶಿವ್‌ನಲ್ಲಿ ಬಂಧಿತರಾದ ಜಾಧವ್ ಸೇರಿದಂತೆ ನಾಲ್ವರು ಶಂಕಿತರಲ್ಲಿ ಮೂವರನ್ನು ಪೊಲೀಸರು ಇದುವರೆಗೆ ಬಂಧಿಸಿದ್ದಾರೆ. ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

ಉದ್ಯಮಿಯ ಗುಂಡಿಕ್ಕಿ ಹತ್ಯೆ ಬೆಳಗ್ಗೆ ವಾಕಿಂಗ್​ಗೆಂದು ತೆರಳಿದ್ದ ಉದ್ಯಮಿಯೊಬ್ಬರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ದೆಹಲಿಯಲ್ಲಿ ಶನಿವಾರ ನಡೆದಿದೆ. ಆದರೆ ಆರೋಪಿಗಳು ಕೊಲ್ಲಲು ಬಂದಿದ್ದು ಯಾರನ್ನೋ ಹತ್ಯೆ ಮಾಡಿದ್ದು ಮತ್ಯಾರನ್ನೋ ಎಂದು ಉದ್ಯಮಿ ಸುನಿಲ್ ಜೈನ್ ಸುಮಿತ್ ಎನ್​ಡಿಟಿವಿಗೆ ತಿಳಿಸಿದ್ದಾರೆ.

ದೆಹಲಿಯ ಶಾಹದಾರ ಜಿಲ್ಲೆಯ ಫರ್ಶ್ ಬಜಾರ್ ಪ್ರದೇಶದಲ್ಲಿ ಶನಿವಾರ ಇಬ್ಬರು ದುಷ್ಕರ್ಮಿಗಳು ಬೈಕ್​ನಲ್ಲಿ ಬಂದು ಸುನಿಲ್ ಅವರ ಮೇಲೆ ಗುಂಡು ಹಾರಿಸಿದ್ದರು. ಮೊದಲು ಸುನಿಲ್ ಬಳಿ ನಿಮ್ಮ ಮೊಬೈಲ್ ಬಿದ್ದಿದೆ ಎಂದು ಹೇಳಿದರು, ಬಳಿಕ ಹರಿಯಾನ್ವಿ ಭಾಷೆಯಲ್ಲಿ ವಿರಾಟ್ ಎಂದರೆ ಯಾರು ಎಂದು ವಿಚಾರಿಸಿದ್ದರು.

ಅದಕ್ಕೆ ಸುನಿಲ್ ಯಾರೆಂದು ಗೊತ್ತಿಲ್ಲ ಎಂದು ಹೇಳಿದ್ದರು. ಆಗ ದಾಳಿಕೋರರಲ್ಲಿ ಒಬ್ಬನು ಜೈನ್ ಅವರನ್ನು ತೋರಿಸುತ್ತಾ ಇವರೇ ಎಂದು ಕೂಗಿದ್ದಾನೆ. ದಾಳಿಕೋರ ಜೈನ್ ಮೇಲೆ ಏಳರಿಂದ ಎಂಟು ಬಾರಿ ಗುಂಡು ಹಾರಿಸಿದ್ದ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ