AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಪತ್ನಿ ಗೆಳೆಯನ ಜತೆ ಹೋಟೆಲ್​ನಲ್ಲಿದ್ದಾಗ ಜಿಪಿಎಸ್ ಸಹಾಯದಿಂದ ರೆಡ್ ಹ್ಯಾಂಡ್ ಆಗಿ ಹಿಡಿದ ಪತಿ

ಏಳೇಳು ಜನ್ಮಕ್ಕೂ ನೀನೇ ನನ್ನ ಗಂಡ ಎಂದು ಪ್ರಮಾಣ ಮಾಡಿ, ಸಪ್ತಪದಿ ತುಳಿದು,  ಬೇರೊಬ್ಬನ ಜತೆ ಹೋಟೆಲ್​ ರೂಮಿನಲ್ಲಿ ಉಳಿದುಕೊಂಡಿದ್ದ ಮಹಿಳೆಯನ್ನು ಆಕೆಯ ಪತಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಈ ಘಟನೆ ಪಂಜಾಬ್​ನ ಅಮೃತಸರದಲ್ಲಿ ನಡೆದಿದೆ. ಮದುವೆಯಾಗಿ 15 ವರ್ಷಗಳು ಕಳೆದಿತ್ತು, ಇಬ್ಬರು ಅನ್ಯೂನ್ಯವಾಗಿಯೇ ಇದ್ದರು. ಆದರೆ ಅಂದು ಹೋಟೆಲ್​ ರೂಮಿನಲ್ಲಿ ಪತ್ನಿ ಬೇರೊಬ್ಬನ ಜತೆ ಇರುವುದನ್ನು ನೋಡಿ ಜೀವನದ ಬಗ್ಗೆ ಕಂಡಿದ್ದ ಕನಸುಗಳೆಲ್ಲಾ ಆಗಲೇ ಮುಗಿದ ಅನುಭವವಾಗಿತ್ತು. ಹೋಟೆಲ್ ಹೊರಗೆ ಬಂದು ಪತಿ ಗಳಗಳನೆ ಕಣ್ಣೀರಿಟ್ಟಿದ್ದಾರೆ.

Video: ಪತ್ನಿ ಗೆಳೆಯನ ಜತೆ ಹೋಟೆಲ್​ನಲ್ಲಿದ್ದಾಗ ಜಿಪಿಎಸ್ ಸಹಾಯದಿಂದ ರೆಡ್ ಹ್ಯಾಂಡ್ ಆಗಿ ಹಿಡಿದ ಪತಿ
ಪಂಜಾಬ್ ವ್ಯಕ್ತಿ
ನಯನಾ ರಾಜೀವ್
|

Updated on: Dec 17, 2025 | 3:07 PM

Share

ಅಮೃತಸರ, ಡಿಸೆಂಬರ್ 17: ಏಳೇಳು ಜನ್ಮಕ್ಕೂ ನೀನೇ ನನ್ನ ಗಂಡ(Husband) ಎಂದು ಪ್ರಮಾಣ ಮಾಡಿ, ಸಪ್ತಪದಿ ತುಳಿದು,  ಬೇರೊಬ್ಬನ ಜತೆ ಹೋಟೆಲ್​ ರೂಮಿನಲ್ಲಿ ಉಳಿದುಕೊಂಡಿದ್ದ ಮಹಿಳೆಯನ್ನು ಆಕೆಯ ಪತಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಈ ಘಟನೆ ಪಂಜಾಬ್​ನ ಅಮೃತಸರದಲ್ಲಿ ನಡೆದಿದೆ. ಮದುವೆಯಾಗಿ 15 ವರ್ಷಗಳು ಕಳೆದಿತ್ತು, ಇಬ್ಬರು ಅನ್ಯೂನ್ಯವಾಗಿಯೇ ಇದ್ದರು. ಆದರೆ ಅಂದು ಹೋಟೆಲ್​ ರೂಮಿನಲ್ಲಿ ಪತ್ನಿ ಬೇರೊಬ್ಬನ ಜತೆ ಇರುವುದನ್ನು ನೋಡಿ ಜೀವನದ ಬಗ್ಗೆ ಕಂಡಿದ್ದ ಕನಸುಗಳೆಲ್ಲಾ ಆಗಲೇ ಮುಗಿದ ಅನುಭವವಾಗಿತ್ತು. ಹೋಟೆಲ್ ಹೊರಗೆ ಬಂದು ಪತಿ ಗಳಗಳನೆ ಕಣ್ಣೀರಿಟ್ಟಿದ್ದಾರೆ.

ಈ ಘಟನೆಯು ಮದುವೆ, ನಂಬಿಕೆ ಹಾಗೂ ಸಂಬಂಧಗಳ ಬಗ್ಗೆ ಮತ್ತೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.ರವಿ ಅವರು ಏಪ್ರಿಲ್ 25, 2010 ರಂದು ಹಿಮಾನಿಯನ್ನು ವಿವಾಹವಾಗಿದ್ದರು. ಅವರಿಗೆ ಮಕ್ಕಳಿದ್ದಾರೆ. ಸಣ್ಣ ಪುಟ್ಟ ಕಲಹಗಳೆಲ್ಲವೂ ಇದ್ದವು. ಆದರೆ ಜೀವನ ಚೆನ್ನಾಗಿರಬೇಕೆಂದರೆ ರಾಜಿಯು ಕೂಡ ಮುಖ್ಯ ಎಂದು ರವಿ ನಂಬಿದ್ದರು.

ರವಿಯವರ ಪ್ರಕಾರ, ಅವರ ಪತ್ನಿ 2018 ರಲ್ಲಿ ಹೋಟೆಲ್‌ನಲ್ಲಿ ಬೇರೊಬ್ಬ ವ್ಯಕ್ತಿಯೊಂದಿಗೆ ಮೊದಲು ಸಿಕ್ಕಿಬಿದ್ದಿದ್ದರು. ಆ ಸಮಯದಲ್ಲಿ, ಅವರ ಮಕ್ಕಳ ಭವಿಷ್ಯವು ಅಪಾಯದಲ್ಲಿತ್ತು. ಅವರ ಪತ್ನಿಯ ಪೋಷಕರು ಬಂದು ಕ್ಷಮೆಯಾಚಿಸಿದರು ಮತ್ತು ಭರವಸೆಗಳನ್ನು ನೀಡಿದರು, ಮತ್ತು ರವಿ ಭಾರವಾದ ಹೃದಯದಿಂದ ಅವರನ್ನು ಕ್ಷಮಿಸಿದ್ದರು. ತಪ್ಪು ಮನುಷ್ಯರು ಮಾಡದೆ ಇನ್ಯಾರು ಮಾಡ್ತಾರೆ, ತನ್ನ ತಪ್ಪು ತಿದ್ದಿಕೊಂಡು ಮುಂದೊಂದು ದಿನ ಚೆನ್ನಾಗಿರಬಹುದು ಎಂದು ಆಕೆ ಭಾವಿಸಿದ್ದರು.

ಮತ್ತಷ್ಟು ಓದಿ: ಪತ್ನಿ ಕೊಂದು ಪತಿ ಆತ್ಮಹತ್ಯೆಗೆ ಶರಣು: ಗಂಡ ಹೆಂಡ್ತಿ ಜಗಳದಲ್ಲಿ ಮಗು ಅನಾಥ!

ಮಹಿಳೆ ಮಧ್ಯಾಹ್ನ 3.30ರ ಸುಮಾರಿಗೆ ಮನೆಯಿಂದ ಹೊರಗೆ ಹೋಗಿದ್ದಳು. ನಂತರ ರವಿ ಎಷ್ಟೇ ಕರೆ ಮಾಡಿದರೂ ಆಕೆ ಉತ್ತರಿಸಿರಲಿಲ್ಲ. ಆಗ ಅನುಮಾನ ಬಂದಿತ್ತು. ಕೂಡಲೇ ಆತ ಪತ್ನಿಯ ಸ್ಕೂಟಿಗೆ ಅಂಟಿಸಿದ್ದ ಜಿಪಿಎಸ್ ಟ್ರ್ಯಾಕರ್ ಆನ್ ಮಾಡಿ ಆಕೆ ಎಲ್ಲಿದ್ದಾಳೆಂದು ತಿಳಿದುಕೊಂಡಿದ್ದ. ಆತ ಅಲ್ಲಿಗೆ ಹೋಗಿ ನೋಡಿದಾಗ ಆಕೆ ಬೇರೊಬ್ಬ ವ್ಯಕ್ತಿಯ ಜತೆ ಇದ್ದಳು. ಆತ ಕೂಡಲೇ ಹೋಟೆಲ್​ನಿಂದ ಹೊರಬಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ವಿಡಿಯೋ

ಈ ಘಟನೆ ನಮ್ಮ ಕುಟುಂಬಕ್ಕೆ ಆಘಾತವನ್ನುಂಟು ಮಾಡಿದೆ.ಏಳು ವರ್ಷಗಳ ಹಿಂದೆ, ಎರಡೂ ಕುಟುಂಬಗಳು ಒಟ್ಟಿಗೆ ಕುಳಿತು ವಿಷಯವನ್ನು ಬಗೆಹರಿಸಿಕೊಂಡಿದ್ದವು. ಆದರೆ ಈಗ ರವಿ ದೃಢ ನಿರ್ಧಾರ ಮಾಡಿದ್ದು, ಇನ್ನುಮುಂದೆ ತಾನು ಪತ್ನಿಯೊಂದಿಗೆ ಇರಲು ಸಾಧ್ಯವೇ ಇಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ