ಬಿಜೆಪಿ ನಾಯಕ ತಜೀಂದರ್ ಪಾಲ್ ಸಿಂಗ್ ಬಗ್ಗಾರನ್ನು ಜುಲೈ 6 ರವರೆಗೆ ಬಂಧಿಸುವಂತಿಲ್ಲ: ಪಂಜಾಬ್ ಹೈಕೋರ್ಟ್

ಬಿಜೆಪಿ ನಾಯಕ ತಜೀಂದರ್ ಪಾಲ್ ಸಿಂಗ್ ಬಗ್ಗಾರನ್ನು ಜುಲೈ 6 ರವರೆಗೆ  ಬಂಧಿಸುವಂತಿಲ್ಲ: ಪಂಜಾಬ್ ಹೈಕೋರ್ಟ್
ತಜೀಂದರ್ ಸಿಂಗ್ ಬಗ್ಗಾ

Tajinder Pal Singh Bagga ಶನಿವಾರ ತಡರಾತ್ರಿ ತುರ್ತು ವಿಚಾರಣೆ ನಡೆಸಿದ ನ್ಯಾಯಾಲಯವು ಮುಂದಿನ ವಿಚಾರಣೆಯ ದಿನಾಂಕದವರೆಗೆ ಯಾವುದೇ ಬಲವಂತದ ಕ್ರಮ ಕೈಗೊಳ್ಳುವಂತಿಲ್ಲ ಎಂದು ಹೇಳಿದ ಮೂರು ದಿನಗಳ ನಂತರ ಈ ಆದೇಶ ಬಂದಿದೆ.

TV9kannada Web Team

| Edited By: Rashmi Kallakatta

May 10, 2022 | 1:50 PM

ದೆಹಲಿ: ದೆಹಲಿಯ ಬಿಜೆಪಿ (BJP) ನಾಯಕ ತಜೀಂದರ್ ಪಾಲ್ ಸಿಂಗ್ ಬಗ್ಗಾ (Tajinder Pal Singh Bagga) ಅವರನ್ನು ಜುಲೈ 6 ರವರೆಗೆ ಬಂಧಿಸುವಂತಿಲ್ಲ ಎಂದು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ (Punjab and Haryana High Court ) ಆದೇಶ ನೀಡಿದೆ. ಶನಿವಾರ ತಡರಾತ್ರಿ ತುರ್ತು ವಿಚಾರಣೆ ನಡೆಸಿದ ನ್ಯಾಯಾಲಯವು ಮುಂದಿನ ವಿಚಾರಣೆಯ ದಿನಾಂಕದವರೆಗೆ ಯಾವುದೇ ಬಲವಂತದ ಕ್ರಮ ಕೈಗೊಳ್ಳುವಂತಿಲ್ಲ ಎಂದು ಹೇಳಿದ ಮೂರು ದಿನಗಳ ನಂತರ ಈ ಆದೇಶ ಬಂದಿದೆ. ಮೊಹಾಲಿ ನ್ಯಾಯಾಲಯ ಬಗ್ಗಾ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ. ನ್ಯಾಯದ ಹಿತದೃಷ್ಟಿಯಿಂದ ಬಂಧನದಿಂದ ತಪ್ಪಿಸಿಕೊಳ್ಳುತ್ತಿರುವ ಆರೋಪಿ ತಜೀಂದರ್ ಪಾಲ್ ಸಿಂಗ್ ಬಗ್ಗಾ ಅವರಿಗೆ ತನಿಖೆಗೆ ಅನುಕೂಲವಾಗುವಂತೆ ಜಾಮೀನು ರಹಿತ ವಾರಂಟ್ ಹೊರಡಿಸುವುದು ಅಗತ್ಯವಾಗಿದೆ ಎಂದು ನ್ಯಾಯಾಂಗ ಮ್ಯಾಜಿಸ್ಟ್ರೇಟ್ (1ನೇ ತರಗತಿ) ರಾವ್ತೇಶ್ ಇಂದರ್‌ಜಿತ್ ಸಿಂಗ್ ಹೇಳಿದ್ದು, ಪ್ರಕರಣವನ್ನು ಮೇ 23 ಕ್ಕೆ ಮುಂದೂಡಿದ್ದರು. ಮಾಧ್ಯಮಗಳಲ್ಲಿ ಮತ್ತು ಟ್ವಿಟರ್‌ನಲ್ಲಿ ಪ್ರಚೋದನಾಕಾರಿ ಪೋಸ್ಟ್ ಪ್ರಕಟಿಸಿದ ಆರೋಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್ 1 ರಂದು ಮೊಹಾಲಿಯಲ್ಲಿ ಬಗ್ಗಾ ವಿರುದ್ಧ ಈ ವಾರಂಟ್ ಹೊರಡಿಸಲಾಗಿದೆ. ಈ ಪ್ರಕರಣದಲ್ಲಿ ಶುಕ್ರವಾರ ಬೆಳಗ್ಗೆ ಅವರನ್ನು ದೆಹಲಿಯ ನಿವಾಸದಿಂದ ಬಂಧಿಸಲಾಗಿತ್ತು.

ಮೊಹಾಲಿ ಸಿಟಿ-1, ಮೊಹಾಲಿಯ ಡಿಎಸ್ಪಿ ಸುಖನಾಜ್ ಸಿಂಗ್ ಅವರು ಬಗ್ಗಾ ವಿರುದ್ಧದ ಎಫ್‌ಐಆರ್ ರದ್ದುಗೊಳಿಸುವ ಅರ್ಜಿಯು ಮೇ 10 ರಂದು ಹೈಕೋರ್ಟ್‌ನಲ್ಲಿ ಬಾಕಿ ಇದೆ ಎಂದು ನ್ಯಾಯಾಲಯಕ್ಕೆ ತಿಳಿಸಿರುವುದಾಗಿ ಮೊಹಾಲಿ ತನ್ನ ಆದೇಶದಲ್ಲಿ ಹೇಳಿದೆ. ಬಗ್ಗಾ ಬಂಧನಕ್ಕೆ ಯಾವುದೇ ತಡೆ ಇಲ್ಲ ಅಥವಾ ಅವರು ಯಾವುದೇ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸಲ್ಲಿಸಿಲ್ಲ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.

ಮೇ 7 ರ ಮುಂಜಾನೆ ಬಗ್ಗಾ ಅವರನ್ನು ಜನಕ್‌ಪುರಿ ನಿವಾಸದಿಂದ ಪಂಜಾಬ್ ಪೊಲೀಸರು ಬಂಧಿಸಿದ ನಂತರ ಕಳೆದ ವಾರ ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ನಡುವಿನ ಜಟಾಪಟಿ  ಮುಂದುವರಿದಿದೆ.

“ನನ್ನ ವಿರುದ್ಧ ಒಂದು ಅಥವಾ 100 ಎಫ್‌ಐಆರ್‌ಗಳು ದಾಖಲಾಗಿರಲಿ, ಗುರು ಗ್ರಂಥ ಸಾಹಿಬ್‌ನ ಅವಮಾನ ಮತ್ತು ಕಾಶ್ಮೀರಿ ಪಂಡಿತರಿಗೆ ಕೇಜ್ರಿವಾಲ್ ಮಾಡಿದ ಅವಮಾನದ ವಿಷಯಗಳನ್ನು ನಾನು ಎತ್ತುತ್ತಲೇ ಇರುತ್ತೇನೆ”. ಎಎಪಿ ಮತ್ತು ಅದರ ಮುಖ್ಯಸ್ಥ ಕೇಜ್ರಿವಾಲ್ ವಿರುದ್ಧ ಧ್ವನಿ ಎತ್ತಿದ್ದಕ್ಕೆ  ನನ್ನ ಮೇಲೆ ದಾಳಿ  ಮಾಡಲಾಗುತ್ತಿದೆ ಎಂದು ಬಗ್ಗಾ ಹೇಳಿದ್ದಾರೆ.  ಬಗ್ಗಾ ಬಂಧನ ಖಂಡಿಸಿ ಬಿಜೆಪಿ ನಾಯಕರು ದೆಹಲಿ ಮುಖ್ಯಮಂತ್ರಿಯವರ ನಿವಾಸದ ಮುಂದೆ ಪ್ರತಿಭಟನೆ ನಡೆಸಿದ್ದು ಕೇಜ್ರಿವಾಲ್ ನ್ನು  “ಸರ್ವಾಧಿಕಾರಿ” ಎಂದು  ಕರೆದಿದ್ದಾರೆ.

ಪಂಜಾಬ್‌ನಲ್ಲಿ ಗಲಭೆಗಳನ್ನು ಪ್ರಚೋದಿಸಿದ ಬಿಜೆಪಿ ಮತ್ತು ಅದರ ಸರ್ಕಾರಗಳು ತನ್ನ “ಗೂಂಡಾ” ವನ್ನು ರಕ್ಷಿಸುತ್ತಿವೆ ಎಂದು ಎಎಪಿ ಆರೋಪಿಸಿದೆ. ಎಎಪಿ ನಾಯಕ ಸನ್ನಿ ಅಹ್ಲುವಾಲಿಯಾ ಏಪ್ರಿಲ್ 1 ರಂದು ಮೊಹಾಲಿಯಲ್ಲಿ ಬಗ್ಗಾ ವಿರುದ್ಧ ದೂರು ನೀಡಿದ್ದು ,ಪ್ರಕರಣ ದಾಖಲಿಸಲಾಗಿತ್ತು.

ಬಗ್ಗಾ ಬಂಧನಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಅಪಹರಣ ಪ್ರಕರಣ ದಾಖಲಿಸಿದ್ದಾರೆ. ಪಂಜಾಬ್ ಪೊಲೀಸರು ದೆಹಲಿಗೆ ಕರೆದೊಯ್ಯುತ್ತಿದ್ದಂತೆ,ಹರ್ಯಾಣ  ಪೊಲೀಸರು ತಡೆದಿದ್ದಾರೆ. ಬಗ್ಗಾರನ್ನು  ನಂತರ ದೆಹಲಿ ಪೊಲೀಸರು ರಾಜಧಾನಿಗೆ ಕರೆತಂದಿದ್ದು, ದ್ವಾರಕಾ ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸುವ ಮೊದಲು ಮೆಡಿಕೋ-ಲೀಗಲ್-ಕೇಸ್ (MLC) ಎಂದು DDU ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ಹಿಂದೆ ಬಿಜೆಪಿ ನಾಯಕನ ವಿರುದ್ಧದ ವಾರಂಟ್‌ಗೆ ನ್ಯಾಯಾಲಯ ತಡೆ ನೀಡಿತ್ತು.

ಇದನ್ನೂ ಓದಿ

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada