ಕೇಜ್ರಿವಾಲ್ ನಿವಾಸದ ಹೊರಗೆ ದೆಹಲಿಯ ಅತಿಥಿ ಶಿಕ್ಷಕರ ಪ್ರತಿಭಟನೆಯಲ್ಲಿ ನವಜೋತ್ ಸಿಂಗ್ ಸಿಧು ಭಾಗಿ

Navjot Singh Sidhu ಎಎಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸಿಧು, ಗುತ್ತಿಗೆ ಶಿಕ್ಷಕರನ್ನು ಕಾಯಂ ಮಾಡುವುದಾಗಿಯೂ ಅವರಿಗೆ ಕಾಯಂ ಸಿಬ್ಬಂದಿಗೆ ಸಮಾನ ವೇತನ ನೀಡುವುದಾಗಿ ಭರವಸೆ ನೀಡಿತ್ತು, ಆದರೆ ಅತಿಥಿ ಶಿಕ್ಷಕರನ್ನು ಹೊಂದುವ ಮೂಲಕ ಅದನ್ನು ಇನ್ನಷ್ಟು ಹದಗೆಡಿಸಿದೆ ಎಂದು ಸಿಧು ಆರೋಪಿಸಿದ್ದಾರೆ.

ಕೇಜ್ರಿವಾಲ್ ನಿವಾಸದ ಹೊರಗೆ ದೆಹಲಿಯ ಅತಿಥಿ ಶಿಕ್ಷಕರ ಪ್ರತಿಭಟನೆಯಲ್ಲಿ ನವಜೋತ್ ಸಿಂಗ್ ಸಿಧು ಭಾಗಿ
ಪ್ರತಿಭಟನೆಯಲ್ಲಿ ಭಾಗಿಯಾದ ನವಜೋತ್ ಸಿಂಗ್ ಸಿಧು

ದೆಹಲಿ: ಪಂಜಾಬ್ ಕಾಂಗ್ರೆಸ್ (Punjab Congress) ಮುಖ್ಯಸ್ಥ ನವಜೋತ್ ಸಿಂಗ್ ಸಿಧು (Navjot Singh Sidhu) ಅವರು ಭಾನುವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal)ಅವರ ನಿವಾಸದ ಮುಂದೆ ಸರ್ಕಾರಿ ಶಾಲೆಗಳ ಅತಿಥಿ ಶಿಕ್ಷಕರನ್ನು ಕಾಯಂಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ದೆಹಲಿಯಲ್ಲಿ ಎಂಟು ಲಕ್ಷ ಹೊಸ ಉದ್ಯೋಗಗಳು ಮತ್ತು 20 ಹೊಸ ಕಾಲೇಜುಗಳನ್ನು ಸೃಷ್ಟಿಸುವ ಭರವಸೆಯನ್ನು ಆಮ್ ಆದ್ಮಿ ಪಕ್ಷ (AAP) ಸರ್ಕಾರವು ಪೂರೈಸಿಲ್ಲ ಎಂದು ಸಿಧು ಆರೋಪಿಸಿದ್ದಾರೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮೊಹಾಲಿಗೆ ಭೇಟಿ ನೀಡಿ ಪ್ರತಿಭಟನೆ ನಡೆಸುತ್ತಿರುವ ಶಿಕ್ಷಕರನ್ನು ಭೇಟಿ ಮಾಡಿ ಮೊಹಾಲಿಯಲ್ಲಿ ಸರ್ಕಾರಿ ಶಾಲೆಗಳ ಕಳಪೆ ಗುಣಮಟ್ಟದ ಆರೋಪಗಳನ್ನು ಮಾಡಿದ್ದರ ಬೆನ್ನಲ್ಲೇ ಸಿಧು ದೆಹಲಿಯ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಮೊಹಾಲಿಗೆ ಭೇಟಿ ನೀಡಿದ್ದ ಕೇಜ್ರಿವಾಲ್ ಕಾಯಂ ಉದ್ಯೋಗಕ್ಕಾಗಿ ಶಿಕ್ಷಕರ ಬೇಡಿಕೆಗಳನ್ನು ಪಂಜಾಬ್ ಸರ್ಕಾರ ನಿರ್ಲಕ್ಷಿಸಿದೆ ಎಂದು ಆರೋಪಿಸಿದ್ದರು. ಭಾನುವಾರ, ಎಎಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸಿಧು, ಗುತ್ತಿಗೆ ಶಿಕ್ಷಕರನ್ನು ಕಾಯಂ ಮಾಡುವುದಾಗಿಯೂ ಅವರಿಗೆ ಕಾಯಂ ಸಿಬ್ಬಂದಿಗೆ ಸಮಾನ ವೇತನ ನೀಡುವುದಾಗಿ ಭರವಸೆ ನೀಡಿತ್ತು, ಆದರೆ ಅತಿಥಿ ಶಿಕ್ಷಕರನ್ನು ಹೊಂದುವ ಮೂಲಕ ಅದನ್ನು ಇನ್ನಷ್ಟು ಹದಗೆಡಿಸಿದೆ. ಶಾಲಾ ನಿರ್ವಹಣಾ ಸಮಿತಿಗಳ ಮೂಲಕ, ಎಎಪಿ ಸ್ವಯಂಸೇವಕರು ವಾರ್ಷಿಕವಾಗಿ 5 ಲಕ್ಷವನ್ನು ಸರ್ಕಾರದ ನಿಧಿಯಿಂದ ಗಳಿಸುತ್ತಾರೆ, ಅದು ಮೊದಲು ಶಾಲೆಯ ಅಭಿವೃದ್ಧಿಗೆ ಉದ್ದೇಶಿಸಲಾಗಿತ್ತು ಎಂದಿದ್ದಾರೆ.

ಎಎಪಿ 2015ರ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದ ಉದ್ಯೋಗ, ಕಾಲೇಜುಗಳು ಎಲ್ಲಿವೆ ಎಂದು ಸಿಧು ಪ್ರಶ್ನಿಸಿದ್ದಾರೆ. “ನೀವು ದೆಹಲಿಯಲ್ಲಿ ಕೇವಲ 440 ಉದ್ಯೋಗಗಳನ್ನು ನೀಡಿದ್ದೀರಿ. ನಿಮ್ಮ ವಿಫಲವಾದ ಭರವಸೆಗಳಿಗೆ ವಿರುದ್ಧವಾಗಿ, ಕಳೆದ ಐದು ವರ್ಷಗಳಲ್ಲಿ ದೆಹಲಿಯ ನಿರುದ್ಯೋಗ ದರವು ಸುಮಾರು ಐದು ಪಟ್ಟು ಹೆಚ್ಚಾಗಿದೆ, ”ಎಂದು ಸಿಧು ಹೇಳಿದರು. ದೆಹಲಿಯಲ್ಲಿ ಶಿಕ್ಷಕರ ಹುದ್ದೆಗಳು 2015 ರಲ್ಲಿ 12, 2021 ರಲ್ಲಿ 515 ರಿಂದ 19,907 ಕ್ಕೆ ಏರಿದೆ ಇದನ್ನು ಎಎಪಿ ಸರ್ಕಾರವು ಅತಿಥಿ ಉಪನ್ಯಾಸಕರ ಮೂಲಕ ಭರ್ತಿ ಮಾಡುತ್ತಿದೆ ಎಂದು ಸಿಧು ಆರೋಪಿಸಿದ್ದಾರೆ.

“ದೆಹಲಿ ಶಿಕ್ಷಣ ಮಾದರಿಯು ಗುತ್ತಿಗೆ ಮಾದರಿಯಾಗಿದೆ.ದೆಹಲಿ ಸರ್ಕಾರವು 1,031 ಶಾಲೆಗಳನ್ನು ಹೊಂದಿದೆ, ಆದರೆ 196 ಶಾಲೆಗಳು ಮಾತ್ರ ಪ್ರಾಂಶುಪಾಲರನ್ನು ಹೊಂದಿವೆ. 45 ರಷ್ಟು ಶಿಕ್ಷಕರ ಹುದ್ದೆಗಳು ಖಾಲಿ ಇವೆ ಮತ್ತು ಶಾಲೆಗಳನ್ನು 22,000 ಅತಿಥಿ ಶಿಕ್ಷಕರಿಂದ ದೈನಂದಿನ ವೇತನದಲ್ಲಿ ಪ್ರತಿ 15 ದಿನಗಳಿಗೊಮ್ಮೆ ಒಪ್ಪಂದಗಳನ್ನು ನವೀಕರಿಸಲಾಗುತ್ತದೆ ಎಂದು ಸಿಧು ಟ್ವೀಟ್ ಮಾಡಿದ್ದಾರೆ.

ಪಂಜಾಬ್ ಅಸೆಂಬ್ಲಿ ಚುನಾವಣೆ ಸಮೀಪಿಸುತ್ತಿರುವಾಗ ದೆಹಲಿಯಲ್ಲಿ ಶಿಕ್ಷಣ ಖಾತೆಯನ್ನು ಹೊಂದಿರುವ ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಪಂಜಾಬ್ ಶಿಕ್ಷಣ ಸಚಿವ ಪರ್ಗತ್ ಸಿಂಗ್ ಅವರೊಂದಿಗೆ ಆಯಾ ರಾಜ್ಯಗಳ ಶಿಕ್ಷಣದ ಸ್ಥಿತಿಯ ಬಗ್ಗೆ ಕಳೆದ ತಿಂಗಳು ವಾಕ್ಸಮರ ನಡೆಸಿದ್ದರು .ಇಬ್ಬರು ಸಚಿವರು ತಮ್ಮ ರಾಜ್ಯದಲ್ಲಿ ಸರ್ಕಾರಿ ಶಾಲೆಗಳು ಉತ್ತಮವಾಗಿವೆ ಎಂದು ಹೇಳಿಕೊಳ್ಳುತ್ತಿದ್ದಾರೆ.

ಪಂಜಾಬ್ ಸಿಎಂ ಚರಣ್​​ಜಿತ್ ಸಿಂಗ್ ಚನ್ನಿ ಅವರ ಚಮ್ಕೌರ್ ಸಾಹಿಬ್ ವಿಧಾನಸಭಾ ಕ್ಷೇತ್ರದಲ್ಲಿರುವ ಶಾಲೆಗಳ ಗುಣಮಟ್ಟದ ಬಗ್ಗೆ ಸಿಸೋಡಿಯಾ ಪ್ರಶ್ನೆಗಳನ್ನು ಎತ್ತಿದ್ದರು. ಜಿಲ್ಲೆಯ ಶಾಲೆಗಳಿಗೆ ಭೇಟಿ ನೀಡಿ ಸಿಬ್ಬಂದಿ ಎದುರಿಸುತ್ತಿರುವ ಸಮಸ್ಯೆಗಳನ್ನು ಅವಲೋಕಿಸಿದ ನಂತರ ಸಿಸೋಡಿಯಾ ಅವರು, ಇಂತಹ ಪರಿಸ್ಥಿತಿಯಲ್ಲಿ ಪಂಜಾಬ್ ಸರ್ಕಾರವು ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ನಂಬರ್ 1 ಎಂದು ಕರೆದರೆ ಅದು ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಹೇಳಿದ್ದರು.

ಇದನ್ನೂ ಓದಿ: ಆಡಳಿತ ಮಂಡಳಿಯ ಎಚ್ಚರಿಕೆಯ ನಡುವೆಯೂ ರಾಮ್​ ಕೆ ನಾಮ್​ ಸಾಕ್ಷ್ಯಚಿತ್ರ ಪ್ರದರ್ಶಿಸಿದ ಜೆಎನ್​ಯು ವಿದ್ಯಾರ್ಥಿ ಒಕ್ಕೂಟ; ತಪ್ಪೇನಿದೆ? ಸತ್ಯವನ್ನೇ ತೋರಿಸುತ್ತದೆ ಎಂದ ಅಧ್ಯಕ್ಷೆ

Click on your DTH Provider to Add TV9 Kannada