ಪಂಜಾಬ್​ನ ಅವಳಿ ಸ್ಫೋಟದ ಹಿಂದೆ ಬಿಜೆಪಿ ಕೈವಾಡ; ಸಿಎಂ ಭಗವಂತ್ ಮಾನ್ ಆರೋಪ

ಪಂಜಾಬ್​​ನಲ್ಲಿ ನಡೆದ ಅವಳಿ ಸ್ಫೋಟ ಪ್ರಕರಣ ರಾಜ್ಯಾದ್ಯಂತ ಭಾರೀ ಚರ್ಚೆಯಲ್ಲಿದೆ. ಇಂದು ಜಲಂಧರ್ ಮತ್ತು ಅಮೃತಸರದಲ್ಲಿ ಐಇಡಿ ಸ್ಫೋಟ ನಡೆದಿತ್ತು. ಅಮೃತಸರದ ಸೇನಾ ಶಿಬಿರದ ಹೊರಗೆ ಐಇಡಿ ಸ್ಫೋಟ ನಡೆದಿದ್ದು, ಜಲಂಧರ್‌ನ ಬಿಎಸ್‌ಎಫ್ ಪ್ರಧಾನ ಕಚೇರಿಯ ಬಳಿ ಸ್ಕೂಟರ್ ಸ್ಫೋಟ ಸಂಭವಿಸಿತ್ತು. ಈ ಸ್ಫೋಟಗಳಿಗೆ ಬಿಜೆಪಿ ನಂಟಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಆರೋಪಿಸಿದ್ದಾರೆ.

ಪಂಜಾಬ್​ನ ಅವಳಿ ಸ್ಫೋಟದ ಹಿಂದೆ ಬಿಜೆಪಿ ಕೈವಾಡ; ಸಿಎಂ ಭಗವಂತ್ ಮಾನ್ ಆರೋಪ
Bhagwant Mann

Updated on: May 06, 2026 | 3:34 PM

ನವದೆಹಲಿ, ಮೇ 6: ನಿನ್ನೆ ತಡರಾತ್ರಿ ಪಂಜಾಬ್‌ನ (Punjab) ಅಮೃತಸರದ ಖಾಸಾ ಪ್ರದೇಶದ ಸೇನಾ ಶಿಬಿರದ ಹೊರಗೆ ಸ್ಫೋಟ ಸಂಭವಿಸಿದೆ. ನಿನ್ನೆ ರಾತ್ರಿ ಜಲಂಧರ್​​ನಲ್ಲೂ ಸ್ಕೂಟರ್ ಸ್ಫೋಟವಾಗಿದೆ. ಇದು ಈ ಪ್ರದೇಶದಲ್ಲಿ ಭೀತಿಯನ್ನು ಉಂಟುಮಾಡಿದೆ. ಕಂಟೋನ್ಮೆಂಟ್ ಪ್ರದೇಶದಲ್ಲಿ ರಾತ್ರಿ 10.50ರ ಸುಮಾರಿಗೆ ಸ್ಫೋಟ ಸಂಭವಿಸಿದೆ. ಇದರಿಂದಾಗಿ ನಿವಾಸಿಗಳು ತಮ್ಮ ಮನೆಗಳಿಂದ ಹೊರಗೆ ಓಡಿಹೋದರು. ಜಲಂಧರ್​​ನ ಸ್ಫೋಟದ ನಂತರ ಬೆಂಕಿಯಲ್ಲಿ ಆಕ್ಟಿವಾ ಸ್ಕೂಟಿ ಸುಟ್ಟುಹೋಗಿದೆ. ಈ ಘಟನೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಪಂಜಾಬ್ ಸಿಎಂ ಭಗವಂತ್ ಮಾನ್ ಈ ಕೃತ್ಯದಲ್ಲಿ ಬಿಜೆಪಿ ಭಾಗಿಯಾಗಿದೆ ಎಂದು ಆರೋಪಿಸಿದ್ದಾರೆ.

ಆದರೆ, ಡಿಜಿಪಿ ಗೌರವ್ ಮಾನ್ ಪಂಜಾಬ್​ ಅನ್ನು ಅಸ್ಥಿರಗೊಳಿಸುವ ಗುರಿಯನ್ನು ಹೊಂದಿರುವ ಪಾಕಿಸ್ತಾನ ಬೆಂಬಲಿತ ಐಎಸ್‌ಐ ಭಯೋತ್ಪಾದಕ ಸಂಘಟನೆ ಈ ಸಂಚನ್ನು ಮಾಡಿರಬಹುದು ಎಂದಿದ್ದಾರೆ. ಈ ಬಗ್ಗೆ ತನಿಖೆಗಳು ನಡೆಯುತ್ತಿದೆ. ಪೊಲೀಸ್ ಇಲಾಖೆ ಮತ್ತು ಸಿಎಂ ಅವರಿಂದ ಬಂದಿರುವ ಈ ವ್ಯತಿರಿಕ್ತ ಹೇಳಿಕೆಗಳು ಪಂಜಾಬ್‌ನಲ್ಲಿ ತೀವ್ರ ಭದ್ರತೆ ಮತ್ತು ರಾಜಕೀಯ ಬಿಕ್ಕಟ್ಟನ್ನು ಎತ್ತಿ ತೋರಿಸುತ್ತವೆ.

ಇದನ್ನೂ ಓದಿ: ಇದೇನು ಒಂದು ರಾಷ್ಟ್ರ, ಒಂದು ಪತಿ ಯೋಜನೆಯಾ? ಆಪರೇಷನ್ ಸಿಂಧೂರ್ ಬಗ್ಗೆ ಭಗವಂತ್ ಮಾನ್ ವಿವಾದಾತ್ಮಕ ಹೇಳಿಕೆ

ಜಲಂಧರ್ ಮತ್ತು ಅಮೃತಸರದಲ್ಲಿನ ರಕ್ಷಣಾ ಸ್ಥಾಪನೆಗಳ ಬಳಿ ಅವಳಿ ಸ್ಫೋಟಗಳು ಸಂಭವಿಸಿದ ನಂತರ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವುಗಳಲ್ಲಿ ಬಿಜೆಪಿಯ ಕೈವಾಡವಿದೆ ಎಂದು ಹೇಳಿಕೊಂಡರೆ, ಪೊಲೀಸ್ ಮಹಾನಿರ್ದೇಶಕರು ಈ ಪ್ರದೇಶದಲ್ಲಿ ಅಶಾಂತಿ ಸೃಷ್ಟಿಸಲು ಪಾಕಿಸ್ತಾನ ಬೆಂಬಲಿತ ಸಂಚು ಎಂದಿದ್ದಾರೆ. ಮುಂದಿನ ವರ್ಷ ಪಂಜಾಬ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ದೊಡ್ಡ ರಾಜಕೀಯ ಯೋಜನೆಯ ಭಾಗವಾಗಿ ಈ ಸ್ಫೋಟಗಳನ್ನು ನಡೆಸಲಾಗಿದೆ ಎಂದು ಸಿಎಂ ಭಗವಂತ್ ಮಾನ್ ಆರೋಪಿಸಿದ್ದಾರೆ.

ಪಂಜಾಬ್ ಪೊಲೀಸರು, ಕೇಂದ್ರ ಸಂಸ್ಥೆಗಳೊಂದಿಗೆ, ತೀವ್ರ ತನಿಖೆಯನ್ನು ಪ್ರಾರಂಭಿಸಿದ್ದಾರೆ ಮತ್ತು ರಾಜ್ಯಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗಿದೆ. ಅವಳಿ ಸ್ಫೋಟಗಳಲ್ಲಿ ಯಾವುದೇ ಸಾವುನೋವುಗಳು ವರದಿಯಾಗಿಲ್ಲ.

ಇದನ್ನೂ ಓದಿ: ನಾಚಿಕೆಗೇಡಿನ ಸಂಗತಿ; ಆಪರೇಷನ್ ಸಿಂಧೂರ್ ಕುರಿತ ಹೇಳಿಕೆಗೆ ಭಗವಂತ್ ಮಾನ್​ ವಿರುದ್ಧ ಬಿಜೆಪಿ ಟೀಕೆ

“ಬಿಜೆಪಿ ಎಲ್ಲೆಲ್ಲಿ ಸ್ಪರ್ಧಿಸಲು ಬಯಸುತ್ತದೋ ಅಲ್ಲೆಲ್ಲಾ ಇಂತಹ ಘಟನೆಗಳು ಸಂಭವಿಸುತ್ತವೆ” ಎಂದು ಸಿಎಂ ಭಗವಂತ್ ಮಾನ್ ಆರೋಪಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿಯ ಅಶ್ವನಿ ಶರ್ಮಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, “ಮುಖ್ಯಮಂತ್ರಿಯ ಮಾನಸಿಕ ಸ್ಥಿತಿ ಸ್ಥಿರವಾಗಿಲ್ಲ ಎಂದು ಅನಿಸುತ್ತಿದೆ. ಅವರು ರಾಜೀನಾಮೆ ನೀಡಬೇಕು ಮತ್ತು ಸರಿಯಾದ ಚಿಕಿತ್ಸೆ ಪಡೆಯಬೇಕು. ಪಂಜಾಬ್ ಗಡಿ ರಾಜ್ಯ. ಅವರು ಈ ರಾಜ್ಯವನ್ನು ನಿರ್ವಹಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಬಿಜೆಪಿಯ ಮೇಲೆ ಕೆಸರು ಎರಚುವ ಮೂಲಕ, ಅವರು ಕೊಳಕು ರಾಜಕೀಯದಲ್ಲಿ ತೊಡಗಿದ್ದಾರೆ.” ಎಂದು ಆರೋಪಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us