
ನವದೆಹಲಿ, ಅಕ್ಟೋಬರ್ 14:ಜಂತರ್ ಮಂತರ್ನಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿ ತ್ರಿವರ್ಣ ಧ್ವಜ ಪ್ರದರ್ಶಿಸಿದ ಆರೋಪದ ಮೇಲೆ ಕಾಕ್ರೋಚ್ ಜನತಾ ಪಾರ್ಟಿ (CJP) ನಾಯಕರಾದ ಅಶುತೋಷ್ ರಂಕಾ ಮತ್ತು ಸೌರವ್ ದಾಸ್ ಅವರಿಗೆ ನ್ಯಾಯಾಲಯ 5 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ ಬೆನ್ನಲ್ಲೇ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮೊದಲ ಬಾರಿಗೆ ಸಿಜೆಪಿ ನಾಯಕತ್ವವನ್ನು ಬಹಿರಂಗವಾಗಿ ಬೆಂಬಲಿಸಿದ್ದಾರೆ. ಇತ್ತೀಚಿನವರೆಗೂ ಪರಸ್ಪರ ಅಂತರ ಕಾಯ್ದುಕೊಂಡಿದ್ದ ಕಾಂಗ್ರೆಸ್ ಮತ್ತು ಸಿಜೆಪಿ ನಡುವಿನ ಸಂಬಂಧದಲ್ಲಿ ಈ ಹೇಳಿಕೆಯು ಮಹತ್ವದ ತಿರುವು ನೀಡಿದ್ದು, ಆಡಳಿತಾರೂಢ ಬಿಜೆಪಿಯ ವಿರುದ್ಧ ಎಲ್ಲಾ ಹೋರಾಟಗಾರರು ಒಂದಾಗಬೇಕೆಂದು ರಾಹುಲ್ ಗಾಂಧಿ ಕರೆ ನೀಡಿದ್ದಾರೆ.
ಶಾಂತಿಯುತ ಪ್ರತಿಭಟನೆಯಲ್ಲಿ ಜಂತರ್ ಮಂತರ್ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವುದು ಅಪರಾಧವಲ್ಲ. ಅದಕ್ಕಾಗಿ ಯುವ ಹೋರಾಟಗಾರರನ್ನು ಜೈಲಿಗೆ ಹಾಕುವುದು ಸರ್ಕಾರದ ಹೇಡಿತನದ ಕೃತ್ಯ ಎಂದು ಕಿಡಿಕಾರಿದ್ದಾರೆ. ವಿದ್ಯಾರ್ಥಿಗಳು, ಯುವಕರು, ಪತ್ರಕರ್ತರು, ಇಂಡಿಯಾ ಬ್ಲಾಕ್ ಬ್ಯಾನರ್ಗಳು ಬೇರೆಯಾಗಿರಬಹುದು, ಆದರೆ ಕಾರಣ ಒಂದೇ. ಇವೆಲ್ಲವೂ ನಾಗರಿಕರು ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ನಡೆಸುತ್ತಿರುವ ಪ್ರತಿಭಟನೆಗಳು” ಎಂದು ಪ್ರತಿಪಾದಿಸಿದ್ದಾರೆ. ಜಂತರ್ ಮಂತರ್ ಇರುವುದು ಭಾರತದ ಜನರಿಗಾಗಿ. ನಾವು ಅದನ್ನು ಖಂಡಿತವಾಗಿಯೂ ಮರಳಿ ಪಡೆಯುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮತ್ತಷ್ಟು ಓದಿ: “ಗುಜರಾತ್ನಲ್ಲಿ 41 ವರ್ಷಗಳಿಂದ ಕಾಂಗ್ರೆಸ್ ಗೆದ್ದೇ ಇಲ್ಲ”: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ಕಿಡಿ
ಈ ವರ್ಷದ ಆರಂಭದಲ್ಲಿ ನಡೆದ ವೈದ್ಯಕೀಯ ಪ್ರವೇಶ ಪರೀಕ್ಷೆ (ನೀಟ್) ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಅಕ್ರಮಗಳ ವಿರುದ್ಧ ವಿದ್ಯಾರ್ಥಿಗಳನ್ನು ಬೀದಿಗಿಳಿಸಿ ನಿರಂತರ ಹೋರಾಟ ರೂಪಿಸುವಲ್ಲಿ ಸಿಜೆಪಿ ಮುಂಚೂಣಿಯಲ್ಲಿತ್ತು. ಜುಲೈನಲ್ಲಿ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೂ ಈ ಚಳವಳಿ ಕಾರಣವಾಗಿತ್ತು.
ನಾಯಕತ್ವದ ಪೈಪೋಟಿ: ಆಗ ಕಾಂಗ್ರೆಸ್ ಪಕ್ಷವೂ ಪರೀಕ್ಷಾ ಅಕ್ರಮಗಳನ್ನು ಖಂಡಿಸಿದ್ದರೂ, ಆಂದೋಲನದ ನೇತೃತ್ವ ಮತ್ತು ರಾಜಕೀಯ ಮಾಲೀಕತ್ವಕ್ಕಾಗಿ ಎರಡೂ ಕಡೆಯ ನಡುವೆ ಶೀತಲ ಸಮರ ನಡೆದಿತ್ತು. ಗಾಂಧಿ ಪ್ರತ್ಯೇಕವಾಗಿ ವಿದ್ಯಾರ್ಥಿಗಳನ್ನು ಭೇಟಿಯಾದಾಗ ಸಿಜೆಪಿ ನಾಯಕರು ಕಾಂಗ್ರೆಸ್ ವಿಧಾನವನ್ನು ಪ್ರಶ್ನಿಸಿದ್ದರು.
ಪೋಸ್ಟ್
Waving the Tricolour at Jantar Mantar in a peaceful protest is not a crime. Jailing youth for it is an act of cowardice.
Students. Youth. Journalists. The INDIA bloc. Different banners, one cause. All protests are one: citizens demanding their constitutional rights.
Jantar Mantar belongs to the people of India. We will reclaim it.
— Rahul Gandhi (@RahulGandhi) October 14, 2026
ಬಿಜೆಪಿ ತಂತ್ರಕ್ಕೆ ಪ್ರತಿಯಾಗಿ ಒಗ್ಗಟ್ಟು: ಪ್ರತಿಭಟನಾಕಾರರನ್ನು ‘ಸಿಜೆಪಿ ಬಣ’ ಮತ್ತು ‘ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷ’ ಎಂದು ವಿಭಜಿಸಿ ಲಾಭ ಪಡೆಯಲು ಬಿಜೆಪಿ ಯತ್ನಿಸುತ್ತಿದೆ ಎಂದು ಮಂಗಳವಾರ ನಡೆದ ವಿಪಕ್ಷ ಸಭೆಯಲ್ಲಿ ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದರು. ಹೋರಾಟ ಒಡೆಯದಂತೆ ತಡೆಯಲು ಸಿಜೆಪಿ ಹೋರಾಟವನ್ನು ಅಧಿಕೃತವಾಗಿ ಒಪ್ಪಿಕೊಳ್ಳುವ ತೀರ್ಮಾನಕ್ಕೆ ಬರಲಾಗಿದೆ.
ಸಿಜೆಪಿಯಂತಹ ತಳಮಟ್ಟದ ಯುವ ಸಂಘಟನೆಗಳ ಬೀದಿ ಹೋರಾಟದ ಶಕ್ತಿಯನ್ನು ಒಪ್ಪಿಕೊಳ್ಳುತ್ತಲೇ, ಇಡೀ ಆಂದೋಲನದ ರಾಜಕೀಯ ನೇತೃತ್ವವನ್ನು ‘ಇಂಡಿ’ ಬಣವೇ ವಹಿಸಬೇಕು ಎಂಬುದು ಕಾಂಗ್ರೆಸ್ನ ತಂತ್ರವಾಗಿದೆ. ಜಂತರ್ ಮಂತರ್ ಅನ್ನು ಪ್ರತಿಭಟನಾ ಸ್ಥಳದಿಂದ ರದ್ದುಗೊಳಿಸಿ, ದುಬಾರಿ ಬಾಡಿಗೆಯ ರಾಮಲೀಲಾ ಮೈದಾನ ಮತ್ತಿತರ ಸ್ಥಳಗಳಿಗೆ ಸ್ಥಳಾಂತರಿಸಿದ ದೆಹಲಿ ಪೊಲೀಸರ ಆದೇಶದ ವಿರುದ್ಧ ಕಾಂಗ್ರೆಸ್, ಸಿಜೆಪಿ ಮತ್ತು ಇತರ ವಿಪಕ್ಷಗಳು ಜಂಟಿ ರಾಜಕೀಯ ಹಾಗೂ ಕಾನೂನು ಹೋರಾಟ ರೂಪಿಸಲು ಸಜ್ಜಾಗುತ್ತಿವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ