ಅಯೋಧ್ಯೆ ರಾಮಮಂದಿರ ಉದ್ಘಾಟನೆ ವೇಳೆ ಹಾಡು-ನೃತ್ಯ; ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ಆಕ್ರೋಶ
ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆ ಕುರಿತು ರಾಹುಲ್ ಗಾಂಧಿಯವರ ಹೇಳಿಕೆಗಳು ಬಿಜೆಪಿಯ ಆಕ್ರೋಶಕ್ಕೆ ಕಾರಣವಾಯಿತು. ಈ ಸಮಾರಂಭದಲ್ಲಿ ಸಾಮಾನ್ಯ ಕಾರ್ಮಿಕರು ಮತ್ತು ರೈತರ ಗೈರುಹಾಜರಿಯನ್ನು ಎತ್ತಿ ಹಿಡಿದ ರಾಹುಲ್ ಗಾಂಧಿ ಲೇವಡಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ 'ಭಗವಾನ್ ರಾಮನ ವಿರೋಧಿ' ಪಕ್ಷ ಎಂದು ಬಿಜೆಪಿ ಆರೋಪಿಸಿದೆ.
ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದ ಅತಿಥಿಗಳ ಪಟ್ಟಿಯನ್ನು ಪ್ರಶ್ನಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ವಾಗ್ದಾಳಿ ನಡೆಸಿದ್ದರು. ಈ ಟೀಕೆಗಳು ಬಿಜೆಪಿಯು ವಿರೋಧ ಪಕ್ಷವನ್ನು ‘ಭಗವಾನ್ ರಾಮನ ವಿರೋಧಿ’ ಎಂದು ಆರೋಪಿಸುವುದರೊಂದಿಗೆ ಹಲವಾರು ವಲಯಗಳಿಂದ ಟೀಕೆಗೆ ಗುರಿಯಾಗಿದೆ.
“ನೀವು ದೇವಾಲಯವನ್ನು ತೆರೆದಿದ್ದೀರಿ. ನೀವು ಬುಡಕಟ್ಟು ಜನಾಂಗದವರಾಗಿರುವುದರಿಂದ ನಿಮಗೆ ದೇವಾಲಯದ ಒಳಗೆ ಬರಲು ಸಾಧ್ಯವಿಲ್ಲ, ನಿಮಗೆ ಅವಕಾಶವಿಲ್ಲ ಎಂದು ರಾಷ್ಟ್ರಪತಿಗಳಿಗೆ ಹೇಳಿದ್ದೀರಿ. ಅದರ ನಂತರ ಅಮಿತಾಬ್ ಬಚ್ಚನ್, ಅದಾನಿ, ಅಂಬಾನಿಯರನ್ನು ಆಹ್ವಾನಿಸಲಾಗಿತ್ತು. ಆದರೆ ಕಾರ್ಮಿಕರಿಗೆ ಅವಕಾಶ ನೀಡಲಿಲ್ಲ. ಅಯೋಧ್ಯೆ ರಾಮ ಮಂದಿರದ ಉದ್ಘಾಟನೆಯಲ್ಲಿ ನೀವು ಕೆಲಸಗಾರನನ್ನು ಅಥವಾ ರೈತನನ್ನು ನೋಡಿದ್ದೀರಾ? ಅಲ್ಲಿ ಹಾಡು ಮತ್ತು ನೃತ್ಯ ಇತ್ತು. ಇದು ನಿಮ್ಮ ವಾಸ್ತವತೆ ಎಂದು ಹಿಸಾರ್ ರ್ಯಾಲಿಯೊಂದರಲ್ಲಿ ರಾಹುಲ್ ಗಾಂಧಿ ಹೇಳಿದ್ದರು.
ಇದನ್ನೂ ಓದಿ: ಎಡವಟ್ಟಾಯ್ತು!; ಕಾಶ್ಮೀರಿ ಪಂಡಿತರಿಗೆ ಬಾಯ್ತಪ್ಪಿ ಪಿಓಕೆ ನಿರಾಶ್ರಿತರು ಎಂದ ರಾಹುಲ್ ಗಾಂಧಿ
ಇದಕ್ಕೆ ಬಿಜೆಪಿಯಿಂದ ಭಾರೀ ವಿರೋಧ ವ್ಯಕ್ತವಾಗಿದೆ. ರಾಮನ ಮಂದಿರ ಮತ್ತು ಪ್ರತಿಷ್ಠಾಪನೆಯ ಕಾರ್ಯಕ್ರಮವನ್ನು ಹಾಡು-ನೃತ್ಯದ ಕಾರ್ಯಕ್ರಮ ಎಂಬ ರಾಹುಲ್ ಗಾಂಧಿ ಅವರ ಹೇಳಿಕೆಗಳಿಂದ ನಾನು ಆಘಾತಕ್ಕೊಳಗಾಗಿದ್ದೇನೆ. ಕಾಂಗ್ರೆಸ್ ಪಕ್ಷವು ಏಕೆ ರಾಮ ವಿರೋಧಿಯಾಗಿದೆ? ಕಾಂಗ್ರೆಸ್ ಪಕ್ಷದ ಹಿರಿಯರು ಯಾರೂ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಾಜರಾಗಲಿಲ್ಲ” ಎಂದು ಬಿಜೆಪಿ ನಾಯಕ ನಳಿನ್ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ.
…..Ayodhya was lost because Amitabh, Adani, Ambani etc were invited in Ram Mandir opening ceremony….. (Nach-Gana) Dance program was going on but no tribal, worker or farmer was invited: Rahul Gandhi
(Nach-Gana) Dance program ?? pic.twitter.com/LUbou9hiip
— Megh Updates 🚨™ (@MeghUpdates) September 27, 2024
ಇದನ್ನೂ ಓದಿ: ರಾಹುಲ್ ಗಾಂಧಿ ಪ್ರತಿಕೃತಿ ದಹನಕ್ಕೆ ಮುಂದಾದ ಬಿಜೆಪಿ; ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಎಳೆದಾಟ
ಬಿಜೆಪಿ ನಾಯಕ ತಿರತ್ ಸಿಂಗ್ ರಾವತ್, ಬಹುಶಃ ರಾಹುಲ್ ಗಾಂಧಿಗೆ ಇನ್ನೂ ಭಾರತೀಯ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಅವರು ಭಾರತೀಯ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾದಾಗ, ಅವರು ಈ ಆಚರಣೆಗಳನ್ನೆಲ್ಲ ಅರ್ಥಮಾಡಿಕೊಳ್ಳುತ್ತಾರೆ. ಅಂದಿನ ಕಾರ್ಯಕ್ರಮದಲ್ಲಿ ಸಾಮಾನ್ಯ ಜನರು ಕೂಡ ಆಚರಣೆಯಲ್ಲಿ ತೊಡಗಿದ್ದರು ಎಂದಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ