ಪ್ರಧಾನಿ ಮೋದಿ 3.0 ಸರ್ಕಾರಕ್ಕೆ 100 ದಿನ; ಆರೋಗ್ಯ, ಉದ್ಯೋಗ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು

ನರೇಂದ್ರ ಮೋದಿ ಸರ್ಕಾರವು ತನ್ನ ಮೂರನೇ ಅವಧಿಯನ್ನು ಪ್ರಾರಂಭಿಸಿ 100 ದಿನಗಳು ಕಳೆದಿವೆ. ಭಾರತದ ಅಭಿವೃದ್ಧಿಗಾಗಿ ಈ 100 ದಿನಗಳಲ್ಲಿ 15 ಲಕ್ಷ ಕೋಟಿ ರೂ. ಮೌಲ್ಯದ ಹೂಡಿಕೆಯನ್ನು ಈಗಾಗಲೇ ಮಾಡಲಾಗಿದೆ. ಇದುವರೆಗೂ ಮೋದಿ ಸರ್ಕಾರ ಮಹತ್ವದ ನೀತಿ ಬದಲಾವಣೆಗಳನ್ನು ಮಾಡಿದೆ. ಭಾರತದ ಕೈಗಾರಿಕಾ ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ವಿವಿಧ ಯೋಜನೆಗಳನ್ನು ಪರಿಚಯಿಸಿದೆ.

ಪ್ರಧಾನಿ ಮೋದಿ 3.0 ಸರ್ಕಾರಕ್ಕೆ 100 ದಿನ; ಆರೋಗ್ಯ, ಉದ್ಯೋಗ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು
ನರೇಂದ್ರ ಮೋದಿ
Follow us
ಸುಷ್ಮಾ ಚಕ್ರೆ
|

Updated on: Sep 28, 2024 | 4:05 PM

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮೂರನೇ ಅವಧಿಯ ಆರಂಭಿಕ 100 ದಿನಗಳಲ್ಲಿ ರಾಷ್ಟ್ರದ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳನ್ನು ಬಲಪಡಿಸಲು ವಿನ್ಯಾಸಗೊಳಿಸಲಾದ ಅದ್ಭುತ ಉಪಕ್ರಮಗಳ ಸರಣಿಯನ್ನು ಭಾರತ ಸರ್ಕಾರವು ಅನಾವರಣಗೊಳಿಸಿದೆ. ಈ ಮಹತ್ವಾಕಾಂಕ್ಷೆಯ ಕಾರ್ಯಕ್ರಮಗಳು ಆರೋಗ್ಯದ ಲಭ್ಯತೆ, ವೈದ್ಯಕೀಯ ಶಿಕ್ಷಣ, ಸಂಶೋಧನೆ ಮತ್ತು ತಾಂತ್ರಿಕ ಪ್ರಗತಿಯನ್ನು ಸುಧಾರಿಸುವುದರ ಮೇಲೆ ಕೇಂದ್ರೀಕರಿಸಿವೆ. ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ (AB PM-JAY) ಪ್ರಯೋಜನಗಳನ್ನು ಹಿರಿಯ ನಾಗರಿಕರಿಗೆ ವಿಸ್ತರಿಸುವುದರಿಂದ ಹಿಡಿದು, ಡಿಜಿಟೈಸ್ ಮಾಡಿದ ಲಸಿಕೆ ಸೇವೆಗಳಿಗಾಗಿ U-WIN ಪೋರ್ಟಲ್‌ನಂತಹ ವೇದಿಕೆಗಳನ್ನು ಪ್ರಾರಂಭಿಸುವವರೆಗೆ, ಕೇಂದ್ರ ಸರ್ಕಾರವು ಆರೋಗ್ಯಕರ ಮತ್ತು ಉತ್ತಮ-ಶಿಕ್ಷಿತ ಸಮಾಜವನ್ನು ನಿರ್ಮಿಸಲು ಆದ್ಯತೆ ನೀಡಿದೆ.

ಹಾಗೇ, ರಾಷ್ಟ್ರೀಯ ವೈದ್ಯಕೀಯ ನೋಂದಣಿ ಪೋರ್ಟಲ್ ಸ್ಥಾಪನೆ, 75,000 ಹೊಸ ವೈದ್ಯಕೀಯ ಸೀಟುಗಳ ರಚನೆ ಮತ್ತು ಕ್ಯಾನ್ಸರ್ ಚಿಕಿತ್ಸೆ ಮತ್ತು ಜೈವಿಕ ತಂತ್ರಜ್ಞಾನದಲ್ಲಿನ ನೀತಿ ಸುಧಾರಣೆಗಳು ಸ್ವಾವಲಂಬಿ ರಾಷ್ಟ್ರವನ್ನು ರಚಿಸಲು ದೀರ್ಘಾವಧಿಯ ದೃಷ್ಟಿಕೋನವನ್ನು ಒಳಗೊಂಡ ಹಲವು ಕಾರ್ಯಕ್ರಮಗಳನ್ನು ಕೇಂದ್ರ ಸರ್ಕಾರ ಹಮ್ಮಿಕೊಂಡಿದೆ.

ಆರೋಗ್ಯ ರಕ್ಷಣೆಗೆ ಪಣ:

ತನ್ನ ಮೂರನೇ ಅವಧಿಯ ಮೊದಲ 100 ದಿನಗಳಲ್ಲಿ ಕೇಂದ್ರ ಸರ್ಕಾರವು ಆರೋಗ್ಯ ರಕ್ಷಣೆ ಮತ್ತು ಕುಟುಂಬ ಕಲ್ಯಾಣ, ಆರೋಗ್ಯ ರಕ್ಷಣೆಯ ಆವಿಷ್ಕಾರ, ಆತ್ಮನಿರ್ಭರ ಭಾರತ್ ಕಡೆಗೆ ಸ್ಥಳೀಯ ವೈದ್ಯಕೀಯ ಪರಿಹಾರಗಳ ಅಭಿವೃದ್ಧಿಯಲ್ಲಿ ಹಲವಾರು ಅದ್ಭುತ ಉಪಕ್ರಮಗಳನ್ನು ಪ್ರಾರಂಭಿಸಿದೆ. AIIMS ಸೇರಿದಂತೆ 15 ಗೊತ್ತುಪಡಿಸಿದ ಸಂಸ್ಥೆಗಳ ಪೈಕಿ 12ರಲ್ಲಿ ಪ್ರಯೋಗಗಳನ್ನು ಪೂರ್ಣಗೊಳಿಸುವುದರೊಂದಿಗೆ ಡ್ರೋನ್‌ಗಳು ವೈದ್ಯಕೀಯ ವಿತರಣೆಯನ್ನು ಕ್ರಾಂತಿಗೊಳಿಸಲು ಸಿದ್ಧವಾಗಿವೆ.

ಇದನ್ನೂ ಓದಿ: ಪ್ರಧಾನಿ ಮೋದಿಯಿಂದ 3 ಪರಮ್ ರುದ್ರ ಸೂಪರ್ ಕಂಪ್ಯೂಟರ್‌ಗಳ ಬಿಡುಗಡೆ

ಯು-ವಿನ್ ಪೋರ್ಟಲ್, ಯುನಿವರ್ಸಲ್ ಇಮ್ಯುನೈಸೇಶನ್ ಪ್ರೋಗ್ರಾಂ ಅಡಿಯಲ್ಲಿ ಡಿಜಿಟಲ್ ಪರಿಹಾರವಾಗಿದೆ. ಇದು ಗರ್ಭಿಣಿಯರು ಮತ್ತು 17 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಸೇವೆಗಳನ್ನು ಸುಗಮಗೊಳಿಸುತ್ತದೆ, ಪ್ರವೇಶ ಮತ್ತು ಟ್ರ್ಯಾಕಿಂಗ್ ಅನ್ನು ಹೆಚ್ಚಿಸುತ್ತದೆ. ಕ್ಷಯರೋಗದ ಚಿಕಿತ್ಸೆಯ ಅವಧಿಯನ್ನು 9-12 ತಿಂಗಳುಗಳಿಂದ ಕೇವಲ 6 ತಿಂಗಳವರೆಗೆ ಕಡಿಮೆ ಮಾಡಲಾಗಿದೆ.

ಅತಿದೊಡ್ಡ ಆರೋಗ್ಯ ಕಾರ್ಯಕ್ರಮವಾದ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯು 5 ಲಕ್ಷ ರೂ.ವರೆಗೆ ಚಿಕಿತ್ಸಾ ವೆಚ್ಚವನ್ನು ಒಳಗೊಂಡಿದೆ. ಇತ್ತೀಚೆಗೆ, ಈ ಯೋಜನೆಯಡಿಯಲ್ಲಿ, ಕೇಂದ್ರ ಸಚಿವ ಸಂಪುಟವು 70 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ರಕ್ಷಣೆಯನ್ನು ಅನುಮೋದಿಸಿದೆ. 4.5 ಕೋಟಿ ಕುಟುಂಬಗಳ ಸುಮಾರು 6 ಕೋಟಿ ಹಿರಿಯರಿಗೆ ಇದರಿಂದ ಪ್ರಯೋಜನವಾಗಿದೆ.

ಪ್ರಧಾನಿ ಮೋದಿಯವರು ತಮ್ಮ ಉಕ್ರೇನ್ ಭೇಟಿಯ ಸಂದರ್ಭದಲ್ಲಿ BHISHM Cubes-ಪೋರ್ಟಬಲ್, ಮಾಡ್ಯುಲರ್ ವೈದ್ಯಕೀಯ ಸೌಲಭ್ಯಗಳನ್ನು ಪರಿಚಯಿಸಿದರು. ಇವುಗಳನ್ನು ಕ್ಷಿಪ್ರ ತುರ್ತು ಆರೈಕೆಗಾಗಿ 25 AIIMS ಮತ್ತು ಇನ್‌ಸ್ಟಿಟ್ಯೂಟ್ ಆಫ್ ನ್ಯಾಷನಲ್ ಇಂಪಾರ್ಟೆನ್ಸ್ (INIs)ನಲ್ಲಿ ನಿಯೋಜಿಸಲಾಗುವುದು.

ಮುಂಬರುವ ಉಪಕ್ರಮಗಳಲ್ಲಿ ಮೆಡ್-ಟೆಕ್ ಮಿತ್ರ, ಸಾಂಕ್ರಾಮಿಕ ಸನ್ನದ್ಧತೆಗಾಗಿ ರಾಷ್ಟ್ರೀಯ ಒನ್ ಹೆಲ್ತ್ ಮಿಷನ್, ಇಂಟಿಗ್ರೇಟೆಡ್ ರಿಸರ್ಚ್ ಮತ್ತು ಡಯಾಗ್ನೋಸ್ಟಿಕ್ ಲ್ಯಾಬೋರೇಟರಿಗಳು ಮತ್ತು ಅಪರೂಪದ ಕಾಯಿಲೆಗಳಿಗೆ ಸ್ಥಳೀಯ ಔಷಧಗಳ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಕೆಲವು ಸಂಶೋಧನೆಗಳನ್ನು ನಡೆಸಲಾಗುವುದು. ಈ ಉಪಕ್ರಮಗಳನ್ನು ಮುಂದಿನ ತಿಂಗಳು ಪ್ರಾರಂಭಿಸಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: ಮೋದಿ ದೇವರಲ್ಲ; ರಾಜೀನಾಮೆ ನೀಡಿದ ನಂತರ ಅರವಿಂದ್ ಕೇಜ್ರಿವಾಲ್ ಮೊದಲ ವಿಧಾನಸಭಾ ಭಾಷಣ

ಈಗಾಗಲೇ ಮೂರು ಕ್ಯಾನ್ಸರ್ ಔಷಧಿಗಳಿಗೆ ಕಸ್ಟಮ್ಸ್ ಸುಂಕದಿಂದ ವಿನಾಯಿತಿ ನೀಡಲಾಗಿದ್ದು, ಇದರಿಂದ ದೇಶದ 27 ಲಕ್ಷ ಕ್ಯಾನ್ಸರ್ ರೋಗಿಗಳಿಗೆ ಪ್ರಯೋಜನವಾಗಿದೆ. 3 ಕ್ಯಾನ್ಸರ್ ಔಷಧಿಗಳಾದ ಟ್ರಾಸ್ಟುಜುಮಾಬ್ ಡೆರಕ್ಸ್ಟೆಕಾನ್ (ಸ್ತನ ಕ್ಯಾನ್ಸರ್), ಒಸಿಮೆರ್ಟಿನಿಬ್ (ಶ್ವಾಸಕೋಶದ ಕ್ಯಾನ್ಸರ್) ಮತ್ತು ದುರ್ವಾಲುಮಾಬ್ (ಶ್ವಾಸಕೋಶದ ಕ್ಯಾನ್ಸರ್ ಮತ್ತು ಪಿತ್ತರಸದ ಕ್ಯಾನ್ಸರ್) ಅನ್ನು ವಿವಿಧ ರೀತಿಯ ಗೆಡ್ಡೆಗಳಿಗೆ ಬಳಸಲಾಗುತ್ತದೆ. ಎಕ್ಸ್-ರೇ ಟ್ಯೂಬ್‌ಗಳು ಮತ್ತು ಫ್ಲಾಟ್ ಪ್ಯಾನಲ್ ಡಿಟೆಕ್ಟರ್‌ಗಳ ಮೇಲಿನ ಕಸ್ಟಮ್ ಸುಂಕದ ದರಗಳನ್ನು ಸಹ ಪರಿಷ್ಕರಿಸಲಾಯಿತು. ಈ ಪರಿಷ್ಕೃತ ದರಗಳು ಕಡಿಮೆ ವೆಚ್ಚದಲ್ಲಿ ಘಟಕಗಳ ಲಭ್ಯತೆಯನ್ನು ಹೆಚ್ಚಿಸುವ ಮೂಲಕ ಎಕ್ಸ್-ರೇ ಯಂತ್ರ ಉದ್ಯಮದ ಮೇಲೆ ಧನಾತ್ಮಕ ಪರಿಣಾಮ ಬೀರುವ ನಿರೀಕ್ಷೆಯಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 19, 2024 ರಂದು ಬಿಹಾರದ ರಾಜ್‌ಗಿರ್‌ನಲ್ಲಿ ನಳಂದ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ ಅನ್ನು ಉದ್ಘಾಟಿಸಿದರು. ವಿಶ್ವವಿದ್ಯಾನಿಲಯವನ್ನು ಭಾರತ ಮತ್ತು ಪೂರ್ವ ಏಷ್ಯಾ ಶೃಂಗಸಭೆ (EAS) ದೇಶಗಳ ಸಹಯೋಗವಾಗಿ ಕಲ್ಪಿಸಲಾಗಿದೆ. ನಳಂದ ವಿಶ್ವವಿದ್ಯಾನಿಲಯ ಕ್ಯಾಂಪಸ್‌ನಲ್ಲಿ ಎರಡು ಶೈಕ್ಷಣಿಕ ಬ್ಲಾಕ್‌ಗಳು 40 ತರಗತಿ ಕೊಠಡಿಗಳು ಸುಮಾರು 1900 ಒಟ್ಟು ಆಸನ ಸಾಮರ್ಥ್ಯವನ್ನು ಹೊಂದಿದೆ. ಇದು ತಲಾ 300 ಆಸನಗಳ ಸಾಮರ್ಥ್ಯವನ್ನು ಹೊಂದಿರುವ ಎರಡು ಸಭಾಂಗಣಗಳನ್ನು ಹೊಂದಿದೆ. ಸುಮಾರು 550 ವಿದ್ಯಾರ್ಥಿಗಳ ಸಾಮರ್ಥ್ಯದ ವಿದ್ಯಾರ್ಥಿ ಹಾಸ್ಟೆಲ್ ಮತ್ತು ಅಂತಾರಾಷ್ಟ್ರೀಯ ಕೇಂದ್ರ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಹೊಂದಿದೆ.

ಮುಂದಿನ 5 ವರ್ಷಗಳಲ್ಲಿ 500 ಉನ್ನತ ಕಂಪನಿಗಳಲ್ಲಿ ಕೆಲಸ ಮಾಡಲು 1 ಕೋಟಿ ಯುವಕರಿಗೆ ಅವಕಾಶವನ್ನು ಒದಗಿಸಲು ಪಾವತಿಸಿದ ಇಂಟರ್ನ್‌ಶಿಪ್ ಕಾರ್ಯಕ್ರಮವನ್ನು ಒಳಗೊಂಡಿರುವ ಹೊಸ ಉದ್ಯೋಗ ಸೃಷ್ಟಿ ಯೋಜನೆಗಾಗಿ ಕೇಂದ್ರ ಬಜೆಟ್ 10,000 ಕೋಟಿ ರೂ.ಗಳನ್ನು ನಿಗದಿಪಡಿಸಿದೆ. ಕಾರ್ಪೊರೇಟ್ ತೆರಿಗೆಗಳನ್ನು ವಿದೇಶಿ ಕಂಪನಿಗಳಿಗೆ 40% ರಿಂದ 35%ಗೆ ಇಳಿಸಲಾಗಿದೆ. ಇದು ಹೂಡಿಕೆದಾರರಿಗೆ ಭಾರತವನ್ನು ಇನ್ನಷ್ಟು ಆಕರ್ಷಕ ತಾಣವನ್ನಾಗಿ ಮಾಡಿದೆ. ಸ್ಟಾರ್ಟ್-ಅಪ್‌ಗಳ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಮತ್ತು ನಾವೀನ್ಯತೆಯನ್ನು ಉತ್ತೇಜಿಸಲು ಸರ್ಕಾರವು 31% ಏಂಜೆಲ್ ತೆರಿಗೆಯನ್ನು ರದ್ದುಗೊಳಿಸಿದೆ. ಅದೇ ರೀತಿ, ಮೊಬೈಲ್ ಫೋನ್‌ಗಳ ಮೇಲಿನ ಸುಂಕವನ್ನು 15%ಗೆ ಇಳಿಸುವುದು ಮತ್ತು 3 ಕ್ಯಾನ್ಸರ್ ಔಷಧಿಗಳ ಮೇಲಿನ ಸುಂಕವನ್ನು ತೆಗೆದುಹಾಕುವಂತಹ ಪ್ರಮುಖ ವಲಯಗಳನ್ನು ಉತ್ತೇಜಿಸಲು ಕಸ್ಟಮ್ ಸುಂಕಗಳನ್ನು ಸಹ ಮಾರ್ಪಡಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜಿಮ್‌ಗೆ ನುಗ್ಗಿದ ಕೋತಿ: ಎದ್ನೋ ಬಿದ್ನೋ ಓಡಿದ ಬಾಡಿ ಬಿಲ್ಡರ್ಸ್!
ಜಿಮ್‌ಗೆ ನುಗ್ಗಿದ ಕೋತಿ: ಎದ್ನೋ ಬಿದ್ನೋ ಓಡಿದ ಬಾಡಿ ಬಿಲ್ಡರ್ಸ್!
‘ನೀವು ಈ ಆಟಕ್ಕೆ ಫಿಟ್ ಅಲ್ಲ’; ಚೈತ್ರಾಗೆ ನೇರವಾಗಿ ಹೇಳಿದ ಸುದೀಪ್
‘ನೀವು ಈ ಆಟಕ್ಕೆ ಫಿಟ್ ಅಲ್ಲ’; ಚೈತ್ರಾಗೆ ನೇರವಾಗಿ ಹೇಳಿದ ಸುದೀಪ್
ಪ್ರಕರಣ ಈಗ ಹಕ್ಕು ಭಾಧ್ಯತಾ ಸಮಿತಿ ಮುಂದಿದೆ: ಸತೀಶ್ ಜಾರಕಿಹೊಳಿ
ಪ್ರಕರಣ ಈಗ ಹಕ್ಕು ಭಾಧ್ಯತಾ ಸಮಿತಿ ಮುಂದಿದೆ: ಸತೀಶ್ ಜಾರಕಿಹೊಳಿ
ಅಶ್ಲೀಲ ಪದಬಳಕೆ ಕಂಡುಬಂದರೆ ಅದನ್ನು ಎಥಿಕ್ಸ್ ಕಮಿಟಿಗೆ ರವಾನೆ: ಹೊರಟ್ಟಿ
ಅಶ್ಲೀಲ ಪದಬಳಕೆ ಕಂಡುಬಂದರೆ ಅದನ್ನು ಎಥಿಕ್ಸ್ ಕಮಿಟಿಗೆ ರವಾನೆ: ಹೊರಟ್ಟಿ
ಪ್ರಧಾನಿ ಮೋದಿಯನ್ನ ಭೇಟಿಯಾದ 101 ವರ್ಷದ ಐಎಫ್‌ಎಸ್ ಅಧಿಕಾರಿ
ಪ್ರಧಾನಿ ಮೋದಿಯನ್ನ ಭೇಟಿಯಾದ 101 ವರ್ಷದ ಐಎಫ್‌ಎಸ್ ಅಧಿಕಾರಿ
ವಕ್ಫ್ ಬೋರ್ಡ್ ಭೂಕಬಳಿಕೆ ಸಮರ್ಥವಾಗಿ ಸದನದಲ್ಲಿ ಮಂಡಿಸಿದ್ದೇವೆ: ಅಶೋಕ
ವಕ್ಫ್ ಬೋರ್ಡ್ ಭೂಕಬಳಿಕೆ ಸಮರ್ಥವಾಗಿ ಸದನದಲ್ಲಿ ಮಂಡಿಸಿದ್ದೇವೆ: ಅಶೋಕ
ಡಿವೈಡರ್​ಗೆ ಗುದ್ದಿ ಕಾರಿನ ಮೇಲೆ ಕಂಟೇನರ್​ ಬೀಳುತ್ತಿರುವ ಭಯಾನಕ ದೃಶ್ಯ!
ಡಿವೈಡರ್​ಗೆ ಗುದ್ದಿ ಕಾರಿನ ಮೇಲೆ ಕಂಟೇನರ್​ ಬೀಳುತ್ತಿರುವ ಭಯಾನಕ ದೃಶ್ಯ!
ಕಾನೂನು ಕೈಗೆತ್ತಿಕೊಳ್ಳಬಾರದು ಅಂತ ಸಹಿಸಿಕೊಂಡೆ: ಮೃಣಾಲ್ ಹೆಬ್ಬಾಳ್ಕರ್
ಕಾನೂನು ಕೈಗೆತ್ತಿಕೊಳ್ಳಬಾರದು ಅಂತ ಸಹಿಸಿಕೊಂಡೆ: ಮೃಣಾಲ್ ಹೆಬ್ಬಾಳ್ಕರ್
ಆರೋಪ ಮಾಡಲು ವಿಷಯಗಳಿಲ್ಲ, ಹಾಗಾಗೇ ಕೊಲೆಗಡುಕ ಅಂತಾರೆ: ಪಲ್ಲವಿ
ಆರೋಪ ಮಾಡಲು ವಿಷಯಗಳಿಲ್ಲ, ಹಾಗಾಗೇ ಕೊಲೆಗಡುಕ ಅಂತಾರೆ: ಪಲ್ಲವಿ
ಫಾರಂ ಹೌಸ್​ನಲ್ಲಿ ದರ್ಶನ್, ಹಲವು ಎಚ್ಚರಿಕಾ ಕ್ರಮ
ಫಾರಂ ಹೌಸ್​ನಲ್ಲಿ ದರ್ಶನ್, ಹಲವು ಎಚ್ಚರಿಕಾ ಕ್ರಮ