ನವದೆಹಲಿ: ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸದನದಲ್ಲಿ ವಕ್ಫ್ ತಿದ್ದುಪಡಿ ಮಸೂದೆಯ ಕುರಿತು ಚರ್ಚೆ ನಡೆಯುತ್ತಿರುವಾಗ ನಿದ್ದೆಗೆ ಜಾರಿದ್ದಾರೆ. ಈ ಕುರಿತಾದ ಫೋಟೋಗಳು, ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮತ್ತು ಬಿಜೆಪಿ ಸಂಸದ ಗಿರಿರಾಜ್ ಸಿಂಗ್ ಅವರು ಚರ್ಚೆಯ ಸಮಯದಲ್ಲಿ ನಿದ್ರೆಗೆ ಜಾರಿದ ವಿರೋಧ ಪಕ್ಷದ ಸಂಸದರನ್ನು ಲೇವಡಿ ಮಾಡಿದ್ದಾರೆ.
ಬಿಜೆಪಿ ಸಂಸದರು ನಗುತ್ತಾ ವಿಪಕ್ಷದ ಸಂಸದರನ್ನು ಮೂದಲಿಸಿದ್ದಾರೆ. ಈ ವೇಳೆ ರಾಹುಲ್ ಗಾಂಧಿ ನಿದ್ರಿಸುತ್ತಿರುವುದನ್ನು ಕಾಣಬಹುದು. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ವಕ್ಫ್ ತಿದ್ದುಪಡಿ ಮಸೂದೆಯ ಕುರಿತು ಮಾತನಾಡುತ್ತಿರುವುದು ಮತ್ತು ಬಿಜೆಪಿ ಸಂಸದ ಗಿರಿರಾಜ್ ಸಿಂಗ್ ಅವರ ಪಕ್ಕದಲ್ಲಿ ಕುಳಿತಿರುವುದನ್ನು ವೀಡಿಯೊ ತೋರಿಸಿದೆ.
अब जो नया सेंट्रल वक्फ काउंसिल और स्टेट वक्फ बोर्ड होगा इसमें मुस्लिम महिलाओं का रिप्रेजेंटेशन अनिवार्य हो गया है: माननीय केंद्रिय मंत्री श्री @KirenRijiju जी#Parliament pic.twitter.com/1kXJB2W5tO
— Office of Kiren Rijiju (@RijijuOffice) August 8, 2024
ಕಿರಣ್ ರಿಜಿಜು ಮಾತನಾಡುತ್ತಿದ್ದಂತೆ, ಗಿರಿರಾಜ್ ಸಿಂಗ್ ಮತ್ತು ಕಾಂಗ್ರೆಸ್ ಸಂಸದರು ನಿದ್ದೆಗೆ ಜಾರಿದ್ದಾರೆ.
Rahul Gandhi sleeping in the Waqf Amendment Bill discussion in the Lok Sabha. And the opposition wants India to take them seriously. #WaqfBoardBill #RahulGandhi pic.twitter.com/yaKOtikkug
— I am India (@_AmIndia_) August 8, 2024
ಇದನ್ನೂ ಓದಿ: Video: ಖುಷಿಯಿಂದ ಡಾನ್ಸ್ ಮಾಡುತ್ತಿರುವಾಗಲೇ ಹೃದಯಾಘಾತದಿಂದ ಶಿಕ್ಷಕ ಕುಸಿದು ಬಿದ್ದು ಸಾವು; ವಿಡಿಯೋ ಇಲ್ಲಿದೆ ನೋಡಿ
ಇದ್ದಕ್ಕಿದ್ದಂತೆ, ಭೂಪೇಂದ್ರ ಯಾದವ್ ಮತ್ತು ಜಿತೇಂದ್ರ ಸಿಂಗ್ ಸೇರಿದಂತೆ ಕಿರಣ್ ರಿಜಿಜು ಪಕ್ಕದಲ್ಲಿ ಕುಳಿತಿರುವ ಬಿಜೆಪಿ ಸಂಸದರು ನಿದ್ರಿಸುತ್ತಿರುವವರ ಕಡೆ ಕೈ ತೋರಿಸಿ ನಗುತ್ತಾರೆ. “ಅದಕ್ಕಾಗಿಯೇ ನಾನು ನಿಮಗೆ ನಿದ್ದೆ ಬರುವಂತೆ ಮಾಡುವುದರಿಂದ ಮಧ್ಯೆ ಮಾತನಾಡಬೇಡಿ ಅಥವಾ ಪದೇ ಪದೇ ಅಡ್ಡಿಪಡಿಸಬೇಡಿ ಎಂದು ಹೇಳುತ್ತೇನೆ” ಎಂದು ಕಿರಣ್ ರಿಜಿಜು ವ್ಯಂಗ್ಯವಾಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ