ಅಯೋಧ್ಯೆ: 500 ವರ್ಷಗಳ ತಪಸ್ಸು ಅಂತ್ಯ, ಸಾಂಪ್ರದಾಯಿಕ ಪೇಟ ತೊಟ್ಟ ಸೂರ್ಯವಂಶಿ ಠಾಕೂರರು
ಸುಮಾರು 500ಕ್ಕೂ ಅಧಿಕ ವರ್ಷಗಳ ಕನಸು ನನಸಾಗಿದೆ, ಭವ್ಯ ರಾಮ ಮಂದಿರ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮ ಪ್ರತಿಜ್ಞೆಯನ್ನು ಪೂರೈಸಿದ ಸೂರ್ಯವಂಶಿ ಠಾಕೂರ್(Suryavanshi Thakur) ರರು ಅಂದರೆ ಕ್ಷತ್ರಿಯರು ತಮ್ಮ ಸಾಂಪ್ರದಾಯಿಕ ಪೇಟವನ್ನು ಧರಿಸಿದರು
ಸುಮಾರು 500ಕ್ಕೂ ಅಧಿಕ ವರ್ಷಗಳ ಕನಸು ನನಸಾಗಿದೆ, ಭವ್ಯ ರಾಮ ಮಂದಿರ(Ram Mandir) ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮ ಪ್ರತಿಜ್ಞೆಯನ್ನು ಪೂರೈಸಿದ ಸೂರ್ಯವಂಶಿ ಠಾಕೂರ(Suryavanshi Thakur)ರು ಅಂದರೆ ಕ್ಷತ್ರಿಯರು ತಮ್ಮ ಸಾಂಪ್ರದಾಯಿಕ ಪೇಟವನ್ನು ಧರಿಸಿದರು.
ಮೊಘಲ್ ದೊರೆ ಬಾಬರ್ನಿಂದ ನಿರ್ಮಾಣವಾದ ಮಸೀದಿಯನ್ನು ಕೆಡವಿ ಅಲ್ಲಿ ರಾಮ ಮಂದಿರವನ್ನು ನಿರ್ಮಿಸುವವರೆಗೂ ತಮ್ಮ ಸಮಾಜದ ಪೇಟವನ್ನು ಧರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು. ಅಯೋಧ್ಯೆ ಮತ್ತು ನೆರೆಯ ಬಸ್ತಿ ಜಿಲ್ಲೆಯ ಸರಯು ನದಿಯ ಎರಡೂ ದಡಗಳಲ್ಲಿರುವ ಸರಿಸುಮಾರು 115 ಹಳ್ಳಿಗಳಲ್ಲಿ ವಾಸಿಸುವ ಸೂರ್ಯವಂಶಿ ಠಾಕೂರರು ತಮ್ಮನ್ನು ಭಗವಾನ್ ರಾಮನ ವಂಶಸ್ಥರು ಎಂದು ಗುರುತಿಸಿಕೊಳ್ಳುತ್ತಾರೆ .
1990 ರ ದಶಕದ ರಾಮ ಜನ್ಮಭೂಮಿ ಚಳವಳಿಯ ಸಮಯದಲ್ಲಿ, ಸೂರ್ಯವಂಶಿ ಠಾಕೂರರು ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಕರಸೇವಕರನ್ನು ಬೆಂಬಲಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದರು.
#WATCH | Uttar Pradesh: People from the ‘Suryavanshi Thakur’ community in Sarairasi village of Ayodhya wear turbans after almost 500 years, ahead of Ram Temple’s ‘pranpratishtha’. The community had taken an oath that they would not wear a turban till the temple was reconstructed… pic.twitter.com/9QZckTGbEk
— ANI (@ANI) January 18, 2024
ಈ ಕರಸೇವಕರಿಗೆ ಆಹಾರ, ವಸತಿ ಮತ್ತು ಸಹಾಯವನ್ನು ಒದಗಿಸಿದರು. ಸೂರ್ಯವಂಶಿ ಠಾಕೂರ್ ಸಮುದಾಯದ ಕನಿಷ್ಠ ಒಬ್ಬ ಪ್ರತಿನಿಧಿಗೆ ರಾಮಮಂದಿರ ಶಂಕುಸ್ಥಾಪನೆ ಸಮಾರಂಭಕ್ಕೆ ಆಹ್ವಾನ ನೀಡಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯ ಮತ್ತು ಸರೀರಸಿ ಗ್ರಾಮದ ನಿವಾಸಿ ಶಿವ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮನವಿ ಮಾಡಿದ್ದಾರೆ.
ಮತ್ತಷ್ಟು ಓದಿ: ರಾಮಮಂದಿರ ಜ್ಞಾಪಕಾರ್ಥ ಅಂಚೆಚೀಟಿಗಳನ್ನು ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ
ಉತ್ತರ ಪ್ರದೇಶದ ಅಯೋಧ್ಯೆ ಮತ್ತು ನೆರೆಯ ಬಸ್ತಿ ಜಿಲ್ಲೆಯ ಸರಯೂ ನದಿಯ ದಡದಲ್ಲಿರುವ 100 ಕ್ಕೂ ಹೆಚ್ಚು ಹಳ್ಳಿಗಳ ನಿವಾಸಿಗಳು, ಸೂರ್ಯವಂಶಿ ಠಾಕೂರರು ತಮ್ಮನ್ನು ಹಿಂದೂ ದೇವತೆ ರಾಮನ ವಂಶಸ್ಥರು ಎಂದು ಪರಿಗಣಿಸುತ್ತಾರೆ. ಈಗ ಅವರ 500 ವರ್ಷಗಳ ತಪಸ್ಸು ಅಂತ್ಯಗೊಳ್ಳುತ್ತಿದೆ.
ರಾಮನ ಜನ್ಮಸ್ಥಳವನ್ನು ನಾಶಪಡಿಸಿದ ನಂತರ, ಈ ಗ್ರಾಮಗಳ ಸೂರ್ಯವಂಶಿ ಠಾಕೂರ್ ಕೂಡ ಮೊಘಲ್ ಸೈನ್ಯದ ವಿರುದ್ಧ ಹೋರಾಡಲು ನಿರ್ಧರಿಸಿದ್ದರು ಎಂದು ಹೇಳಲಾಗುತ್ತದೆ. ಆದರೆ ಮುಂದುವರಿಯುವ ಮೊದಲು, ಅವರು ಸೂರ್ಯ ಕುಂಡ್ ಮತ್ತು ತಮ್ಮ ಕುಲದ ದೇವತೆ ಸೂರ್ಯ ದೇವನಿಗೆ ಸಮರ್ಪಿತವಾದ ದೇವಾಲಯದಲ್ಲಿ ಒಟ್ಟುಗೂಡಿದರು ಮತ್ತು ರಾಮ ಮಂದಿರವನ್ನು ನಿರ್ಮಿಸುವವರೆಗೆ ಅವರು ಪೇಟ ಅಥವಾ ಚರ್ಮದ ಚಪ್ಪಲಿಗಳನ್ನು ಧರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು. ಕೊಡೆಗಳ ಬಳಕೆಯನ್ನೂ ಕೈಬಿಟ್ಟಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:45 am, Fri, 19 January 24