ಅಯೋಧ್ಯೆಯ ರಾಮ ಮಂದಿರ ಟ್ರಸ್ಟ್​ ಅಧ್ಯಕ್ಷ ಮಹಂತ್ ದಾಸ್ ಸ್ಥಿತಿ ಗಂಭೀರ, ಆಸ್ಪತ್ರೆಗೆ ದಾಖಲು

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಮುಖ್ಯಸ್ಥ ಮಹಂತ್ ನೃತ್ಯ ಗೋಪಾಲ್ ದಾಸ್ ಅವರನ್ನು ಭಾನುವಾರ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೆಪ್ಟೆಂಬರ್ 8 ರಂದು ಸಂಜೆ 6.30 ರ ಸುಮಾರಿಗೆ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಯಿತು.

ಅಯೋಧ್ಯೆಯ ರಾಮ ಮಂದಿರ ಟ್ರಸ್ಟ್​ ಅಧ್ಯಕ್ಷ ಮಹಂತ್ ದಾಸ್ ಸ್ಥಿತಿ ಗಂಭೀರ, ಆಸ್ಪತ್ರೆಗೆ ದಾಖಲು
ಮಹಂತ್ ದಾಸ್Image Credit source: Swarajya
Follow us
|

Updated on: Sep 09, 2024 | 9:03 AM

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ನ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಅವರ ಆರೋಗ್ಯ ಹದಗೆಟ್ಟಿದ್ದು, ಅವರನ್ನು ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಕ್ಕಿರುವ ಮಾಹಿತಿ ಪ್ರಕಾರ ಅವರ ಸ್ಥಿತಿ ಚಿಂತಾಜನಕವಾಗಿದೆ.

ಮಹಂತ್ ನೃತ್ಯ ಗೋಪಾಲ್ ದಾಸ್ ಅವರನ್ನು ಸಂಜೆ 6:30 ಕ್ಕೆ ಮೇದಾಂತಕ್ಕೆ ದಾಖಲಿಸಲಾಯಿತು. ಮೂತ್ರದ ಸಮಸ್ಯೆ ಮತ್ತು ಆಹಾರ ಸೇವನೆಯ ಸಮಸ್ಯೆಯಿಂದಾಗಿ ಅವರನ್ನು ಆಸ್ಪತ್ರೆಗೆ ಸೇರಿಸಬೇಕಾಯಿತು. ಕೃಷ್ಣ ಜನ್ಮಾಷ್ಟಮಿಯಂದು ಮಥುರಾಗೆ ಹೋದಾಗ ಮಹಂತ್ ನೃತ್ಯ ಗೋಪಾಲ್ ದಾಸ್ ಅವರ ಆರೋಗ್ಯ ಹದಗೆಟ್ಟಿತ್ತು.

ಅವರ ಆರೋಗ್ಯದಲ್ಲಿ ಸುಧಾರಣೆ ಕಾಣದ ಕಾರಣ ನಿನ್ನೆ ಸಂಜೆ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಂತ್ ನೃತ್ಯ ಗೋಪಾಲ್ ದಾಸ್ ಅವರಿಗೂ ಕೊರೊನಾ ಸೋಂಕು ತಗುಲಿತ್ತು. ಈ ಅವಧಿಯಲ್ಲಿ, ಅವರು ಹಲವಾರು ದಿನಗಳವರೆಗೆ ವೈದ್ಯರ ಮೇಲ್ವಿಚಾರಣೆಯಲ್ಲಿದ್ದರು ಮತ್ತು ಚೇತರಿಸಿಕೊಂಡ ನಂತರ, ಅಯೋಧ್ಯೆಗೆ ಮರಳಿದ್ದರು.

ಮತ್ತಷ್ಟು ಓದಿ: ಅಯೋಧ್ಯೆ ರಾಮ ಮಂದಿರದ ಅರ್ಚಕರಿಗೆ ಹೊಸ ಡ್ರೆಸ್​ ಕೋಡ್​, ಮೊಬೈಲ್​ ಬಳಕೆ ನಿಷೇಧ

ಮಹಂತ್ ಸುಮಾರು 86 ವರ್ಷ ವಯಸ್ಸಿನವರಾಗಿದ್ದು, ಯಾವಾಗಲೂ ವೈದ್ಯರ ಮೇಲ್ವಿಚಾರಣೆಯಲ್ಲಿರುತ್ತಾರೆ.  2022 ರಲ್ಲಿ, ಅವರ ಆರೋಗ್ಯವು ಹಲವಾರು ಬಾರಿ ಹದಗೆಟ್ಟಿತ್ತು, ನಂತರ ಅವರನ್ನು ಮೇದಾಂತಕ್ಕೆ ದಾಖಲಿಸಲಾಗಿತ್ತು. ಅವರಿಗೆ ಕಿಡ್ನಿ ಸೋಂಕು ತಗುಲಿತ್ತು. ಮಹಂತ್ ದೀರ್ಘಕಾಲದ ಮೂತ್ರಪಿಂಡ ವೈಫಲ್ಯ ಎಂಬ ಕಾಯಿಲೆಯಿಂದ ಬಳಲುತ್ತಿದ್ದರು.

ಇದಲ್ಲದೇ ಅವರಿಗೆ ಮೂತ್ರನಾಳದ ಸೋಂಕು ಅಂದರೆ ಯುಟಿಐ ಕೂಡ ಇತ್ತು. ಈ ರೋಗದಲ್ಲಿ ಮೂತ್ರನಾಳವು ಸೋಂಕಿಗೆ ಒಳಗಾಗುತ್ತದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ