ಪೊಲೀಸರನ್ನು ನಿಂದಿಸಿ ಸವಾಲು ಹಾಕುವ ರೀಲ್ಸ್ ಮಾಡುತ್ತಿದ್ದ ಯುವಕ ನೇಣಿಗೆ ಶರಣು
ಪೊಲೀಸರನ್ನು ನಿಂದಿಸಿ ಸವಾಲು ಹಾಕುವ ರೀಲ್ಸ್ ಮಾಡುತ್ತಿದ್ದ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದಿದೆ.ಇದರಿಂದ ಕೋಪಗೊಂಡ ಕುಟುಂಬ ಸದಸ್ಯರು ಆತನ ಶವವನ್ನು ರಸ್ತೆಯಲ್ಲೇ ಇಟ್ಟು ಪ್ರತಿಭಟನೆ ನಡೆಸಿದರು. ಪೊಲೀಸರ ಚಿತ್ರಹಿಂಸೆ ಮತ್ತು ಕಿರುಕುಳದಿಂದಲೇ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅವರು ಆರೋಪಿಸಿದ್ದಾರೆ.

ಉಜ್ಜಯಿನಿ, ಅಕ್ಟೋಬರ್ 09: ಪೊಲೀಸರನ್ನು ನಿಂದಿಸಿ ಸವಾಲು ಹಾಕುವ ರೀಲ್ಸ್ ಮಾಡುತ್ತಿದ್ದ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದಿದೆ.ಇದರಿಂದ ಕೋಪಗೊಂಡ ಕುಟುಂಬ ಸದಸ್ಯರು ಆತನ ಶವವನ್ನು ರಸ್ತೆಯಲ್ಲೇ ಇಟ್ಟು ಪ್ರತಿಭಟನೆ ನಡೆಸಿದರು. ಪೊಲೀಸರ ಚಿತ್ರಹಿಂಸೆ ಮತ್ತು ಕಿರುಕುಳದಿಂದಲೇ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅವರು ಆರೋಪಿಸಿದ್ದಾರೆ. ಮಾಹಿತಿಯ ಪ್ರಕಾರ, ಈ ಘಟನೆ ಚಿಮಂಗಂಜ್ ಮಂಡಿ ಪೊಲೀಸ್ ಠಾಣೆ ಪ್ರದೇಶದಲ್ಲಿ ನಡೆದಿದ್ದು, ವಿರಾಟ್ ನಗರದ ನಿವಾಸಿ ಅಭಿಷೇಕ್ ಚೌಹಾಣ್ ಅವರು ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅಭಿಷೇಕ್ (19) ಸೀಲಿಂಗ್ ಸ್ಕ್ಯಾಫೋಲ್ಡಿಂಗ್ ಮತ್ತು ಕಬ್ಬಿಣದ ರಾಡ್ ಫಿಕ್ಸಿಂಗ್ ಕೆಲಸ ಮಾಡುತ್ತಿದ್ದರು.
ಅವರ ಕುಟುಂಬ ಸದಸ್ಯರು ಚಿಮಂಗಂಜ್ ಮಂಡಿ ಪೊಲೀಸ್ ಠಾಣೆಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, ಜಿತೇಂದ್ರ ಸೋಲಂಕಿ ಎಂಬ ಪೊಲೀಸ್ ಅಧಿಕಾರಿ ಅಭಿಷೇಕ್ ಮೇಲೆ ಹಲ್ಲೆ ನಡೆಸಿ 40 ಸಾವಿರ ರೂ. ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಅಧಿಕಾರಿ ಇನ್ನೂ 1 ಲಕ್ಷ ರೂ. ಕೇಳುತ್ತಿದ್ದಾರೆ ಮತ್ತು ಹಣ ನೀಡದಿದ್ದರೆ ಅಭಿಷೇಕ್‌ನನ್ನು ನಕಲಿ ಎನ್‌ಕೌಂಟರ್‌ನಲ್ಲಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಮತ್ತಷ್ಟು ಓದಿ: ಚಂಡೀಗಢದ ಮನೆಯಲ್ಲಿ ಹರಿಯಾಣದ ಐಪಿಎಸ್ ಅಧಿಕಾರಿ ಶೂಟ್ ಮಾಡಿಕೊಂಡು ಆತ್ಮಹತ್ಯೆ
ಘಟನೆ ಬಗ್ಗೆ ಮಾಹಿತಿ ಸೋಮವಾರ ರಾತ್ರಿ ರೀಲ್ಸ್ನಲ್ಲಿ ಪೊಲೀಸರನ್ನು ನಿಂದಿಸಿ ಸವಾಲು ಹಾಕಿದ್ದಕ್ಕಾಗಿ ಅಭಿಷೇಕ್ ಚೌಹಾಣ್ ಮತ್ತು ವಿಕಿ ರಾಥೋಡ್ ಎಂಬ ಇಬ್ಬರನ್ನು ಬಂಧಿಸಲಾಗತ್ತು. ವಿಡಿಯೋ ವೈರಲ್ ಆದ ತಕ್ಷಣ, ಪೊಲೀಸರು ಅವರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು, ಅವರ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
ವಿಚಾರಣೆಯ ಸಮಯದಲ್ಲಿ, ಪೊಲೀಸರು ಅವರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು, ನಂತರ ಇಬ್ಬರೂ ಯುವಕರು ಇನ್ನು ಮುಂದೆ ಅಂತಹ ವೀಡಿಯೊಗಳನ್ನು ಮಾಡುವುದಿಲ್ಲ ಎಂದು ಭರವಸೆ ನೀಡಿದರು ಬಳಿಕ ಬಿಟ್ಟು ಕಳುಹಿಸಲಾಗಿತ್ತು. ಬಳಿಕ ಅಭಿಷೇಕ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:48 pm, Thu, 9 October 25




