AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅತ್ತೆ ಸುಧಾ ಮೂರ್ತಿ ಜತೆ ಬಂಗಾಳಿ ಸ್ವೀಟ್ ಹೌಸ್‌ಗೆ ಭೇಟಿ ನೀಡಿ ಸಿಹಿ ಸವಿದ ರಿಷಿ ಸುನಕ್

ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್ ಮತ್ತು ಸುಧಾ ಮೂರ್ತಿ ದೆಹಲಿಯ ಐತಿಹಾಸಿಕ ಬಂಗಾಳಿ ಸ್ವೀಟ್ ಹೌಸ್‌ಗೆ ಭೇಟಿ ನೀಡಿದರು. ಅಲ್ಲಿ ಅವರು ಚಾಟ್, ಲಸ್ಸಿ, ಚಹಾ ಹಾಗೂ ತಮ್ಮ ನೆಚ್ಚಿನ ರಸಮಲೈ ಸವಿದರು. ಸುಮಾರು ಒಂಬತ್ತು ದಶಕಗಳ ಇತಿಹಾಸ ಹೊಂದಿರುವ ಈ ಪ್ರಸಿದ್ಧ ಅಂಗಡಿಗೆ ಸುನಕ್ ಅವರ ಭೇಟಿ, ದೆಹಲಿಯ ಸ್ಥಳೀಯ ಆಹಾರ ಸಂಸ್ಕೃತಿಯತ್ತ ಮತ್ತೆ ಗಮನ ಸೆಳೆದಿದೆ.

ಅತ್ತೆ ಸುಧಾ ಮೂರ್ತಿ ಜತೆ ಬಂಗಾಳಿ ಸ್ವೀಟ್ ಹೌಸ್‌ಗೆ ಭೇಟಿ ನೀಡಿ ಸಿಹಿ ಸವಿದ ರಿಷಿ ಸುನಕ್
ರಿಷಿ ಸುನಕ್Image Credit source: Screenshot x Account IANS
ನಯನಾ ರಾಜೀವ್
|

Updated on: Oct 16, 2026 | 12:59 PM

Share

ನವದೆಹಲಿ, ಅಕ್ಟೋಬರ್ 16: ಬ್ರಿಟನ್‌ನ ಮಾಜಿ ಪ್ರಧಾನಿ ರಿಷಿ ಸುನಕ್ ಅವರಿಗೆ ಭಾರತೀಯ ಆಹಾರಗಳ ಮೇಲಿನ ಪ್ರೀತಿ ಹೊಸದೇನಲ್ಲ. ದೆಹಲಿ ಪ್ರವಾಸದ ವೇಳೆ ಅವರು ತಮ್ಮ ಅತ್ತೆ, ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಅವರೊಂದಿಗೆ ನಗರದ ಪ್ರಸಿದ್ಧ ಬಂಗಾಳಿ ಸ್ವೀಟ್ ಹೌಸ್‌ಗೆ ಭೇಟಿ ನೀಡಿದ್ದಾರೆ. ಅಲ್ಲಿ ಚಾಟ್, ಲಸ್ಸಿ, ಚಹಾ ಹಾಗೂ ತಮ್ಮ ನೆಚ್ಚಿನ ಭಾರತೀಯ ಸಿಹಿತಿಂಡಿ ರಸ್​ಮಲೈ ಸವಿದಿದ್ದಾರೆ. ಈ ಭೇಟಿಯ ವಿಡಿಯೋ ಇದೀಗ ಗಮನ ಸೆಳೆದಿದೆ. ಹಾಗಾದರೆ, ಸುಮಾರು ಒಂಬತ್ತು ದಶಕಗಳ ಇತಿಹಾಸ ಹೊಂದಿರುವ ಈ ಸ್ವೀಟ್ ಹೌಸ್‌ನ ವಿಶೇಷತೆ ಏನು?

ಬ್ರಿಟನ್‌ನ ಮಾಜಿ ಪ್ರಧಾನಿ ರಿಷಿ ಸುನಕ್ ಅವರು ದೆಹಲಿಯ ಪ್ರಸಿದ್ಧ ಬಂಗಾಳಿ ಸ್ವೀಟ್ ಹೌಸ್‌ಗೆ ಭೇಟಿ ನೀಡಿ ಭಾರತೀಯ ಆಹಾರಗಳ ರುಚಿ ಸವಿದಿದ್ದಾರೆ. ಅವರೊಂದಿಗೆ ಅತ್ತೆ ಹಾಗೂ ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಮತ್ತು ಸಂಸದೆ ಸ್ವಾತಿ ಮಲಿವಾಲ್ ಕೂಡ ಇದ್ದರು. ಮಂಗಳವಾರ ಬ್ಲೂಮ್‌ಬರ್ಗ್ ನ್ಯೂ ಎಕಾನಮಿ ಫೋರಂನಲ್ಲಿ ಭಾಗವಹಿಸಲು ದೆಹಲಿಗೆ ಆಗಮಿಸಿದ್ದ ರಿಷಿ ಸುನಕ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಸಾರ್ವಜನಿಕ ಸೇವೆಯಲ್ಲಿ 25 ವರ್ಷಗಳನ್ನು ಪೂರೈಸಿದ್ದಕ್ಕಾಗಿ ಅಭಿನಂದಿಸಿದ್ದರು. ಇದರ ನಡುವೆಯೇ, ದೆಹಲಿಯ ಪ್ರಸಿದ್ಧ ಆಹಾರ ತಾಣಕ್ಕೆ ಭೇಟಿ ನೀಡುವ ಮೂಲಕ ಸ್ಥಳೀಯ ಆಹಾರ ಸಂಸ್ಕೃತಿಯ ಸವಿಯನ್ನೂ ಅನುಭವಿಸಿದರು.

ಮತ್ತಷ್ಟು ಓದಿ:

ಯಾರೋ ಸಿಂಪಲ್ ಸುಧಾ ಗಂಡ ಅಂತೆ:ನಾರಾಯಣ ಮೂರ್ತಿ ಹೇಳಿಕೆಗೆ ಹರಿಪ್ರಸಾದ್ ಕೆಂಡಾಮಂಡಲ

ರಸ್​ಮಲೈ ಸವಿದ ರಿಷಿ ಸುನಕ್ ಬಂಗಾಳಿ ಸ್ವೀಟ್ ಹೌಸ್‌ಗೆ ಭೇಟಿ ನೀಡಿದ ರಿಷಿ ಸುನಕ್ ಮತ್ತು ಅವರ ಕುಟುಂಬದವರು ಚಾಟ್, ಲಸ್ಸಿ ಹಾಗೂ ಚಹಾವನ್ನು ಸವಿದರು. ಬಳಿಕ ಸುನಕ್ ಅವರು ಭಾರತೀಯರ ನೆಚ್ಚಿನ ಸಿಹಿತಿಂಡಿಗಳಲ್ಲಿ ಒಂದಾದ ರಸಮಲೈಯನ್ನೂ ಆಸ್ವಾದಿಸಿದರು. ಈ ಭೇಟಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ.

ರಿಷಿ ಸುನಕ್ ಅವರಿಗೆ ಈ ಸ್ವೀಟ್ ಹೌಸ್ ಹೊಸದೇನಲ್ಲ. 2025ರ ದೀಪಾವಳಿ ಸಂದರ್ಭದಲ್ಲಿಯೂ ಅವರು ಇಲ್ಲಿಗೆ ಭೇಟಿ ನೀಡಿದ್ದರು. ಆಗ ಅಂಗಡಿಯ ದೀಪಾವಳಿ ಅಲಂಕಾರಗಳು ಮತ್ತು ಭಾರತೀಯ ಸಿಹಿತಿಂಡಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ದೀಪಾವಳಿ ಆಚರಣೆಯಲ್ಲಿ ಮಿಠಾಯಿಗಳಿಗೆ ವಿಶೇಷ ಸ್ಥಾನವಿದೆ ಎಂಬುದನ್ನೂ ಅವರು ಈ ಹಿಂದೆ ಉಲ್ಲೇಖಿಸಿದ್ದರು.

ವಿಡಿಯೋ

1937ರಿಂದ ಸಿಹಿಯ ಪರಂಪರೆ ದೆಹಲಿಯ ಬಂಗಾಳಿ ಮಾರುಕಟ್ಟೆಯ ಹೃದಯಭಾಗದಲ್ಲಿರುವ ಬಂಗಾಳಿ ಸ್ವೀಟ್ ಹೌಸ್ & ಪೇಸ್ಟ್ರಿ ಶಾಪ್ 1937ರಲ್ಲಿ ಆರಂಭವಾಯಿತು. ಸುಮಾರು ಒಂಬತ್ತು ದಶಕಗಳಿಂದ ಸಿಹಿತಿಂಡಿಗಳು, ಖಾರ ತಿಂಡಿಗಳು ಮತ್ತು ಬೇಕರಿ ತಿನಿಸುಗಳಿಗೆ ಈ ಅಂಗಡಿ ಪ್ರಸಿದ್ಧವಾಗಿದೆ. ಲಾಲಾ ಭೀಮ್ ಸೈನ್, ಲಾಲಾ ರೋಹ್ತಾಶ್ ಚಂದ್ ಮತ್ತು ಲಾಲಾ ಬನ್ವಾರಿ ಲಾಲ್ ಅವರು ಈ ಸಂಸ್ಥೆಯನ್ನು ಸ್ಥಾಪಿಸಿದರು. ಕಾಲಕ್ರಮೇಣ ಇದು ಕೇವಲ ಸಿಹಿತಿಂಡಿ ಅಂಗಡಿಯಾಗಿ ಉಳಿಯದೆ, ದೆಹಲಿಯ ಆಹಾರ ಸಂಸ್ಕೃತಿಯ ಪ್ರಮುಖ ಗುರುತಾಗಿ ಬೆಳೆದಿದೆ.

ಇಲ್ಲಿನ ಚೋಲೆ ಭಟೂರೆ, ಪ್ಯಾಜ್ ವಾಲಿ ಕಚೋರಿ, ಜಿಲೇಬಿ ಮತ್ತು ರಸ್​ಮಲೈ ಗ್ರಾಹಕರ ನೆಚ್ಚಿನ ತಿನಿಸುಗಳಾಗಿವೆ. ರಾಜಕಾರಣಿಗಳು ಹಾಗೂ ಬಾಲಿವುಡ್ ಸೆಲೆಬ್ರಿಟಿಗಳೂ ಈ ಪ್ರಸಿದ್ಧ ತಾಣಕ್ಕೆ ಭೇಟಿ ನೀಡಿರುವುದು ಇದರ ಜನಪ್ರಿಯತೆಯನ್ನು ಹೆಚ್ಚಿಸಿದೆ ಒಟ್ಟಿನಲ್ಲಿ, ರಾಜಕೀಯ ಕಾರ್ಯಕ್ರಮಗಳ ನಡುವೆಯೂ ಸ್ಥಳೀಯ ಆಹಾರಗಳ ರುಚಿ ಸವಿಯಲು ಸಮಯ ಮೀಸಲಿಟ್ಟ ರಿಷಿ ಸುನಕ್ ಅವರ ಭೇಟಿ, ದೆಹಲಿಯ ಪ್ರಸಿದ್ಧ ಆಹಾರ ತಾಣದತ್ತ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More