ತೆಲಂಗಾಣದಲ್ಲಿ ಭೀಕರ ರಸ್ತೆ ಅಪಘಾತ: ಮನೆಗೆ ಬರುತ್ತಿದ್ದ 9 ಕೂಲಿ ಕಾರ್ಮಿಕರು ಸಾವು

ತೆಲಂಗಾಣದ ನಲ್ಗೊಂಡ‌ ಜಿಲ್ಲೆ ಅಂಗಡಿಪೇಟ್ ಬಳಿ ಅಪಘಾತ ಸಂಭವಿಸಿದೆ. ಮೃತಪಟ್ಟ ಕಾರ್ಮಿಕರೆಲ್ಲರೂ ಚಿಂತಬಾವಿ ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದೆ.

ತೆಲಂಗಾಣದಲ್ಲಿ ಭೀಕರ ರಸ್ತೆ ಅಪಘಾತ: ಮನೆಗೆ ಬರುತ್ತಿದ್ದ 9 ಕೂಲಿ ಕಾರ್ಮಿಕರು ಸಾವು
ಅಪಘಾತಕ್ಕೆ ತುತ್ತಾದ ಆಟೋ
Edited By:

Updated on: Jan 21, 2021 | 8:40 PM

ಹೈದರಾಬಾದ್​: ಅವರೆಲ್ಲರೂ ಕೆಲಸ ಮುಗಿಸಿ ಆಟೋದಲ್ಲಿ ಮನೆಗೆ ತೆರಳುತ್ತಿದ್ದರು. ಮನೆಗೆ ಹೋಗಿ ಮಕ್ಕಳನ್ನು ಸೇರುವ ತವಕ ಕೆಲವರದ್ದಾದರೆ, ಕುಟುಂಬದವರಿಗೆ ಅಡುಗೆ ಮಾಡಿ ಹಾಕಬೇಕು ಎನ್ನುವ ಗಡಿಬಿಡಿ ಕೆಲವರದ್ದು. ಆದರೆ, ಜವರಾಯ ಇದಕ್ಕೆ ಅವಕಾಶ ನೀಡಲೇ ಇಲ್ಲ. ನೋಡ ನೋಡುತ್ತಿದ್ದಂತೆ ಕಂಟೇನರ್​ಗೆ ಡಿಕ್ಕಿಯಾಯಿತು. ಪರಿಣಾಮ 9 ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ತೆಲಂಗಾಣದ ನಲ್ಗೊಂಡ‌ ಜಿಲ್ಲೆ ಅಂಗಡಿಪೇಟ್ ಬಳಿ ಅಪಘಾತ ಸಂಭವಿಸಿದೆ. ಮೃತಪಟ್ಟ ಕಾರ್ಮಿಕರೆಲ್ಲರೂ ಚಿಂತಬಾವಿ ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದೆ. ಘಟನೆ ವೇಳೆ ಹಲವರು ಗಾಯಗೊಂಡಿದ್ದು, ದೇವರಕೊಂಡ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕಾರ್ಮಿಕರು ಕೆಲಸ ಮುಗಿಸಿ ಆಟೋದಲ್ಲಿ ಮನೆಗೆ ತೆರಳುತ್ತಿದ್ದರು ಎನ್ನಲಾಗಿದೆ. ಮೃತರನ್ನು ‌ಆಟೊ ಚಾಲಕ‌ ಮಲ್ಲೇಶ, ಕೂಲಿಗಳಾದ ನೋಮಲ ಪೆದ್ದಮ್ಮ, ನೋಮಲ ಸೈದಮ್ಮ,‌ ಕೊಟ್ಟಂ ಪೆದ್ದಮ್ಮ, ಗೊಡುಗು ಇದ್ದಮ್ಮ, ಮಲ್ಲಮ್ಮ, ಅಂಜಮ್ಮ ಎಂದು ಗುರುತಿಸಲಾಗಿದೆ. ಐದಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಆಟೊದಲ್ಲಿ 20ಕ್ಕೂ ಹೆಚ್ಚು ಜನರು ಇದ್ದರು.

ಮುಂದಿನ 5 ವರ್ಷದೊಳಗೆ ದೇಶದಲ್ಲಿ ರಸ್ತೆ ಅಪಘಾತ ಪ್ರಮಾಣ ಶೇ 50ರಷ್ಟು ತಗ್ಗಲಿದೆ: ನಿತಿನ್​ ಗಡ್ಕರಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us