AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತೀಯ ಮಜ್ದೂರ್ ಸಂಘದ 70ನೇ ವರ್ಷದ ಕಾರ್ಯಕ್ರಮದಲ್ಲಿ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್ ಭಾಗಿ

ಭಾರತೀಯ ಮಜ್ದೂರ್ ಸಂಘ ಸ್ಥಾಪನೆಯಾಗಿ 70 ವರ್ಷಗಳಾಗಿವೆ. ಜುಲೈ 23ರಂದು ದೆಹಲಿಯಲ್ಲಿ ದೊಡ್ಡ ಕಾರ್ಯಕ್ರಮ ಆಯೋಜಿಸಲಾಗುವುದು. ಆರ್​ಎಸ್​ಎಸ್​ ಸರಸಂಘಚಾಲಕ್ ಮೋಹನ್ ಭಾಗವತ್ ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಲಿದ್ದಾರೆ. ಭಾರತೀಯ ಮಜ್ದೂರ್ ಸಂಘದ 70ನೇ ವಾರ್ಷಿಕೋತ್ಸವದ ಪ್ರಯುಕ್ತ ಜುಲೈ 23ರಂದು ದೆಹಲಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಸಮಾರಂಭ ಆಯೋಜಿಸಲಾಗಿದೆ.

ಭಾರತೀಯ ಮಜ್ದೂರ್ ಸಂಘದ 70ನೇ ವರ್ಷದ ಕಾರ್ಯಕ್ರಮದಲ್ಲಿ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್ ಭಾಗಿ
Rss Chief Mohan Bhagwat
ಸುಷ್ಮಾ ಚಕ್ರೆ
|

Updated on:Jul 21, 2025 | 10:17 PM

Share

ನವದೆಹಲಿ, ಜುಲೈ 21: ಭಾರತೀಯ ಮಜ್ದೂರ್ ಸಂಘ 70 ವರ್ಷಗಳು ಪೂರ್ಣಗೊಂಡ ಸಂದರ್ಭದ ಹಿನ್ನೆಲೆಯಲ್ಲಿ ಜುಲೈ 23ರಂದು ದೆಹಲಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್​​ಎಸ್​ಎಸ್​) ಸರಸಂಘಚಾಲಕ್ ಮೋಹನ್ ಭಾಗವತ್ (Mohan Bhagwat) ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮವು ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿರುವ ಕೆ.ಡಿ. ಯಾದವ್ ಕುಸ್ತಿ ಸಭಾಂಗಣದಲ್ಲಿ ನಡೆಯಲಿದೆ.

ಈ ಬಗ್ಗೆ ಭಾರತೀಯ ಮಜ್ದೂರ್ ಸಂಘದ ಅಖಿಲ ಭಾರತ ಅಧ್ಯಕ್ಷ ಹಿರಣ್ಮಯ್ ಪಾಂಡ್ಯ ಅವರು ದೆಹಲಿಯಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿಯನ್ನು ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಮೋಹನ್ ಭಾಗವತ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಾಂಡವಿಯಾ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಭಾರತೀಯ ಮಜ್ದೂರ್ ಸಂಘವನ್ನು ಜುಲೈ 23, 1955ರಂದು ಭೋಪಾಲ್‌ನಲ್ಲಿ ಸ್ಥಾಪಿಸಲಾಯಿತು ಎಂದಿದ್ದಾರೆ.

ಇದನ್ನೂ ಓದಿ: ಆರ್​​ಎಸ್​ಎಸ್​ ನಿಷೇಧಿಸ್ತೀವಿ ಎಂದ ಪ್ರಿಯಾಂಕ್ ಖರ್ಗೆ; ಸ್ವಯಂಸೇವಕ ಸಂಘ ಈ ಹಿಂದೆ ಎಷ್ಟು ಬಾರಿ ಬ್ಯಾನ್ ಆಗಿದೆ?

ಭಾರತೀಯ ಮಜ್ದೂರ್ ಸಂಘವು ವೇತನ, ಭತ್ಯೆ ಮತ್ತು ಬಡ್ತಿಗಳಿಗಾಗಿ ಮಾತ್ರ ಹೋರಾಡಿಲ್ಲ. ಮಜ್ದೂರ್ ಸಂಘವು ಕಾಲಕಾಲಕ್ಕೆ ಅನೇಕ ಸಾಮಾಜಿಕ ಜವಾಬ್ದಾರಿಗಳನ್ನು ಸಹ ಪೂರೈಸಿದೆ. ಭಾರತೀಯ ಮಜ್ದೂರ್ ಸಂಘವು ಈಗಾಗಲೇ 3 ವಿಷಯಗಳ ಮೇಲೆ ಕೆಲಸ ಮಾಡಲು ಪ್ರಾರಂಭಿಸಿದೆ. ಅವುಗಳೆಂದರೆ, ಪರ್ಯಾಯ, ಸಾಮಾಜಿಕ ಸಾಮರಸ್ಯ ಮತ್ತು ಸ್ವದೇಶಿ. ಭಾರತೀಯ ಮಜ್ದೂರ್ ಸಂಘದ ಸದಸ್ಯರಿಗೆ ಹಾಗೂ ಸಮಾಜಕ್ಕೆ ಉಪನ್ಯಾಸ ಸರಣಿಯನ್ನು ಆಯೋಜಿಸಲಾಗುವುದು. ಇದರ ಮೂಲಕ ವ್ಯಾಪಕ ಸಾರ್ವಜನಿಕ ಜಾಗೃತಿ ಮೂಡಿಸಲು ಪ್ರಯತ್ನಿಸಲಾಗುವುದು ಎಂದು ಪಾಂಡ್ಯ ಹೇಳಿದರು.

ಇದನ್ನೂ ಓದಿ: ಆರ್​​ಎಸ್​ಎಸ್ ಆಸ್ಪತ್ರೆ ಹಿಂದೂಗಳಿಗೆ ಮಾತ್ರವೇ? ರತನ್ ಟಾಟಾ ಕೇಳಿದ ಪ್ರಶ್ನೆಗೆ ನಿತಿನ್ ಗಡ್ಕರಿ ಉತ್ತರ ಹೀಗಿತ್ತು

ಜುಲೈ 23ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯ (ಭಾರತ) ನಿರ್ದೇಶಕ ವಿ.ವಿ. ಗಿರಿ, ರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಅಧಿಕಾರಿಗಳು, ಕಾರ್ಮಿಕ ಸಚಿವಾಲಯದ ಅಧಿಕಾರಿಗಳು, ಮುಖ್ಯ ಕಾರ್ಮಿಕ ಆಯುಕ್ತರ ಅಧಿಕಾರಿಗಳು, ಸಂಸತ್ ಸದಸ್ಯರು, ಇತರ ಕಾರ್ಮಿಕ ಸಂಘಗಳ ಹಿರಿಯ ನಾಯಕರು ಭಾಗವಹಿಸಲಿದ್ದಾರೆ ಎಂದು ಪಾಂಡ್ಯ ತಿಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಬಿ.ಎಂ. ಸಂಘದ ಹಿರಿಯ ಕಾರ್ಯಕರ್ತರು ಗೀತಾ ಗೋಖಲೆ, (ಮುಂಬೈ), ಹನ್ಸುಭಾಯ್ ದಾವೆ, (ರಾಜ್‌ಕೋಟ್), ಸ್ಯಾಮ್ ಬಲರೆಡ್ಡಿ, (ಹೈದರಾಬಾದ್), ವಸಂತ್ ಪಿಂಪ್ಲಾಪುರೆ, (ನಾಗ್ಪುರ), ಅಮರನಾಥ್ ಡೋಗ್ರಾ, (ದೆಹಲಿ), ಸರ್ದಾರ್ ಕರ್ತಾರ್ ಸಿಂಗ್ ರಾಥೋಡ್, (ಪಂಜಾಬ್), ಹಾಜಿ ಅಖ್ತರ್ ಹುಸೇನ್, (ಬುಲಂದ್‌ಶಹರ್, ಉತ್ತರ ಪ್ರದೇಶ), ಮಹೇಶ್ ಪಾಠಕ್, (ರೈಲ್ವೆ ದೆಹಲಿ) ಮತ್ತು ಇತರ ಹಿರಿಯ ಕಾರ್ಯಕರ್ತರನ್ನು ಸನ್ಮಾನಿಸಲಾಗುವುದು ಎಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 10:16 pm, Mon, 21 July 25