ದೌರ್ಜನ್ಯ ನಡೆಸುವವರನ್ನು ಕೊಲ್ಲುವುದು ಕೂಡ ಧರ್ಮ; ಪಹಲ್ಗಾಮ್ ದಾಳಿ ಕುರಿತು ಮೋಹನ್ ಭಾಗವತ್ ಪ್ರತಿಕ್ರಿಯೆ
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಇಂದು ದೆಹಲಿಯಲ್ಲಿ 'ದಿ ಹಿಂದೂ ಪ್ರಣಾಳಿಕೆ'ಯನ್ನು ಬಿಡುಗಡೆ ಮಾಡಿದ್ದಾರೆ. ಈ ವೇಳೆ ಅವರು ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ಬಗ್ಗೆಯೂ ಮಾತನಾಡಿದ್ದಾರೆ. 'ದೌರ್ಜನ್ಯ ಎಸಗುವವರಿಗೆ ಪಾಠ ಕಲಿಸುವುದು ನಮ್ಮ ಕರ್ತವ್ಯ. ಮೊದಲನೆಯದಾಗಿ ನಾವು ನಮ್ಮ ನೆರೆಹೊರೆಯವರಿಗೆ ಹಾನಿ ಮಾಡುವುದಿಲ್ಲ. ಇದಾದ ನಂತರವೂ ಯಾರಾದರೂ ತಪ್ಪು ಮಾರ್ಗವನ್ನು ಅಳವಡಿಸಿಕೊಂಡರೆ ರಾಜನು ತನ್ನ ಪ್ರಜೆಗಳನ್ನು ರಕ್ಷಿಸಬೇಕು' ಎಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ಮೋಹನ್ ಭಾಗವತ್ ಹೇಳಿದ್ದಾರೆ.

ನವದೆಹಲಿ, ಏಪ್ರಿಲ್ 26: ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ (Pahalgam Attack) ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ದೇಶದಲ್ಲಿ ಪಾಕಿಸ್ತಾನದ ವಿರುದ್ಧ ಆಕ್ರೋಶದ ವಾತಾವರಣವಿದೆ. ಭಯೋತ್ಪಾದನೆಗೆ ಸಂಬಂಧಿಸಿದಂತೆ ಭಾರತ ನೆರೆಯ ದೇಶದ ವಿರುದ್ಧ ಕ್ರಮ ಕೈಗೊಳ್ಳಲು ಪ್ರಾರಂಭಿಸಿದೆ. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕೂಡ ಈ ವಿಷಯದ ಬಗ್ಗೆ ಹೇಳಿಕೆ ನೀಡಿದ್ದಾರೆ. “ದೌರ್ಜನ್ಯ ಎಸಗುವವರಿಗೆ ಪಾಠ ಕಲಿಸುವುದು ನಮ್ಮ ಕರ್ತವ್ಯ. ರಾವಣನ ಸಂಹಾರ ಕೂಡ ಲೋಕ ಕಲ್ಯಾಣಕ್ಕಾಗಿ ಆಗಿತ್ತು. ದೇವರು ರಾವಣನನ್ನು ಕೊಂದನು. ಇದು ಹಿಂಸೆಯಲ್ಲ, ಅಹಿಂಸೆ. ಅಹಿಂಸೆ ನಮ್ಮ ಧರ್ಮ. ದೌರ್ಜನ್ಯ ಎಸಗುವವರಿಗೆ ಧರ್ಮವನ್ನು ಕಲಿಸುವುದು ಅಹಿಂಸೆ. ನಾವು ನಮ್ಮ ನೆರೆಹೊರೆಯವರಿಗೆ ಎಂದಿಗೂ ಹಾನಿ ಮಾಡುವುದಿಲ್ಲ. ಇದರ ನಂತರವೂ ಯಾರಾದರೂ ತಪ್ಪು ಮಾರ್ಗವನ್ನು ಅಳವಡಿಸಿಕೊಂಡರೆ ಜನರನ್ನು ರಕ್ಷಿಸುವುದು ರಾಜನ ಕರ್ತವ್ಯ. ರಾಜನು ತನ್ನ ಕೆಲಸವನ್ನು ಮಾಡುತ್ತಾನೆ” ಎಂದು ಅವರು ಹೇಳಿದ್ದಾರೆ.
ಇಂದು ದೆಹಲಿಯಲ್ಲಿ ‘ದಿ ಹಿಂದೂ ಪ್ರಣಾಳಿಕೆ’ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, “ಈ ದಾಳಿಯು ಧರ್ಮ ಮತ್ತು ಅಧರ್ಮದ ನಡುವಿನ ಹೋರಾಟ ಎಂಬುದನ್ನು ನೆನಪಿಸುತ್ತದೆ. ಜನರನ್ನು ಅವರ ಧರ್ಮದ ಬಗ್ಗೆ ಕೇಳಿ ನಂತರ ಅವರನ್ನು ಕೊಲ್ಲಲಾಯಿತು. ಹಿಂದೂಗಳು ಎಂದಿಗೂ ಹೀಗೆ ಮಾಡುವುದಿಲ್ಲ. ಇದು ನಮ್ಮ ಸ್ವಭಾವವಲ್ಲ. ದ್ವೇಷ ನಮ್ಮ ಸಂಸ್ಕೃತಿಯಲ್ಲಿಲ್ಲ, ಆದರೆ ನಮಗಾದ ತೊಂದರೆಯನ್ನು ಮೌನವಾಗಿ ಸಹಿಸಿಕೊಳ್ಳುವುದು ನಮ್ಮ ಸಂಸ್ಕೃತಿಯಲ್ಲಿಲ್ಲ. ನಮ್ಮ ಹೃದಯದಲ್ಲಿ ನೋವು ಇದೆ. ನಾವು ಕೋಪಗೊಂಡಿದ್ದೇವೆ. ದುಷ್ಟತನವನ್ನು ಕೊನೆಗೊಳಿಸಲು ನಾವು ನಮ್ಮ ಶಕ್ತಿಯನ್ನು ತೋರಿಸಬೇಕು” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅತೃಪ್ತಿ ವ್ಯಕ್ತಪಡಿಸಲು ಮೂಲಭೂತವಾದ ದಾರಿಯಲ್ಲ: ಹಿಂಸೆ, ಅತಿಕ್ರಮಣಗಳ ಬಗ್ಗೆ ಮೋಹನ್ ಭಾಗವತ್ ಖಡಕ್ ಮಾತು
“ರಾವಣನು ತನ್ನ ಮನಸ್ಸನ್ನು ಬದಲಾಯಿಸಿಕೊಳ್ಳಲು ನಿರಾಕರಿಸಿದ್ದರಿಂದ ಅವನನ್ನು ಸಹ ಕೊಲ್ಲಲಾಯಿತು. ಬೇರೆ ದಾರಿ ಇರಲಿಲ್ಲ. ರಾಮನು ರಾವಣನನ್ನು ಕೊಂದನು. ಆದರೆ ಅವನಿಗೆ ಸುಧಾರಣೆಗೆ ಅವಕಾಶವನ್ನು ನೀಡಲಾಯಿತು. ಅವನು ಸುಧಾರಿಸದಿದ್ದಾಗ ದೇವರೇ ಅವನನ್ನು ಕೊಂದನು” ಎಂದು ಮೋಹನ್ ಭಾಗವತ್ ಹೇಳಿದ್ದಾರೆ.
#WATCH | Delhi: RSS chief Mohan Bhagwat says, “…Non-violence is our nature, our value… But some people will not change, no matter what you do, they will keep troubling the world, so what to do about it? … Non-violence is our religion. Teaching a lesson to hooligans is also… pic.twitter.com/Kr9aRMBCy4
— ANI (@ANI) April 26, 2025
ರಾಜನ ಕರ್ತವ್ಯವೆಂದರೆ ತನ್ನ ಪ್ರಜೆಗಳನ್ನು ರಕ್ಷಿಸುವುದು ಮತ್ತು ದಬ್ಬಾಳಿಕೆ ಮಾಡುವವರನ್ನು ಕೊಲ್ಲುವುದು. ಅಹಿಂಸೆ ನಮ್ಮ ಮೂಲ ಸ್ವಭಾವ. ಆದರೆ ಕೆಲವು ಜನರು ಹಾಳಾಗಿರುತ್ತಾರೆ. ರಾವಣನಿಗೆ ಎಲ್ಲವೂ ಇತ್ತು. ಆದರೆ ಅವನ ಮನಸ್ಸು ಅಹಿಂಸೆಯ ವಿರುದ್ಧವಾಗಿತ್ತು. ಇದರಿಂದಾಗಿ ದೇವರು ಅವನನ್ನು ಕೊಂದನು. ಅದೇ ರೀತಿ, ಗೂಂಡಾಗಳಿಂದ ಹೊಡೆತಕ್ಕೆ ಒಳಗಾಗದಿರುವುದು ನಮ್ಮ ಕರ್ತವ್ಯ. ಅವರಿಗೆ ಪಾಠ ಕಲಿಸುವುದು ನಮ್ಮ ಕರ್ತವ್ಯ. ನಾವು ನಮ್ಮ ನೆರೆಹೊರೆಯವರಿಗೆ ಯಾವುದೇ ಹಾನಿ ಮಾಡುವುದಿಲ್ಲ. ಆದರೆ ಅವರು ತಮ್ಮ ಧರ್ಮವನ್ನು ಅನುಸರಿಸದಿದ್ದರ., ತನ್ನ ಪ್ರಜೆಗಳನ್ನು ರಕ್ಷಿಸುವುದು ರಾಜನ ಕರ್ತವ್ಯ ಎಂದಿದ್ದಾರೆ.
#WATCH | At an event in Delhi, a two-minute silence was observed by RSS chief Mohan Bhagwat and others to honour the innocent lives lost in the Pahalgam terror attack#PahalgamTerroristAttack pic.twitter.com/k9ZBqyzBXC
— ANI (@ANI) April 26, 2025
ಧರ್ಮ ಕೇವಲ ಆಚರಣೆಯಲ್ಲ:
‘ನಾವು ಧರ್ಮವನ್ನು ಕೇವಲ ಒಂದು ಆಚರಣೆ ಎಂದು ಪರಿಗಣಿಸಿದ್ದೇವೆ. ಧರ್ಮವು ಪೂಜಾ ಸ್ಥಳ ಮತ್ತು ಆಹಾರ ಪದ್ಧತಿಗೆ ಸಂಬಂಧಿಸಿತ್ತು. ಅಂದರೆ ಧರ್ಮವು ಪೂಜೆ ಮತ್ತು ಏನು ತಿನ್ನಬೇಕು ಎಂಬುದಕ್ಕೆ ಸೀಮಿತವಾಗಿದೆ ಎಂದು ಪರಿಗಣಿಸಲಾಗುತ್ತದೆ. ಪ್ರತಿಯೊಬ್ಬರ ಮಾರ್ಗವು ಅವರಿಗೆ ಸರಿಯಾಗಿಯೇ ಇರುತ್ತದೆ. ನನ್ನ ಮಾರ್ಗ ನನಗೆ ಸರಿಯಾಗಿದೆ. ಆದರೆ ನಾನು ಎಲ್ಲರ ಮಾರ್ಗವನ್ನು ಸಹ ಗೌರವಿಸುತ್ತೇನೆ. ನನ್ನದು ಚೆನ್ನಾಗಿದೆ, ಇತರರದು ಕೆಟ್ಟದು ಎಂದು ಹೇಳಬಾರದು. ಇಂದು ಹಿಂದೂ ಸಮಾಜವು ಹಿಂದೂ ಧರ್ಮವನ್ನು ಅರ್ಥಮಾಡಿಕೊಳ್ಳುವ ಅವಶ್ಯಕತೆಯಿದೆ.’ ಎಂದು ಮೋಹನ್ ಭಾಗವತ್ ಅಭಿಪ್ರಾಯಪಟ್ಟಿದ್ದಾರೆ.
VIDEO | During the unveiling of book ‘The Hindu Manifesto’, RSS chief Mohan Bhagwat (@DrMohanBhagwat) says, “This Hindu manifesto is for discussion, to achieve consensus. It is a proposal, it was made after a lot of study. On the basis of the study, this book was authored. You… pic.twitter.com/8JU0PO1S3K
— Press Trust of India (@PTI_News) April 26, 2025
ಇದನ್ನೂ ಓದಿ: ಪಹಲ್ಗಾಮ್ ದಾಳಿಯ ತಟಸ್ಥ ತನಿಖೆಗೆ ಸಿದ್ಧ; ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಭರವಸೆ
ದಿ ಹಿಂದೂ ಪ್ರಣಾಳಿಕೆ ಪುಸ್ತಕದಲ್ಲೇನಿದೆ?:
ಸ್ವಾಮಿ ವಿಜ್ಞಾನಾನಂದರ ಪುಸ್ತಕ ‘ದಿ ಹಿಂದೂ ಪ್ರಣಾಳಿಕೆ’ ಒಂದು ವಿಶಿಷ್ಟ ಧಾರ್ಮಿಕ ಗ್ರಂಥ ಮಾತ್ರವಲ್ಲ. “ಶತ್ರು ನಾಶವಾಗಬೇಕು”ನಿಂದ “ಜಾತಿ ಪಾಶ್ಚಿಮಾತ್ಯ ರಚನೆ”ವರೆಗೆ ಈ ಪುಸ್ತಕವು ಸಾಂಪ್ರದಾಯಿಕ ವಿಚಾರಗಳನ್ನು ಪ್ರಶ್ನಿಸುವ ಮತ್ತು ಪ್ರಾಚೀನ ಗ್ರಂಥದಲ್ಲಿ ಆಧಾರಿತವಾದ ದೃಢವಾದ ಹಿಂದೂ ವಿಶ್ವ ದೃಷ್ಟಿಕೋನವನ್ನು ಪ್ರಸ್ತಾಪಿಸುವ ದಿಟ್ಟ ಹೊಸ ನಿರೂಪಣೆಯನ್ನು ಹುಟ್ಟುಹಾಕುತ್ತದೆ. ವಿಎಚ್‌ಪಿಯ ಅಂತಾರಾಷ್ಟ್ರೀಯ ಸಮನ್ವಯ ವಿಭಾಗದ ಮುಖ್ಯಸ್ಥರಾಗಿರುವ ಮತ್ತು ಆರ್‌ಎಸ್‌ಎಸ್ ಜಂಟಿ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಹೊಂದಿರುವ ಐಐಟಿ ಪದವೀಧರರಾಗಿರುವ ಸ್ವಾಮಿ ವಿಜ್ಞಾನಾನಂದ ಹೊಸ ಭಾರತೀಯ ದೃಷ್ಟಿಕೋನವನ್ನು ನೀಡಲು ಪ್ರಾಚೀನ ಪಠ್ಯಗಳಿಂದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ‘ದಿ ಹಿಂದೂ ಪ್ರಣಾಳಿಕೆ’ ವೇದಗಳು, ರಾಮಾಯಣ, ಮಹಾಭಾರತ, ಅರ್ಥಶಾಸ್ತ್ರ ಮತ್ತು ಶುಕ್ರನಿತಿಸರದಂತಹ ಪ್ರಾಚೀನ ಹಿಂದೂ ಗ್ರಂಥಗಳ ಬುದ್ಧಿವಂತಿಕೆಯಲ್ಲಿ ಬೇರೂರಿರುವ ಧರ್ಮ-ಕೇಂದ್ರಿತ ಮಸೂರದ ಮೂಲಕ ರಾಷ್ಟ್ರೀಯ ಮತ್ತು ಜಾಗತಿಕ ಪರಿವರ್ತನೆಯ ದೃಷ್ಟಿಕೋನವನ್ನು ವಿವರಿಸುತ್ತದೆ.
ನಾಗರಿಕತೆಯ ಪುನರುತ್ಥಾನಕ್ಕೆ ನೀಲನಕ್ಷೆಯಾಗಿ ವಿನ್ಯಾಸಗೊಳಿಸಲಾದ ಈ ಪುಸ್ತಕವು 8 ಮೂಲಭೂತ ಸೂತ್ರಗಳು ಅಥವಾ ಮಾರ್ಗದರ್ಶಿ ತತ್ವಗಳನ್ನು ವಿವರಿಸುತ್ತದೆ. ಅವುಗಳೆಂದರೆ, ಎಲ್ಲರಿಗೂ ಸಮೃದ್ಧಿ, ರಾಷ್ಟ್ರೀಯ ಭದ್ರತೆ, ಗುಣಮಟ್ಟದ ಶಿಕ್ಷಣ, ಜವಾಬ್ದಾರಿಯುತ ಪ್ರಜಾಪ್ರಭುತ್ವ, ಮಹಿಳೆಯರಿಗೆ ಗೌರವ, ಸಾಮಾಜಿಕ ಸಾಮರಸ್ಯ, ಪರಂಪರೆಗೆ ಗೌರವ ಮತ್ತು ಪ್ರಕೃತಿಯ ಪವಿತ್ರತೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ