ತುರ್ತು ಪರಿಸ್ಥಿತಿ ವೇಳೆ ಜೈಲುಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರ ಮೇಲೆ ಚಿತ್ರಹಿಂಸೆ, ಕನಿಷ್ಠ 100 ಸಾವು; ಸುನಿಲ್ ಅಂಬೇಕರ್
ಕಾಂಗ್ರೆಸ್ ಸರ್ಕಾರವು ತುರ್ತು ಪರಿಸ್ಥಿತಿ ಹೇರಿದ್ದು,ಆ ಅವಧಿ ಭಾರತದ ಪ್ರಜಾಪ್ರಭುತ್ವ ಸಂಪ್ರದಾಯಗಳ ಮೇಲೆ “ಕಪ್ಪು ಚುಕ್ಕೆ” ಎಂದು ಸುನಿಲ್ ಅಂಬೇಕರ್ ಹೇಳಿದ್ದಾರೆ. ಭಾರತ ದೇಶದಲ್ಲಿ ಆ 21 ತಿಂಗಳ “ಸರ್ವಾಧಿಕಾರ”ವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ತುರ್ತು ಪರಿಸ್ಥಿತಿ ವೇಳೆ ಆರ್‌ಎಸ್‌ಎಸ್ ಕಾರ್ಯಕರ್ತರನ್ನು ಬಂಧಿಸಲಾಯಿತು, ಥಳಿಸಲಾಯಿತು ಮತ್ತು ಅವರಲ್ಲಿ ಹಲವರಿಗೆನು ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿ ಸರ್ಕಾರವನ್ನು ಬೆಂಬಲಿಸುವಂತೆ ಒತ್ತಾಯಿಸಲಾಯಿತು ಎಂದು ಅವರು ಹೇಳಿದ್ದಾರೆ.

ನವದೆಹಲಿ, ಜೂನ್ 24: ಮಾಜಿ ಪ್ರಧಾನಿ ಇಂದಿರಾ ಗಾಂಧಿ (Indira Gandhi) ಹೇರಿದ ತುರ್ತು ಪರಿಸ್ಥಿತಿಯ ಸಮಯದಲ್ಲಿ ಕೆಲವು ಪ್ರಮುಖ ಆರ್‌ಎಸ್‌ಎಸ್ ಪದಾಧಿಕಾರಿಗಳು ಸೇರಿದಂತೆ ಸಾವಿರಾರು ಆರ್‌ಎಸ್‌ಎಸ್ ಸ್ವಯಂಸೇವಕರನ್ನು ಜೈಲಿಗೆ ಹಾಕಲಾಯಿತು. ಅವರ ಮೇಲೆ ವಿವಿಧ ರೀತಿಯ ಚಿತ್ರಹಿಂಸೆ ನಡೆಸಲಾಯಿತು ಎಂದು ಆರ್‌ಎಸ್‌ಎಸ್‌ನ ಹಿರಿಯ ಪದಾಧಿಕಾರಿ ಸುನಿಲ್ ಅಂಬೇಕರ್ (Sunil Ambekar) ಹೇಳಿದ್ದಾರೆ. ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಕನಿಷ್ಠ 100 ಆರ್‌ಎಸ್‌ಎಸ್ ಕಾರ್ಯಕರ್ತರು ಸಾವನ್ನಪ್ಪಿದರು. ಅವರಲ್ಲಿ ಕೆಲವರು ಜೈಲಿನಲ್ಲಿ ಸಾವನ್ನಪ್ಪಿದರು ಮತ್ತು ಇತರರು ಹೊರಗೆ ಮೃತಪಟ್ಟರು. ನಮ್ಮ ಪಾಂಡುರಂಗ ಕ್ಷೀರಸಾಗರ್ ಜಿ (ಆಗ ಸಂಘದ ಅಖಿಲ ಭಾರತ ನಿರ್ವಹಣಾ ಸಮಿತಿಯ ಮುಖ್ಯಸ್ಥರು) ತೀವ್ರ ಚಿತ್ರಹಿಂಸೆಯಿಂದಾಗಿ ಜೈಲಿನಲ್ಲಿ ನಿಧನರಾದವರಲ್ಲಿ ಒಬ್ಬರು ಎಂದು ಆರ್‌ಎಸ್‌ಎಸ್‌ನ ರಾಷ್ಟ್ರೀಯ ಪ್ರಚಾರ ಮತ್ತು ಮಾಧ್ಯಮ ವಿಭಾಗದ ಮುಖ್ಯಸ್ಥ ಸುನಿಲ್ ಅಂಬೇಕರ್ ತಿಳಿಸಿದ್ದಾರೆ.
ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರ ಮೇಲೆ ನಡೆದ ದೌರ್ಜನ್ಯಗಳನ್ನು ಆರ್‌ಎಸ್‌ಎಸ್ ಪ್ರಚಾರ ಪ್ರಮುಖ್ ಸುನಿಲ್ ಅಂಬೇಕರ್ ಬಹಿರಂಗಪಡಿಸಿದ್ದಾರೆ. ಜೈಲುಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರನ್ನು ಹೇಗೆ ಹಿಂಸಿಸಲಾಯಿತು ಮತ್ತು ಸಂಘ ಪ್ರಮುಖ್ ಬಾಳಾಸಾಹೇಬ್ ದಿಯೋರಸ್ ಅವರನ್ನು ಹೇಗೆ ಬಂಧಿಸಲಾಯಿತು ಎಂಬುದನ್ನು ಅವರು ವಿವರಿಸಿದ್ದಾರೆ. ತುರ್ತು ಪರಿಸ್ಥಿತಿ ಹೇರಿದ ಸಮಯದಲ್ಲಿ ನಾವು ತುಂಬಾ ಚಿಕ್ಕವರಾಗಿದ್ದೆವು, ನಾವು ಸಂಘದ ಶಾಖೆಯಲ್ಲಿ ಆಟವಾಡುತ್ತಿದ್ದೆವು. ಆಗ ನಮ್ಮ ಶಾಲೆ ಮುಚ್ಚಲಾಗಿತ್ತು ಎಂದು ಅವರು ಹೇಳಿದ್ದಾರೆ. ಆ ಸಮಯದಲ್ಲಿ, ‘ತುರ್ತುಸ್ಥಿತಿ’ ಎಂದರೆ ಮಕ್ಕಳು ಆಟವಾಡುವುದನ್ನು ತಡೆಯುವ ಒಂದು ವಿಷಯ ಎಂದು ನಾವು ಭಾವಿಸುತ್ತಿದ್ದೆವು ಎಂದಿದ್ದಾರೆ.
VIDEO | RSS’s Akhil Bhartiya Prachar Pramukh Sunil Ambekar says, “During the Emergency, I was very young… we used to play in a Shakha (RSS branch), but our school was closed. At that time, we thought that ‘Emergency’ was something which prevents children from playing. We used… pic.twitter.com/PKZrDsdlZu
— Press Trust of India (@PTI_News) June 25, 2025
ಇದನ್ನೂ ಓದಿ: ನ್ಯೂಯಾರ್ಕ್ ಮೇಯರ್ ಆಗಿ ಆಯ್ಕೆಯಾದ ಭಾರತೀಯ ಮೂಲದ ಜೋಹ್ರಾನ್ ಮಮ್ದಾನಿ ಯಾರು?
ತುರ್ತು ಪರಿಸ್ಥಿತಿ ವೇಳೆ ಆರ್‌ಎಸ್‌ಎಸ್ ಕಾರ್ಯಕರ್ತರನ್ನು ಜೈಲಿಗೆ ಹಾಕಲಾಯಿತು ಮತ್ತು ತೀವ್ರವಾಗಿ ಹಿಂಸಿಸಲಾಯಿತು. ಕೆಲವರನ್ನು ತಲೆಕೆಳಗಾಗಿ ನೇತುಹಾಕಲಾಯಿತು, ಇತರರನ್ನು ಕೆಟ್ಟದಾಗಿ ಥಳಿಸಲಾಯಿತು. ತುರ್ತು ಪರಿಸ್ಥಿತಿಯನ್ನು ತೆಗೆದುಹಾಕಿದ ದಿನ ಸಾವಿರಾರು ಜನರು ನಾಗ್ಪುರ ಕಚೇರಿಗೆ ಆಗಮಿಸಿದ್ದರು. ಪ್ರಜಾಪ್ರಭುತ್ವಕ್ಕೆ ಇದ್ದ ಅಡಚಣೆ ಕೊನೆಗೊಂಡಿದೆ ಎಂದು ಎಲ್ಲರೂ ಸಂತೋಷಪಟ್ಟಿದ್ದರು ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:33 pm, Wed, 25 June 25