ಖಾರ ತಿಂದ ಮಗು ಅಸ್ವಸ್ಥ: ಎಫ್‌ಡಿಎ ಅಧಿಕಾರಿಗೆ ಬಲವಂತವಾಗಿ ಎಕ್ಸ್‌ಪೈರಿ ಬಿಸ್ಕತ್ತು ತಿನ್ನಿಸಲು ಯತ್ನಿಸಿದ ಜನ

ಛತ್ರಪತಿ ಸಂಭಾಜಿನಗರದಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳ ಮಾರಾಟದ ಲಂಚ ಪ್ರಕರಣದಲ್ಲಿ ಎಫ್‌ಡಿಎ ಅಧಿಕಾರಿಯೊಬ್ಬರನ್ನು ಸಾರ್ವಜನಿಕರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಅವಧಿ ಮೀರಿದ ಬಿಸ್ಕತ್ತುಗಳನ್ನು ತಿನ್ನಿಸಲು ಪ್ರಯತ್ನಿಸಿದ ವಿಡಿಯೋ ವೈರಲ್ ಆಗಿದೆ. ಮಗುವಿಗೆ ಕಳಪೆ ಸ್ನ್ಯಾಕ್ಸ್ ತಿನ್ನಿಸಿದ ನಂತರ ಪೋಷಕರು ದೂರು ನೀಡಿದ್ದರು. ಅಧಿಕಾರಿ ಲಂಚ ಪಡೆದು ಕ್ರಮ ಕೈಗೊಳ್ಳಲು ವಿಫಲರಾದ ಆರೋಪದ ಮೇಲೆ ಜನ ಆಕ್ರೋಶಗೊಂಡರು. ಆಹಾರ ಸುರಕ್ಷತೆ ಕುರಿತು ಮಹಾರಾಷ್ಟ್ರದಾದ್ಯಂತ ಕಾರ್ಯಾಚರಣೆ ತೀವ್ರಗೊಂಡಿರುವ ನಡುವೆಯೇ ಈ ಘಟನೆ ನಡೆದಿದೆ.

ಖಾರ ತಿಂದ ಮಗು ಅಸ್ವಸ್ಥ: ಎಫ್‌ಡಿಎ ಅಧಿಕಾರಿಗೆ ಬಲವಂತವಾಗಿ ಎಕ್ಸ್‌ಪೈರಿ ಬಿಸ್ಕತ್ತು ತಿನ್ನಿಸಲು ಯತ್ನಿಸಿದ ಜನ
ಲಂಚ ಪಡೆದ ಅಧಿಕಾರಿಗಳಿಗೆ ಜನರ ಆಕ್ರೋಶ
Image Credit source: Google

Updated on: Aug 29, 2026 | 10:51 AM

ಸಂಭಾಜಿನಗರ, ಆ.29: ಎಕ್ಸ್‌ಪೈರಿ (ಅವಧಿ ಮುಗಿದ) ದಿನಾಂಕದ ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿ ವಿರುದ್ಧ ಕ್ರಮ ಕೈಗೊಳ್ಳದೆ, ಲಂಚ ಪಡೆದು ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಆರೋಪದ ಮೇಲೆ ಆಹಾರ ಮತ್ತು ಔಷಧ ಆಡಳಿತ (FDA) ಅಧಿಕಾರಿಯೊಬ್ಬರನ್ನು ಸಾರ್ವಜನಿಕರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿ ನಡೆದಿದೆ.

ರೊಚ್ಚಿಗೆದ್ದ ಜ‌ನ ಅಧಿಕಾರಿಯನ್ನು ಸುತ್ತುವರೆದು, “ಅವಧಿ ಮುಗಿದ ಈ ಬಿಸ್ಕತ್ತುಗಳನ್ನು ನೀವೇ ತಿನ್ನಿ” ಎಂದು ಕೂಗಾಡುತ್ತಾ ಅವರ ಬಾಯಿಗೆ ಬಲವಂತವಾಗಿ ಬಿಸ್ಕತ್ತು ತುರುಕಲು ಯತ್ನಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ರೊಚ್ಚಿಗೆದ್ದ ಜ‌ನ ಅಧಿಕಾರಿಯನ್ನು ಸುತ್ತುವರೆದು, “ಅವಧಿ ಮುಗಿದ ಈ ಬಿಸ್ಕತ್ತುಗಳನ್ನು ನೀವೇ ತಿನ್ನಿ” ಎಂದು ಕೂಗಾಡುತ್ತಾ ಅವರ ಬಾಯಿಗೆ ಬಲವಂತವಾಗಿ ಬಿಸ್ಕತ್ತು ತುರುಕಲು ಯತ್ನಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇಲ್ಲಿದೆ ನೋಡಿ ವಿಡಿಯೋ:

ಈ ಘಟನೆಯಿಂದ ಕೆರಳಿದ ಮಗುವಿನ ಪೋಷಕರು ಹಾಗೂ ಗ್ರಾಮಸ್ಥರು ಛತ್ರಪತಿ ಸಂಭಾಜಿನಗರದ ಎಫ್‌ಡಿಎ ಕಚೇರಿಗೆ ದೂರು ನೀಡಿದ್ದರು. ದೂರಿನನ್ವಯ ಪರಿಶೀಲನೆಗೆ ಆಗಮಿಸಿದ ಎಫ್‌ಡಿಎ ಅಧಿಕಾರಿ ಬರುವಷ್ಟರಲ್ಲಿ, ಮಗು ತಿಂದಿದ್ದ ಕಳಪೆ ಸ್ನ್ಯಾಕ್ಸ್ ಪ್ಯಾಕೇಟ್‌ಗಳನ್ನು ಅಂಗಡಿಯಿಂದ ತೆರವುಗೊಳಿಸಲಾಗಿತ್ತು. ಅಧಿಕಾರಿ ಅಂಗಡಿಯಲ್ಲಿ ತಪಾಸಣೆ ನಡೆಸಿದಾಗ ಹಲವು ಎಕ್ಸ್‌ಪೈರಿ ದಿನಾಂಕ ಮುಗಿದ ಬಿಸ್ಕತ್ತು ಪ್ಯಾಕೇಟ್‌ಗಳು ಪತ್ತೆಯಾಗಿದ್ದವು. ಆದರೆ, ಜಪ್ತಿ ಮಾಡಿದ ನಂತರವೂ ಅಧಿಕಾರಿ ಅಂಗಡಿ ಮಾಲೀಕನ ವಿರುದ್ಧ ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿಲ್ಲ.

ಇದನ್ನೂ ಓದಿ: ಔಷಧ ಗುಣಮಟ್ಟ ಪರೀಕ್ಷೆಯಲ್ಲಿ ಬಯಲಾಯ್ತು ಸತ್ಯ; ರಾಜ್ಯದಲ್ಲಿ 300ಕ್ಕೂ ಹೆಚ್ಚು ಮೆಡಿಸಿನ್‌ ಬ್ಯಾಚ್‌ಗಳು ಕಳಪೆ!

ಅಂಗಡಿ ಮಾಲೀಕನಿಂದ ಲಂಚ ಪಡೆದು ಅಧಿಕಾರಿ ಪ್ರಕರಣವನ್ನು ಇತ್ಯರ್ಥಪಡಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ಸ್ಥಳೀಯರು, ಅಧಿಕಾರಿಯನ್ನು ತಡೆದು ನಿಲ್ಲಿಸಿ ತೀವ್ರ ತರಾಟೆಗೆ ತೆಗೆದುಕೊಂಡರು. ಬಿಸ್ಕತ್ತು ಸುರಕ್ಷಿತವಾಗಿದ್ದರೆ ನೀವೇ ತಿನ್ನಿ ಎಂದು ಸವಾಲು ಹಾಕಿ, ಬಲವಂತವಾಗಿ ಅವರ ಬಾಯಿಗೆ ತುರುಕಲು ಯತ್ನಿಸಿದರು. ಮಹಾರಾಷ್ಟ್ರ ಎಫ್‌ಡಿಎ ರಾಜ್ಯಾದ್ಯಂತ ಆಹಾರ ಕಲಬೆರಕೆ ಹಾಗೂ ಅವಧಿ ಮುಗಿದ ಉತ್ಪನ್ನಗಳ ಮಾರಾಟದ ವಿರುದ್ಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ನಡುವೆಯೇ ಈ ಹೈಡ್ರಾಮಾ ನಡೆದಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us