AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಔಷಧ ಗುಣಮಟ್ಟ ಪರೀಕ್ಷೆಯಲ್ಲಿ ಬಯಲಾಯ್ತು ಸತ್ಯ; ರಾಜ್ಯದಲ್ಲಿ 300ಕ್ಕೂ ಹೆಚ್ಚು ಮೆಡಿಸಿನ್‌ ಬ್ಯಾಚ್‌ಗಳು ಕಳಪೆ!

ಕರ್ನಾಟಕದಲ್ಲಿ ಕಳೆದ ಐದು ವರ್ಷಗಳಲ್ಲಿ ನಡೆಸಿದ ತಪಾಸಣೆಯಲ್ಲಿ ಪ್ಯಾರಾಸಿಟಮಾಲ್ ಹಾಗೂ ಐವಿ ಫ್ಲೂಯಿಡ್ಸ್ ಸೇರಿದಂತೆ 300ಕ್ಕೂ ಹೆಚ್ಚು ಬ್ಯಾಚ್‌ಗಳ ಔಷಧಗಳು ಕಳಪೆ ಗುಣಮಟ್ಟದ್ದೆಂದು ತಿಳಿದುಬಂದಿದೆ. ರಾಜ್ಯ ವೈದ್ಯಕೀಯ ಸರಬರಾಜು ನಿಗಮದ ಈ ವರದಿ, ಕಪ್ಪುಪಟ್ಟಿಗೆ ಸೇರಿಸಲಾದ ಕಂಪನಿಗಳು ಹಾಗೂ ಸರ್ಕಾರ ಕೈಗೊಂಡಿರುವ ತಕ್ಷಣದ ಕ್ರಮಗಳ ಮಾಹಿತಿ ಇಲ್ಲಿದೆ.

ಔಷಧ ಗುಣಮಟ್ಟ ಪರೀಕ್ಷೆಯಲ್ಲಿ ಬಯಲಾಯ್ತು ಸತ್ಯ; ರಾಜ್ಯದಲ್ಲಿ 300ಕ್ಕೂ ಹೆಚ್ಚು ಮೆಡಿಸಿನ್‌ ಬ್ಯಾಚ್‌ಗಳು ಕಳಪೆ!
ಸಾಂದರ್ಭಿಕ ಚಿತ್ರImage Credit source: gettyimages.com
ಭಾವನಾ ಹೆಗಡೆ
|

Updated on: Aug 29, 2026 | 9:03 AM

Share

ಮುಖ್ಯಾಂಶಗಳು

  • ಕರ್ನಾಟಕದಲ್ಲಿ ಐದು ವರ್ಷಗಳಲ್ಲಿ ಮುಕ್ಕಾಲು ನೂರು ಬ್ಯಾಚ್ ಔಷಧಗಳು ಕಳಪೆಯೆಂದು ಪತ್ತೆಯಾಗಿವೆ.
  • ಪ್ಯಾರಾಸಿಟಮಾಲ್ ಮತ್ತು ಐವಿ ಫ್ಲೂಯಿಡ್ಸ್ ಸೇರಿದಂತೆ ವಿವಿಧ ಪ್ರಮುಖ ಮಾತ್ರೆಗಳು ಅಸಲಿ ಇಲ್ಲ.
  • ಕಳಪೆ ಔಷಧ ಪೂರೈಸಿದ ಐದು ಕಂಪನಿಗಳನ್ನು ಈಗಾಗಲೇ ಕಪ್ಪುಪಟ್ಟಿಗೆ ಸೇರಿಸಿ ಸರ್ಕಾರ ಕ್ರಮ ಕೈಗೊಂಡಿದೆ.

ಬೆಂಗಳೂರು, ಆಗಸ್ಟ್ 29: ಸಾರ್ವಜನಿಕರ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಔಷಧಗಳ ಗುಣಮಟ್ಟದ ಕುರಿತು ಆತಂಕಕಾರಿ ವರದಿಯೊಂದು ಹೊರಬಿದ್ದಿದೆ. ಕರ್ನಾಟಕದಲ್ಲಿ ಕಳೆದ ಐದು ವರ್ಷಗಳ ಅವಧಿಯಲ್ಲಿ ನಡೆಸಲಾದ ತಪಾಸಣೆ ವೇಳೆ ಜ್ವರದ ಸಾಮಾನ್ಯ ಮಾತ್ರೆ ಪ್ಯಾರಾಸಿಟಮಾಲ್‌ನಿಂದ ಹಿಡಿದು ಜೀವರಕ್ಷಕ ಐವಿ ಫ್ಲೂಯಿಡ್‌ಗಳವರೆಗೆ ಒಟ್ಟು 301 ಔಷಧ ಬ್ಯಾಚ್‌ಗಳು ನಿಗದಿತ ಗುಣಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾಗಿವೆ.

19.2 ಕೋಟಿ ರೂ ಮೌಲ್ಯದ ಔಷಧಗಳು ಗುಣಮಟ್ಟ ಕಳಪೆ!

ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ (KSMSCL) ಮೂಲಕ ಖರೀದಿಸಲಾದ ವಿವಿಧ ಮಾದರಿಯ 98 ಪ್ರಕಾರದ ಔಷಧಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಅವು ‘ಮಾನದಂಡಕ್ಕೆ ತಕ್ಕಂತಿಲ್ಲ’ (NSQ) ಎಂಬುದು ಧೃಡಪಟ್ಟಿದೆ. ಈ ಪಟ್ಟಿಯಲ್ಲಿ ಪ್ರತಿದಿನ ಬಳಸುವ ಇಬುಪ್ರೊಫೇನ್, ಆಂಟಿಬಯೋಟಿಕ್ಸ್, ಐರನ್ ಮಾತ್ರೆಗಳು ಹಾಗೂ ಕಾಂಪ್ಲೆಕ್ಸ್ ಇಂಜೆಕ್ಷನ್‌ಗಳು ಸೇರಿವೆ. 2021-22 ರಲ್ಲಿ ಗರಿಷ್ಠ 9 ಕೋಟಿ ರೂ. ಮೌಲ್ಯದ 77 ಬ್ಯಾಚ್‌ಗಳು ಕಳಪೆ ಎಂದು ಕಂಡುಬಂದಿದ್ದವು. 2024-25 ರಲ್ಲಿ ಹಠಾತ್ ಏರಿಕೆ ಕಂಡುಬಂದಿದ್ದು, 5.2 ಕೋಟಿ ರೂ. ಮೌಲ್ಯದ 146 ಬ್ಯಾಚ್‌ಗಳನ್ನು ಕಳಪೆ ಸಾಲಿಗೆ ಸೇರಿಸಲಾಗಿದೆ.

ಕಠಿಣ ಕ್ರಮಕ್ಕೆ ಮುಂದಾದ ಸರ್ಕಾರ

ಈ ಕುರಿತು ಮಾಹಿತಿ ನೀಡಿರುವ ಆರೋಗ್ಯ ಸಚಿವರು, ಕಳಪೆ ಔಷಧ ಪೂರೈಸಿದ ಕನಿಷ್ಠ 5 ಕಂಪನಿಗಳನ್ನು ಈಗಾಗಲೇ ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂದು ತಿಳಿಸಿದ್ದಾರೆ. ನಿಗದಿತ ಗುಣಮಟ್ಟ ಹೊಂದಿಲ್ಲದ ಔಷಧ ಬ್ಯಾಚ್‌ಗಳನ್ನು ಪತ್ತೆಹಚ್ಚಿದ ತಕ್ಷಣವೇ ಅವುಗಳ ಸರಬರಾಜನ್ನು ಸ್ಥಗಿತಗೊಳಿಸಿ, ಸರಬರಾಜುದಾರರಿಗೆ 10 ದಿನಗಳ ಒಳಗೆ ಉತ್ತಮ ಗುಣಮಟ್ಟದ ಹೊಸ ಸ್ಟಾಕ್ ನೀಡುವಂತೆ ಸೂಚನೆ ನೀಡಲಾಗುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಲ್ಲಿಕ್ ಮಾಡಿ 

Follow Us
ಶನಿ ಭಗವಾನರ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
ಶನಿ ಭಗವಾನರ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
ನೆರೆಯಿಂದ ಸುತ್ತುವರೆದ ಮನೆಯಲ್ಲಿ ಸಹಾಯಕ್ಕೆ ಕಾದಿರುವ ನೇಪಾಳದ ಜನರು
ನೆರೆಯಿಂದ ಸುತ್ತುವರೆದ ಮನೆಯಲ್ಲಿ ಸಹಾಯಕ್ಕೆ ಕಾದಿರುವ ನೇಪಾಳದ ಜನರು
ಕರ್ನಾಟಕ ಪೊಲೀಸರ ಭದ್ರತಾ ಸಾಮರ್ಥ್ಯ ಹೆಚ್ಚಿಸಲು ಬಿಗ್ ಪ್ಲಾನ್
ಕರ್ನಾಟಕ ಪೊಲೀಸರ ಭದ್ರತಾ ಸಾಮರ್ಥ್ಯ ಹೆಚ್ಚಿಸಲು ಬಿಗ್ ಪ್ಲಾನ್
ಸಿಎಂಗೆ ರಾಜೀನಾಮೆ ಪತ್ರ ಸಲ್ಲಿಸಿದ ನಾಗೇಂದ್ರ: ಮನಸಿಗೆ ನೋವಾಗಿದೆ; ಡಿಕೆಶಿ
ಸಿಎಂಗೆ ರಾಜೀನಾಮೆ ಪತ್ರ ಸಲ್ಲಿಸಿದ ನಾಗೇಂದ್ರ: ಮನಸಿಗೆ ನೋವಾಗಿದೆ; ಡಿಕೆಶಿ
ಸೈನಿಕರಿಗೆ ರಾಖಿ ಕಟ್ಟಿದ ಕಾಶ್ಮೀರಿ ಮುಸ್ಲಿಂ ಯುವತಿಯರು; ವಿಡಿಯೋ ವೈರಲ್
ಸೈನಿಕರಿಗೆ ರಾಖಿ ಕಟ್ಟಿದ ಕಾಶ್ಮೀರಿ ಮುಸ್ಲಿಂ ಯುವತಿಯರು; ವಿಡಿಯೋ ವೈರಲ್
ನೇಪಾಳದಿಂದ ರಕ್ಷಿಸಲ್ಪಟ್ಟ 21 ಯಾತ್ರಿಕರನ್ನು ಸ್ವಾಗತಿಸಿದ ಸಚಿವ ಜೈಶಂಕರ್
ನೇಪಾಳದಿಂದ ರಕ್ಷಿಸಲ್ಪಟ್ಟ 21 ಯಾತ್ರಿಕರನ್ನು ಸ್ವಾಗತಿಸಿದ ಸಚಿವ ಜೈಶಂಕರ್
ಮಂಡ್ಯದಲ್ಲಿ ಭಿಕ್ಷುಕರ ಬಳಿ ಕಂತೆ ಕಂತೆ ಹಣ ಪತ್ತೆ
ಮಂಡ್ಯದಲ್ಲಿ ಭಿಕ್ಷುಕರ ಬಳಿ ಕಂತೆ ಕಂತೆ ಹಣ ಪತ್ತೆ
ಅರಮನೆ ಪ್ರವೇಶಿಸುತ್ತಿದ್ದಂತೆ ಜನರನ್ನ ಕಂಡು ಗಾಬರಿಗೊಂಡ ಶ್ರೀರಾಮ ಆನೆ
ಅರಮನೆ ಪ್ರವೇಶಿಸುತ್ತಿದ್ದಂತೆ ಜನರನ್ನ ಕಂಡು ಗಾಬರಿಗೊಂಡ ಶ್ರೀರಾಮ ಆನೆ
ಬಿಗ್​​ಬಾಸ್ ಅಗ್ನಿಪರೀಕ್ಷೆ: ಗೋಲ್ಡನ್ ಟಿಕೆಟ್ ಪಡೆಯಲು ಸ್ಪರ್ಧಿಗಳ ಹರಸಾಹಸ
ಬಿಗ್​​ಬಾಸ್ ಅಗ್ನಿಪರೀಕ್ಷೆ: ಗೋಲ್ಡನ್ ಟಿಕೆಟ್ ಪಡೆಯಲು ಸ್ಪರ್ಧಿಗಳ ಹರಸಾಹಸ
Live: ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ ಘೋಷಣೆ
Live: ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ ಘೋಷಣೆ