AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

TikTok Star Suicide: ಟಿಕ್​ಟಾಕ್​ ಸ್ಟಾರ್​ ಸಮೀರ್​ ಗಾಯಕ್​ವಾಡ್​​ ಆತ್ಮಹತ್ಯೆ, 21 ವರ್ಷದ ಯುವಕನ ಸಾವಿಗೆ ಕಾರಣವೇನು?

Sameer Gaikwad: ಸಾಮಾಜಿಕ ಜಾಲತಾಣಗಳಲ್ಲಿ (Social Media) ಸಕ್ರಿಯರಾಗಿದ್ದ ಸಮೀರ್​ ಗಾಯಕ್​ವಾಡ್​ ಅಪಾರ ಪ್ರಮಾಣದ ಅಭಿಮಾನಿಗಳನ್ನೂ ಗಳಿಸಿದ್ದರು. ಇದೀಗ ಅವರ ಸಾವು ಅಭಿಮಾನಿಗಳಿಗೆ ಆಘಾತ ಉಂಟುಮಾಡಿದೆ.

TikTok Star Suicide: ಟಿಕ್​ಟಾಕ್​ ಸ್ಟಾರ್​ ಸಮೀರ್​ ಗಾಯಕ್​ವಾಡ್​​ ಆತ್ಮಹತ್ಯೆ, 21 ವರ್ಷದ ಯುವಕನ ಸಾವಿಗೆ ಕಾರಣವೇನು?
ಸಮೀರ್​ ಗಾಯಕ್​ವಾಡ್​
Skanda
| Edited By: |

Updated on:Feb 22, 2021 | 11:20 AM

Share

ಮುಂಬೈ: ಟಿಕ್​ಟಾಕ್ (TikTok)​ ಮೂಲಕ ಪ್ರಸಿದ್ಧಿಯಾಗಿದ್ದ ಮಹಾರಾಷ್ಟ್ರ ಮೂಲದ 22 ವರ್ಷದ ಯುವಕ ಸಮೀರ್​ ಗಾಯಕ್​ವಾಡ್ (Sameer Gaikwad)​ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ (Social Media) ಸಕ್ರಿಯರಾಗಿದ್ದ ಸಮೀರ್​ ಗಾಯಕ್​ವಾಡ್​ ಅಪಾರ ಪ್ರಮಾಣದ ಅಭಿಮಾನಿಗಳನ್ನೂ ಗಳಿಸಿದ್ದರು. ಇದೀಗ ಅವರ ಸಾವು ಅಭಿಮಾನಿಗಳಿಗೆ ಆಘಾತ ಉಂಟುಮಾಡಿದ್ದು, ಹಲವು ಪ್ರಶ್ನೆಗಳನ್ನೂ ಹುಟ್ಟುಹಾಕಿದೆ. 

ಲೋನಿಕಂದ್ ಪೊಲೀಸರು ತಿಳಿಸಿರುವ ಪ್ರಕಾರ ಸಮೀರ್ ಆತ್ಮಹತ್ಯೆ ಕುರಿತಾಗಿ ಆತನ ಸ್ನೇಹಿತರು ಸೋದರ ಸಂಬಂಧಿ ಪ್ರಫುಲ್ಲ ಗಾಯಕ್​ವಾಡ್​ಗೆ ಮೊದಲು ವಿಷಯ ಮುಟ್ಟಿಸಿದ್ದಾರೆ. ತಕ್ಷಣ ಎಚ್ಚೆತ್ತ ಪ್ರಫುಲ್ಲ ಗಾಯಕ್​ವಾಡ್ ಪೊಲೀಸರಿಗೆ ಮಾಹಿತಿ ನೀಡಿ ವಾಘೋಲಿಯ ಕೇಸ್​ನಂದ್ ರಸ್ತೆಯಲ್ಲಿರುವ ಸಮೀರ್ ಅವರ ಫ್ಲಾಟ್​ಗೆ ಆಗಮಿಸಿದ್ದಾರೆ. ನಂತರ ತುರ್ತಾಗಿ ಸಮೀರ್​ ಅವರನ್ನು ಲೈಫ್​ಲೈನ್​ ಆಸ್ಪತ್ರೆಗೆ ಕರೆದೊಯ್ಯಯಲಾಯಿತಾದರೂ ಅಲ್ಲಿನ ವೈದ್ಯರು ಸಮೀರ್​ ಅದಾಗಲೇ ಸಾವಿಗೀಡಾಗಿರುವುದನ್ನು ದೃಢಪಡಿಸಿದ್ದಾರೆ.

ಸಮೀರ್​ ಗಾಯಕ್​ವಾಡ್​ ಅವರ ರೆಡ್​ಲೈಟ್​ ಡೈರೀಸ್​ ಎಂಬ ಬ್ಲಾಗ್​ ಸೀರಿಸ್​ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯುತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿದ್ದು, ಆತನ ಪ್ರತಿಭೆಯನ್ನು ಅನೇಕರು ಮೆಚ್ಚಿಕೊಂಡಿದ್ದರು. ಸಾವಿಗೆ ಒಂದು ದಿನ ಮುಂಚೆಯೂ ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಳೆಯ ವಿಡಿಯೋ ಒಂದನ್ನು ಅಪ್​ಲೋಡ್ ಮಾಡಿದ್ದ ಸಮೀರ್​, ಉತ್ತಮ ಪ್ರತಿಕ್ರಿಯೆ ಪಡೆದಿದ್ದರು. ಇನ್​ಸ್ಟಾಗ್ರಾಂನಲ್ಲಿ ಸುಮಾರು 2,73,090 ಜನ ಹಿಂಬಾಲಕರನ್ನು ಹೊಂದಿದ್ದ ಯುವಕ ಟಿಕ್​ಟಾಕ್ ಬ್ಯಾನ್ ನಂತರ ಇನ್​ಸ್ಟಾಗ್ರಾಂ ರೀಲ್ಸ್​ ಮೂಲಕ ಅಭಿಮಾನಿಗಳನ್ನು ತಲುಪುತ್ತಿದ್ದರು.

ಮರಾಠಿ ಭಾಷೆಯಲ್ಲಿ ಅನೇಕ ಅಭಿಮಾನಿಗಳನ್ನು ಹೊಂದಿದ್ದ ಈ ಯುವಕ ಹೀಗೆ ಆತ್ಮಹತ್ಯೆಗೆ ಶರಣಾಗಿರುವುದಕ್ಕೆ ಯಾವುದೇ ನಿಖರ ಮಾಹಿತಿಗಳು ಲಭ್ಯವಾಗಿಲ್ಲ. ಮೇಲ್ನೋಟಕ್ಕೆ ಇದು ಆತ್ಮಹತ್ಯೆಯಂತೆಯೇ ಕಂಡುಬರುತ್ತಿದ್ದು, ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಶೀಘ್ರವೇ ಆತನ ಕುಟುಂಬಸ್ಥರು ಮತ್ತು ಆಪ್ತರಿಂದ ಮಾಹಿತಿ ಕಲೆ ಹಾಕಲಾಗುವುದು ಎಂದು ಲೋನಿಕಂದ್ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: 18ನೇ ವಯಸ್ಸಿಗೆ ನೇಣಿಗೆ ಶರಣಾದ ಟಿಕ್‌ಟಾಕ್ ತಾರೆ ಡಜಾರಿಯಾ ಕ್ವಿಂಟ್, ಆತ್ಮಹತ್ಯೆಗೆ ಕಾರಣವೇನು?

Published On - 11:17 am, Mon, 22 February 21

ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ