Sathya Sai Baba Birth Anniversary: ಪುಟ್ಟಪರ್ತಿ ಸತ್ಯಸಾಯಿ ಬಾಬಾ ಆಶ್ರಮದಲ್ಲಿದೆ ಇಷ್ಟಾರ್ಥ ಈಡೇರಿಸುವ ವಿಶ್ಫುಲ್ ಫಿಲ್ಲಿಂಗ್ ಟ್ರಿ
ಅನಂತಪುರ ಜಿಲ್ಲೆಯ ಪುಟ್ಟಪರ್ತಿಯಲ್ಲಿರುವ ಪ್ರಶಾಂತಿ ನಿಲಯದಲ್ಲಿ ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರ 94ನೇ ಜನ್ಮ ದಿನೋತ್ಸವವನ್ನು ಆಚರಿಸಲಾಗುತ್ತಿದ್ದು. ಇದು ಅವರ ಮರಣದ ನಂತರ 12ನೇ ವರ್ಷದ ಜನ್ಮದಿನವಾಗಿದೆ.
ಅಮರಾವತಿ: ಭಗವಾನ್ ಶ್ರೀ ಸತ್ಯಸಾಯಿ ಬಾಬಾ(Sathya Sai Baba Birth) ಅವರು 1926 ನವೆಂಬರ್ 23 ರಂದು ಜನಿಸಿದರು. ಸ್ವತಃ ತಾವೇ ಶಿರಡಿ ಸಾಯಿಬಾಬಾ(Shirdi Sai Baba) ಅವರ ಪುನರ್ಜನ್ಮ ಎಂದು ಹೇಳಿಕೊಂಡಿದ್ದರು. 2011 ಏಪ್ರಿಲ್ 24 ರಂದು ಸ್ವರ್ಗಸ್ಥರಾದರು. ಸತ್ಯಸಾಯಿ ಜಯಂತಿಯನ್ನು ಪುಟ್ಟಪರ್ತಿಯಲ್ಲಿ(Puttaparthi) ವೇಣುಗೋಪಾಲ ಸ್ವಾಮಿ ರಥೋತ್ಸವದೊಂದಿಗೆ ಏಳು ದಿನಗಳ ಕಾಲ ಆಚರಿಸಲಾಗುತ್ತದೆ.
ಇನ್ನು ಈ ಬಾರಿ ನವೆಂಬರ್ 18ರಂದು ರಥೋತ್ಸವ ನಡೆದಿದ್ದು, 19 ರಂದು ಗಿರಿಜನ ಅಭಿವೃದ್ಧಿ ಕಾರ್ಯಕ್ರಮದ ಜೊತೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಯೋಜಿಸಲಾಗಿದ್ದು, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮತ್ತು ತೆಲಂಗಾಣ ರಾಜ್ಯಪಾಲ ಡಾ ತಮಿಳಿಸೈ ಸೌಂದರರಾಜನ್ ಭಾಗವಹಿಸಿದ್ದರು. ಶ್ರೀ ಸತ್ಯಸಾಯಿಬಾಬಾ ಅವರ 94ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ನವೆಂಬರ್ 23 ರಂದು ಪ್ರಶಾಂತಿ ನಿಲಯಕ್ಕೆ ಭೇಟಿ ನೀಡಲಿದ್ದಾರೆ.
‘ಪ್ರಶಾಂತಿ ನಿಲಯಂ‘ ಎಂದು ಕರೆಯಲ್ಪಡುವ ಸತ್ಯಸಾಯಿ ಆಶ್ರಮವು ಸಾಯಿಬಾಬಾ ಅವರು ವಾಸಿಸುವ ಸ್ಥಳವಾಗಿದೆ. ಇದು 1950 ರಲ್ಲಿ ಉದ್ಘಾಟನೆ ಮಾಡಲಾಯಿತು. ಇನ್ನು ಈ ಆಶ್ರಮದಲ್ಲಿ ವರ್ಷಪೂರ್ತಿ ನಾನಾ ಧಾರ್ಮಿಕ ಚಟುವಟಿಕೆಗಳು ನಡೆಯುತ್ತಿರುತ್ತವೆ. ಈ ಆಶ್ರಮವು ಕಟ್ಟುನಿಟ್ಟಿನ ನಿಯಮಗಳನ್ನು ಹೊಂದಿದ್ದು, ಸಾವಿರಾರು ಜನರಿಗೆ ಆಶ್ರಯ ಕಲ್ಪಿಸಿದೆ.
ಇನ್ನು ಇಲ್ಲಿರುವ ಚೈತನ್ಯ ಜ್ಯೋತಿ ವಸ್ತು ಸಂಗ್ರಹಾಲಯದಲ್ಲಿ ಸತ್ಯ ಸಾಯಿಬಾಬ ಅವರ ಬಾಲ್ಯದ ದಿನಗಳಿಂದ ಅವರ ಕೊನೆಯ ದಿನಗಳವರೆಗಿನ ಜೀವನವನ್ನು ಚಿತ್ರಿಸಲಾಗಿದೆ. ಸೋಮವಾರ ಹೊರತುಪಡಿಸಿ ಉಳಿದ ಎಲ್ಲಾ ದಿನಗಳಲ್ಲಿ ಸಾರ್ವಜನಿಕರಿಗೆ ನೋಡಲು ಸಿಗುತ್ತದೆ. ಇನ್ನು ಆಶ್ರಮದ ಒಳಗೆ ವಿಶ್ಫುಲ್ ಫಿಲ್ಲಿಂಗ್ ಟ್ರಿ ಎಂದು ಕರೆಯಲ್ಪಡುವ ಹುಣಸೆ ಮರವಿದ್ದು, ಈ ಮರವು ಸಾಯಿಬಾಬ ಅವರ ಜೀವನದ ಪ್ರಮುಖ ಭಾಗವಾಗಿದೆ. ತಮ್ಮ ಇಷ್ಟಗಳು ಈಡೇರಲೆಂದು ಜನರು ಇಲ್ಲಿಗೆ ಭೇಟಿ ನೀಡುತ್ತಾರೆ.
ಇನ್ನಷ್ಟು ಮನರಂಜನಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:38 am, Wed, 23 November 22