ಪ್ರೇಯಸಿಯ ಗಂಡನ ಹತ್ಯೆ ಮಾಡಿದ್ದ ಸಾಹಿಲ್ ಮಂತ್ರವಾದಿಯೇ, ರಹಸ್ಯ ಕೋಣೆಯಲ್ಲಿ ಏನೇನಿತ್ತು?
ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದ ಸೌರಭ್ನ ಕೊಲೆ ಸಾಮಾನ್ಯ ಕೊಲೆಯಲ್ಲ. ಪ್ರೀತಿ, ವಂಚನೆ, ಮಾಟಮಂತ್ರ, ಕ್ರೌರ್ಯದ ಭಯಾನಕ ಮಿಶ್ರಣ. ಸೌರಭ್ ಒಬ್ಬ ಸರಳ ವ್ಯಕ್ತಿ, ತನ್ನ ಪತ್ನಿ ತನ್ನನ್ನು ಸಾವಿನ ದವಡೆಗೆ ತಳ್ಳಬಹುದು ಎಂದು ಎಂದೂ ಯೋಚಿಸಿರಲಿಲ್ಲ. ಆಕೆಗಾಗಿ ಕೆಲಸ, ಕುಟುಂಬದವರು ಎಲ್ಲರನ್ನೂ ಬಿಟ್ಟಿದ್ದ.

ಮೀರತ್, ಮಾರ್ಚ್ 20: ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದ ಸೌರಭ್ನ ಕೊಲೆ ಸಾಮಾನ್ಯ ಕೊಲೆಯಲ್ಲ. ಪ್ರೀತಿ, ವಂಚನೆ, ಮಾಟಮಂತ್ರ, ಕ್ರೌರ್ಯದ ಭಯಾನಕ ಮಿಶ್ರಣ. ಸೌರಭ್ ಒಬ್ಬ ಸರಳ ವ್ಯಕ್ತಿ, ತನ್ನ ಪತ್ನಿ ತನ್ನನ್ನು ಸಾವಿನ ದವಡೆಗೆ ತಳ್ಳಬಹುದು ಎಂದು ಎಂದೂ ಯೋಚಿಸಿರಲಿಲ್ಲ. ಆಕೆಗಾಗಿ ಕೆಲಸ, ಕುಟುಂಬದವರು ಎಲ್ಲರನ್ನೂ ಬಿಟ್ಟಿದ್ದ.
ಈ ಪ್ರಕರಣದ ಅತ್ಯಂತ ಭಯಾನಕ ಅಂಶವೆಂದರೆ ಆರೋಪಿ ಸಾಹಿಲ್ ಮನೆ. ಸಾಹಿಲ್ ಸೌರಭ್ ಪತ್ನಿಯ ಪ್ರಿಯಕರ, ಆತನ ಮನೆಯ ಕೋಣೆಯನ್ನು ನೋಡಿದರೆ ಆತ ಮಂತ್ರವಾದಿಯೇ ಎನ್ನುವ ಪ್ರಶ್ನೆ ಕಾಡುತ್ತದೆ. ಕೆಂಪು ಮತ್ತು ಕಪ್ಪು ಬಣ್ಣದಲ್ಲಿ ಬಿಡಿಸಿದ ನಿಗೂಢ ತಾಂತ್ರಿಕ ಚಿಹ್ನೆಗಳನ್ನು ಕಾಣಬಹುದು. ಇಂಗ್ಲಿಷ್‌ನಲ್ಲಿ ಬರೆಯಲಾದ ಕೆಲವು ವಿಚಿತ್ರ ವಾಕ್ಯಗಳು ಅಲ್ಲಿವೆ, ಸಾಹಿಲ್ ಕೇವಲ ಕೊಲೆಗೆ ಸೀಮಿತವಾಗಿಲ್ಲ,
ಬದಲಾಗಿ ಮೂಢನಂಬಿಕೆ ಮತ್ತು ಮಾಟಮಂತ್ರದ ಬಗ್ಗೆಯೂ ಆತನ ಒಲವಿತ್ತು ಎನ್ನಲಾಗಿದೆ. ಇದು ಕೇವಲ ಹುಚ್ಚಾಟವೇ ಅಥವಾ ಇದರ ಹಿಂದೆ ಏನಾದರೂ ಆಳವಾದ, ಭಯಾನಕ ರಹಸ್ಯ ಅಡಗಿದೆಯೇ ಎಂದು ಪೊಲೀಸರು ಈಗ ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ.
ಮೀರತ್ ನ್ಯಾಯಾಲಯದ ಆವರಣದಲ್ಲಿ ಆರೋಪಿ ಮುಸ್ಕಾನ್ ಹಾಗೂ ಸಾಹಿಲ್ ಮೇಲೆ ವಕೀಲರು ಹಲ್ಲೆ ನಡೆಸಿದ್ದಾರೆ. ಜನಸಂದಣಿಯಿಂದ ರಕ್ಷಿಸಲು ಮತ್ತು ನ್ಯಾಯಾಲಯದ ಆವರಣದಿಂದ ಹೊರಗೆ ಕರೆದೊಯ್ಯಲು ಪೊಲೀಸರು ತುಂಬಾ ಕಷ್ಟಪಡಬೇಕಾಯಿತು.
ಮಾರ್ಚ್ 5 ರಿಂದ ಕಾಣೆಯಾಗಿದ್ದ ಸೌರಭ್ ಮಾರ್ಚ್ 18 ರಂದು ಶವವಾಗಿ ಪತ್ತೆ ಮೃತ ಸೌರಭ್ ಅವರ ಸಹೋದರ ಬಬ್ಲು ಎಂಬ ವ್ಯಕ್ತಿ ತನ್ನ ಸಹೋದರ ಮಾರ್ಚ್ 5 ರಿಂದ ಕಾಣೆಯಾಗಿದ್ದಾನೆ ಎಂದು ದೂರು ನೀಡಿದ್ದರು. ತನ್ನ ಸಹೋದರನನ್ನು ತನ್ನ ಅತ್ತಿಗೆ ಮುಸ್ಕಾನ್ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಕೊಲೆ ಮಾಡಿದ್ದಾರೆ ಎಂದು ಬಬ್ಲು ಶಂಕಿಸಿದ್ದ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಮೃತ ಸೌರಭ್ ಲಂಡನ್‌ನ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.
ಕೊಲೆಯ ದಿನ ಸೌರಭ್ ಊಟ ಮಾಡುವ ಆಹಾರದಲ್ಲಿ ನಿದ್ರೆ ಮಾತ್ರೆ ಬೆರೆಸಿ ಪ್ರಜ್ಞೆ ತಪ್ಪಿಸಿದ್ದಳು.ಇದಾದ ನಂತರ ಆಕೆ ತನ್ನ ಪ್ರಿಯಕರ ಸಾಹಿಲ್ ನನ್ನು ಮನೆಗೆ ಕರೆಸಿಕೊಂಡಿದ್ದಳು. ಇಬ್ಬರೂ ಸೇರಿ ಮೊದಲು ಸೌರಭ್ ನ ಎದೆಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ, ಕತ್ತು ಸೀಳಿ ಕೊಲೆ ಮಾಡಿದ್ದಾಳೆ.
ಮತ್ತಷ್ಟು ಓದಿ: ಮಗಳನ್ನು ಗಲ್ಲಿಗೇರಿಸಿ ಎಂದು ಕಣ್ಣೀರಿಟ್ಟ, ಪತಿಯ ಕೊಂದು ತುಂಡರಿಸಿದ್ದ ಮಹಿಳೆಯ ಪೋಷಕರು
ಮರುದಿನ ಇಬ್ಬರೂ ಮಾರುಕಟ್ಟೆಯಿಂದ ಒಂದು ಪ್ಲಾಸ್ಟಿಕ್ ಡ್ರಮ್, ಖರೀದಿ ಮಾಡಿದರು ಅದರಲ್ಲಿ ಸಿಮೆಂಟ್ ಹಾಗೂ ದೇಹದ ಭಾಗಗಳನ್ನಿಟ್ಟು ಸೀಲ್ ಮಾಡಿದ್ದರು. ಕೊಲೆ ಮಾಡಿದ ನಂತರ, ಮುಸ್ಕಾನ್ ಮತ್ತು ಸಾಹಿಲ್ ಯಾವುದೇ ಚಿಂತೆಯಿಲ್ಲದೆ ಶಿಮ್ಲಾಕ್ಕೆ ಸುತ್ತಾಡಲು ಹೋದರು. ಮಾರ್ಚ್ 17 ರ ರಾತ್ರಿ ಅವರು ಹಿಂತಿರುಗುವ ಹೊತ್ತಿಗೆ, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದರು.
ವಿಚಾರಣೆಯಲ್ಲಿ, ಇಬ್ಬರೂ ಆರೋಪಿಗಳು ತಮ್ಮ ಅಪರಾಧವನ್ನು ಒಪ್ಪಿಕೊಂಡರು. ಅವರ ಮಾಹಿತಿಯ ಮೇರೆಗೆ ಪೊಲೀಸರು ಡ್ರಮ್‌ನಿಂದ ಶವವನ್ನು ವಶಪಡಿಸಿಕೊಂಡರು ಮತ್ತು ಘಟನೆಯಲ್ಲಿ ಬಳಸಿದ ಚಾಕು ಮತ್ತು ರೇಜರ್ ಅನ್ನು ಸಹ ವಶಪಡಿಸಿಕೊಂಡರು.
ಪೊಲೀಸರು ಮುಸ್ಕಾನ್ ಮತ್ತು ಸಾಹಿಲ್ ಅವರನ್ನು ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪ್ರಾರಂಭಿಸಿದ್ದಾರೆ. ಆಕೆಯ ಪೋಷಕರು ಕೂಡ ತಮ್ಮ ಮಗಳನ್ನು ಗಲ್ಲಿಗೇರಿಸಿ, ಆಕೆಗೆ ಬದುಕುವ ಅರ್ಹತೆ ಇಲ್ಲ ಎಂದಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:02 pm, Thu, 20 March 25