Video: ಕುಲಗಾಂವ್​​ನಲ್ಲಿ ಇಬ್ಬರು ಭಯೋತ್ಪಾದಕ ಹತ್ಯೆ; 60 ಮಂದಿಯನ್ನು ರಕ್ಷಿಸಿದ ಭದ್ರತಾ ಪಡೆ

ಎನ್​ಕೌಂಟರ್​ನಲ್ಲಿ ಹತ್ಯೆಯಾದ  ಇಬ್ಬರು ಉಗ್ರರಲ್ಲಿ ಒಬ್ಬಾತ ಹಿಜ್ಬುಲ್​ ಮುಜಾಹಿದ್ದೀನ್​ ಸಂಘಟನೆಯ ಕಮಾಂಡರ್​​ ಎಂದು ಗುರುತಿಸಲಾಗಿದೆ. ಆತನ ಹೆಸರಿನ್ನೂ ಗೊತ್ತಾಗಿಲ್ಲ.

Video: ಕುಲಗಾಂವ್​​ನಲ್ಲಿ ಇಬ್ಬರು ಭಯೋತ್ಪಾದಕ ಹತ್ಯೆ; 60 ಮಂದಿಯನ್ನು ರಕ್ಷಿಸಿದ ಭದ್ರತಾ ಪಡೆ
ಜನರನ್ನು ರಕ್ಷಣೆ ಮಾಡುತ್ತಿರುವ ಫೋಟೋ
Follow us
TV9 Web
| Updated By: Lakshmi Hegde

Updated on: Nov 20, 2021 | 7:11 PM

ಜಮ್ಮು-ಕಾಶ್ಮೀರದ  ಕುಲಗಾಂವ್​ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಎನ್​ಕೌಂಟರ್​ ನಡೆಯುತ್ತಿದೆ. ಇಲ್ಲಿಯವರೆಗೆ ರಕ್ಷಣಾ ಪಡೆಗಳು ಇಬ್ಬರು ಉಗ್ರರನ್ನು ಹತ್ಯೆಗೈದಿದ್ದು, ಸ್ಥಳದಲ್ಲಿ ಆತಂಕದ ವಾತಾವರಣವಿದೆ. ಈ ಮಧ್ಯೆ ಎನ್​ಕೌಂಟರ್​ ನಡೆಯುತ್ತಿರುವ ಸ್ಥಳದಿಂದ, ಶಾಲಾ ಮಕ್ಕಳೂ ಸೇರಿ ಸುಮಾರು 60 ಜನರನ್ನು ಭದ್ರತಾ ಪಡೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. 

ಅಂದಹಾಗೆ ಈ ಎನ್​ಕೌಂಟರ್​ನಲ್ಲಿ ಹತ್ಯೆಯಾದ  ಇಬ್ಬರು ಉಗ್ರರಲ್ಲಿ ಒಬ್ಬಾತ ಹಿಜ್ಬುಲ್​ ಮುಜಾಹಿದ್ದೀನ್​ ಸಂಘಟನೆಯ ಕಮಾಂಡರ್​​ ಎಂದು ಗುರುತಿಸಲಾಗಿದೆ.  ಕುಲಗಾಂವ್​​ನ ಅಶ್ಮುಂಜಿ ಎಂಬಲ್ಲಿ ಉಗ್ರರು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಆ ಪ್ರದೇಶವನ್ನು ಸುತ್ತುವರಿದಿದ್ದವು. ಸೈನಿಕರು ಪ್ರದೇಶವನ್ನು ಸುತ್ತುವರಿದು ಹುಡುಕಾಟ ನಡೆಸುತ್ತಿದ್ದಂತೆ ಅವರ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಲು ಶುರು ಮಾಡಿದರು. ಆಗ ಭದ್ರತಾ ಸಿಬ್ಬಂದಿಯೂ ಪ್ರತಿದಾಳಿ ನಡೆಸಲು ಶುರು ಮಾಡಿದರು ಎಂದು ಪೊಲೀಸ್​ ಮೂಲಗಳು ತಿಳಿಸಿವೆ. ಒಂದೆಡೆ ಎನ್​ಕೌಂಟರ್​ ಶುರುವಾಗಿತ್ತು..ಇನ್ನೊಂದೆಡೆ ಅಲ್ಲಿದ್ದ ನಾಗರಿಕರನ್ನು ರಕ್ಷಣೆ ಮಾಡುವ ಕಾರ್ಯವೂ ನಡೆದಿತ್ತು ಎಂದೂ ತಿಳಿಸಿದ್ದಾರೆ.   ಸ್ಥಳದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ.

ಇದನ್ನೂ ಓದಿ: ಅಲಿಬಾಬ ಸೇರಿ ವಿವಿಧ ಕಂಪೆನಿಗಳಿಗೆ ಚೀನಾದಲ್ಲಿ ವಿಶ್ವಾಸ ಧಕ್ಕೆ ಪ್ರಕರಣದಲ್ಲಿ ಹೊಸದಾಗಿ ಭಾರೀ ದಂಡ