ಶರದ್ ಪವಾರ್‌ಗೆ ಹಿನ್ನಡೆ; ಅಜಿತ್ ಪವಾರ್‌ಗೆ ನಾಗಾಲ್ಯಾಂಡ್‌ನ 7 ಎನ್‌ಸಿಪಿ ಶಾಸಕರ ಬೆಂಬಲ
ಈ ತಿಂಗಳ ಆರಂಭದಲ್ಲಿ, ಅಜಿತ್ ಪವಾರ್ ಮತ್ತು ಇತರ ಎಂಟು ಎನ್‌ಸಿಪಿ ಶಾಸಕರು ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಶಿವಸೇನಾ ಮತ್ತು ಬಿಜೆಪಿ ಮೈತ್ರಿ ಸರ್ಕಾರಕ್ಕೆ ಸೇರಿದರು. ಆ ಕ್ರಮವು ಶರದ್ ಪವಾರ್ ಸ್ಥಾಪಿಸಿದ ಪಕ್ಷವಾದ ಎನ್‌ಸಿಪಿಯನ್ನು ವಿಭಜನೆಗೆ ಕಾರಣವಾಯಿತು.
ದೆಹಲಿ ಜುಲೈ 20: ನಾಗಾಲ್ಯಾಂಡ್‌ನ (Nagaland) ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ಎಲ್ಲಾ ಏಳು ಶಾಸಕರು ಅಜಿತ್ ಪವಾರ್ (Ajit Pawar) ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದು, ಅವರ ಶರದ್ ಪವಾರ್‌ಗೆ(Sharad Pawar) ಭಾರಿ ಹಿನ್ನಡೆಯಾಗಿದೆ. ನಾಗಾಲ್ಯಾಂಡ್ ಎನ್‌ಸಿಪಿ ಕಚೇರಿಯಲ್ಲಿರುವ ಪಕ್ಷದ ಎಲ್ಲಾ ಕಾರ್ಯಕರ್ತರು ಅಜಿತ್ ಪವಾರ್ ಅವರನ್ನು ಬೆಂಬಲಿಸುತ್ತಾರೆ ಎಂದು ಅಲ್ಲಿನ ಶಾಸಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ, ಅಜಿತ್ ಪವಾರ್ ಮತ್ತು ಇತರ ಎಂಟು ಎನ್‌ಸಿಪಿ ಶಾಸಕರು ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಶಿವಸೇನಾ ಮತ್ತು ಬಿಜೆಪಿ ಮೈತ್ರಿ ಸರ್ಕಾರಕ್ಕೆ ಸೇರಿದರು. ಆ ಕ್ರಮವು ಶರದ್ ಪವಾರ್ ಸ್ಥಾಪಿಸಿದ ಪಕ್ಷವಾದ ಎನ್‌ಸಿಪಿಯನ್ನು ವಿಭಜನೆಗೆ ಕಾರಣವಾಯಿತು.
2019ರಲ್ಲಿ, ಶಿವಸೇನಾ- ಬಿಜೆಪಿಯೊಂದಿಗಿನ ಮೈತ್ರಿಯನ್ನು ಕೊನೆಗೊಳಿಸಿತು. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮತ್ತು ಎನ್‌ಸಿಪಿಯೊಂದಿಗೆ ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ರಚಿಸಿತ್ತು.
ಕಳೆದ ವರ್ಷ ಶಿಂಧೆ ಪಕ್ಷದಲ್ಲಿ ಬಂಡಾಯವೆದ್ದು ಹೊಸ ಸರ್ಕಾರ ರಚಿಸಲು ಬಿಜೆಪಿಯೊಂದಿಗೆ ಕೈಜೋಡಿಸಿದಾಗ ಸರ್ಕಾರ ಪತನಗೊಂಡಿತು. ರಿಯಲ್ ಎನ್ಸಿಪಿಯ ನಾಯಕತ್ವವನ್ನು ಪ್ರತಿಪಾದಿಸುತ್ತಾ, ಅಜಿತ್ ಪವಾರ್ ಪಕ್ಷದ ಹಿರಿಯ ನಾಯಕರಾದ ಪ್ರಫುಲ್ ಪಟೇಲ್, ಛಗನ್ ಭುಜಬಲ್ ಮತ್ತು ದಿಲೀಪ್ ವಾಲ್ಸೆ ಪಾಟೀಲ್ ಅವರ ಬೆಂಬಲವನ್ನು ಪಡೆದರು.
ಇದನ್ನೂ ಓದಿ: ಶರದ್ ಪವಾರ್ನ್ನು ಭೇಟಿಯಾದ ಅಜಿತ್ ಪವಾರ್, 24 ಗಂಟೆಗಳಲ್ಲಿ ಇದು ಎರಡನೇ ಸಭೆ
ಆದಾಗ್ಯೂ, ಶರದ್ ಪವಾರ್ ಅವರು “ನಿಜವಾದ ಎನ್‌ಸಿಪಿ” ಯ ನಾಯಕ ಎಂದು ತಮ್ಮ ಹಕ್ಕು ಪ್ರತಿಪಾದಿಸಿದ್ದಾರೆ. ಅದೇ ವೇಳೆ “ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ” ಹಲವಾರು ಹಿರಿಯ ನಾಯಕರನ್ನು ತೆಗೆದುಹಾಕಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ