Shocking News: ಅಳುತ್ತಿದ್ದ ಮೂರೂವರೆ ವರ್ಷದ ಮಗುವಿಗೆ ಕೋಪದಿಂದ ಬೆಂಕಿ ಹಚ್ಚಿದ ತಾಯಿ!
ಪತಿಯೊಂದಿಗೆ ವೈವಾಹಿಕ ಭಿನ್ನಾಭಿಪ್ರಾಯದಿಂದ ರೂಪಿಂದರ್ ಕೌರ್ ಖಿನ್ನತೆಗೆ ಒಳಗಾಗಿದ್ದರು. ರೂಪಿಂದರ್ ಮತ್ತು ಅವರ ಮಕ್ಕಳು ಕಳೆದ 2 ವರ್ಷಗಳಿಂದ ಪೋಷಕರೊಂದಿಗೆ ವಾಸಿಸುತ್ತಿದ್ದರು
ಲುಧಿಯಾನ: ವೈವಾಹಿಕ ಕಲಹದಿಂದ ಖಿನ್ನತೆಗೆ ಒಳಗಾಗಿದ್ದ ಮಹಿಳೆಯೊಬ್ಬರು ಜೋರಾಗಿ ಅಳುತ್ತಿದ್ದ ತನ್ನ ಮೂರೂವರೆ ವರ್ಷದ ಗಂಡು ಮಗುವಿಗೆ ಬೆಂಕಿ ಹಚ್ಚಿರುವ ಆಘಾತಕಾರಿ ಘಟನೆ (Shocking News) ಪಂಜಾಬ್‌ನ ಲುಧಿಯಾನ ಜಿಲ್ಲೆಯಲ್ಲಿ ನಡೆದಿದೆ. ಪಂಜಾಬ್‌ನ (Punjab) ಚುಡಾನಿ ಕಲಾನ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆ ಮಹಿಳೆಯ ಮಗುವಿನ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಆರೋಪಿ ಮಹಿಳೆ ಕಳೆದ 2 ವರ್ಷಗಳಿಂದ ತನ್ನ ತಾಯಿಯ ಮನೆಯಲ್ಲಿ ತನ್ನ ಮೂವರು ಮಕ್ಕಳೊಂದಿಗೆ ವಾಸಿಸುತ್ತಿದ್ದಳು. ಮಹಿಳೆ ಹಾಗೂ ಆಕೆಯ ಪತಿಯ ನಡುವೆ ಸಂಬಂಧ ಚೆನ್ನಾಗಿರಲಿಲ್ಲ. ಹೀಗಾಗಿ, ಆತನಿಂದ ದೂರವಿದ್ದಳು. ಇದೇ ಕಾರಣಕ್ಕೆ ಆಕೆ ಖಿನ್ನತೆಗೆ ಒಳಗಾಗಿದ್ದಳು ಎಂದು ಮೂಲಗಳು ತಿಳಿಸಿವೆ.
ತೀವ್ರ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಮಗುವನ್ನು ಚಂಡೀಗಢದ ಪಿಜಿಐಎಂಇಆರ್‌ಗೆ ದಾಖಲಿಸಲಾಗಿದೆ. ಶೇ. 60ರಷ್ಟು ಸುಟ್ಟ ಗಾಯಗಳ ನಂತರ ಮಗುವಿನ ಸ್ಥಿತಿ ಗಂಭೀರವಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ತನ್ನ ಮಗುವಿಗೆ ಬೆಂಕಿ ಹಚ್ಚಿದ ಮಹಿಳೆಯ ತಾಯಿ ಮಂಜಿತ್ ಕೌರ್ ನೀಡಿದ ದೂರಿನ ಮೇರೆಗೆ ಆರೋಪಿ ರೂಪಿಂದರ್ ಕೌರ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಇದನ್ನೂ ಓದಿ: ಲಕ್ನೋ ಹೋಟೆಲ್ ಬೆಂಕಿ ದುರಂತ; ಮದುವೆ ನಿಶ್ಚಯವಾಗಿದ್ದ ಜೋಡಿ ಸಾವಿನಲ್ಲಿ ಒಂದಾದರು!
“ಪತಿಯೊಂದಿಗೆ ವೈವಾಹಿಕ ಭಿನ್ನಾಭಿಪ್ರಾಯದಿಂದ ರೂಪಿಂದರ್ ಕೌರ್ ಖಿನ್ನತೆಗೆ ಒಳಗಾಗಿದ್ದರು. ರೂಪಿಂದರ್ ಮತ್ತು ಅವರ ಮಕ್ಕಳು ಕಳೆದ 2 ವರ್ಷಗಳಿಂದ ಪೋಷಕರೊಂದಿಗೆ ವಾಸಿಸುತ್ತಿದ್ದರು” ಎಂದು ಎಸಿಪಿ (ಪಾಯಲ್) ಹರ್ಸಿಮ್ರಾಂತ್ ಸಿಂಗ್ ತಿಳಿಸಿದ್ದಾರೆ.
ಸುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ಸಾವು-ನೋವಿನ ಮಧ್ಯೆ ಹೋರಾಡುತ್ತಿರುವ ಮಗುವನ್ನು ಹರ್ಮನ್ ಎಂದು ಗುರುತಿಸಲಾಗಿದೆ. ರೂಪಿಂದರ್ ಕೌರ್ ಅವರ ಮೂವರು ಮಕ್ಕಳಲ್ಲಿ ಈತ ಕೊನೆಯ ಮಗುವಾಗಿದ್ದ. ಅಮ್ಮ ಎಷ್ಟೇ ಸಮಾಧಾನ ಮಾಡಿದರೂ ಕೇಳದೆ ಹರ್ಮನ್ ಜೋರಾಗಿ ಅಳುತ್ತಿದ್ದ. ಆತನನ್ನು ಸಮಾಧಾನ ಮಾಡಲು ಸಾಧ್ಯವಾಗದೆ ಕೋಪದಿಂದ ರೂಪಿಂದರ್ ಕೌರ್ ಬೆಂಕಿ ಹಚ್ಚಿ ಸುಟ್ಟಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ತಕ್ಷಣ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:34 am, Wed, 7 September 22