ಅಯೋಧ್ಯೆ ರಾಮಮಂದಿರಕ್ಕೆ ನೀವು ಹೋಗಬೇಕಾ? ಅಲ್ಲಿ ಉಳಿದುಕೊಳ್ಳಲು ಟೆಂಟ್ ಸಿಟಿ ಉತ್ತಮ, ಇದರ ವಿಶೇಷತೆಗಳೇನು?

ಅಯೋಧ್ಯೆ ರಾಮಮಂದಿರ ಜನವರಿಯಲ್ಲಿ ಲೋಕರ್ಣಾಪಣೆಗೊಳ್ಳಿದೆ. ರಾಮಮಂದಿರಕ್ಕೆ ಸಾರ್ವಜನಿಕರು ಜನವರಿಂದ ಭೇಟಿ ನೀಡಬಹುದು ಎಂದು ಟ್ರಸ್ಟ್​​​ ಹೇಳಿದೆ. ನೀವು ಕೂಡ ಮಂದಿರಕ್ಕೆ ಭೇಟಿ ನೀಡಬೇಕು ಎಂದು ಬಯಸಿದ್ದೀರಾ? ಹಾಗದರೆ ಐಷಾರಾಮಿ 'ಟೆಂಟ್ ಸಿಟಿ' ಯಲ್ಲಿ ಉಳಿಯಲು ಆಯ್ಕೆ ಮಾಡಬಹುದು.

ಅಯೋಧ್ಯೆ ರಾಮಮಂದಿರಕ್ಕೆ ನೀವು ಹೋಗಬೇಕಾ? ಅಲ್ಲಿ ಉಳಿದುಕೊಳ್ಳಲು ಟೆಂಟ್ ಸಿಟಿ ಉತ್ತಮ, ಇದರ ವಿಶೇಷತೆಗಳೇನು?
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on: Oct 05, 2023 | 12:23 PM

ಅಯೋಧ್ಯೆ ರಾಮಮಂದಿರ (ayodhya ram temple) ಜನವರಿಯಲ್ಲಿ ಲೋಕರ್ಣಾಪಣೆಗೊಳ್ಳಿದೆ ಎಂದು ರಾಮಜನ್ಮ ಭೂಮಿ ಟ್ರಸ್ಟ್​​​ ಹೇಳಿದೆ. ಪ್ರಧಾನಿ ಮೋದಿ ಅವರಿಂದ ರಾಮಮಂದಿರ ಉದ್ಘಾಟನೆಗೊಳ್ಳಲಿದೆ ಎಂದು ಹೇಳಲಾಗಿದೆ. ಇನ್ನು ರಾಮಮಂದಿರಕ್ಕೆ ಸಾರ್ವಜನಿಕರು ಜನವರಿಂದ ಭೇಟಿ ನೀಡಬಹುದು ಎಂದು ಟ್ರಸ್ಟ್​​​ ಹೇಳಿದೆ. ನೀವು ಕೂಡ ಮಂದಿರಕ್ಕೆ ಭೇಟಿ ನೀಡಬೇಕು ಎಂದು ಬಯಸಿದ್ದೀರಾ?ಐಷಾರಾಮಿ ‘ಟೆಂಟ್ ಸಿಟಿ’ ಯಲ್ಲಿ ಉಳಿಯಲು ಆಯ್ಕೆ ಮಾಡಬಹುದು. ಹೌದು ಇದು ಇಲ್ಲಿಂದ ರಾಮಮಂದಿರದ ವಿಹಂಗಮ ನೋಟವನ್ನು ನೀಡುತ್ತದೆ.

‘ಟೆಂಟ್ ಸಿಟಿ’ ರಾಮ ಜನ್ಮಭೂಮಿಯಿಂದ ಕೇವಲ 1.5 ಕಿಲೋಮೀಟರ್ ದೂರದಲ್ಲಿದೆ. ಇನ್ನು ಇದಕ್ಕಾಗಿ ಸರ್ಕಾರ 20 ಎಕರೆ ಭೂಮಿಯನ್ನು ಮೀಸಲಿಟ್ಟಿದೆ. ಇದು ವಿವಿಧ ಸಂರಚನೆಗಳ 300 ಐಷಾರಾಮಿ ಡೇರೆಗಳನ್ನು ಹೊಂದಿರುತ್ತದೆ. ಇಲ್ಲಿ ಹೆದ್ದಾರಿಯೂದ್ದಕ್ಕೂ ಐತಿಹಾಸಿಕ ವಿಚಾರಗಳು ಹಾಗೂ ಪುರಾಣಗಳ ಕಥೆಗಳನ್ನು ಹೇಳುವ ಚಿತ್ರಗಳನ್ನು ಕಾಣುಬಹುದು. ಜತೆಗೆ ಪ್ರಾಯೋಗಿಕ ಕೇಂದ್ರಗಳನ್ನು ಕೂಡ ಅಭಿವೃದ್ಧಿಪಡಿಸಲಾಗಿದೆ.

ಇನ್ನು ಈ ದಾರಿಯಲ್ಲಿ ರಾಮಜನ್ಮ ಭೂಮಿಯ ಉತ್ತಮ ನೋಟವನ್ನು ದೂರದಿಂದಲ್ಲೇ ತೋರಿಸುತ್ತದೆ. ಇನ್ನು ಈ ಬಗ್ಗೆ ನ್ಯೂಸ್​​ 18 ಜತೆಗೆ ಮಾತನಾಡಿದ ರಾಮ ಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಮುಂದಿನ ವರ್ಷ ಜನವರಿಯಲ್ಲಿ ದೇವಾಲಯ ಉದ್ಘಾಟನೆಗೊಂಡ ನಂತರ ಪ್ರತಿದಿನ ಸುಮಾರು 1.5 ಲಕ್ಷ ಜನರು ಭೇಟಿ ನೀಡುವ ನಿರೀಕ್ಷೆಯಿದೆ. ಅಯೋಧ್ಯೆಯು ಇಲ್ಲಿಯವರೆಗೆ ಸೀಮಿತ ಸಂಖ್ಯೆಯ ಹೋಟೆಲ್‌ಗಳನ್ನು ಹೊಂದಿದೆ ಮತ್ತು ‘ಟೆಂಟ್ ಸಿಟಿ’ ಪ್ರವಾಸಿಗರಿಗೆ ಉತ್ತಮ ಸ್ಥಳ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅಯೋಧ್ಯೆ ರಾಮಮಂದಿರದ ಉದ್ಘಾಟನೆ ಯಾವಾಗ? ಹೇಗಿದೆ ಭದ್ರತೆ? ದರ್ಶನ ಹೇಗೆ? ಇಲ್ಲಿದೆ ಮಾಹಿತಿ

ಉತ್ತರಪ್ರದೇಶ ಸರ್ಕಾರವು ಖಾಸಗಿ ಬಿಡ್ದಾರರು ಪರವಾನಗಿ ಆಧಾರದ ಮೇಲೆ ಐದು ವರ್ಷಗಳ ಕಾಲ ಟೆಂಟ್ ಸಿಟಿಯನ್ನು ಅಭಿವೃದ್ಧಿಪಡಿಸಲು, ನಿರ್ವಹಿಸಲು ಅವಕಾಶ ನೀಡುತ್ತದೆ. “ಟೆಂಟ್ ಸಿಟಿಯನ್ನು 20 ಎಕರೆ ವಿಸ್ತೀರ್ಣದ ಭೂಪ್ರದೇಶದಲ್ಲಿ ಅಭಿವೃದ್ಧಿಪಡಿಸಲಾಗುವುದು ಮತ್ತು ಒಂದು ವರ್ಷದಲ್ಲಿ ಕನಿಷ್ಠ 300 ಟೆಂಟ್‌ಗಳಿಗೆ ಅವಕಾಶ ಕಲ್ಪಿಸುತ್ತದೆ ಎಂದು ಸರ್ಕಾರಿ ವರದಿ ಹೇಳಿದೆ.

ಟೆಂಟ್ ಸಿಟಿಯು ಪ್ರವಾಸಿಗರಿಗೆ ವಿಶಿಷ್ಟವಾದ ಮತ್ತು ಆರಾಮದಾಯಕವಾದ ಕ್ಯಾಂಪಿಂಗ್ ಅನುಭವವನ್ನು ಒದಗಿಸುತ್ತದೆ, ಜತೆಗೆ ನಗರದ ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯತ್ತ ಸೆಳೆಯುವ ಕೆಲಸವನ್ನು ಮಾಡುತ್ತದೆ. ಇದರಲ್ಲಿ ಸ್ನಾನ/ಶೌಚಾಲಯ, ಸ್ವಾಗತ/ಫಾಯರ್ ಪ್ರದೇಶ, ರೆಸ್ಟೊರೆಂಟ್, ಊಟದ ಪ್ರದೇಶ ಮತ್ತು ವಿಐಪಿ ಲಾಂಜ್‌ನೊಂದಿಗೆ ಟೆಂಟ್ ವಸತಿಗಳಂತಹ ಬಹು ಮನರಂಜನಾ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ ಎಂದು ಹೇಳಲಾಗಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ