Ayodhya Ram Temple ಅಯೋಧ್ಯೆ ರಾಮ ಮಂದಿರದ ನಿರ್ಮಾಣ ಕಾರ್ಯ ಆರಂಭ; ಮೂರು ಅಂತಸ್ತಿನ ಕಟ್ಟಡದ ವೆಚ್ಚ ಸುಮಾರು ₹1,800 ಕೋಟಿ
ಗರ್ಭಗುಡಿ ಮತ್ತು ಐದು ಮಂಟಪಗಳು (ಮುಖಮಂಟಪಗಳು) ಒಳಗೊಂಡಿರುವ ಮೂರು ಅಂತಸ್ತಿನ ಮೇಲ್ವಿನ್ಯಾಸದ ನಿರ್ಮಾಣ ಕಾರ್ಯವು ಪ್ರಾರಂಭವಾಗಿದೆ ಎಂದು ಟ್ರಸ್ಟ್ ಹೇಳಿದೆ.
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ (Ram Temple in Ayodhya)ಮೂರು ಅಂತಸ್ತಿನ ನಿರ್ಮಾಣ ಕಾರ್ಯ ಆರಂಭವಾಗಿದೆ. ಪ್ರಸ್ತುತ ಅಂದಾಜಿನ ಪ್ರಕಾರ, ದೇವಾಲಯ ಮತ್ತು ಸಂಕೀರ್ಣದ ಒಟ್ಟು ನಿರ್ಮಾಣ ವೆಚ್ಚ ಸುಮಾರು 1,800 ಕೋಟಿ ರೂಪಾಯಿ ಎಂದು ಶ್ರೀರಾಮ ದೇವಾಲಯ ಟ್ರಸ್ಟ್ ತಿಳಿಸಿದೆ ಎಂದು ನ್ಯೂಸ್ 18 ವರದಿ ಮಾಡಿದೆ. ಭಕ್ತಾದಿಗಳಿಗೆ ಶ್ರೀರಾಮ ಲಲ್ಲಾನ ದರ್ಶನಕ್ಕಾಗಿ ಡಿಸೆಂಬರ್ 2023 ಮಂದಿರ ತೆರೆಯಲಾಗುವುದು. ತೀರ್ಥಯಾತ್ರೆಯ ಸೌಲಭ್ಯ ಕೇಂದ್ರದ ನಿರ್ಮಾಣ ಕಾರ್ಯ, ಸಂಕೀರ್ಣದಲ್ಲಿ ಇತರ ಮೂಲಸೌಕರ್ಯ ಸೇವೆಗಳು ಸಹ ಪ್ರಾರಂಭವಾಗಿವೆ. ಪ್ರಸ್ತುತ ಅಂದಾಜಿನ ಪ್ರಕಾರ, ದೇವಾಲಯ ಮತ್ತು ಸಂಕೀರ್ಣದ ಒಟ್ಟು ನಿರ್ಮಾಣ ವೆಚ್ಚ ಅಂದಾಜು ರೂ. 1800 ಕೋಟಿ” ಎಂದು ಟ್ರಸ್ಟ್ ನೀಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟ್ ಸೆಪ್ಟೆಂಬರ್ 11 ರಂದು ಸಭೆ ನಡೆಸಿ ಪ್ರಗತಿಯ ವಿವರವಾದ ಪರಿಶೀಲನೆ ನಡೆಸಿತು.
ಗ್ರಾನೈಟ್ ಸ್ತಂಭ ದೇವಾಲಯದ ಈ ಮೇಲ್ವಿನ್ಯಾಸವನ್ನು 6.5m (21 ಅಡಿ) ಎತ್ತರದ ಸ್ತಂಭದ ಮೇಲೆ ನಿರ್ಮಿಸಲಾಗುತ್ತಿದೆ, ಇದು ಕಟ್ಟಡದ ನೇರ ಹೊರೆಯನ್ನು ತೆಗೆದುಕೊಳ್ಳುತ್ತದೆ. ಹೆಚ್ಚಿನ ಪುರಾತನ ದೇವಾಲಯಗಳನ್ನು ನೈಸರ್ಗಿಕ ಕಲ್ಲಿನ ಸ್ತರದಲ್ಲಿ ನಿರ್ಮಿಸಲಾಗಿರುವುದರಿಂದ, ಶ್ರೀರಾಮ ದೇವಾಲಯದ ಎಂಜಿನಿಯರ್‌ಗಳ ಒಕ್ಕೂಟವು ಸ್ತಂಭದ ಕೆಲಸಕ್ಕೆ ಗ್ರಾನೈಟ್ ಕಲ್ಲನ್ನು ಆರಿಸಿದೆ. ಫೆಬ್ರವರಿ 2022 ರಲ್ಲಿ ಪ್ರಾರಂಭವಾದ ಸ್ತಂಭದ ನಿರ್ಮಾಣವು ಈಗ ಪೂರ್ಣಗೊಂಡಿದೆ. 5 ಅಡಿ x 2.5 ಅಡಿ x 3 ಅಡಿ ಗಾತ್ರದ ಸರಿಸುಮಾರು 17,000 ಗ್ರಾನೈಟ್ ಕಲ್ಲುಗಳನ್ನು ಕಲ್ಲುಗಳ ನಡುವೆ ಪರಸ್ಪರ ಜೋಡಿಸುವ ಮೂಲಕ ಸ್ತಂಭದ ನಿರ್ಮಾಣದಲ್ಲಿ ಬಳಸಲಾಗಿದೆ. ಪ್ರತಿ ಗ್ರಾನೈಟ್ ಕಲ್ಲಿನ ಬ್ಲಾಕ್ ತೂಕವು ಅಂದಾಜು 3 ಟನ್ ಆಗಿದೆ. ನಾಲ್ಕು ಟವರ್ ಕ್ರೇನ್‌ಗಳು, ಹಲವಾರು ಮೊಬೈಲ್ ಕ್ರೇನ್‌ಗಳು ಮತ್ತು ಇತರ ಉಪಕರಣಗಳನ್ನು ಸ್ತಂಭದಲ್ಲಿ ಗ್ರಾನೈಟ್ ಸ್ಟೋನ್ಸ್ ಬ್ಲಾಕ್‌ಗಳನ್ನು ನಿರ್ಮಿಸಲು ಮತ್ತು ಜೋಡಿಸಲು ನಿಯೋಜಿಸಲಾಗಿದೆ. ಸ್ತಂಭದ ಪ್ರದೇಶವು ಅಂದಾಜು. 3500 ಚದರ ಮೀ ಆಗಿದ್ದು ಗಟ್ಟಿಯಾ ಬಂಡೆಯಂತೆ ಕಾರ್ಯನಿರ್ವಹಿಸುತ್ತದೆ. ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಣಿಗಳಿಂದ ಗ್ರಾನೈಟ್ ಕಲ್ಲನ್ನು ಗುಣಮಟ್ಟ ನೋಡಿ ಖರೀದಿಸಲಾಗಿದೆ ಎಂದು ಟ್ರಸ್ಟ್ ಹೇಳಿಕೆಯಲ್ಲಿ ತಿಳಿಸಿದೆ.
ಈ ಕಲ್ಲುಗಳ ದೊಡ್ಡ ತೂಕ ಮತ್ತು ಗಾತ್ರವು ಹಿರಿದಾಗಿರುವುದರಿಂದ ಕಂಟೈನರ್ ಕಾರ್ಪೊರೇಷನ್ ಆಫ್ ಇಂಡಿಯಾ (ಭಾರತ ಸರ್ಕಾರದ ಉದ್ಯಮ) ಮತ್ತು ಭಾರತೀಯ ರೈಲ್ವೆಗಳು ಗ್ರಾನೈಟ್ ಸಾಗಣೆಯಲ್ಲಿ ತೊಡಗಿವೆ ಎಂದು ಟ್ರಸ್ಟ್ ಹೇಳಿದೆ. “ಭಾರತೀಯ ರೈಲ್ವೇಯು ಸಂಪೂರ್ಣ ಸಹಕಾರವನ್ನು ನೀಡಿತು ಮತ್ತು ಗ್ರಾನೈಟ್ ಸ್ಟೋನ್ ಬ್ಲಾಕ್‌ಗಳನ್ನು ಸಾಗಿಸಲು ಗ್ರೀನ್ ಕಾರಿಡಾರ್ ರಚಿಸಿತು, ಇದು ಸ್ತಂಭದ ಕಾರ್ಯ ನಿಗದಿತ ಸಮಯಕ್ಕಿಂತ ಎರಡು ತಿಂಗಳು ಬೇಗ ಪೂರ್ಣವಾಗುವಂತೆ ಮಾಡಿತು. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ರಾಕ್ ಮೆಕ್ಯಾನಿಕ್ಸ್ (ಗಣಿಗಾರಿಕೆ ಸಚಿವಾಲಯದ ಅಧೀನದಲ್ಲಿರುವ ಸಂಸ್ಥೆ), ಗಣಿಗಾರಿಕೆ ಸ್ಥಳದಲ್ಲಿ ಮತ್ತು ಶ್ರೀರಾಮ ದೇವಾಲಯದ ಕಾರ್ಯಸ್ಥಳದಲ್ಲಿ ಗ್ರಾನೈಟ್ ಕಲ್ಲುಗಳ ಗುಣಮಟ್ಟವನ್ನು ಮೇಲ್ವಿಚಾರಣೆ ಮಾಡಲು ತಜ್ಞರಾಗಿ ತೊಡಗಿಸಿಕೊಂಡಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸೂಪರ್‌ಸ್ಟ್ರಕ್ಚರ್‌ಗಾಗಿ ಬನ್ಸಿ ಪಹಾರ್‌ಪುರ ಮರಳುಗಲ್ಲು
ಭರತ್‌ಪುರ ಜಿಲ್ಲೆಯ ಬನ್ಸಿ ಪಹಾರ್‌ಪುರದಿಂದ ಕೆತ್ತಿದ ರಾಜಸ್ಥಾನದ ಮರಳುಗಲ್ಲು ಬಳಸಿ ದೇವಾಲಯದ ಮೇಲ್ವಿನ್ಯಾಸವನ್ನು ನಿರ್ಮಿಸಲಾಗುತ್ತಿದೆ. ಮರಳುಗಲ್ಲುಗಳ ಕೆತ್ತನೆ ಮತ್ತು ನಿರ್ಮಾಣ ಕಾರ್ಯವು ಪ್ರಾರಂಭವಾಗಿದೆ. ಸರಿಸುಮಾರು 1,200 ನುರಿತ ತಂತ್ರಜ್ಞರು ರಾಜಸ್ಥಾನದ ಗಣಿ ಮತ್ತು ಕಾರ್ಯಾಗಾರಗಳಲ್ಲಿ ಹಾಗೂ ಶ್ರೀರಾಮ ದೇವಾಲಯದ ಕಾರ್ಯಸ್ಥಳದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಟ್ರಸ್ಟ್ ತಿಳಿಸಿದೆ. ಕಲ್ಲುಗಳ ಗುಣಮಟ್ಟ ಮತ್ತು ಕೆತ್ತನೆಯ ಕೆಲಸವನ್ನು ಬೆಂಗಳೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ರಾಕ್ ಮೆಕ್ಯಾನಿಕ್ಸ್ (ಎನ್‌ಐಆರ್‌ಎಂ) ತಜ್ಞರು, ವಾಸ್ತುಶಿಲ್ಪಿ ಸಿಬಿ ಸೋಂಪುರ ಮತ್ತು ಅನುಷ್ಠಾನ ಏಜೆನ್ಸಿಗಳಾದ ಲಾರ್ಸೆನ್ ಮತ್ತು ಟಬ್ರೊ ಲಿಮಿಟೆಡ್ (ಎಲ್ & ಟಿ) ಮತ್ತು ಟಾಟಾ ಕನ್ಸಲ್ಟಿಂಗ್ ಇಂಜಿನಿಯರ್ಸ್ (ಟಿಸಿಇ) ಮೇಲ್ವಿಚಾರಣೆ ಮಾಡುತ್ತಿದೆ.
ಸುಮಾರು 4.75 ಲಕ್ಷ ಘನ ಅಡಿಗಳಷ್ಟು ಬನ್ಸಿ ಪಹಾರ್‌ಪುರ ಕಲ್ಲುಗಳನ್ನು ದೇವಾಲಯದ ಮೇಲ್ವಿನ್ಯಾಸದಲ್ಲಿ ಬಳಸಲಾಗುವುದು. ಇಲ್ಲಿಯವರೆಗೆ ಅವುಗಳಲ್ಲಿ 40 ಪ್ರತಿಶತವನ್ನು ಕೆತ್ತಲಾಗಿದೆ ಮತ್ತು ನಿರ್ಮಾಣಕ್ಕೆ ಲಭ್ಯವಿದೆ ಎಂದು ಟ್ರಸ್ಟ್ ತಿಳಿಸಿದೆ. ಮುಖ್ಯ ದೇವಾಲಯದಲ್ಲಿ ಗರ್ಭಾ ಗೃಹ, ನೆಲಹಾಸು, ಕಮಾನುಗಳು, ರೇಲಿಂಗ್ ಮತ್ತು ಬಾಗಿಲಿನ ಚೌಕಟ್ಟುಗಳಿಗೆ ರಾಜಸ್ಥಾನದ ಬಿಳಿ ಮಕ್ರಾನಾ ಮಾರ್ಬಲ್ ಬಳಸಲಾಗುವುದು. ಅದರ ಖರೀದಿ ಮತ್ತು ಕೆತ್ತನೆ ಪ್ರಗತಿಯಲ್ಲಿದೆ.
Published On - 4:59 pm, Mon, 12 September 22