AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ladakh Accident: ಲಡಾಖ್‌ಗೆ ತೆರಳುತ್ತಿದ್ದ ಬಸ್ ಕಮರಿಗೆ ಉರುಳಿ 6 ಜನ ಸಾವು, 22 ಮಂದಿಗೆ ಗಾಯ

Crime News: ಶಾಲೆಯೊಂದರ ಸಿಬ್ಬಂದಿಯನ್ನು ಮದುವೆ ಕಾರ್ಯಕ್ರಮಕ್ಕೆ ಕರೆದೊಯ್ಯುತ್ತಿದ್ದ ಬಸ್ ಲಡಾಖ್​ನ ದುರ್ಬುಕ್ ಪ್ರದೇಶದಲ್ಲಿ ಆಳವಾದ ಕಮರಿಗೆ ಬಿದ್ದಿದೆ ಎಂದು ಲೇಹ್ ಡೆಪ್ಯುಟಿ ಕಮಿಷನರ್ ಸಂತೋಷ್ ಸುಖದೇವ್ ಹೇಳಿದ್ದಾರೆ.

Ladakh Accident: ಲಡಾಖ್‌ಗೆ ತೆರಳುತ್ತಿದ್ದ ಬಸ್ ಕಮರಿಗೆ ಉರುಳಿ 6 ಜನ ಸಾವು, 22 ಮಂದಿಗೆ ಗಾಯ
ಲಡಾಖ್‌ಗೆ ತೆರಳುತ್ತಿದ್ದ ಬಸ್ ಕಮರಿಗೆ ಉರುಳಿ 6 ಜನ ಸಾವು
ಸುಷ್ಮಾ ಚಕ್ರೆ
|

Updated on: Aug 22, 2024 | 4:07 PM

Share

ಲಡಾಖ್: ಲಡಾಖ್‌ನ ಲೇಹ್ ಜಿಲ್ಲೆಯಲ್ಲಿ ಬಸ್ಸೊಂದು ರಸ್ತೆಯಿಂದ ಸ್ಕಿಡ್ ಆಗಿ 200 ಅಡಿ ಆಳದ ಕಮರಿಗೆ ಬಿದ್ದ ಪರಿಣಾಮ 6 ಜನರು ಸಾವನ್ನಪ್ಪಿದ್ದಾರೆ ಮತ್ತು 22 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲಾಡಳಿತ ಮತ್ತು ಪೊಲೀಸ್ ಸಿಬ್ಬಂದಿ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಶಾಲೆಯೊಂದರ ಸಿಬ್ಬಂದಿಯನ್ನು ಮದುವೆ ಕಾರ್ಯಕ್ರಮಕ್ಕೆ ಕರೆದೊಯ್ಯುತ್ತಿದ್ದ ಬಸ್ ದುರ್ಬುಕ್ ಪ್ರದೇಶದಲ್ಲಿ ಕಮರಿಗೆ ಬಿದ್ದಿದೆ ಎಂದು ಲೇಹ್ ಡೆಪ್ಯುಟಿ ಕಮಿಷನರ್ ಸಂತೋಷ್ ಸುಖದೇವ್ ಪಿಟಿಐಗೆ ಖಚಿತ ಪಡಿಸಿದ್ದಾರೆ. ಗಾಯಗೊಂಡ 22 ಜನರನ್ನು ಲೇಹ್‌ನಲ್ಲಿರುವ ಎಸ್‌ಎನ್‌ಎಂ ಆಸ್ಪತ್ರೆ ಮತ್ತು ಸೇನಾ ಆಸ್ಪತ್ರೆಗೆ ಸ್ಥಳಾಂತರಿಸಲು ಹೆಲಿಕಾಪ್ಟರ್‌ಗಳನ್ನು ಬಳಸಲಾಗುತ್ತಿದೆ.

ಇದನ್ನೂ ಓದಿ: ಜಾರ್ಖಂಡ್ ಸಚಿವ ಚಂಪೈ ಸೊರೆನ್ ಬೆಂಗಾವಲು ವಾಹನ ಅಪಘಾತ, ಓರ್ವ ಸಾವು, ಐವರಿಗೆ ಗಾಯ

ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗಳನ್ನು ನಿರೀಕ್ಷಿಸಲಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ