ಗುಜರಾತ್- ಮುಂಬೈ ಸ್ಪೈಸ್​​​ಜೆಟ್ ಹಾರಾಟ ಮಧ್ಯೆ ಬಿರುಕು ಬಿಟ್ಟ ವಿಂಡ್​​ಶೀಲ್ಡ್; ವಿಮಾನ ತುರ್ತು ಭೂಸ್ಪರ್ಶ

ದೆಹಲಿಯಿಂದ ದುಬೈಗೆ ಹೋಗುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದು ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದ ಬೆನ್ನಲ್ಲೇ ಮತ್ತೊಂದು ಸ್ಪೈಸ್ ಜೆಟ್ ಮುಂಬೈನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

ಗುಜರಾತ್- ಮುಂಬೈ ಸ್ಪೈಸ್​​​ಜೆಟ್ ಹಾರಾಟ  ಮಧ್ಯೆ ಬಿರುಕು ಬಿಟ್ಟ ವಿಂಡ್​​ಶೀಲ್ಡ್; ವಿಮಾನ ತುರ್ತು ಭೂಸ್ಪರ್ಶ
ಸ್ಪೈಸ್ ಜೆಟ್
TV9kannada Web Team

| Edited By: Rashmi Kallakatta

Jul 05, 2022 | 7:48 PM

ಸ್ಪೈಸ್​​​ಜೆಟ್  (SpiceJet) ಕಾಂಡ್ಲಾ-ಮುಂಬೈ ವಿಮಾನ (Kandla-Mumbai flight)ಪ್ರಯಾಣ ಮಧ್ಯ ವಿಂಡ್ ಶೀಲ್ಡ್ (Windshield) ಬಿರುಕು ಬಿಟ್ಟ ಕಾರಣ ಇಂದು ವಿಮಾನ  ತುರ್ತು ಭೂಸ್ಪರ್ಶ ಮಾಡಿದೆ. ವಿಮಾನದಲ್ಲಿದ್ದ ಸಿಬ್ಬಂದಿ,  ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ದೆಹಲಿಯಿಂದ ದುಬೈಗೆ ಹೋಗುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದು ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದ ಬೆನ್ನಲ್ಲೇ ಮತ್ತೊಂದು ಸ್ಪೈಸ್ ಜೆಟ್ ಮುಂಬೈನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಕಾಂಡ್ಲಾ- ಮುಂಬೈ ವಿಮಾನವು 23,000 ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ ಅದರ ವಿಂಡ್ ಶೀಲ್ಡ್​​ನ ಔಟರ್ ಪ್ಯಾನ್ ಬಿರುಕು ಬಿಟ್ಟಿದೆ . ತಕ್ಷಣವೇ ವಿಮಾನವನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ ಎಂದು ಡಿಜಿಸಿಎ ಅಧಿಕಾರಿಗಳು ಹೇಳಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿದ ವಕ್ತಾರರು “ಜುಲೈ 5, 2022 ರಂದು, ಸ್ಪೈಸ್‌ಜೆಟ್ Q400 ವಿಮಾನವು SG 3324 (ಕಾಂಡ್ಲಾ-ಮುಂಬೈ) ಮಧ್ಯೆ ಪ್ರಯಾಣಿಸುತ್ತಿತ್ತು. FL230 ನಲ್ಲಿ ಹಾರಾಟದ ಸಮಯದಲ್ಲಿ, P2 ಬದಿಯ ವಿಂಡ್‌ಶೀಲ್ಡ್ ಹೊರ ಫಲಕವು ಬಿರುಕು ಬಿಟ್ಟಿತು. ಒತ್ತಡವು ಸಾಮಾನ್ಯವಾಗಿದೆ ಎಂದು ಗಮನಿಸಲಾಗಿದೆ. ವಿಮಾನವು ಮುಂಬೈನಲ್ಲಿ ಸುರಕ್ಷಿತವಾಗಿ ಇಳಿಯಿತು ಎಂದಿದ್ದಾರೆ . ಕಳೆದ 17 ದಿನಗಳಲ್ಲಿ ಸ್ಪೈಸ್‌ಜೆಟ್ ವಿಮಾನದಲ್ಲಿ ಸಂಭವಿಸಿದ ತಾಂತ್ರಿಕ ದೋಷದಿಂದ ಸಂಭವಿಸಿದ ಏಳನೇ ಘಟನೆಯಾಗಿದೆ.

ಹಿಂದಿನ ಘಟನೆಗಳು

ಜೂನ್ 19 ರಿಂದ ಸ್ಪೈಸ್ ಜೆಟ್ ವಿಮಾನಗಳಲ್ಲಿ ಆರು ಘಟನೆಗಳು ನಡೆದಿವೆ. ಜೂನ್ 19 ರಂದು, 185 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಸ್ಪೈಸ್‌ಜೆಟ್‌ನ ದೆಹಲಿಗೆ ಹೊರಟಿದ್ದ ವಿಮಾನದ ಎಂಜಿನ್‌ಗೆ ಪಾಟ್ನಾ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಕೂಡಲೇ ಬೆಂಕಿ ಹೊತ್ತಿಕೊಂಡಿತು. ತಕ್ಷಣವೇ ವಿಮಾನವು ತುರ್ತು  ಭೂಸ್ಪರ್ಶ ಮಾಡಿದೆ.

ಜೂನ್ 19 ರಂದು ನಡೆದ ಮತ್ತೊಂದು ಘಟನೆಯಲ್ಲಿ, ಕ್ಯಾಬಿನ್ ಒತ್ತಡದ ಸಮಸ್ಯೆಯಿಂದಾಗಿ ಜಬಲ್ಪುರಕ್ಕೆ ಹೋಗಬೇಕಿದ್ದ ವಿಮಾನವು ದೆಹಲಿಗೆ ಮರಳಬೇಕಾಯಿತು. ಜೂನ್ 24 ಮತ್ತು ಜೂನ್ 25 ರಂದು ಟೇಕಾಫ್ ಮಾಡುವಾಗ ಎರಡು ಪ್ರತ್ಯೇಕ ವಿಮಾನಗಳಲ್ಲಿ ಫ್ಯೂಸ್ಲೇಜ್ ಡೋರ್ ಎಚ್ಚರಿಕೆ ಬಂದಿತ್ತು.  ವಿಮಾನ ಪ್ರಯಾಣವನ್ನು ರದ್ದು ಮಾಡಲಾಗಿತ್ತು. ಜುಲೈ 2 ರಂದು ಸಿಬ್ಬಂದಿಗಳು ಸುಮಾರು 5,000 ಅಡಿ ಎತ್ತರದಲ್ಲಿ ಕ್ಯಾಬಿನ್‌ನಲ್ಲಿ ಹೊಗೆಯನ್ನು ಗಮನಿಸಿದ ನಂತರ ಜಬಲ್‌ಪುರಕ್ಕೆ ತೆರಳುತ್ತಿದ್ದ ಸ್ಪೈಸ್‌ಜೆಟ್ ವಿಮಾನ ದೆಹಲಿಗೆ ಮರಳಿತು. ಗಮನಾರ್ಹವೆಂದರೆ ಕಳೆದ ಮೂರು ವರ್ಷಗಳಿಂದ ಸ್ಪೈಸ್ ಜೆಟ್ ನಷ್ಟವನ್ನು ಅನುಭವಿಸುತ್ತಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada