ನನ್ನನ್ನು ಆಶೀರ್ವದಿಸಲು ಬಂದಿರುವ ಸ್ತ್ರೀಶಕ್ತಿಗೆ ನಾನು ಆಭಾರಿ: ಕೇರಳದಲ್ಲಿ ಮೋದಿ

ಸಂಸತ್ತಿನ ಉಭಯ ಸದನಗಳಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಿದ್ದಕ್ಕಾಗಿ ಪ್ರಧಾನಿ ಮೋದಿಯವರನ್ನು ಶ್ಲಾಘಿಸಲು 'ಸ್ತ್ರೀ ಶಕ್ತಿ ಮೋದಿಕ್ಕ್   ಒಪ್ಪಂ' (ಮೋದಿಯೊಂದಿಗೆ ಸ್ತ್ರೀ ಶಕ್ತಿ ) ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಮುಂಚಿತವಾಗಿ ಮೋದಿ ರೋಡ್ ಶೋ ನಡೆಸಿದ್ದು, ಜನರು ಹೂಮಳೆಗರೆದು ಪ್ರಧಾನಿಯನ್ನು ಸ್ವಾಗತಿಸಿದ್ದಾರೆ.

ನನ್ನನ್ನು ಆಶೀರ್ವದಿಸಲು ಬಂದಿರುವ ಸ್ತ್ರೀಶಕ್ತಿಗೆ ನಾನು ಆಭಾರಿ: ಕೇರಳದಲ್ಲಿ ಮೋದಿ
ಕೇರಳದಲ್ಲಿ ನರೇಂದ್ರ ಮೋದಿ
Follow us
ರಶ್ಮಿ ಕಲ್ಲಕಟ್ಟ
|

Updated on:Jan 03, 2024 | 5:08 PM

ತ್ರಿಶ್ಶೂರ್ (ಕೇರಳ) ಜನವರಿ 03: ಕೇರಳದ (Kerala) ತ್ರಿಶೂರ್‌ನಲ್ಲಿ (Thrissur)ಇಂದು (ಬುಧವಾರ) ಪ್ರಧಾನಿ ನರೇಂದ್ರ ಮೋದಿ (Narendra Modi) ರೋಡ್ ಶೋ ನಡೆಸಿದ್ದಾರೆ. ಬಿಜೆಪಿ ರಾಜ್ಯ ಘಟಕ ಆಯೋಜಿಸಿರುವ ಎರಡು ಲಕ್ಷಕ್ಕೂ ಅಧಿಕ ಮಹಿಳೆಯರು ಭಾಗವಹಿಸುವ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ. ಇಂದು ಮಧ್ಯಾಹ್ನ ಕೇರಳಕ್ಕೆ ಬಂದಿಳಿದ ಪ್ರಧಾನಿ ಮೋದಿ ರೋಡ್‌ಶೋ ನಡೆಸಿ ನಂತರ ತೆಕ್ಕಿಂಕಾಡ್ ಮೈದಾನದಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ಪ್ರಧಾನಿಯವರನ್ನು ಸ್ವಾಗತಿಸಲು ಪಟ್ಟಣವನ್ನು ಬ್ಯಾನರ್ ಮತ್ತು ಹೋರ್ಡಿಂಗ್‌ಗಳಿಂದ ಅಲಂಕರಿಸಲಾಗಿದೆ. ಪ್ರಧಾನಿ ಮೋದಿ ಅವರ ದರ್ಶನಕ್ಕಾಗಿ ಮಹಿಳೆಯರು ಕಾದು ಕುಳಿತಿರುವುದು ಕಂಡುಬಂತು. ಅವರಲ್ಲಿ ಒಬ್ಬರು, “ನಮ್ಮ ಪ್ರಧಾನಿ ಮೋದಿ ಅತ್ಯಂತ ಗೌರವಾನ್ವಿತ ನಾಯಕ, ಅವರು ಇಲ್ಲಿನ ಮಹಿಳೆಯನ್ನು ಉದ್ದೇಶಿಸಿ ಕೇರಳಕ್ಕೆ ಬರುತ್ತಿದ್ದಾರೆ. ನಾವು ಅವರನ್ನು ನೋಡಲು ಇಲ್ಲಿದ್ದೇವೆ” ಎಂದು ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಸಂಸತ್ತಿನ ಉಭಯ ಸದನಗಳಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಯಶಸ್ವಿಯಾಗಿ ಅಂಗೀಕರಿಸಿದ್ದಕ್ಕಾಗಿ ಪ್ರಧಾನಿ ಮೋದಿಯವರನ್ನು ಶ್ಲಾಘಿಸಲು ‘ಸ್ತ್ರೀ ಶಕ್ತಿ ಮೋದಿಕ್ಕ್  ಒಪ್ಪಂ’ (ಮೋದಿಯೊಂದಿಗೆ ಸ್ತ್ರೀ ಶಕ್ತಿ ) ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅಂಗನವಾಡಿ ಶಿಕ್ಷಕಿಯರು , ಆಶಾ ಕಾರ್ಯಕರ್ತೆಯರು, ಉದ್ಯಮಿಗಳು, ಕಲಾವಿದರು, ಎಂಜಿಎನ್‌ಆರ್‌ಇಜಿಎ ಮತ್ತು ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕರ್ತರು ಸೇರಿದಂತೆ ವಿವಿಧ ಹಿನ್ನೆಲೆಯ ಮಹಿಳೆಯರು ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ನಟಿ-ನೃತ್ಯ ಕಲಾವಿದೆ ಶೋಭನಾ, ಕ್ರಿಕೆಟರ್ ಮಿನ್ನು ಮಣಿ, ಉದ್ಯಮಿ ಬೀನಾ ಕಣ್ಣನ್, ಗಾಯಕಿ ವೈಕಂ ವಿಜಯಲಕ್ಷ್ಮಿ ಮತ್ತು ಭ್ರಷ್ಟಾಚಾರ ಮತ್ತು ಕಮ್ಯೂನಿಸ್ಟ್ ಸರ್ಕಾರದ ವಿರುದ್ಧ ಧ್ವನಿ ಎತ್ತಿದ ಹಿರಿಯ ಮಹಿಳೆ ಮರಿಯಕುಟ್ಟಿ ಸೇರಿದಂತೆ ಹಲವಾರು ಪ್ರಮುಖ ವ್ಯಕ್ತಿಗಳು ಸಮಾರಂಭದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಪ್ರಧಾನಿ ಮೋದಿ ಜನವರಿ 2-3 ರಿಂದ ತಮಿಳುನಾಡು, ಲಕ್ಷದ್ವೀಪ ಮತ್ತು ಕೇರಳಕ್ಕೆ ಎರಡು ದಿನಗಳ ಭೇಟಿ ನೀಡಲಿದ್ದಾರೆ. ಮಂಗಳವಾರ, ಅವರು ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿ ₹ 20,000 ಕೋಟಿಗೂ ಹೆಚ್ಚು ಮೌಲ್ಯದ ಹಲವಾರು ಯೋಜನೆಗಳಿಗೆ ಮೋದಿ ಚಾಲನೆ ನೀಡಿದ್ದರು. ನಂತರ ಅವರು ಲಕ್ಷದ್ವೀಪ ತಲುಪಿ ಕೇಂದ್ರಾಡಳಿತ ಪ್ರದೇಶದ ಪ್ರಗತಿಗೆ ಸಂಬಂಧಿಸಿದ ಅಂಶಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕವರತ್ತಿಯಲ್ಲಿ ಅವರು ₹1,156 ಕೋಟಿ ಮೊತ್ತದ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು.

ಇದನ್ನೂ ಓದಿ: ಅಯೋಧ್ಯೆಯ ರಾಮಮಂದಿರಕ್ಕೆ ಗುಲಾಬಿ ಬಣ್ಣ ಬಂದಿದ್ದು ಭರತ್‌ಪುರದಿಂದ; ಮಹಾಭಾರತ, ರಾಮಾಯಣಕ್ಕೂ ಇದೆ ನಂಟು

ಪ್ರಸ್ತುತ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್ ಮತ್ತು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಪ್ರಾಬಲ್ಯ ಹೊಂದಿರುವ ಕೇರಳದಲ್ಲಿ ರಾಜಕೀಯ ಪ್ರವೇಶವನ್ನು ಮಾಡಲು ಬಿಜೆಪಿ ಪ್ರಯತ್ನಿಸುತ್ತಿರುವುದರಿಂದ ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿ ಚುನಾವಣಾ ಪ್ರಚಾರದ ಅಧಿಕೃತ ಪ್ರಾರಂಭ ಎಂದು ಈ ಕಾರ್ಯಕ್ರಮವನ್ನು ಬಿಂಬಿಸಲಾಗುತ್ತಿದೆ.

ಮೋದಿ ಭಾಷಣದ ಮುಖ್ಯಾಂಶಗಳು

  1. ನನ್ನನ್ನು ಆಶೀರ್ವದಿಸಲು ಅಪಾರ ಸಂಖ್ಯೆಯಲ್ಲಿ ಇಲ್ಲಿಗೆ ಬಂದಿರುವ ಸ್ತ್ರೀಶಕ್ತಿಗೆ ನಾನು ಆಭಾರಿಯಾಗಿದ್ದೇನೆ. ಅದೃಷ್ಟವಶಾತ್, ನಾನು ಶಿವ ಕಿ ನಗರಿ ಎಂದು ಕರೆಯಲ್ಪಡುವ ಕಾಶಿ ಕ್ಷೇತ್ರದಿಂದ ಸಂಸದನಾಗಿದ್ದೇನೆ. ಇಲ್ಲಿಯೂ ವಡಕ್ಕುನಾಥನ್ ದೇವಾಲಯದಲ್ಲಿ ಶಿವ ನೆಲೆಸಿದ್ದಾನೆ. ಇಂದು, ಕೇರಳದ ಸಾಂಸ್ಕೃತಿಕ ರಾಜಧಾನಿ ತ್ರಿಶ್ಶೂರ್​​ನಿಂದ  ಹೊರಹೊಮ್ಮುವ ಶಕ್ತಿಯು ಇಡೀ ಕೇರಳದಲ್ಲಿ ಹೊಸ ಭರವಸೆಯನ್ನು ಪ್ರತಿಧ್ವನಿಸುತ್ತದೆ.
  2. ಸ್ವಾತಂತ್ರ್ಯದ ನಂತರ, ಎಲ್‌ಡಿಎಫ್ ಮತ್ತು ಯುಡಿಎಫ್ ಸರ್ಕಾರಗಳು ‘ನಾರಿ ಶಕ್ತಿ’ಯನ್ನು ದುರ್ಬಲವೆಂದು ಪರಿಗಣಿಸಿದವು. ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಕಾನೂನನ್ನು ಅವರು ತಡೆಹಿಡಿದರು, ಆದರೆ ಮೋದಿ ನಿಮಗೆ ನಿಮ್ಮ ಹಕ್ಕುಗಳನ್ನು ನೀಡುವ ಭರವಸೆ ನೀಡಿದರು ಮತ್ತು ನಾನು ಅದನ್ನು ಈಡೇರಿಸಿದೆ.ದೇಶದಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳ ಮೈತ್ರಿ ಸರ್ಕಾರ ಇರುವವರೆಗೂ ತ್ರಿವಳಿ ತಲಾಖ್ ನಿಂದಾಗಿ ಮುಸ್ಲಿಂ ಸಹೋದರಿಯರು ತೊಂದರೆಗೀಡಾಗಿದ್ದರು. ಆದರೆ ಮೋದಿ ಅವರಿಂದ ಮುಕ್ತಿ ನೀಡುವ ಭರವಸೆ ನೀಡಿ ಪ್ರಾಮಾಣಿಕವಾಗಿ ಈಡೇರಿಸಿದ್ದಾರೆ.
  3.  ತಮ್ಮ ಸರ್ಕಾರವು ದೇಶದಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ನೀಡಿದ ಭರವಸೆಗಳನ್ನು ಈಡೇರಿಸಿದೆ ಎಂದು ಮೋದಿ ಹೇಳಿದ್ದಾರೆ.
  4. ಇತ್ತೀಚಿನ ದಿನಗಳಲ್ಲಿ, ಭಾರತದಲ್ಲಿ ‘ಮೋದಿ ಕಿ ಗ್ಯಾರಂಟಿ’ ಬಗ್ಗೆ ಗೊಣಗಾಟವಿದೆ. ಆದಾಗ್ಯೂ, ಇದು ನಾರಿ ಶಕ್ತಿ ಎಂದು ನಾನು ನಂಬುತ್ತೇನೆ, ಇದು ಅಭಿವೃದ್ಧಿ ಹೊಂದಿದ ಭಾರತದ ನಿರ್ಣಯದ ದೊಡ್ಡ ಭರವಸೆಯಾಗಿದೆ.
  5. ವೇಲು ನಾಚಿಯಾರ್ ಮತ್ತು ದೇಶದ ಶ್ರೇಷ್ಠ ಶಿಕ್ಷಕಿ ಮತ್ತು ಸಮಾಜ ಸೇವಕರಲ್ಲಿ ಒಬ್ಬರಾದ ಸಾವಿರ್ತಿಬಾಯಿ ಫುಲೆ ಅವರ ಜನ್ಮದಿನದ ದಿನ. ಈ ಮಹಿಳೆಯರು ನಾರಿ ಶಕ್ತಿಯ ಸಾಮರ್ಥ್ಯವನ್ನು ನಮಗೆ ಕಲಿಸುತ್ತಾರೆ. ಕೇರಳದ ಹೆಣ್ಣುಮಕ್ಕಳು ಭಾರತದ ಸ್ವಾತಂತ್ರ್ಯ, ಸಂಸ್ಕೃತಿ ಮತ್ತು ಸಂವಿಧಾನದ ರಚನೆಗೆ ಕೊಡುಗೆ ನೀಡಿದ್ದಾರೆ. ಎ.ವಿ.ಕುಟ್ಟಿಮಾಲು ಅಮ್ಮ, ಅಚ್ಚಮ್ಮ ಚೆರಿಯನ್, ರೋಸಮ್ಮ ಪುನ್ನೂಸ್ ಅವರಂತಹ ವೀರ ಮಹಿಳೆಯರು ಸ್ವಾತಂತ್ರ್ಯ ಚಳವಳಿಗೆ ಹೊಸ ಶಕ್ತಿ ನೀಡಿದರು. ಆದಿವಾಸಿಗಳ ಮಹಾನ್ ಕಲಾವಿದೆ ನಂಜಿಯಮ್ಮ ಅವರ ಕಲೆಗೆ ಪ್ರಶಸ್ತಿ ನೀಡುವುದು ನಮ್ಮ ಸೌಭಾಗ್ಯ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
  6. ಕಳೆದ 10 ವರ್ಷಗಳಲ್ಲಿ, ನಾವು ಮಹಿಳೆಯರ ಜೀವನವನ್ನು ಸುಲಭಗೊಳಿಸಲು ಸಾಕಷ್ಟು ಉಪಕ್ರಮಗಳನ್ನು ತೆಗೆದುಕೊಂಡಿದ್ದೇವೆ. ನಾವು 10 ಕೋಟಿ ಉಜ್ವಲಾ ಗ್ಯಾಸ್ ಸಂಪರ್ಕ ನೀಡಿದ್ದೇವೆ, ಮೋದಿಯವರ ಭರವಸೆಯಿಂದ ಈ ಪ್ರಯೋಜನ ಸಿಕ್ಕಿದೆ. ನಾವು 11 ಕೋಟಿ ಕುಟುಂಬಗಳ ಸಹೋದರಿಯರಿಗೆ ಪೈಪ್ ಮೂಲಕ ನೀರು ಕೊಟ್ಟಿದ್ದೇವೆ, ಇದು ಹೇಗೆ ಸಂಭವಿಸಿತು, ಏಕೆಂದರೆ ಮೋದಿಯವರ ಗ್ಯಾರಂಟಿ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:43 pm, Wed, 3 January 24