Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೈಕೋರ್ಟ್​ನ ಸಂಭಾವ್ಯ ನ್ಯಾಯಮೂರ್ತಿಗಳ ಜತೆ ಮಾತುಕತೆ ಆರಂಭಿಸಿದ ಸುಪ್ರೀಂ ಕೊಲಿಜಿಯಂ

ಸುಪ್ರೀಂಕೋರ್ಟ್​ ಕೊಲಿಜಿಯಂ ಹೈಕೋರ್ಟ್​ನ ಸಂಭಾವ್ಯ ನ್ಯಾಯಮೂರ್ತಿಗಳ ಜತೆ ಸಂವಾದ ಆರಂಭಿಸಿದೆ. ಮೂವರು ಸದಸ್ಯರ ಕೊಲಜಿಯಂನಲ್ಲಿ ಮುಖ್ಯನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾಯಮೂರ್ತಿಗಳಾದ ಭೂಷಣ್ ಆರ್ ಗವಾಯಿ ಮತ್ತು ಸೂರ್ಯಕಾಂತ್ ಅವರು ಇದ್ದಾರೆ. ನ್ಯಾಯಾಂಗ ಅಧಿಕಾರಿಗಳು ಮತ್ತು ವಕೀಲರ ಹೆಸರುಗಳನ್ನು ರಾಜಸ್ಥಾನ, ಅಲಹಾಬಾದ್ ಮತ್ತು ಬಾಂಬೆ ಹೈಕೋರ್ಟ್ ಗಳಿಗೆ ನೇಮಕ ಮಾಡಲು ಉದ್ದೇಶಿಸಲಾಗಿದೆ.ಸಿಜೆಐ ಮತ್ತು ನ್ಯಾಯಮೂರ್ತಿಗಳಾದ ಗವಾಯಿ ಮತ್ತು ಕಾಂತ್ ಅವರನ್ನೊಳಗೊಂಡ ಕೊಲಿಜಿಯಂ ಮೊದಲ ಬಾರಿಗೆ ವಕೀಲರು ಮತ್ತು ನ್ಯಾಯಾಂಗ ಅಧಿಕಾರಿಗಳೊಂದಿಗೆ ಸಂವಾದ ಪ್ರಾರಂಭಿಸಿದೆ.

ಹೈಕೋರ್ಟ್​ನ ಸಂಭಾವ್ಯ ನ್ಯಾಯಮೂರ್ತಿಗಳ ಜತೆ ಮಾತುಕತೆ ಆರಂಭಿಸಿದ ಸುಪ್ರೀಂ ಕೊಲಿಜಿಯಂ
ಸುಪ್ರೀಂಕೋರ್ಟ್​Image Credit source: ipleaders
Follow us
ನಯನಾ ರಾಜೀವ್
|

Updated on:Dec 30, 2024 | 10:01 AM

ಹೈಕೋರ್ಟ್​ನ ಸಂಭಾವ್ಯ ನ್ಯಾಯಮೂರ್ತಿಗಳ ಜತೆ ಸುಪ್ರೀಂಕೋರ್ಟ್​ ಕೊಲಿಜಿಯಂ  ಮಾತುಕತೆ ಆರಂಭಿಸಿದೆ. ಸಾಂಪ್ರದಾಯಿಕ ಹಾದಿಗಿಂತ ಸ್ವಲ್ಪ ಭಿನ್ನವಾಗಿ ಸುಪ್ರೀಂಕೋರ್ಟ್ ಕೊಲಿಜಿಯಂ ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆ ಆಕಾಂಕ್ಷಿಗಳ ಜತೆ ಈಗಾಗಲೇ ಒಮ್ಮೆ ಸಂವಾದ ನಡೆಸಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಇದು ನ್ಯಾಯಮೂರ್ತಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಹೊಸ ಬೆಳವಣಿಗೆ ಎಂದೇ ಹೇಳಬಹುದು.

ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ವಿಶ್ವಹಿಂದೂ ಪರಿಷತ್ ಕಾರ್ಯಕ್ರಮದಲ್ಲಿ ಕೆಲ ದಿನಗಳ ಹಿಂದೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಘಟನೆಯ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಸೇರಿದಂತೆ ಕೆಲ ಕೊಲಿಜಿಯಂ ಸದಸ್ಯರು, ಸಂಭಾವ್ಯ ನ್ಯಾಯಮೂರ್ತಿಗಳನ್ನು ಅವರಿಗೆ ಬಡ್ತಿ ನೀಡಲು ಸೂಕ್ತವೇ ಎಂದು ತಿಳಿದುಕೊಳ್ಳುವ ಸಲುವಾಗಿ ಮತ್ತು ಸಮಗ್ರವಾಗಿ ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ ವೈಯಕ್ತಿಕವಾಗಿ ಭೇಟಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಮೂವರು ಸದಸ್ಯರ ಕೊಲಿಜಿಯಂನಲ್ಲಿ ಮುಖ್ಯನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾಯಮೂರ್ತಿಗಳಾದ ಭೂಷಣ್ ಆರ್ ಗವಾಯಿ ಮತ್ತು ಸೂರ್ಯಕಾಂತ್ ಅವರು ಇದ್ದಾರೆ. ನ್ಯಾಯಾಂಗ ಅಧಿಕಾರಿಗಳು ಮತ್ತು ವಕೀಲರ ಹೆಸರುಗಳನ್ನು ರಾಜಸ್ಥಾನ, ಅಲಹಾಬಾದ್ ಮತ್ತು ಬಾಂಬೆ ಹೈಕೋರ್ಟ್ ಗಳಿಗೆ ನೇಮಕ ಮಾಡಲು ಉದ್ದೇಶಿಸಲಾಗಿದೆ.

ಮತ್ತಷ್ಟು ಓದಿ: ಎಲ್ಲಾ ಖಾಸಗಿ ಆಸ್ತಿಗಳನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ: ಸುಪ್ರೀಂಕೋರ್ಟ್​

ಅಭ್ಯರ್ಥಿಗಳ ಬಡ್ತಿಗೆ ಮುನ್ನ ಅವರ ವ್ಯಕ್ತಿತ್ವದ ಬಗ್ಗೆ ಆಳವಾಗಿ ಅಧ್ಯಯನ ಮಾಡುವ ಉದ್ದೇಶದಿಂದ ಮತ್ತು ಬಡ್ತಿಗೆ ಎಷ್ಟು ಸೂಕ್ತ ಎಂದು ತಿಳಿದುಕೊಳ್ಳುವ ಉದ್ದೇಶದಿಂದ ಮಾತುಕತೆ ಆರಂಭಿಸಿದ್ದಾರೆ.

ಇನ್ನೊಂದು ಮಹತ್ವದ ಹೆಜ್ಜೆಯಲ್ಲಿ, ಸಿಜೆಐ ಮತ್ತು ನ್ಯಾಯಮೂರ್ತಿಗಳಾದ ಗವಾಯಿ ಮತ್ತು ಕಾಂತ್ ಅವರನ್ನೊಳಗೊಂಡ ಕೊಲಿಜಿಯಂ ಮೊದಲ ಬಾರಿಗೆ ವಕೀಲರು ಮತ್ತು ನ್ಯಾಯಾಂಗ ಅಧಿಕಾರಿಗಳೊಂದಿಗೆ ಸಂವಾದ ಪ್ರಾರಂಭಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:00 am, Mon, 30 December 24