ಗಾಜಿನ ಮನೆಯಲ್ಲಿರುವವರು ಕಲ್ಲು ಹೊಡೆಯಬಾರದು: ಮಹಾರಾಷ್ಟ್ರ ಸರ್ಕಾರದ ವಿರುದ್ಧ ಪರಮ್​ಸಿಂಗ್​ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್​

ಮಹಾರಾಷ್ಟ್ರ ಸರ್ಕಾರವು ತಮ್ಮ ವಿರುದ್ಧ ನಡೆಸುತ್ತಿರುವ ವಿವಿಧ ತನಿಖೆಗಳಿಗೆ ತಡೆ ನೀಡಬೇಕು ಎಂದು ಕೋರಿ ಮುಂಬೈನ ಮಾಜಿ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. 

ಗಾಜಿನ ಮನೆಯಲ್ಲಿರುವವರು ಕಲ್ಲು ಹೊಡೆಯಬಾರದು: ಮಹಾರಾಷ್ಟ್ರ ಸರ್ಕಾರದ ವಿರುದ್ಧ ಪರಮ್​ಸಿಂಗ್​ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್​
ಪರಮ್​ವೀರ್ ಸಿಂಗ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jun 11, 2021 | 3:42 PM

ದೆಹಲಿ: ಮಹಾರಾಷ್ಟ್ರ ಸರ್ಕಾರವು ತಮ್ಮ ವಿರುದ್ಧ ನಡೆಸುತ್ತಿರುವ ವಿವಿಧ ತನಿಖೆಗಳಿಗೆ ತಡೆ ನೀಡಬೇಕು ಎಂದು ಕೋರಿ ಮುಂಬೈನ ಮಾಜಿ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ನೀವು ಮಹಾರಾಷ್ಟ್ರ ಕೇಡರ್​ನ ಅಧಿಕಾರಿಯಾಗಿದ್ದವರು. ಅಲ್ಲಿಯೇ 30 ವರ್ಷ ಕೆಲಸ ಮಾಡಿದ್ದೀರಿ. ಈಗ ನಿಮ್ಮ ಸ್ವಂತ ರಾಜ್ಯದ ಮೇಲೆ ನಂಬಿಕೆ ಇಲ್ಲ ಎನ್ನುತ್ತಿದ್ದೀರಿ. ಇದು ಆಘಾತಕಾರಿ ಆರೋಪ ಎಂದು ನ್ಯಾಯಮೂರ್ತಿ ಹೇಮಂತ್ ಗುಪ್ತಾ ಹೇಳಿದರು. ಮುಂಬೈ ನಗರದ ಹಿಂದಿನ ಪೊಲೀಸ್ ಆಯುಕ್ತ ಪರಮ್​ಬೀರ್ ಸಿಂಗ್ ತಮ್ಮ ವಿರುದ್ಧ ಮಹಾರಾಷ್ಟ್ರ ಸರ್ಕಾರವು ಆರಂಭಿಸಿರುವ ಇಲಾಖಾ ತನಿಖೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಪುರಸ್ಕರಿಸಲು ನ್ಯಾಯಾಲಯವು ಶುಕ್ರವಾರ ನಿರಾಕರಿಸಿತು. ನ್ಯಾಯಮೂರ್ತಿಗಳಾದ ಹೇಮಂತ್​ ಗುಪ್ತ ಮತ್ತು ವಿ.ರಾಮಸುಬ್ರಹ್ಮಣ್ಯಂ ಅವರಿದ್ದ ನ್ಯಾಯಪೀಠವು ಅರ್ಜಿ ಹಿಂಪಡೆಯಲು ಮತ್ತು ಬಾಂಬೆ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲು ಸಮ್ಮತಿಸಿತು.

ಪರಮ್​ಬೀರ್ ಸಿಂಗ್ ಪರವಾಗಿ ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ ವಾದ ಮಂಡಿಸಿದರು. ವಾದವನ್ನು ಆಲಿಸಿದ ನಂತರವೂ ನ್ಯಾಯಪೀಠವು ಅರ್ಜಿಯನ್ನು ಪುರಸ್ಕರಿಸಲು ಒಪ್ಪಲಿಲ್ಲ. ನೀವು ಮಹಾರಾಷ್ಟ್ರ ಕೇಡರ್​ನ ಭಾಗವಾಗಿದ್ದವರು. 30 ವರ್ಷಗಳ ಕಾಲ ಅದೇ ರಾಜ್ಯದಲ್ಲಿ ಕೆಲಸ ಮಾಡಿದವರು. ಈಗ ನೀವು ನಿಮ್ಮ ಸ್ವಂತ ರಾಜ್ಯವನ್ನು ನಂಬುತ್ತಿಲ್ಲ. ಇದು ಆಘಾತಕಾರಿ ಆರೋಪ ಎಂದು ನ್ಯಾಯಮೂರ್ತಿ ಹೇಮಂತ್ ಗುಪ್ತ ಹೇಳಿದರು.

ಕ್ರಿಮಿನಲ್ ಕಾನೂನಿನಲ್ಲಿ ನಿಮಗೆ ಅನುಭವವಿದೆ. ನಿಮ್ಮ ವಿರುದ್ಧದ ಎಫ್​ಐಆರ್​ಗಳಿಗೆ ಸಂಪೂರ್ಣ ತಡೆ ನೀಡಲು ಸಾಧ್ಯವೇ. ನಾವು ನಿಮ್ಮ ಎಲ್ಲ ಎಫ್​ಐಆರ್​ಗಳ ಬಗ್ಗೆ ಆಲೋಚಿಸಲು ಸಾಧ್ಯವಿಲ್ಲ. ಅವನ್ನು ಗಮನಿಸಲು ಪ್ರತ್ಯೇಕ ಮ್ಯಾಜಿಸ್ಟ್ರೇಟ್​ಗಳಿದ್ದಾರೆ ಎಂದು ಜೇಠ್ಮಲಾನಿ ನುಡಿದರು. ‘ಗಾಜಿನ ಮನೆಯಲ್ಲಿರುವವರು ಕಲ್ಲು ಹೊಡೆಬಾರದೆನ್ನುವ ಮಾತಿದೆ’ ಎಂದು ಗುಪ್ತ ಹೇಳಿದರು. ನ್ಯಾಯಮೂರ್ತಿಗಳ ಈ ಮಾತನ್ನು ವಕೀಲ ಜೇಠ್ಮಲಾನಿ ಪ್ರಬಲವಾಗಿ ಆಕ್ಷೇಪಿಸಿದರು. ‘ನಾನು ಗಾಜಿನಮನೆಯಲ್ಲಿದ್ದೇನೆ ಎಂದು ನೀವು ಭಾವಿಸದಂತಿದೆ. ಇದು ಸಲ್ಲದ ಮಾತು’ ಎಂದು ಜೇಠ್ಮಲಾನಿ ಹೇಳಿದರು.

ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್​ಮುಖ್ ಬಗ್ಗೆ ಪರಮ್​ಬೀರ್ ಸಿಂಗ್ ಪತ್ರ ಬರೆದ ನಂತರ ಅವರಿಗೆ ರಾಜ್ಯ ಸರ್ಕಾರ ತೊಂದರೆ ಕೊಡುತ್ತಿದೆ ಎಂದು ಪರಮ್​ ಬೀರ್​ ಸಿಂಗ್ ಪರ ವಕೀಲರು ಮಾಹಿತಿ ನೀಡಿದರು. ‘ಡಿಜಿಪಿ ದರ್ಜೆಯ ಅಧಿಕಾರಿಯೊಬ್ಬರ ಮೇಲೆ ಒತ್ತಡ ಹೇರಬಹುದು ಎಂದಾದರೆ ಉಳಿದ ಅಧಿಕಾರಿಗಳು ಹೇಗೆ ಕೆಲಸ ಮಾಡಲು ಸಾಧ್ಯ? ನೀವು ಕಥೆ ಹೇಳಬೇಡಿ’ ಎಂದು ನ್ಯಾಯಮೂರ್ತಿ ಗುಪ್ತ ಹೇಳಿದರು. ಇನ್ನೇನು ಅರ್ಜಿ ವಜಾ ಮಾಡಿರುವ ಬಗ್ಗೆ ಆದೇಶ ಹೊರಡಿಸಬೇಕು ಎನ್ನುವಾಗ ಅರ್ಜಿ ಹಿಂಪಡೆಯುವುದಾಗಿ ಪರಮ್​ಬೀರ್ ಸಿಂಗ್ ಪರ ವಕೀಲರು ವಿನಂತಿಸಿದರು.

(Supreme Court Refuses To Entertain Mumbail Police Officer Param Bir Singhs Petition Against Maharashtra Govt)

ಇದನ್ನೂ ಓದಿ: ಗೃಹ ಸಚಿವ ಅನಿಲ್ ದೇಶ್​ಮುಖ್ ಪ್ರತಿ ತಿಂಗಳು 100 ಕೋಟಿ ಸಂಗ್ರಹಿಸಲು ಸಚಿನ್ ವಾಜೆ ಮೇಲೆ ಒತ್ತಡ ಹೇರಿದ್ದರು; ಉದ್ಧವ್ ಠಾಕ್ರೆಗೆ ಪತ್ರ ಬರೆದ ಪರಮ್​ವೀರ್ ಸಿಂಗ್

ಇದನ್ನೂ ಓದಿ: ಅನಿಲ್ ದೇಶ್​ಮುಖ್ ಅಪರಾಧ ತಿಳಿದೂ ಎಫ್​ಐಆರ್ ದಾಖಲಿಸಿಲ್ಲ ಏಕೆ?; ಪರಮ್​ವೀರ್ ಸಿಂಗ್​ಗೆ ಬಾಂಬೆ ಹೈಕೋರ್ಟ್ ಪ್ರಶ್ನೆ

Published On - 3:32 pm, Fri, 11 June 21

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್