ವಿಚ್ಛೇದಿತ ಮಗಳ ಹಕ್ಕುಗಳ ಪರಿಶೀಲನೆಗೆ ಸುಪ್ರೀಂಕೋರ್ಟ್ ಒಪ್ಪಿಗೆ

ಅವಿವಾಹಿತ ಮಗಳು ಕುಟುಂಬ ಪಿಂಚಣಿಗೆ ಅರ್ಹಳಾಗಿರುವಂತೆಯೇ, ದೇಶದ ಸ್ವಾತಂತ್ರ್ಯಕ್ಕಾಗಿ ತನ್ನ ಪ್ರಾಣ ತ್ಯಾಗ ಮಾಡಿದ ಅಥವಾ ಅಂಗವಿಕಲನಾದ ವ್ಯಕ್ತಿಯ ವಿಚ್ಛೇದಿತ ಮಗಳು ಕೂಡ ಪಿಂಚಣಿಗೆ ಅರ್ಹಳಾಗಿರುತ್ತಾಳೆ ಎಂದು ವಕೀಲರು ತಮ್ಮ ವಾದದಲ್ಲಿ ಹೇಳಿದರು.

ವಿಚ್ಛೇದಿತ ಮಗಳ ಹಕ್ಕುಗಳ ಪರಿಶೀಲನೆಗೆ ಸುಪ್ರೀಂಕೋರ್ಟ್ ಒಪ್ಪಿಗೆ
ಸುಪ್ರೀಂ ಕೋರ್ಟ್​
Follow us
preethi shettigar
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Mar 08, 2021 | 7:44 PM

ಸ್ವಾತಂತ್ರ್ಯ ಹೋರಾಟಗಾರನ ವಿಚ್ಛೇದಿತ ಮಗಳು ತನ್ನದೇ ಆದ ಸ್ವತಂತ್ರ ಆದಾಯದ ಮೂಲವನ್ನು ಹೊಂದಿಲ್ಲದೇ ಇದ್ದರೆ, ಆಗ ಆಕೆ ಕುಟುಂಬದ ಪಿಂಚಣಿ ಪಡೆಯಲು ಅರ್ಹಳಾಗಿರುತ್ತಾಳೆ ಎಂಬ ವಿಷಯವನ್ನು ಪರಿಶೀಲನೆಗೆ ಒಳಪಡಿಸಲು ಸುಪ್ರೀಂ ಕೋರ್ಟ್ ಒಪ್ಪಿಗೆ ಸೂಚಿಸಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ವ್ಯಕ್ತಿಯ ವಿಚ್ಛೇದಿತ ಮಗಳು ಅವಿವಾಹಿತ ಮಗಳಿಗಿಂತ ಭಿನ್ನವಾಗಿಲ್ಲ. ಹೀಗಾಗಿ ಆಕೆಗೂ ಕುಟುಂಬ ಪಿಂಚಣಿಯಲ್ಲಿ ಪಾಲು ದೊರೆಯುವುದು ಅಗತ್ಯವಿದೆ ಎಂದು ನ್ಯಾಯಮೂರ್ತಿ ಯು.ಯು.ಲಲಿತ್ ನೇತೃತ್ವದ ನ್ಯಾಯಪೀಠದ ಮುಂದೆ ವಕೀಲರಾದ ದುಶ್ಯಂತ್ ಪರಾಶರ್ ವಾದ ಮಂಡಿಸಿದ್ದಾರೆ.

ಅವಿವಾಹಿತ ಮಗಳು ಕುಟುಂಬ ಪಿಂಚಣಿಗೆ ಅರ್ಹಳಾಗಿದ್ದಾಳೆ ಅಂತೆಯೇ, ದೇಶದ ಸ್ವಾತಂತ್ರ್ಯಕ್ಕಾಗಿ ತನ್ನ ಪ್ರಾಣ ತ್ಯಾಗ ಮಾಡಿದ ಅಥವಾ ಅಂಗವಿಕಲನಾದ ವ್ಯಕ್ತಿಯ ವಿಚ್ಛೇದಿತ ಮಗಳು ಕೂಡ ಪಿಂಚಣಿಗೆ ಅರ್ಹಳಾಗಿರುತ್ತಾಳೆ. ಒಂದು ವೇಳೆ ಈ ರೀತಿ ವಿಚ್ಛೇದಿತ ಮಗಳಿಗೆ ಪಿಂಚಣಿ ನೀಡಿದರೆ ಅದು ಪ್ರಗತಿಪರ ಮತ್ತು ಸಾಮಾಜಿಕವಾಗಿ ರಚನಾತ್ಮಕವಾಗಿರುತ್ತದೆ ಎಂದು ಪರಾಶರ್ ವಾದಿಸಿದರು.

ತಮ್ಮ ಕಕ್ಷಿದಾರರಾದ ತುಳಸಿ ದೇವಿ ಪರವಾಗಿ ಪರಾಶರ್ ವಾದ ಮಂಡಿಸಿದರು. ಸ್ವಾತಂತ್ರ್ಯ ಹೋರಾಟಗಾರ ಗೋಪಾಲ್ ರಾಮ್ ಅವರ ವಿಚ್ಛೇದಿತ ಮಗಳು ತುಳಸಿ ದೇವಿ, ಜೀವನ ನಿರ್ವಹಣೆಗಾಗಿ ಹೆತ್ತವರ ಮೇಲೆ ಸಂಪೂರ್ಣವಾಗಿ ಅವಲಂಬಿತಳಾಗಿದ್ದೇನೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ತಂದೆಯ ಮರಣದ ನಂತರ ಅನಾರೋಗ್ಯ ಪೀಡಿತರಾದ ನನ್ನ ತಾಯಿ 2018ರ ಜನವರಿಯಲ್ಲಿ ಪ್ರಧಾನ ಮಂತ್ರಿಗೆ ಸ್ವಾತಂತ್ರ್ಯ ಹೋರಾಟ ಯೋಜನೆಯಡಿ ಕುಟುಂಬ ಪಿಂಚಣಿ ನೀಡುವುದನ್ನು ಮುಂದುವರಿಸಬೇಕು ಎಂದು ಪತ್ರ ಬರೆದಿದ್ದರು, ಏಕೆಂದರೆ ಇದು ನನಗೆ ಆರ್ಥಿಕ ನೆರವು ನೀಡುವ ಸಾಧನವಾಗಿದೆ ಎಂದು ತುಳಸಿ ದೇವಿ ತಿಳಿಸಿದ್ದಾರೆ.

2016ರಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನೀಡಿದ ಆದೇಶವನ್ನು ಉಲ್ಲೇಖಿಸಿದ ಪರಾಶರ್ ಇದು ತುಳಸಿ ದೇವಿಯವರ ವ್ಯಕ್ತಿಗತ ಜೀವನದ ಸಂಗತಿಗಳನ್ನು ಆಧರಿಸಿದೆ ಎಂದು ತಿಳಿಸಿದ್ದಾರೆ. ವಿಚ್ಛೇದಿತ ಮಗಳನ್ನು ಪಿಂಚಣಿ ವ್ಯವಸ್ಥೆಯಿಂದ ಹೊರಗಿಡುವುದು ವಿಪರ್ಯಾಸ ಎಂದು ಹೈಕೋರ್ಟ್ ಹೇಳಿತ್ತು. ಈ ನೆಲೆಗಟ್ಟಿನಲ್ಲಿ ಅವಿವಾಹಿತ ಮಗಳನ್ನು ಅರ್ಹ ಅವಲಂಬಿತರ ಪಟ್ಟಿಯಲ್ಲಿ ಸೇರಿಸಿಕೊಳ್ಳಬಹುದು ಎಂದಾದರೆ ವಿಚ್ಛೇದಿತ ಮಗಳನ್ನು ಈ ಸೌಲಭ್ಯದಿಂದ ಹೊರಗಿಡುವುದರಲ್ಲಿ ಯಾವ ಅರ್ಥವೂ ಇರುವುದಿಲ್ಲ ಎಂದು ಅಭಿಪ್ರಾಯಪಟ್ಟಿತ್ತು.

ತುಳಸಿ ದೇವಿ ಅವರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್​ ಮುಂದಿನ ತಿಂಗಳು ಅಂದರೆ ಎಪ್ರಿಲ್ ಎರಡನೇ ವಾರದಲ್ಲಿ ವಿವರವಾದ ವಿಚಾರಣೆ ನಡೆಸಿ, ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.

ಇದನ್ನೂ ಓದಿ: Women’s Day Special: ಟೇಬಲ್​ ಟೆನ್ನಿಸ್​​ನ ಮಿನುಗುತಾರೆ ಅರ್ಚನಾ ಕಾಮತ್​; ಬೆನ್ನೆಲುಬಾಗಿ ನಿಂತ ತಾಯಿಯ ಹೆಮ್ಮೆಯ ನುಡಿಗಳಿವು..

Published On - 7:43 pm, Mon, 8 March 21

ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ