‘ವಂದೇ ಮಾತರಂ’ನ 6 ಚರಣ ಹಾಡಬೇಕೆಂಬ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಗಾಯಕ ಟಿ.ಎಂ. ಕೃಷ್ಣ; ಕೇಂದ್ರದ ಪ್ರತಿಕ್ರಿಯೆ ಕೋರಿದ ನ್ಯಾಯಾಲಯ

'ವಂದೇ ಮಾತರಂ' ರಾಷ್ಟ್ರೀಯ ಗೀತೆಯನ್ನು ಹಾಡದಿರುವುದಕ್ಕೆ ಅಥವಾ ಅಡ್ಡಿಪಡಿಸುವುದಕ್ಕೆ ಶಿಕ್ಷೆ ವಿಧಿಸುವ ಕಾನೂನು ಕಾಯ್ದೆಯ ತಿದ್ದುಪಡಿಯನ್ನು ಪ್ರಶ್ನಿಸಿ ಕರ್ನಾಟಕ ಸಂಗೀತಗಾರ ಟಿ.ಎಂ. ಕೃಷ್ಣ ಸಲ್ಲಿಸಿರುವ ಅರ್ಜಿಯ ಕುರಿತು ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಮುಖ್ಯ ನ್ಯಾಯಮೂರ್ತಿ  ಸೂರ್ಯಕಾಂತ್, ನ್ಯಾಯಮೂರ್ತಿ ಜೋಯಮಾಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನಾ ಅವರನ್ನೊಳಗೊಂಡ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು. ಧಾರ್ಮಿಕ ನಂಬಿಕೆಗಳ ಆಧಾರದ ಮೇಲೆ ವಂದೇ ಮಾತರಂ ಗೀತೆಯನ್ನು ಹಾಡದ ವ್ಯಕ್ತಿಯ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಮೌಖಿಕವಾಗಿ ಹೇಳಿದೆ

ವಂದೇ ಮಾತರಂನ 6 ಚರಣ ಹಾಡಬೇಕೆಂಬ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಗಾಯಕ ಟಿ.ಎಂ. ಕೃಷ್ಣ; ಕೇಂದ್ರದ ಪ್ರತಿಕ್ರಿಯೆ ಕೋರಿದ ನ್ಯಾಯಾಲಯ
ಟಿ.ಎಂ. ಕೃಷ್ಣ- ಸುಪ್ರೀಂ ಕೋರ್ಟ್
Image Credit source: TV9

Updated on: Sep 22, 2026 | 4:37 PM

ನವದೆಹಲಿ, ಸೆಪ್ಟೆಂಬರ್ 22: ವಂದೇ ಮಾತರಂ ಗೀತೆಯ 6 ಚರಣಗಳನ್ನು ಹಾಡುವುದು ಕಡ್ಡಾಯ ಎಂಬ ಕೇಂದ್ರ ಸರ್ಕಾರದ ಕಾಯ್ದೆ ತಿದ್ದುಪಡಿ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಟಿ.ಎಂ. ಕೃಷ್ಣ ಅರ್ಜಿ ಸಲ್ಲಿಸಿದ್ದಾರೆ. ‘ವಂದೇ ಮಾತರಂ’ನ ಎಲ್ಲಾ 6 ಚರಣಗಳನ್ನು ಹಾಡುವುದನ್ನು ಕಡ್ಡಾಯಗೊಳಿಸಿರುವುದು ಮತ್ತು ಅದನ್ನು ತಡೆಯುವುದಕ್ಕೆ ಅಥವಾ ಅಡ್ಡಿಪಡಿಸುವುದಕ್ಕೆ ಶಿಕ್ಷೆ ವಿಧಿಸುವ 2026ರ ಕಾನೂನು ತಿದ್ದುಪಡಿಯ ಸಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಪ್ರಸಿದ್ಧ ಕರ್ನಾಟಕ ಸಂಗೀತ ಗಾಯಕ ಟಿ.ಎಂ. ಕೃಷ್ಣ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದಿಂದ ಪ್ರತಿಕ್ರಿಯೆ ಕೋರಿದೆ. ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆಯುವ ಕಾಯ್ದೆಗೆ 2026ರಲ್ಲಿ ತರಲಾದ ತಿದ್ದುಪಡಿಯನ್ನು ಪ್ರಶ್ನಿಸಿ ಟಿ.ಎಂ. ಕೃಷ್ಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯಮಾಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನಾ ಅವರಿದ್ದ ಪೀಠವು, 2 ವಾರಗಳಲ್ಲಿ ಸೂಕ್ತ ವಿವರಣೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.

ಅರ್ಜಿದಾರ ಟಿ.ಎಂ. ಕೃಷ್ಣ ಅವರ ವಾದ:

ವಂದೇ ಮಾತರಂ ಗೀತೆಯ ಕೊನೆಯ 4 ಚರಣಗಳು ಹಿಂದೂ ದೇವತೆಗಳಾದ ದುರ್ಗಾ, ಲಕ್ಷ್ಮಿ ಮತ್ತು ಸರಸ್ವತಿಯ ಉಲ್ಲೇಖಗಳನ್ನು ಒಳಗೊಂಡಿದ್ದು, ದೇವತಾ ಪ್ರಾರ್ಥನೆಯ ಸ್ವರೂಪದಲ್ಲಿವೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಸರ್ಕಾರಿ ಮತ್ತು ಅಧಿಕೃತ ಕಾರ್ಯಕ್ರಮಗಳಲ್ಲಿ ಎಲ್ಲಾ 6 ಚರಣಗಳನ್ನು ಕಡ್ಡಾಯವಾಗಿ ಹಾಡುವಂತೆ ಮತ್ತು ಇದಕ್ಕೆ ಅಡ್ಡಿಪಡಿಸಿದರೆ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ತಿದ್ದುಪಡಿಯು, ನಾಗರಿಕರನ್ನು ಧಾರ್ಮಿಕ ಚೌಕಟ್ಟಿನ ಸಾಲುಗಳನ್ನು ಹಾಡುವಂತೆ ಬಲವಂತಪಡಿಸುತ್ತದೆ ಎಂದು ಅರ್ಜಿದಾರ ಕೃಷ್ಣ ಹೇಳಿದ್ದಾರೆ.

ಇದನ್ನೂ ಓದಿ: ಕಾವೇರಿ ವಿವಾದ: ಸುಪ್ರೀಂ ಕೋರ್ಟ್​ನಲ್ಲಿ ಮತ್ತೆ ವಿಚಾರಣೆ ಮುಂದೂಡಿಕೆ, ಕರ್ನಾಟಕಕ್ಕೆ ತಪ್ಪದ ಸಂಕಷ್ಟ

ಬಂಕಿಮ ಚಂದ್ರ ಚಟ್ಟೋಪಾಧ್ಯಾಯ ಅವರ ‘ಆನಂದಮಠ’ ಕಾದಂಬರಿಯಲ್ಲಿ ವಂದೇ ಮಾತರಂ ಸೇರ್ಪಡೆಯಾಗುವ ಮುನ್ನ, ಮೊದಲ 2 ಚರಣಗಳು ಪ್ರತ್ಯೇಕ ದೇಶಭಕ್ತಿ ಗೀತೆಯಾಗಿದ್ದವು. 1937ರಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಮುಸ್ಲಿಮರ ಆಕ್ಷೇಪಣೆಯನ್ನು ಪರಿಗಣಿಸಿ ಮೊದಲ 2 ಚರಣಗಳನ್ನು ಮಾತ್ರ ರಾಷ್ಟ್ರೀಯ ಸಮಾವೇಶಗಳಲ್ಲಿ ಹಾಡಲು ಅಂಗೀಕರಿಸಿತ್ತು ಎಂಬುದನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.


ಟಿ.ಎಂ. ಕೃಷ್ಣ ಅವರ ಪರವಾಗಿ ಹಾಜರಾದ ಹಿರಿಯ ವಕೀಲ ಎಸ್‌. ಮುರಳೀಧರ್, ಕಾಯ್ದೆಯಲ್ಲಿ ‘ರಾಷ್ಟ್ರೀಯ ಗೀತೆ’ ಎಂದರೆ ಏನು ಎಂಬುದನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿಲ್ಲ, ಇದರಿಂದ ಕಾನೂನಿನ ದುರ್ಬಳಕೆಗೆ ಅವಕಾಶವಾಗುತ್ತದೆ ಎಂದು ವಾದಿಸಿದರು.  ಈ ಪ್ರಕರಣದ ವಿಚಾರಣೆ ವೇಳೆ ಗೃಹ ಸಚಿವಾಲಯದ ಪರವಾಗಿ ಹಾಜರಾದ ಸಾಲಿಟರ್ ಜನರಲ್ ತುಷಾರ್ ಮೆಹ್ತಾ ಈ ಅರ್ಜಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. “ಇಂತಹ ವಿಷಯಗಳಲ್ಲಿ ಸಾರ್ವಜನಿಕ ಚರ್ಚೆಗಳು ನಡೆಯಬೇಕೇ ಹೊರತು ಕೋರ್ಟ್ ನೋಟಿಸ್ ನೀಡುವ ಮೂಲಕ ಅನಗತ್ಯ ಉದ್ವಿಗ್ನತೆ ಸೃಷ್ಟಿಸಬಾರದು” ಎಂದರು.

ಇದನ್ನೂ ಓದಿ: ‘ಕಾಂಗ್ರೆಸ್‌ನ ನಕಲಿ ದೇಶಭಕ್ತಿಯ ಮುಖವಾಡ ಕಳಚಿದೆ’: ವಂದೇ ಮಾತರಂ 2 ಚರಣ ಹಾಡಿದ್ದಕ್ಕೆ ಪ್ರಲ್ಹಾದ್​​​ ಜೋಶಿ ಕಿಡಿ

ಆದರೂ, ಸುಪ್ರೀಂ ಕೋರ್ಟ್ ನ್ಯಾಯಪೀಠವು ‘ಬಿಜೋಯ್ ಇಮ್ಯಾನುವೆಲ್’ ಪ್ರಕರಣದ ಪ್ರಸಿದ್ಧ ತೀರ್ಪನ್ನು ಉಲ್ಲೇಖಿಸಿ, ಧಾರ್ಮಿಕ ನಂಬಿಕೆಗಳ ಕಾರಣಕ್ಕೆ ರಾಷ್ಟ್ರಗೀತೆಯನ್ನು ಹಾಡದೆ, ಗೌರವಪೂರ್ವಕವಾಗಿ ಎದ್ದು ನಿಲ್ಲುವ ಹಕ್ಕು ನಾಗರಿಕರಿಗಿದೆ ಎಂಬುದನ್ನು ನ್ಯಾಯಾಲಯ ನೆನಪಿಸಿದೆ. ಧಾರ್ಮಿಕ ನಂಬಿಕೆ ಅಥವಾ ವೈಯಕ್ತಿಕ ಸಾಕ್ಷಿಪ್ರಜ್ಞೆಯಿಂದ ವಂದೇ ಮಾತರಂ ಹಾಡದ ವ್ಯಕ್ತಿಯ ಮೇಲೆ ಅಪರಾಧಿಕ ಕ್ರಮಗಳು ಜರುಗಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿತು. ಈ ಕುರಿತು ಕೇಂದ್ರ ಸರ್ಕಾರದ ನಿಲುವನ್ನು ಕೇಳಿರುವ ಕೋರ್ಟ್, ವಿಚಾರಣೆಯನ್ನು ಮುಂದೂಡಿದೆ. ಹಾಗೇ, ಈ ವಿಷಯವಾಗಿ 2 ವಾರಗಳಲ್ಲಿ ತಮ್ಮ ವಿವರಣೆ ನೀಡುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us