ತಮಿಳುನಾಡು: ಜಲ್ಲಿಕಟ್ಟು ಗೂಳಿ ಪಳಗಿಸುವ ಕ್ರೀಡೆಯಲ್ಲಿ ಇಬ್ಬರು ಸಾವು, 70 ಮಂದಿಗೆ ಗಾಯ

ತಮಿಳುನಾಡಿನ ಶಿವಗಂಗಾ ಜಿಲ್ಲೆಯಲ್ಲಿ ಬುಧವಾರ ನಡೆದ ಜಲ್ಲಿಕಟ್ಟು ಗೂಳಿ ಪಳಗಿಸುವ ಹಬ್ಬದಲ್ಲಿ ಇಬ್ಬರು ಸಾವನ್ನಪ್ಪಿದ್ದು, 70 ಮಂದಿ ಗಾಯಗೊಂಡಿದ್ದಾರೆ. ಜಿಲ್ಲಾಧಿಕಾರಿ ಆಶಾ ಅಜಿತ್, ಕ್ಷೇತ್ರದ ಸಂಸದ ಕಾರ್ತಿ ಪಿ.ಚಿದಂಬರಂ, ಡಿಎಂಕೆ ಸಚಿವ ಪೆರಿಯಕರುಪ್ಪನ್ ಅವರ ಸಮ್ಮುಖದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ 271ಗೂಳಿಗಳು ಮತ್ತು 81 ಗೂಳಿ ಪಳಗಿಸುವವರು ಭಾಗವಹಿಸಿದ್ದರು.

ತಮಿಳುನಾಡು: ಜಲ್ಲಿಕಟ್ಟು ಗೂಳಿ ಪಳಗಿಸುವ ಕ್ರೀಡೆಯಲ್ಲಿ ಇಬ್ಬರು ಸಾವು, 70 ಮಂದಿಗೆ ಗಾಯ
ಜಲ್ಲಿಕಟ್ಟು ಗೂಳಿ
Image Credit source: India Today

Updated on: Jan 17, 2024 | 2:46 PM

ತಮಿಳುನಾಡಿನ ಶಿವಗಂಗಾ ಜಿಲ್ಲೆಯಲ್ಲಿ ಬುಧವಾರ ನಡೆದ ಜಲ್ಲಿಕಟ್ಟು ಗೂಳಿ ಪಳಗಿಸುವ ಕ್ರೀಡೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, 70 ಮಂದಿ ಗಾಯಗೊಂಡಿದ್ದಾರೆ. ಜಿಲ್ಲಾಧಿಕಾರಿ ಆಶಾ ಅಜಿತ್, ಕ್ಷೇತ್ರದ ಸಂಸದ ಕಾರ್ತಿ ಪಿ.ಚಿದಂಬರಂ, ಡಿಎಂಕೆ ಸಚಿವ ಪೆರಿಯಕರುಪ್ಪನ್ ಅವರ ಸಮ್ಮುಖದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ 271ಗೂಳಿಗಳು ಮತ್ತು 81 ಗೂಳಿ ಪಳಗಿಸುವವರು ಭಾಗವಹಿಸಿದ್ದರು.

ಮಧುರೈ ಜಿಲ್ಲೆಯ ಅಲಂಗನಲ್ಲೂರು ಜಲ್ಲಿಕಟ್ಟು ಕಾರ್ಯಕ್ರಮದಲ್ಲಿ ಕನಿಷ್ಠ ಮೂವರು ಗಾಯಗೊಂಡಿದ್ದಾರೆ. ಈ ಸಂದರ್ಭದಲ್ಲಿ ಓರ್ವ ಪಳಗಿಸುವವನು, ಓರ್ವ ಪೊಲೀಸ್ ಸಿಬ್ಬಂದಿ ಮತ್ತು ಓರ್ವ ಗೂಳಿಯ ಮಾಲೀಕ, ಮೂವರು ಗಾಯಗೊಂಡಿದ್ದಾರೆ. ಒಟ್ಟು 1,200 ಹೋರಿಗಳು ಮತ್ತು 800 ಗೂಳಿ ಪಳಗಿಸುವವರು ಜಲ್ಲಿಕಟ್ಟು ಕಾರ್ಯಕ್ರಮಕ್ಕೆ ನೋಂದಣಿ ಮಾಡಿಕೊಂಡಿದ್ದರು.

ಕಾರ್ಯಕ್ರಮದ ವಿಜೇತರು, ಗೂಳಿ ಪಳಗಿಸುವವರು ನಿಸ್ಸಾನ್ ಮ್ಯಾಗ್ನೈಟ್ ಕಾರನ್ನು ಸ್ವೀಕರಿಸಲು ಸಿದ್ಧರಾಗಿದ್ದಾರೆ, ಹಾಗೆಯೇ ಭಾಗವಹಿಸುವ ಪ್ರತಿ ಗೂಳಿಗೆ ಚಿನ್ನದ ನಾಣ್ಯವನ್ನು ನೀಡಲಾಗುತ್ತದೆ.

ಮತ್ತಷ್ಟು ಓದಿ: ತಮಿಳುನಾಡಿನ ಮಧುರೈನಲ್ಲಿ ಜಲ್ಲಿಕಟ್ಟು; ಸಬ್ ಇನ್ಸ್‌ಪೆಕ್ಟರ್ ಸೇರಿದಂತೆ 36 ಮಂದಿಗೆ ಗಾಯ

ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, 90 ಸಿಬ್ಬಂದಿಯನ್ನು ಒಳಗೊಂಡ ವೈದ್ಯಕೀಯ ತಂಡ, 70 ಸಿಬ್ಬಂದಿಯನ್ನು ಒಳಗೊಂಡ ಪಶುವೈದ್ಯ ತಂಡ ಮತ್ತು ರೆಡ್‌ಕ್ರಾಸ್ ಸ್ವಯಂಸೇವಕರು ಆಂಬ್ಯುಲೆನ್ಸ್‌ಗಳೊಂದಿಗೆ ಸ್ಥಳದಲ್ಲಿದ್ದರು.

ಮದ್ರಾಸ್ ಹೈಕೋರ್ಟಿನ ಆದೇಶದ ಆಧಾರದ ಮೇಲೆ 2006 ರಲ್ಲಿ ಮೊದಲ ಬಾರಿಗೆ ಗೂಳಿ ಪಳಗಿಸುವ ಕ್ರೀಡೆಯನ್ನು ನಿಷೇಧಿಸಲಾಯಿತು. ನಂತರ 2014 ರಲ್ಲಿ, ಸುಪ್ರೀಂ ಕೋರ್ಟ್ ಕೂಡ ಪ್ರಾಣಿ ಹಿಂಸೆಯ ಆಧಾರದ ಮೇಲೆ ಕ್ರೀಡೆಯನ್ನು ನಿಷೇಧಿಸಿತ್ತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us